ಬೂದಿಕೋಟೆ

ಬೂದಿಕೋಟೆ

ಬರಹ

ಬೂದಿಕೋಟೆ ಗ್ರಾಮವು ಇತಿಹಾಸದಲ್ಲಿ ಪ್ರಸಿದ್ದಿಯಾದ ಗ್ರಾಮ ಇದು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನಲ್ಲಿದೆ. ನಾನು ಹುಟ್ಟಿ ಬೆಳದದ್ದು ಇಲ್ಲಿಯೇ, ಬೂದಿಕೋಟೆಯನ್ನು ಮೊದಲು ವಿಭೂತಿಪುರ ಎಂದು ಕರೆಯುತ್ತಿದ್ದರು ಕಾರಣ ಇಲ್ಲಿ ಋಷಿ ಮುನಿಗಳು ಯಾಗವನ್ನು ಮಾಡಿ ಗ್ರಾಮದ ಸುತ್ತಲೂ ಬೂದಿ ಇದ್ದದ್ದರಿಂದ. ಕ್ರಮೇಣ ಬೂದಿ ಇದ್ದದ್ದರಿಂದ ಬೂದಿ ಕೋಟೆ ಇದ್ದದ್ದರಿಂದ ಕೋಟೆ ಯನ್ನು ಜೋಡಿಸಿ ಬೂದಿಕೋಟೆ ಆಯಿತು.
ಈ ಗ್ರಾಮವು ಮೊದಲೇ ಹೇಳಿದ ಹಾಗೆ ಐತಿಹಾಸಿಕ ಪ್ರಸಿದ್ದ ಗ್ರಾಮ ಕಾರಣ ಮೈಸೂರು ಹುಲಿ ಟಿಪ್ಪುವಿನ ತಂದೆ ನವಾಬ್ ಹೈದರಾಲಿ ಹುಟ್ಟಿದ ಸ್ಥಳ. ಈಗ ಈ ಕೋಟೆಯು ಹಾಳು ಬಿದ್ದಿದೆ ಇದರ ಉದ್ದಾರಕ್ಕಾಗಿ ಪ್ರವಾಸೋದ್ಯಮ ಇಲಾಖೆ ಯಾವುದೇ ರೀತಿಯ ಕಾರ್ಯವನ್ನು ಹಮ್ಮಿಕೊಂಡಿಲ್ಲ. ಅದರೂ ಸಹ ಬುದಿಕೋಟೆಯ ಯುವಕರು ಹಾಗು ಗ್ರಾಮಸ್ಥರು ಉದ್ದಾರಕ್ಕಾಗಿ ಕೈ ಜೋಡಿಸಿದ್ದಾರೆ.

ಇಲ್ಲಿಂದ 5 ಕಿ.ಮೀ ದೂರ ಸಾಗಿದರೆ ಕೋಲಾರ ಜಿಲ್ಲೆಯ ಮಿನಿ ಕೆ.ಅರ್.ಎಸ್ ಎಂದೇ ಪ್ರಸಿದ್ದಿಯಾದ ಮಾರ್ಕಂಡೇಯ ಕೆರೆ ಸಿಗುತ್ತದೆ. ಈ ಕೆರೆಯ ನಿರ್ಮಾಣಕ್ಕೆ ಜಯಚಾಮರಾಜೇಂದ್ರ ಒಡೆಯರ್ ಗುದ್ದಲಿ ಪೂಜೆಯನ್ನು ಮಾಡಿದ್ದು, ಅಂದಿನ ಮೈಸೂರು ಸಂಸ್ಥಾನದ ದಿವಾನರಾದಂತಹ ಮಿರ್ಜಾ ಇಸ್ಮಾಯಿಲ್ ಉದ್ಘಾಟನೆ ಮಾಡಿ ಸುಮಾರು ೬೦೦೦ ಏಕ್ಟರ್ ಪ್ರದೇಶಕ್ಕೆ ನಿರಾವರಿ ಸೌಕರ್ಯವನ್ನು ಕಲ್ಪಿಸಿದ್ದಾರೆ. ಈ ಕೆರೆಯು ತುಂಬಿ ಕೊಡಿ ಹರಿದಾಗ ನೋಡಲು ಎರಡು ಕಣ್ಣು ಸಾಲದು, ಈ ವಿಹಂಗಮ ದೃಶ್ಯವನ್ನು ನೋಡಲು ರಾಜ್ಯದ ಬೇರೆ ಬೇರೆ ಕಡೆಗಳಿಂದ ಸಾವಿರಾರು ಜನರು ಬರುತ್ತಾರೆ. ಬೂದಿಕೋಟೆಯು ದ್ವೀಪ ಇದ್ದಂತೆ ಊರಿನ ಸುತ್ತಲೂ ಮಾರ್ಕಂಡೇಯ ಕೆರೆ ನೀರು ಹರಿಯುತ್ತದೆ. ನೀರನ್ನು ನೀರಾವರಿಗೆ ಬಿಟ್ಟಾಗ ಎಲ್ಲಿ ನೋಡಿದರು ಹಚ್ಚ ಹಸಿರು ನೋಡಲು ನಯನ ಮನೋಹರವಾಗಿರತ್ತೆ. ನಮ್ಮ ಭಾರತದ ಮಹಿಳಾ ಕ್ರಿಕೇಟಿನ ತಂಡದ ನಾಯಕಿಯಾದ ಶಾಂತರಂಗಸ್ವಾಮಿ ಬೂದಿಕೋಟೆಯವರೇ.