ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸ್ನೇಹ - ಹಣತೆ

ಸ್ನೇಹ - ಹಣತೆ

ಕಳೆದು ಹೋಗುತಿದೆ ಮನವು
ಕಾಣದ ಕೈಗಳ ಸ್ವಾರ್ಥದಲಿ
ಕಳೆದುಕೊಳ್ಳದಿರು ನಿನ್ನತನವ
ಪರರ ಆಸೆಗಳ ಸಾರ್ಥಕತೆಯಲಿ.

ಭ್ರಮಿಸಿ ನಿರಾಶೆಗೊಳ್ಳುವಿಯೇಕೆ?
ತೊಡೆದು ಹಾಕು, ಕವಿದ ಮೋಡಗಳು
ಮಳೆ ಸುರಿಸಬಹುದೆಂಬ ಬಯಕೆ,
ಏಕೆಂದರೆ, ಚದುರುವುದು ಮೋಡಗಳು
ಬೀಸುವ ಗಾಳಿಯ ರಭಸಕೆ.

ಕತ್ತಲೇ ಜಗವೆಂದು ತಿಳಿದ ಮನಕೆ
ಬೆಳಕಾಗಿ ಮೂಡಿತ್ತು, ಸ್ನೇಹದ ಹಣತೆ.

ಸ್ನೇಹ ನಿನಾದ

ಸ್ನೇಹ ನಿನಾದ

ಹರಿವ ನೀರ ಕಲರವದಂತೆ ನಿನ್ನ ಸ್ನೇಹ ಗೆಳತಿ
ಕೇಳಲು ಇಂಪು ಅದು ಸೂಸುವ ನಿನಾದ.
ಬಿದಿಗೆ ಚಂದ್ರಮನಂತೆ ನಿನ್ನ ಸ್ನೇಹ ಗೆಳತಿ
ನೋಡಲು ಕಣ್ಣಿಗೆ ತಂಪು, ಮನಸಿಗೆ ಆನಂದ.
ಸಂಜೆಗಂಪಲ್ಲಿ ಭೋರ್ಗರೆವ ಕಡಲಂತೆ ನಿನ್ನ ಸ್ನೇಹ ಗೆಳತಿ
ಹೊಮ್ಮುತಿವೆ ಭಾವನೆಗಳು ಏನನ್ನೋ ಹೇಳುವಂತೆ.

ಹೇಳು ಗೆಳತಿ, ಹೇಗಿರಬೇಕು ನಮ್ಮ ಸ್ನೇಹ?

ಪ್ರೇಮ ಭಾವ

ಪ್ರೇಮ ಭಾವ

ನನ್ನ ಮನದಾಳದ ಭಾವನೆಗಳ
ಕೆದಕಿದ ಚೆಲುವೆ,
ಹೀಗೇಕೆ ನನ್ನನು
ಕನಸಿನಲಿ ಕಾಡಿ ಕೊಲುವೆ?

ನನ್ನ ಪ್ರೀತಿಗೆ ನೀನೇಕೆ ಅಂಧಳಾಗಿರುವೆ?
ನಿನ್ನ ಮನದಿಂದ ಏಕೆ ನನ್ನ ದೂರ ಮಾಡಿರುವೆ?
ನಿನ್ನ ಪ್ರೀತಿಯೊಂದನ್ನೇ ನಾ ಬಯಸುವೆ
ಆದರೆ ಹೀಗೇಕೆ ನೀ ನನ್ನ ಕಾಡಿ ಕೊಲ್ಲುವೆ?

ಬೇರೆಯ ಲೋಕದಲ್ಲಿ ವಿಹರಿಸುತ್ತಿದ್ದ ನನ್ನ
ಏಕೆ ಮಾಡಿಕೊಂಡೆ ಗುಲಾಮನಾಗಿ ನಿನ್ನ,

ಅಡಿಗೆಯವರ ಪುರಾಣ

ಮದುವೆಯವರೆಗೂ ಅಡಿಗೆಮನೆಯ ಕಡೆ ನಾನು ಕಾಲಿಟ್ಟಿರಲಿಲ್ಲ(ಅಡಿಗೆ ಮಾಡಲು)
ಮದುವೆಯ ಮೊದಲ ವರ್ಷ ಮಗು, ಹಬ್ಬ, ತವರು ಮನೆ ಎಂದು ಹೇಗೊ ಕಳೆದು ಹೋಯಿತು.
ನಂತರ ಬಂತು ಅಡಿಗೆಯ ಗುಮ್ಮ . ನನ್ನ ಪತಿರಾಯರೋ ರುಚಿ ರುಚಿಯಾದ ಪಾಕ ಕೇಳುವವರು.
ನಾನೊ ಬ್ರೆಡ್, ಹೊಟೆಲ್ ಎಂದು ಕಾಲ ತಳ್ಳುವವಳು.
ಆದರೆ ನನ್ನ ಪತಿರಾಯರು strict ಆಗಿ ಹೇಳಿದರೌ.
"ಮನೆಯಲ್ಲಿಯೆ ಊಟ"

ಭಾರತದ [ಪ್ರ]ಗತಿ

ಭಾರತದ [ಪ್ರ]ಗತಿ

ಭಾರತ ಭಾರತ ಭಾರತ ದೇಶ
ಬಡವರಿಂದ ಕೂಡಿದ ಶ್ರೀಮಂತ ದೇಶ
ಇಲ್ಲಿನ ಜನ ಜಗತ್ತಿನ ಶೇಷ
ಬಡತನ ಆಗಬೇಕು ನಿಶೇಷ

ನಮ್ಮ ಬಡತನಕೆ ಕಾರಣ ಇಂಗ್ಲೀಷರು
ಎಂದು ಹೇಳುವರು ಭಾರತೀಯರು
ಜಪಾನ್ ದೇಶವೂ ಕೂಡಿತ್ತು ಬಡತನದಿಂದ
ಈಗ ಅದು ನಲಿಯುತಿದೆ ಅಭಿವೃದ್ಧಿಯಿಂದ

ಇರುಳಲ್ಲಿ ದೊರಕಿದ ಸ್ವಾತಂತ್ರ್ಯ
ಮಾಡಿದೆ ನಮ್ಮನ್ನೆಲ್ಲಾ ಅತಂತ್ರ
ಶ್ರೀಮಂತರಿಗೆ ಹಣದ ಮೋಹ

ಭಾವಬಿಂದು

ಭಾವಬಿಂದು

ಅವನೊಬ್ಬ ಯುವಕ
ಮತ್ತು ಅವನು ಭಾವುಕ
ಭಾವನೆಗಳೇ ಅವನ ಜೀವಾಳ
ಅವನ ಜೀವನ ತುಂಬಾ ಸರಳ

ಚಿಕ್ಕಂದಿನಿಂದ ಕನಸುಗಳ ಹೊತ್ತವನು
ಯೌವ್ವನದಲ್ಲಿ ಅವುಗಳಿಗೆ ಸೋತವನು
ಜೀವನದಲ್ಲಿ ಅವನಿಗಿಲ್ಲ ಆಸೆ
ಈ ಲೋಕವೆಲ್ಲಾ ಅವನಿಗೆ ನಿರಾಸೆ

ಅವನ ಜೀವನದ ಆಧಾರ ಅವಳು
ಅವನ ಜೀವನದ ಹುಮ್ಮಸ್ಸು ಅವಳು
ಅವನಿಗಾಗಿ ಸೋತವಳು
ಅವನ ಗೆಲುವಿನಲ್ಲಿ ಖುಷಿ ಪಡುವಳು

ಮಿನಿ ರಾಮಾಯಣ

ಇದು ನನ್ನ ಮೊದಲ ಕವನ, ನನ್ನ 8ನೇ ತರಗತಿಯಲ್ಲಿ ಬರೆದಿದ್ದು, ಈಗ ತುಂಬಾ ಬಾಲಿಷವಾಗಿ ಕಾಣಬಹುದು..
ನಗಬೇಕು ಅನಿಸಿದರೆ ಸುಮ್ಮನೆ ನಕ್ಕು ಬಿಡಿ, ಬೇರೆಯವರಿಗೆ ಗೊತ್ತಾಗದಂತೆ... ;) :D

ಮಿನಿ ರಾಮಾಯಣ

ಸೀತೆಯನ್ನು ಹೊತ್ತುಕೊಂಡು ಹೋದ ಲಂಕಾಧಿಪತಿ
ಇದಕ್ಕೆ ಕಾರಣ ಆ ಮಾರೀಚನ ಕಿತಾಪತಿ
ಆಗ ಎಷ್ಟು ನರಳಿದನೋ ಪಾಪ ಸೀತೆಯ ಪತಿ

ಕೊಡಚಾದ್ರಿಗೆ ಬೇಕಿತ್ತೇ ರಸ್ತೆ-ರೆಸಾರ್ಟು?

ಕೊಡಚಾದ್ರಿ ಸುದ್ದಿಯಲ್ಲಿದೆ. ಅಲ್ಲಿಗೆ ೧೦ ಕೋಟಿ ರೂ. ವೆಚ್ಚದ ಕಾಂಕ್ರೀಟ್ ರಸ್ತೆ ಮತ್ತು ಸಮೀಪದ ನಾಗೋಡಿಯಲ್ಲಿ ೩ ಕೋಟಿ ರೂ.ನ ರೆಸಾರ್ಟ್ ಇವುಗಳ ಅಗತ್ಯವನ್ನು ಪ್ರಶ್ನಿಸಿ ಕೇಮಾರು ಸಾಂದಿಪನಿ ಆಶ್ರಮದ ಈಶವಿಠಲದಾಸ ಸ್ವಾಮಿ ಮತ್ತು ಹಿಂದೂ ಸೇನೆಯ ಪ್ರಮೋದ ಮುತಾಲಿಕ ಹೈಕೊರ್ಟಿನಲ್ಲಿ ಕೇಸು ಜಡಿದಿದ್ದಾರೆ. ಕೋರ್ಟು ಕಾರಣ ಕೇಳಿ ಸರ್ಕಾರಕ್ಕೆ ನೋಟೀಸ್ ನೀಡಿದೆ.
ಇತ್ತ ಮಾಜಿ ಶಾಸಕ ಅರಗ ಜ್ನಾನೇಂದ್ರ ರಸ್ತೆ - ರೆಸಾರ್ಟು ಅಂದ್ರೆ ಕೊಡಚಾದ್ರಿಯ ಅಭಿವ್ರದ್ಧಿ. ‘ಡೆವಲಪ್ಮೆಂಟು’ ಆದ್ರೆ ಸ್ಥಳೀಯರ ಜೀವನ ಮಟ್ಟ ಉತ್ತಮಗೊಳ್ಳುತ್ತದೆ. ಇದನ್ನು ಬೇಡ ಅನ್ನೋರು ಅಭಿವ್ರದ್ಧಿ ವಿರೋಧಿಗಳು ಅನ್ನುತ್ತಿದ್ದಾರೆ. ಸ್ವಿಮ್ಮಿಂಗ್ ಪೂಲ್ ಇರೋ ರೆಸಾರ್ಟು ಜನಸಾಮಾನ್ಯರಿಗಲ್ಲ ಅನ್ನೋದಂತೂ ನಿಜ, ಅದು ಹೇಗೆ ಸ್ಥಳೀಯರಿಗೆ ಸಹಾಯ ಮಾಡುತ್ತದೋ ಗೊತ್ತಿಲ್ಲ.
ಕೇಮಾರು ಸ್ವಾಮಿಜಿಯ ಕಾವಿ ಬಟ್ಟೆಗೆ ಹಸಿರು ಛಾಯೆ ಬಂದಿದ್ದರೆ ಸ್ವಲ್ಪ ಸಮಾಧಾನವಾಗುತ್ತಿತ್ತೇನೋ. ಕೊಡಚಾದ್ರಿ ಧಾರ್ಮಿಕ-ಆಧ್ಯಾತ್ಮಿಕ ಶಕ್ತಿಕೇಂದ್ರ, ರಸ್ತೆ ಅಲ್ಲಿಯ ಅಧ್ಯಾತ್ಮಿಕ ವಾತಾವರಣಕ್ಕೆ ಘಾಸಿ ಮಾಡುತ್ತದೆ, ಅಲ್ಲಿಗೆ ಜೀಪುಗಳು ಬರೋದೂ ಬೇಡ ಅನ್ನುವ ಇವರಿಗೆ ಕೊಡಚಾದ್ರಿ ಪರಿಸರದ ಅಪರೂಪದ ಅತಿ ಸೂಕ್ಷ್ಮ ಜೈವಿಕ ವ್ಯವಸ್ಥೆಯ ಕುರಿತಾಗಲೀ, ರಮ್ಯಾದ್ಭುತ ನಿಸರ್ಗ ಸ್ರಷ್ಟಿಯ ಬಗ್ಗೆಯಾಗಲೀ ಅದೆಷ್ಟು ಕಾಳಜಿಯಿದೆಯೋ ತಿಳಿಯದು.

ಅಂತರ್ಜಾಲದಲ್ಲಿ ಸಂಶೋಧನೆಗೆ ಬೇಕಾದ ಉಪಯುಕ್ತ ತಂತ್ರಾಂಶಗಳು

ಇಂದು ಅಂತರ್ಜಾಲ, ಮುದ್ರಿತ ಮಾಧ್ಯಮ ಮೊಬೈಲುಗಳು ಎಲ್ಲಾ ಕಡೆಯಿಂದಲೂ ಬೇಕಾದ, ಬೇಡವಾದ ಮಾಹಿತಿಗಳು ಸುದ್ದಿಗಳು ಬರುತ್ತಲೇ ಇರುತ್ತವೆ (ಈ ಲೇಖನ ಕೂಡ ಅವುಗಳಲ್ಲಿ ಒಂದು ;-) ).
ಈ ಮಾಹಿತಿ ಸ್ಫೋಟವನ್ನು ಸಮರ್ಪಕವಾಗಿ ಎದುರಿಸಿ ಬೇಕಾದದ್ದನ್ನು ಶ್ರಮವಿಲ್ಲದೇ ಹೆಕ್ಕಿ ಮಿಕ್ಕವನ್ನು ಬದಿಗಿಡುವುದು ಒಂದು ಸವಾಲೇ ಸರಿ. ಇದಕ್ಕಾಗಿ ಹಲವು ಉಪಯುಕ್ತ ತಂತ್ರಾಂಶಗಳಿವೆ. ಅವುಗಳಲ್ಲಿ ಎರಡು ತಂತ್ರಾಂಶಗಳನ್ನು ನಾನು ನನ್ನ ಕೆಲಸ ಕಾರ್ಯಗಳಲ್ಲಿ ಉಪಯೋಗಿಸುತ್ತಿದ್ದೇನೆ. ನನಗೆ ಇವು ಹಿಡಿಸಿವೆ, ಉಪಯುಕ್ತವಾಗಿವೆ. ಈ ತಂತ್ರಾಂಶಗಳು ಸಂಪದದ ಇತರ ಓದುಗರಿಗೂ ಉಪಯೋಗಕ್ಕೆ ಬರಬಲ್ಲವು ಎಂಬುವ ಆಶಯದಿಂದ ಇಲ್ಲಿ ಅವುಗಳ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇನೆ.

೧. ನ್ಯೂಸ್‍ರ್ಯಾಕ್: ಇಂದು ಭಾರತದ ಹಲವು ಪತ್ರಿಕೆಗಳು ಅಂತರ್ಜಾಲ ಪ್ರತಿಗಳನ್ನು ಹೊರತರುತ್ತಿವೆ. ಇದರಿಂದ ನಮಗಿಷ್ಟವಾದ ಪತ್ರಿಕೆಗಳನ್ನು ಅಂತರ್ಜಾಲದಲ್ಲಿ ಮುಕ್ತವಾಗಿ ಓದಬಹುದು. ಆದರೆ ಐವತ್ತಕ್ಕೂ ಹೆಚ್ಚಿರುವ ಪತ್ರಿಕೆಗಳನ್ನು ದಿನಾ ಓದುವುದು ಕಷ್ಟವಾಗಬಹುದು. ನಮಗೆ ಬೇಕಾಗಿರುವ ಒಂದೆರೆಡು ವಿಷಯಗಳನ್ನು ಇಡೀ ದಿನಪತ್ರಿಕೆಯಲ್ಲಿ ಹುಡುಕುವುದೂ ದುಸ್ತರವೇ. ಇದಕ್ಕಾಗಿ ಕರ್ನಾಟದವರೇ ಆದ ಸುಬ್ರಮಣ್ಯ ಶಾಸ್ತ್ರಿಗಳು Newsrack ಎನ್ನುವ ಮುಕ್ತ web-solution ಹೊರತಂದಿದ್ದಾರೆ. ಈ ವೆಬ್-ಸೈಟಿನಲ್ಲಿ ನಮಗೆ ಬೇಕಾಗಿರುವ ಪತ್ರಿಕೆಗಳ ಫೀಡ್ (RSS) ಗಳನ್ನು ಆಯ್ಕೆ ಮಾಡಿ, ನಮಗೆ ಬೇಕಾಗಿರುವ ವಿಷಯಗಳ key-word ಪದಗುಂಪುಗಳನ್ನು ರಚಿಸಿ ನಮ್ಮ ಪ್ರೊಫೈಲ್ ರಚಿಸಿಕೊಳ್ಳಬಹುದು. ನ್ಯೂಸ್‍ರಾಕ್ ನಂತರ ನಮ್ಮ ಪ್ರೊಫೈಲಿಗೆ ಹೊಂದುವ ಲೇಖನಗಳನ್ನು ನಾವು ಆರಿಸಿರುವ ಫೀಡ್‍ಗಳಲ್ಲಿ ಹುಡುಕಿ ಅದನ್ನು archive ಮಾಡುತ್ತದೆ. ದಿನದಲ್ಲಿ ಹಲವು ಬಾರಿ ಪತ್ರಿಕೆಗಳ ಫೀಡ್‍ಗಳು update ಆಗುವುದರಿಂದ ಸುಮಾರು ೨೦೦೨ರಿಂದ ಹಿಡಿದು ಇಂದಿನ ವರೆಗೆ ನಿಮಗೆ ಬೇಕಾದ ವಿಷಯದ ಬಗ್ಗೆ ಪ್ರಕಟಿತವಾದ ಲೇಖನಗಳು ತಾನಾಗಿಯೇ archive ಆಗಿರುತ್ತದೆ, ಅದರ RSS ಫೀಡ್ ಕೂಡ ನಿಮಗೆ ಲಭ್ಯವಾಗುತ್ತದೆ. ಉದಾಹರಣೆಗೆ ನಾನು ಕರ್ನಾಟಕದ ಕೃಷಿ ಸಂಬಂಧಿತ ವಿಷಯಗಳನ್ನು ಸಂಗ್ರಹಿಸಲು ಬಳಸುವ ಫೀಡ್ ಇಲ್ಲಿದೆ.

ಬಣ್ಣದ ಪ್ರೀತಿ

ಆಕಾಶದಲ್ಲಿ ಬಣ್ಣ ಬಣ್ಣದ ಬೆಳಕು ಮೂಡಿದ೦ತೆ

ಹಚ್ಚಿದೆ ನೀನು ನನ್ನ ಹೃದಯದೊಳಗೆ ಬಣ್ಣ ಬಣ್ಣದ ಆಸೆಗಳನ್ನ

ಕ೦ಡೆ ನಾ ಕನಸಲ್ಲಿ ಆ ಬಣ್ಣ ಬಣ್ಣದ ಆಸೆಗಳನ್ನ

ಸಾಗರದ ತೀರದಲ್ಲಿ ಮನೆ ಕಟ್ಟಿ,

ಮನದೊಳಗೆ ಮನೆ ಮಾಡಿ ಬದುಕಲು ಹೊರಟ ನನಗೆ

ತಿಳಿಯಲಿಲ್ಲಲ್ಲೊ ನಿನ್ನ ಬಣ್ಣ