ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಫೆಡೋರಾ-೯ ಕನ್ನಡದಲ್ಲಿ...

ಕನ್ನಡದಲ್ಲಿ ಫೆಡೋರಾ -೯
ಫೆಡೋರಾ-೯ ಸಂಪೂರ್ಣ ಕನ್ನಡಕ್ಕೆ ಅನುವಾದಿತಗೊಂಡಿದೆ!
(http://translate.fedoraproject.org/languages/kn/fedora-9)
ಆದರೆ, gnome ಕೇವಲ ೫೦% ಆಗಿರೋದರಿಂದ, ಫೆಡೋರಾ-೯ ರ ಡೆಸ್ಕ್‍ಟಾಪ್ ಸಂಪೂರ್ಣ ಕನ್ನಡದಲ್ಲಿ ಇರೋದಿಲ್ಲ ಎನ್ನುವುದು ಖೇದದ ವಿಷಯ!
(http://l10n.gnome.org/languages/...kn/gnome-2-22)

ಜಿಂಬಾಬ್ವೆ ಯುಗಾದಿ

ಈ ಯುಗಾದಿಯ ಹೋಳಿಗೆ ಎಣ್ಣೆ ನೀರು ಸಂಭ್ರಮದಲ್ಲಿ ಜಿಂಬಾಬ್ವೆ ಜನರ ದನಿಗೆ ಬೆಲೆ ಸಿಗಬಹುದು, ಅವರಿಗೊಂದು ಹೊಸ ಯುಗ ಶುರುವಾಗಬಹುದು ಎಂದು ಆಶಿಸುತ್ತೇನೆ.

ನನ್ನವರಿಗೆ ಕನ್ನಡ ಕಲಿಸಿದ್ದು

ನಾನು ಕರ್ನಾಟಕದಲ್ಲೇ ಹುಟ್ಟಿ ಬೆಳೆದ ಅಪ್ಪಟ ಕನ್ನಡತಿ.
ನನ್ನವರೋ ಉಡುಪಿಯಿಂದ ವಲಸೆ ಹೋಗಿ ತಮಿಳುನಾಡಿಗೆ ಸೇರಿದ್ದ ಮಾಧ್ವರ ಸಂತತಿಯ ತುಂಡು.
ಅಲ್ಲಿಯೇ ಹುಟ್ಟಿ ಬೆಳೆದದ್ದರಿಂದ ತಮಿಳಿನ ಗಾಳಿ ಚೆನ್ನಾಗಿ ಆವರಿಗೆ ಚೆನ್ನಾಗಿಯೆ ಹೊಡೆದಿತ್ತು.
ನಮ್ಮದು ಪ್ರೇಮ ವಿವಾಹ.

ಪ್ರೀತಿಸುವಾಗ ಅವರ ತಮಿಳು ಮಿಶ್ರಿತ ಕನ್ನಡ ನನಗೆ ಏನೂ ಅನ್ನಿಸುತ್ತಿರಲಿಲ್ಲ.

ನಯಸೇನನ ಸಲೀಸಾದ ಸಾಲುಗಳು - ಬಿಡಿ 9 - ಸೊಗಸುಗಾರ ನಮ್ಮ ನಯಸೇನ

ನಮ್ಮ ನಯಸೇನ ಯಾವ ಮಾರಿತೊತ್ತಿಗನಿಗಿಂತ(ಕಾಳಿದಾಸ) ಏನೂ ಕಮ್ಮಿಯಿಲ್ಲ ಅನ್ನುವುದಕ್ಕೆ ಕೆಳಗಿನ ಪದ್ಯವೆ ಪುರಾವೆ 

ಅಲುಗೆ ಕುರುಳ್ ತೊಡವು ಪಳಂ
ಚಲೆಯೆ ತಳತ್ತಳಿಸಿ ಪೊಳೆಯೆ ತನುರುಚಿಯೊರ್ವಳ್
ಕಳಹಂಸಗಮನೆ ಕಾಮನ
ತೊಳಗುವ ಕೂರಂಬಿನಂತೆ ಪದಪಿಂ ಬಂದಳ್

ಭಾರತೀಯ ಹಿಂದೂ ದೇವಸ್ಥಾನ ---- ಕೊಲಂಬಸ್

ಇವತ್ತು ಉಗಾದಿ ಅಂತ ನೆನ್ನೇ ನನ್ನ ಸಂಭಂದಿ ಜೊತೆಗೆ Columbus ನ ದೇವಸ್ಥಾನಕ್ಕೆ ಹೋಗಿದ್ದೆ. ಇಲ್ಲೆಲ್ಲಾ weekend ಹಬ್ಬ ಮತ್ತೆ weekend ದೇವರ ದರ್ಶನ!!

ವಸಂತಗೀತ....ಯುಗಾದಿ ಶುಭಾಶಯಗಳು

**** ಎಲ್ಲರಿಗೂ ಸರ್ವಧಾರಿ ಸಂವತ್ಸರ ಯುಗಾದಿ ಶುಭಾಶಯಗಳು. ****

ವಸಂತ ಗೀತ
-----------

ವಸಂತ ಋತುರಾಜ
ಒಲಿದು ಬರುತಿಹನೆಂದು
ಚೆಲುವ ಚಪ್ಪರವಾಯ್ತು
ಭೂರಮೆಯ ಒಡಲು.

ಹೊಸ ಚಿಗುರ ಹಸೆಯಿಟ್ಟು
ಹೊಸ್ತಿಲಲಿ ಕಾದಿಹಳು.
ನಸುಗೆಂಪು ಹೂಬಳೆ ತೊಟ್ಟು
ಆರತಿಯ ಬೆಳಗುವಳು.

ಉಷೆಯ ಓಕುಳಿಯಲ್ಲಿ
ಎಳೆಬಿಸಿಲ ಹಣತೆ.
ಮಿಡಿಯರಳಿ ನಾಚಿದ
ಮಾವು ಹೂವಿನ ಅಕ್ಷತೆ.

ಹೊಸಯುಗದ ಹೊಸಗೀತ

ಕ.ರ.ವೇ. ನಾರಾಯಣ ಗೌಡರ ಕಣ್ಣಿನಲ್ಲಿ ಹೊಗೇನಕ್ಕಲ್

ಹೊಗೇನಕಲ್ನಲ್ಲಿ ತಮಿಳುನಾಡು ಸರ್ಕಾರ ನೀರಾವರಿ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಆದರೆ, ಕಾವೇರಿ ನದಿ ನೀರಿನ ಹಂಚಿಕೆ ಇತ್ಯರ್ಥವಾಗಿದೆಯೇ? ನಾವು ಯಾವುದೇ ಯೋಜನೆಯನ್ನು, ಕಾವೇರಿ ಜಲನಯನ ಪ್ರದೇಶದಲ್ಲಿ ಶುರು ಮಾಡಿದರೆ ವಿರೋಧಿಸುವ ತಮಿಳುನಾಡು, ಕನ್ನಡಿಗರು ಹೊಗೇನಕಲ್ ಯೋಜನೆ ವಿರೋಧಿಸಿದಾಗ ಮಾತ್ರ "ಅಮಾನವೀಯ ಕೃತ್ಯ" ಎಂದು ತೀರ್ಪು ನೀಡುವುದು ಎಷ್ಟು ಸರಿ?

ದ ರಾ ಬೇಂದ್ರೆಯವರ ಕವನ

ಯುಗಯುಗಾದಿ ಕಳೆದರೂ
ಮಾಸದ ಸವಿಗಂಪಿನೊಂದಿಗೆ ಹೊಸಹೊಸದಾಗಿರುವ ದ ರಾ ಬೇಂದ್ರೆಯವರ ಈ ಕವನವನ್ನು ಮರೆಯಲು ಸಾಧ್ಯವೇ ಇಲ್ಲ.
ಮರೆತವರಿಗಾಗಿ ಇಲ್ಲಿ ಮತ್ತೊಮ್ಮೆ ಹಾಕಲಾಗಿದೆ.

 

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ

ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ