ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಲಿನಕ್ಸಾಯಣ - ೧೫ - ಲಿನಕ್ಸ್ ಬೂಟಿಂಗ್ - ಭಾಗ ೧

ಲಿನಕ್ಸ ಹ್ಯಾಗೆ ಇನ್ಸ್ಟಾಲ್ ಮಾಡೋದು ಅಂತ ನೋಡಿದ್ವಿ, ಅದರಲ್ಲಿ ಹ್ಯಾಗೆ ಕೆಲ ತಂತ್ರಾಂಶಗಳನ್ನ ಇನ್ಸ್ಟಾಲ್ ಮಾಡಿ ಉಪಯೋಗಿಸೋದು ಅಂತಾನೂ ನೋಡಿದ್ವಿ ಅಲ್ವಾ? ಈಗ ಲಿನಕ್ಸ್ ನ ಸ್ವಲ್ಪ ಹೊಳಹೊಕ್ಕಿ ಅದರಲ್ಲೇನಿದೆ. ಅದು ಹ್ಯಾಗೆ ಕೆಲಸ ಮಾಡತ್ತೆ ಅನ್ನೋದನ್ನ ನೋಡೋಣ. 

ಸರ್ವಜ್ಞನ ವಚನಗಳು ಮೂಲರೂಪ (ಹರಿಪ್ರಸಾದ ನಾಡಿಗರ ಸರ್ವಜ್ಞವಚನಗಳ ಮೂಲರೂಪ ತೋಱಿ)

ಹರಿಪ್ರಸಾದ್ ನಾಡಿಗರು ಅಱುಹಿದ ಱಕಾರಕ್ಕೆ ರಕಾರ ಬೞಸಿದ ವಚನಗಳ ಮೂಲರೂಪ ಕೊಡುತ್ತಿದ್ದೇನೆ

ಅಱಿವನಱಿಯದ ಗುರುವು | ಪರಿವನಱಿಯದ ಶಿಷ್ಯ |
ಸಂದೆರಡು ವರ್ಗವಱಿಯದಿರ್ದುಪದೇಶ |
ಕೊಂದುಕೊಂಡಂತೆ ಸರ್ವಜ್ಞ

ಮೂಱಿಟ್ಟರಾಱಕ್ಕು | ಆಱು ಹನ್ನೆರಡಕ್ಕು |
ಹೇಱುವ ಗೊಡ್ಡು ಹಯನಕ್ಕು ಗುರುಕರುಣ |
ತೋಱುವ ದಿನಕೆ ಸರ್ವಜ್ಞ

ಗುರುವಿನ ವಿಸ್ತರದ | ಪರಿಯ ನಾನೇನೆಂಬೆ

ಸರ್ವಜ್ಞನ ಕೆಲವು ವಚನಗಳು

ಉತ್ತಮದ ವರ್ಣಿಗಳನುತ್ತಮರೆನಬೇಡ
ಮತ್ತೆ ತನ್ನಂತೆ ಬಗೆವರನೆಲ್ಲರ
ನುತ್ತಮರೆನ್ನು ಸರ್ವಜ್ಞ ||

ಸತ್ತದನು ತಿಂಬಾತ ಎತ್ತಣದ ಹೊಲೆಯನು
ಒತ್ತಿ ಜೀವವನು ಕೊಱೆಕೊಱೆದು ತಿಂಬಾತ
ನುತ್ತಮದ ಹೊಲೆಯ ಸರ್ವಜ್ಞ ||

ಜಾತಿಹೀನರ ಮನೆಯ ಜೋತಿ ತಾ ಹೀನವೇ
ಜಾತಿವಿಜಾತಿಯೆನಬೇಡ ದೇವನೊಲಿ
ದಾತನೇ ಜಾತ ಸರ್ವಜ್ಞ ||

ಯಾತಱಾ ಹೂವೇನು ನಾತರದು ಸಾಲದೇ
ಜಾತಿವಿಜಾತಿಯೆನಬೇಡ ದೇವನೊಲಿ

ಕನ್ನಡ ಬರ್ದೋನು ಕೋಡಂಗಿ

 

ಕನ್ನಡ ಬರದೇ ಇರೋರು ಸಂಪದ ಓದೋ ಹಾಗಿಲ್ಲ. ಆದ್ರೂ ಯಾರಾದ್ರೂ ದೂರು ಕೊಟ್ಟು, ನನ್ನ ಬೆನ್ನಿಗೆ ಅವರೆಲ್ಲ ಬೀಳೋ ಮೊದಲು ಪೂರ್ತಿ ಪದ್ಯ ಕೇಳಿ :)

ಸಂಪದದಲ್ಲೆಲ್ಲ್ರೂ ಆಡೋ ಮಾತೇನು?
ವಾಲ್ಮೀಕಿ ರಾಮಾಯಣಕ್ಕೇನಾಗ್ಬೇಕು?
ಮಂಗಂಗಿನ್ನೊಂದ್ಹೆಸರ್ ಗೊತ್ತಾ?
ಕನ್ನಡ ಬರ್ದೋನು ಕೋಡಂಗಿ 

....ಬಾರದು ಎಂದುಕೊಂಡರೆ!

ಇವತ್ತು ಅಳಬಾರದೆಂದುಕೊಂಡೆ

ಇದ್ದಕ್ಕಿದ್ದಂತೆ ಮೋಡ ಸುಮ್ಮನಾಯಿತು
ಮೈಕೊಡವಿಕೊಂಡು ಮರ ಸುಮ್ಮನಾಯಿತು
ಪಕಳೆಯ ಮೇಲಿನ ಮಳೆ ಹನಿ ಉದುರಿಸಿ
ಹೂವು ಸುಮ್ಮನಾಯಿತು

ಬಾಗಿಲಾಚೆ ಮಲಗಿದ್ದ ಜೂಲು ನಾಯಿ ಕೂಡ
ಮೈ ಅಲುಗಿಸಿ ನೀರ ಚದುರಿಸಿ
ಸುಮ್ಮನಾಯಿತು

ಅವ್ವ ಒದ್ದೆ ಚಪ್ಪಲಿ
ಗೋಡೆಗೆ ನೇರವಾಗಿಟ್ಟಳು
ನೀರಿಳಿಸಿಕೊಂಡ ಚಪ್ಪಲಿಯೂ ಸುಮ್ಮನಾಯಿತು

ಹಾಲು ಕೊಡಲು ಬಂದ

ತಪ್ಪಿ ನಡೆಸ ಸರ್ಕಾರ

ಇದು ಖಂಡಿತಾ ನಾಚಿಕೆಗೇಡಿತನದ ವಿಚಾರ. ಯಡಿಯೂರಪ್ಪ ಸರ್ಕಾರಕದಕೆ ಕಿಂಚಿತ್ತೂ ರೈತರ ಮೇಲೆ ಪ್ರೀತಿ ಅಷ್ಟೇಕೆ ಸಾಮಾನ್ಯ ಜವಾಬ್ದಾರಿ ಕೂಡ ಇಲ್ಲ. ಮತದಾರ ಪ್ರಭುವಿನ ತೀರ್ಮಾನಕ್ಕೆ ಇದು ಛಡಿಯೇಟು ಅಲ್ಲದೆ ಮತ್ತೇನು...

ತಪ್ಪಿ ನಡೆದ ಸರ್ಕಾರ

ಇದು ಖಂಡಿತಾ ನಾಚಿಕೆಗೇಡಿತನದ ವಿಚಾರ. ಯಡಿಯೂರಪ್ಪ ಸರ್ಕಾರಕದಕೆ ಕಿಂಚಿತ್ತೂ ರೈತರ ಮೇಲೆ ಪ್ರೀತಿ ಅಷ್ಟೇಕೆ ಸಾಮಾನ್ಯ ಜವಾಬ್ದಾರಿ ಕೂಡ ಇಲ್ಲ. ಮತದಾರ ಪ್ರಭುವಿನ ತೀರ್ಮಾನಕ್ಕೆ ಇದು ಛಡಿಯೇಟು ಅಲ್ಲದೆ ಮತ್ತೇನು...

ಹನಿಗವನಗಳು ಭಾಗ 2

ಸಖತ್ ಸುಂದರಿ

ನಾನು ಪ್ರತಿದಿನ ಹಿಂಬಾಲಿಸುತ್ತಿದ್ದ
ಹುಡುಗಿ ಸಖತ್ ಸುಂದರಿ
ನನಗೆ ರಾಖಿ ಕಟ್ಟಿದಾಗಿನಿಂದ
ಅವಳು ನನ್ನ ಸಹೋದರಿ !!!

ಆಸೆ

ನೀನೊಂದು ಕಡಲು, ನಾನೊಂದು ನದಿ

ಹನಿಗವನಗಳು

ಮಲ್ಲಿಗೆ ಪರಿಮಳ

ನೀ ಮುಡಿದ ಮಲ್ಲಿಗೆಯ ಪರಿಮಳ
ಇಂದೇಕೋ ನನ್ನೆದೆಯಲ್ಲಿ ತಳಮಳ
ಬಾಡದಿರಲಿ ನೀ ಮುಡಿದ ಮಲ್ಲಿಗೆ
ನಾ ಬರುವೆ ನಿನ್ನ ಸನಿಹ ಮೆಲ್ಲಗೆ!!!

ಕಾಲಿಂಗ್ ಬಿಲ್

ನನ್ನ ಮೊಬೈಲ್ ಕನೆಕ್ಷನ್ ಏರ್ ಟೆಲ್

ನಿಂದು ಯಾವುದು ಪ್ಲೀಸ್ ಟೆಲ್

ನೆಗೞ್

ನೆಗೞ್=ಪ್ರಸಿದ್ಧಿ ಪಡೆ, ಉದ್ಯೋಗದಲ್ಲಿರು, ಹೆಸರು ಪಡೆ.
ನೆಗೞ್ದ ಕನ್ನಡನಾಡೊಳ್ ಎಣಿಕೆಗಳವಲ್ಲದ ಕಬ್ಬಿಗರ್.
ಭಾವನಾಮ ನೆಗೞ್ತೆ

ನೆಗೞ್(ನಾಮಪದ)=ಮೊಸಳೆ

ಭೂತಕೃದ್ವಾಚಿ ನೆಗೞ್ದು ಹೊಸಗನ್ನಡದಲ್ಲಿ ನೆಗೞಿ
ವರ್ತಮಾನಕೃದ್ವಾಚಿ ನೆಗೞ್ವ ಹೊಸಗನ್ನಡದಲ್ಲಿ ನೆಗೞುವ

ಯಾಕೋ ಈ ಪದ ಹೊಸಗನ್ನಡಿಗರು ಬೞಸುತ್ತಿಲ್ಲ.