ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಆಯಿಲ್ ಕುಟ್ಟಿ

ಇವತ್ತು ಬೆಳಿಗ್ಗೆ "ಇಂಡಿಯನ್ ಎಕ್ಸ್ಪ್ರೆಸ್" ಸರ್ಕಲ್ ನಲ್ಲಿ ತೆಗೆದಿದ್ದು

"ಆಯಿಲ್ ಕುಟ್ಟಿ"

-------------------------------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

http://somari-katte.blogspot.com

ಗ್ನು/ಲಿನಕ್ಸ್ ಹಬ್ಬ ವಾಲಂಟೀರ್ಸ್ ಬಳಗ

ಗ್ನು/ಲಿನಕ್ಸ್ ಹಬ್ಬ ಹೇಗಾಯಿತು ಎಂದು ಎಲ್ಲರೂ ಕೇಳುತ್ತಿದ್ದೀರಿ. ಸವಿವರವಾಗಿ ಬರೆಯಲು ಬಿಡುವಾಗಿಲ್ಲ.

ಕಾರ್ಯಕ್ರಮ ಬಹಳ ಚೆನ್ನಾಗಿ ನಡೆಯಿತು. ಮೊದಲ ಪ್ರಯತ್ನಕ್ಕೆ ಅಂದುಕೊಂಡದ್ದಕ್ಕಿಂತ ಯಶಸ್ವಿಯಾಯಿತು ಎಂದೇ ಹೇಳಬಹುದು.

ಎಂದಿನ ಕೆಲಸದ ನಡುವೆ ಇನ್ನೂ ಕಾರ್ಯಕ್ರಮ ನಂತರದ ಅಳಿದುಳಿದ ಕೆಲವು ಜವಾಬ್ದಾರಿಗಳು ಇನ್ನೂ ಮುಗಿಯದೆ ಹಾಗೇ ಇರುವುದರಿಂದ ಸದ್ಯಕ್ಕೆ ಈ ಚಿತ್ರ:

ನನಗೂ ನಿನಗೂ ಅಂಟಿದ ನಂಟಿನ ಕೊನೆ ಬಲ್ಲವರು ಯಾರು?

ಪುಸ್ತಕದ ಲೇಖಕ/ಕವಿಯ ಹೆಸರು
ಬಂಜಗೆರೆ ಜಯಪ್ರಕಾಶ್
ಪ್ರಕಾಶಕರು
ಆನಂದಕಂದ ಗ್ರಂಥಮಾಲೆ, ‘ಬಲರಾಮ’, ಅಧ್ಯಾಪಕರ ಕಾಲನಿ, ಮಲ್ಲಾಡಿಹಳ್ಳಿ - 577551
ಪುಸ್ತಕದ ಬೆಲೆ
೧೫೦ ರೂ.

ಕೃತಿ: ‘ತಲೆಮಾರು’ 

ಬಂಜಗೆರೆಯವರು ಅನುವಾದಿಸಿದ ಅಕ್ಸರ್ ಹೇಲಿಯ ವಿಶ್ವವಿಖ್ಯಾತ ಕಾದಂಬರಿ ರೂಟ್ಸ್. ತಲೆಮಾರು ಎನ್ನುವ ಹೆಸರಿನಲ್ಲಿ ಈ ಸಂಗ್ರಹಾನುವಾದ ಪ್ರಕಟವಾದದ್ದು 2003ರಲ್ಲಿ. ರೂಟ್ಸ್ ಹೇಲಿಯ ಕುಟುಂಬ ಚರಿತ್ರೆಯ ದಾಖಲೆ. 1976ರಲ್ಲಿ ಪ್ರಕಟವಾದದ್ದು. ಇದು ಮುವ್ವತ್ತೇಳು ಭಾಷೆಗಳಿಗೆ ಅನುವಾದಗೊಂಡಿದೆಯಂತೆ. ಇದಕ್ಕೆ ಮಿಲಿಯಗಟ್ಟಲೆ ಪ್ರತಿಗಳ ಮಾರಾಟದ ದಾಖಲೆಯಿದೆ. ಕಿರು ಧಾರಾವಾಹಿಯಾಗಿ ಟಿವಿಯಲ್ಲಿ ಪ್ರಸಾರವಾದಾಗ ಸುಮಾರು ನೂರ ಮೂವತ್ತು ಮಿಲಿಯನ್ ಜನ ವೀಕ್ಷಿಸಿದರೆಂದು ಅಂದಾಜು.

ಯಾವಾಗಲೂ ಚರಿತ್ರೆಯನ್ನು ಬರೆಯುವವರು ಗೆದ್ದ ಜನ. ಸೋತವರಿಗೆ ಚರಿತ್ರೆಯಿಲ್ಲ ಎನ್ನುತ್ತಾರೆ ಜಿ.ರಾಜಶೇಖರ. ಮೇಲೆ ಹೇಳಿದ ಪುಸ್ತಕಗಳು ಸೋತವರ ಚರಿತ್ರೆ.

ಹದಿನಾಲ್ಕು ವರ್ಷದ ಹಿಂದಿನ ಕವಿತೆಗಳು

(ಮನಸ್ಸಿನ ಬೇರುಗಳು ಬಲು ಆಳ, ಬಲು ಸಮೃದ್ಧ. ಒಳಗೊತ್ತಿ, ಆಳಕ್ಕಿಳಿಸಿ, ಹೂತು ಹಾಕಿದ್ದ ನೆನಪುಗಳೆಲ್ಲ ಬೇರುಗಳ ಮೂಲಕ ತುತ್ತ ತುದಿಗೆ ಬಂದು ಬಿಡುತ್ತವೆ. ಅರಳಿ, ಹೂವಾಗಿ, ಕಾಯಾಗಿ ಹಣ್ಣಾಗಿ ಬೆಚ್ಚಿಸುತ್ತದೆ.

ಹದಿನಾಲ್ಕು ವರ್ಷದ ಹಿಂದಿನ ಒಂದಿಷ್ಟು ಚುಟುಕುಗಳು

೧.

ಇದ್ದಕ್ಕಿದ್ದಂತೆ
ಮಾತು ಕಳೆದುಕೊಂಡು
ಮೌನಿಯಾಗಿ
ಎಲ್ಲೋ ದಿಟ್ಟಿಸುವವ
ಹೆಗಲ ಮೇಲೆ ಕೈಇಟ್ಟರೆ
ಬೆಚ್ಚುವವ
ಕಾರಣವಿಲ್ಲದೇ
ಭಾವುಕನಾಗುವವ
ಮೂಕ ಪ್ರೇಮಿ

೨.

ದುಷ್ಯಂತನನ್ನು
ಶಕುಂತಲೆ ಪ್ರೇಮಿಸಿದ್ದ
ಅವನು ಮಹಾರಾಜನೆಂದಲ್ಲ
ಪುರುಷನೆಂದು

೩.

ಸಲೀಸಾಗಿ
ಪಾಗಾರ ಹತ್ತಿಳಿಯುವ ಹುಡುಗಿ
ಹುಡುಗನ ಗಡ್ಡ-ಮೀಸೆ ಗೇಲಿ ಮಾಡುವವಳು

ಹೊಸ ಹಬ್ಬ

ಗ್ನು ಹಬ್ಬದಿಂದಾಗಿ ಏಪ್ರಿಲ್ ನಲ್ಲಿ ಹೊಸ ಹಬ್ಬದ ಸೇರ್ಪಡೆ !

*********************************

ಏಪ್ರಿಲ್ ನಲ್ಲಿ ಮೂರು ಯುಗಾದಿಗಳು,

ಒಂದು ಚಾಂದ್ರಮಾನ,

ಇನ್ನೊಂದು ಸೌರಮಾನ,

ಹೊಸದು ವರ್ತಮಾನ !

*********************************

 

 

ಲಿನಕ್ಸ್/ XP ಯಾವುದು ಉತ್ತಮ ಮತ್ತು ಯಾಕೆ/ಹೇಗೆ??

ಹಬ್ಬ ಮಿಸ್ ಮಾಡ್ಕೊಂಡ ಬೇಜಾರು ಒಂದು ಕಡೆ ಇದ್ರೂ.. ಎಲ್ಲಾ ಸಾಂಗವಾಗಿ ನಡೆದದ್ದು ಕೇಳಿ ಸಂತೋಷ ಆಯ್ತು..