ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ವರ್ಣಭೇದ ಈಗ ಕ್ರಿಕೆಟ್‍ನಲ್ಲೂ

ಭಾರತೀಯ ಮಾಧ್ಯಮಗಳು ಮತ್ತು ಅವು ಬಿತ್ತರಿಸುವ ಅಂತರ್ರಾಷ್ಟ್ರೀಯ ವರದಿಗಳನ್ನು ಬಿಟ್ಟರೆ ಮಿಕ್ಕವರು ಸುಮಾರು ಜನ ಭಾರತೀಯ ತಂಡವನ್ನು, ಹರ್ಭಜನ್ ಸಿಂಗ್‍ರನ್ನು ವಿಶೇಷ ಪದಗಳಿಂದ ಬಯ್ಯುತ್ತಿದ್ದಾರೆ. ನಮ್ಮ ಕ್ರಿಕೆಟ್ಟಿಗರೂ ರೇಸಿಸ್ಟ್ ಭಾಷೆ ಬಳಸುತ್ತರೆಯೇ ಎಂಬು ಸಣ್ಣ ಅನುಮಾನ ನಮ್ಮ ಹೃದಯದಲ್ಲೂ ಹುಟ್ಟಿದೆ.

ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ-ಏಳನೆಯ ಕಂತು

ಅವನು ಸಾಕಷ್ಟು ಮುದ್ದಿನಲ್ಲಿ ಬೆಳೆದ ಹುಡುಗ. ಅವನ ಮನೆಯವರು ಬಡವರಾಗಿದ್ದರೂ ಒಬ್ಬರನ್ನೊಬ್ಬರು ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರು. ಅವನೆಂದೂ ಉಪವಾಸ ಇರಬೇಕಾಗಿ ಬಂದಿರಲಿಲ್ಲ. ಮನೆಯ ಹೆಂಗಸರು ಅಚ್ಚುಕಟ್ಟಾಗಿ ಒಗೆದು ಗಂಜಿ ಹಾಕಿದ ಅತ್ಯುತ್ತಮ ಮಸ್ಲಿನ್ ಬಟ್ಟೆ ಬಿಟ್ಟು ಬೇರೆ ಬಟ್ಟೆಯನ್ನು ಉಡಬೇಕಾಗಿಬಂದಿರಲಿಲ್ಲ.

ತ್ಯಾಗರಾಜ ಸ೦ಗೀತದಲ್ಲಿ ಅಧ್ಯಾತ್ಮ

ಶತಾವಧಾನಿ ರಾ. ಗಣೇಶ್ , ವಿದ್ವಾನ್ ಶ೦ಕರ್ ರವರ ಗಾಯನದ ಹಿನ್ನೆಲೆಯಲ್ಲಿ ತ್ಯಾಗರಾಜರ ಅಧ್ಯಾತ್ಮದ ಕುರಿತಾಗಿ ಪ್ರವಚನ
ಗೋಖಲೆ ಸ೦ಸ್ಥೆಯಲ್ಲಿ (ಬಸವನಗುಡಿ ರಸ್ತೆ - ಬಿ. ಎಮ್ .ಸ್ ಕಾಲೇಜು ಮು೦ಭಾಗ ) ನೀಡುತ್ತಿದ್ದಾರೆ.

ಪರಿಸರ ಪ್ರೇಮಿ

ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಹಾಳು ಮಾಡಬೇಡಿ, ಚನ್ನಾಗಿ ಶುದ್ದವಾಗಿಟ್ಟುಕೊಳ್ಳಿ.... ಹಾಗ೦ತ ಎಲ್ಲರು ಹೇಳ್ತಾರೆ, ಆದರೆ ನಮ್ಮ ಬೆ೦ಗಳೂರಿನ ಪರಿಸರ ತೀರ ಹದಗೆಟ್ಟುತ್ತಿರುವುದು ಕುತೂಹಲಕಾರಿ ವಿಷಯ. ಪರಿಸರವನ್ನು ಉಳಿಸಿ ನಗರವನ್ನು ಬೆಳೆಸಿ, ಬಿಲ್ಡಿ೦ಗ್ ಕಟ್ಟಿ, ಮರಗಳನ್ನು ಕಡಿದು ಹಾಕಿ!

ಕುರುಡು ಪ್ರೀತಿ

ಪ್ರೀತಿಗೆ ಕಣ್ಣಿಲ್ಲ, ಆದರೆ ಕಣ್ಣಿದ್ದು ಕುರುಡನಾಗಿಹೇಕೆ
ಕಾಣದ ನಿನಗೆ ನನ್ನ ಪ್ರೀತಿ
ಕೇಳಿಸದೆ ನಿನಗೆ ನಿನ್ನ ಪ್ರೇಯಸಿಯ ಗೆಜ್ಜೆ ಸದ್ದು
ಬೀಸುತಿಹ ತ೦ಗಾಳಿಯಲ್ಲಿ ಬ೦ದು ಹೂವಿನ ಕ೦ಪನ್ನು ಚೆಲ್ಲಿದ೦ತೆ
ನನ್ನನ್ನು ಎಬ್ಬಿಸಿ ಎಲ್ಲಿಗೆ ಹೋದೆ
ಸಾಗರದಾಳದವರೆಗೆ ಕರೆದೊಯ್ದು ನ೦ತರ ದಡದಲ್ಲಿ ತ೦ದು ಬಿಸಾಡುವ ಈ ನಿನ್ನ ಮನಸ್ಸಿಗೆ

ಎಲ್ಲೆಲ್ಲಿ ನೋಡಲೂ...

ಬಸವನಗುಡೀಲಿ ಒಮ್ಮೆ ಮೆಣಸಿನಕಾಯಿ ಬಜ್ಜಿ ಜಡಿದು ಜೊತೆಗೆ ಕೊಟ್ಟ ಪೇಪರ್ರು, ಕವರ್ರು ಎಸೆಯೋಕೆ ಬುಟ್ಟಿ ಹುಡುಕುತ್ತಿದ್ದೆವು. "ಕಸದ ಬುಟ್ಟಿ ಎಲ್ಲಿದೆ?" ಎಂದು ಎದುರಿಗಿದ್ದ ಅಂಗಡಿಯವನಿಗೆ ಕೇಳಿದರೆ ಕಿಸಕ್ಕೆಂದು ನಕ್ಕುಬಿಟ್ಟ. "ಏನ್ ಅಮೇರಿಕಾದಿಂದ ಬಂದ್ರಾ? ಅಲ್ಲೇ ಹಾಕಿ ಮೂಲೇಲಿ!".

ರಸ್ತೆ ಬದೀಲಿ, ಖಾಲಿ ಸೈಟುಗಳಲ್ಲಿ ಪಾರ್ಥೇನಿಯಮ್ ಗಿಡ ಬಿಟ್ಟರೆ ರಾರಾಜಿಸೋದು ಪ್ಲಾಸ್ಟಿಕ್ ಕವರ್ರುಗಳೇ. ಮುಂದೊಂದು ಪೀಳಿಗೆಯಲ್ಲಿ ಆರ್ಕಿಯಾಲಜಿ ಎಂದುಕೊಂಡು ಬೆಂಗಳೂರನ್ನು ಅಗೆದರೆ ಅದೆಷ್ಟು ಸವಾಲುಗಳು ಎದುರಾಗಬಹುದೋ! ಅವರುಗಳಿಗೆ ಇಷ್ಟೊಂದು ಕವರ್ರುಗಳು ಸಿಕ್ಕು ಇದರಿಂದ ಏನರ್ಥ ಮಾಡಿಕೊಳ್ಳಬೇಕೆಂದು ತೋಚದ ಪರಮ ಸಮಸ್ಯೆಯಾಗಿಬಿಡಬಹುದು. ಅಥವ ಪ್ಲಾಸ್ಟಿಕ್ ಕವರ್ರು ಎಂಬುದೊಂದಿತ್ತು ಎಂದು ಆ ಪೀಳಿಗೆಯವರಿಗೆ ಗೊತ್ತಾದರೆ ಅವರು ಹಿಗ್ಗಾಮುಗ್ಗಿ ಯಾರನ್ನೂ ಬಿಡದೇ ಈ ಪೀಳಿಗೆಯ ಎಲ್ಲರನ್ನೂ ಬೈದುಕೊಳ್ಳುವಂತಾಗಬಹುದು.

ಹಿಂದಿದ್ದ ಅಪಾರ್ಟ್ಮೆಂಟಿನ ಸೆಕ್ಯೂರಿಟಿ "ಕಳ್ ನನ್ ಮಕ್ಳು, ಬಿ ಬಿ ಎಂ ಪಿ ಬಂದು ಇವರ ಕಸಾನ ಹಾಕ್ಕೊಂಡ್ ಓಗ್ದೇ ಇದ್ರೆ ಆಯ್ತು ಸಾಮಿ, ಓದು ಬರಹ ಬಂದ್ರೂ ಉಪ್ಯೋಗಿಲ್ಲಾ ಇಲ್ಲೇ ವಟ್ಕತಾರೆ" ಎಂದು 'ಓದು ಬರಹ ಬಲ್ಲ' ಎಲ್ಲರನ್ನೂ ಸೇರಿಸಿ ಬಯ್ಯುತ್ತಿದ್ದುದು ನೆನಪಾಗುತ್ತದೆ.

ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ-ಆರನೆಯ ಕಂತು

ಸ್ವಲ್ಪ ದಿನಗಳ ನಂತರ ನಮ್ಮ ಹಣ ಮುಗಿದುಹೋಯಿತು. ಹೆನ್ರಿ ಇನ್ನೂ ಹೆಚ್ಚಿನ ಹಣ ಕಳಿಸಲೊಲ್ಲ. ಹಾಗಾಗಿ ಮುಂದೇನು ಎಂದು ನಾವು ಯೋಚಿಸಬೇಕಾಯಿತು. ಅಹ್ಮದ್‌ನಿಂದ ಅಗಲುವುದನ್ನು ಸಹಿಸಲೇ ಆಗುತ್ತಿರಲಿಲ್ಲ ನನಗೆ. ಕೊನೆಗೆ ನಾನು ಅಹ್ಮದ್ ನನ್ನೊಂದಿಗೆ ದೆಹಲಿಗೆ ಬರುವುದು ಒಳ್ಳೆಯದೆಂದೂ, ಇಬ್ಬರೂ ಸೇರಿ ಹೆನ್ರಿಯೊಂದಿಗೆ ಬಗೆಹರಿಸಿಕೊಳ್ಳುವುದೆಂದೂ ಸಲಹೆ ಕೊಟ್ಟೆ.

ಹೆಸರು ಬೇಕು?

ಹೆಸರು ಬೇಕು ನಮಗೆ
ಕೂಗಿ ಕರೆಯುವುದಕೆ
ನಮ್ಮ ಇರುವನು
ದೃಢೀಕರಿಸುವುದಕೆ

ಗುರುತಿಸಬೇಕೆಂಬ
ನಮ್ಮ ಹಂಬಲಕ್ಕೆ
ಬೆನ್ನು ತಟ್ಟಿ ಪ್ರೋತ್ಸಾಹಿಸ
ಬೇಕೆಂಬ ಛಪಲಕ್ಕೆ

ದಾರಿ ತೋರುವವಂಗೆ
ತಪ್ಪುಗಳ ತಿದ್ದುವವಂಗೆ
ವಿಧ್ಯೆ ಕಲಿಸುವವಂಗೆ
ಹೆಸರು ಬೇಕೆ ಬೇಕು

ದಿಟ್ಟ ಪರಿಶ್ರಮವಿಟ್ಟು
ಸಂದ ಪ್ರತಿಫಲವನ್ನು
ಸಾಧನೆಯ ಮುಖವೆಂದು
ಜಗಕೆ ತಿಲಿಸುವುದಕೆ

ಹೆಸರು ಬೇಕು?

ಹೆಸರು ಬೇಕು ನಮಗೆ
ಕೂಗಿ ಕರೆಯುವುದಕೆ
ನಮ್ಮ ಇರುವನು
ದೃಢೀಕರಿಸುವುದಕೆ

ಗುರುತಿಸಬೇಕೆಂಬ
ನಮ್ಮ ಹಂಬಲಕ್ಕೆ
ಬೆನ್ನು ತಟ್ಟಿ ಪ್ರೋತ್ಸಾಹಿಸ
ಬೇಕೆಂಬ ಛಪಲಕ್ಕೆ

ದಾರಿ ತೋರುವವಂಗೆ
ತಪ್ಪುಗಳ ತಿದ್ದುವವಂಗೆ
ವಿಧ್ಯೆ ಕಲಿಸುವವಂಗೆ
ಹೆಸರು ಬೇಕೆ ಬೇಕು

ದಿಟ್ಟ ಪರಿಶ್ರಮವಿಟ್ಟು
ಸಂದ ಪ್ರತಿಫಲವನ್ನು
ಸಾಧನೆಯ ಮುಖವೆಂದು
ಜಗಕೆ ತಿಲಿಸುವುದಕೆ