ಎರಡೇ ಸಾಕು
ಸುಖ ಸಂಸಾರಕೆ
ಎರಡೇ ಸಾಕು!,
ಮೊದಲನೆಯಾಕೆಗೊಂದು ಗಂಡು
ಎರಡನೆಯಾಕೆಗೊಂದು ಹೆಣ್ಣು,
ಲೈಫ್ ನಲ್ಲಿ ಇನ್ನೇನ್ ಬೇಕು!!
- Read more about ಎರಡೇ ಸಾಕು
- Log in or register to post comments
ಸುಖ ಸಂಸಾರಕೆ
ಎರಡೇ ಸಾಕು!,
ಮೊದಲನೆಯಾಕೆಗೊಂದು ಗಂಡು
ಎರಡನೆಯಾಕೆಗೊಂದು ಹೆಣ್ಣು,
ಲೈಫ್ ನಲ್ಲಿ ಇನ್ನೇನ್ ಬೇಕು!!
ಗಂಡ-ಹೆಂಡಿರ ಜಗಳ
ಉಂಡು-ಮಲಗೋ
ತನಕ,
ಹೆಂಗಸು-ಹೆಂಗಸಿನ ಜಗಳ
ಗಂಡು ಬಲಿಯಾಗುವ
ತನಕ!!!
ಕುದಿಯುವುದು - ಎಣ್ಣೆ,
ಕರಗುವುದು - ಬೆಣ್ಣೆ,
ಕರಗದಿರುವವಳೂ - ಹೆಣ್ಣೇ????
ಕೆಲಸ ಪಡೆಯುವ
ಮೂಲಮಂತ್ರ
ಹೇಗಾದರು ಕಲಿ ನೀ
’ಗಣಕಯಂತ್ರ’
ಅದರ ತಂತ್ರ!!
ಮನೆಯ ಕಾವಲು ನಾಯಿ
ಇರುವಂತೆ
ಸದಾ ನಿನ್ನ ಕಾವಲು
ನಾ(ಯಿ) ಇಲ್ಲವೇ?
ಮನದಾಳದ ಮಾತನ್ನು
ನುಡಿಯಲಾರದೆ ಬರೆದಿಹೆನು,
ಅನುಗ್ರಹಿಸು ನೀ ನನ್ನನ
ು
ಓದಿ ಈ ಪ್ರೆಮದೋಲೆಯನು,
ಕ್ಷಮಿಸು ನನ್ನ ಮತಿಯೇ
ಅವಳ ಒಮ್ಮೆ ನಾ ನೋಡಿದೆ,
ಶಿಕ್ಷೆಯಾಗಿ ನೀನು ನನ್ನ
ಏಳೇಳು ಜನ್ಮ ಕಾಡು ಬಿಡದೆ,
ನಿನ್ನ ಚೆಲುವಲ್ಲ ನನ್ನ
ಭಾವನೆಗಳ ಸಾಗರದಲ್ಲಿ
ಪ್ರೀತಿಯ ಅಲೆಯಾಗಿಬಂದು
ಹೃದಯದ ದಡಕ್ಕೆ ಅಪ್ಪಳಿಸಿದವಳು
ನೀನಲ್ಲವೆ ???
ಬಿರುಬಿಸಿಲ ಬೇಗೆಯಲ್ಲಿ
ತಣ್ಣನೆಯ ಗಾಳಿಯಂತೆ
ಬಂದೆನ್ನ ಮುದಗೊಳಿಸಿ ನಕ್ಕವಳು
ನೀನಲ್ಲವೆ ???
ಬರಡು ಭೂಮಿಯಲ್ಲಿ
ಜೀವ ಸೆಲೆಯಾಗಿ ಬಂದು
ನದಿಯಾಗಿ ಹರಿದವಳು
ನೀನಲ್ಲವೆ ???
ಮೈನಡುಗುವ ಚಳಿಯಲಿ
ಬೆಚ್ಚನೆಯ ಸವಿನೆನಪತಂದು
ಮೈಪುಳಕಗೊಳಿಸಿದವಳು
ನೀನಲ್ಲವೆ ???
ಮನೆ ಮುಂದಿನ ಹಾದಿ ಬದಿಯಲಿ
ಕೇಕೆ ಹಾಕಿ, ಗೋಲಿಯಾಡುವಾಗ
ಹಾಲಿರದ ಎದೆಗಂಟಿದ ಅಳುವ ಕಂದನ
ದನಿಗೆ ನಾನೆಂದೂ ಕಿವಿಕೊಟ್ಟಿಲ್ಲ
ಕಪ್ಪು ಕನ್ನಡಕ ಧರಿಸಿ, ಮನದಲ್ಲಿ
ಅಹಂಕಾರ ತುಂಬಿರಲು
ಭಿಕ್ಷೆ ಬೇಡುವ ಮುದ್ದು ಕೈಗಳ ಕಂಡು
ಕತ್ತು ತಿರುಗಿಸಿ, ಸುಮ್ನೆ ಜೇಬು ತಡಕಾಡಿದ್ದೂ ಇದೆ
ದಾರಿಯಿಕ್ಕೆಲಗಳಲಿ ಕೈ ಚಾಚುವ ಜನರು,
ಕಸದ ತೊಟ್ಟಿಯಿಂದ ಕೂಳು ಹೆಕ್ಕಲು
ನಿನಗೆ,
ನನ್ನೊಳಗಿನ ಪ್ರೀತಿ ಕಾಣುವುದಿಲ್ಲ
ಭೂತ ಕನ್ನಡಿ ಹಿಡಿದು
ಹುಡುಕಿದಾಗಲೂ
ನನ್ನ ದನಿ ಕೇಳುವುದಿಲ್ಲ
ಗಂಟಲು ಬಿರಿದು
ನಾನೆಷ್ಟು ಕರೆದರೂ
ಮೌನ ಆವರಿಸಿದೆ ಸುತ್ತ
ಬರಡು ಜೀವನವೆಂಬ ವ್ಯಥೆಯಲಿ
ಕ(ವಿ)ತೆಗಳಿಗೆ ಬರಗಾಲ
ಬಂದಿದೆ, ಕೈ ಬಂಧಿ ತೊಡಿಸಿದಾಗ
ಮನದಲ್ಲಿ ಬೆಂಕಿ ಉರಿದು
ಉಕ್ಕುವವು ಕಣ್ಣ ಹನಿ
ಕೊರಗಿ ಕರಗುವ ಚಿತ್ತದಲಿ
ಜ್ವಾಲಾಮುಖಿಗಳಂತೆ!