ಪತ್ರ

ಪತ್ರ

ಇದು 2 ವರ್ಷದ್ ಹಿಂದಿನ್ ಕಥೆ.. ನಾನು ಸಿಕ್ಕಿದ್ ಕೆಲ್ಸ ಬಿಟ್ಟು ಬೇರೆ ಕೆಲ್ಸ ಹುಡುಕ್ತೀನಿ ಅಂತ ಬೆಂಗಳೂರಿಗೆ ಬಂದಿದ್ದೆ.. ನನ್ ಅಮ್ಮಂಗೆ ನನ್ ಮೇಲೆ ಫುಲ್ ಕೋಪ.. ಸರಿ ನಾನೇನ್ ಕಮ್ಮಿ ಇಲ್ಲ, ಹೊಸ ಕೆಲ್ಸ ಸಿಗೋ ತಂಕ ಊರಿಗೆ ಬರಲ್ಲ ಅಂತ ಹಟ ಮಾಡ್ಕೊಂಡ್ ಕೂತಿದ್ದೆ.. ಆವಾಗ ನನ್ ತಮ್ಮ ಬರ್ದಿದ್ ಲೆಟರ್ ಇದು.. ಏನು ಚೇಂಜ್ ಮಾಡಿಲ್ಲ, ಹಂಗೆ ಇದೆ ಲೆಟರ್..

ಮಾ ಶ್ರೀ ಸಮಾನರಾದ ಅಕ್ಕನವರಿಗೆ ತಮ್ಮ ತಮ್ಮ ಮಾಡುವ ನಮಸ್ಕಾರಗಳು. ಇಲ್ಲಿ ಎಲ್ಲರೂ ಕ್ಷೇಮ. ಅಲ್ಲಿ ತಮ್ಮ ಮತ್ತು ಇತರರ ಕ್ಷೇಮ ಸಮಾಚಾರಕ್ಕೆ ದಯಮಾಡಿ ಈಮೇಲ್ ಮೂಲಕವೇ ಉತ್ತರಿಸಲು ಕೋರುತ್ತೇನೆ.
ತಾವು ಮನೆಯಲ್ಲಿಲ್ಲದೇ ಇರುವುದರಿಂದ ನಮಗೆಲ್ಲರಿಗೂ ಬೇಸರವಾಗುತ್ತಿದೆ. ಒಂದು ಬಾರಿ ಶಿವಮೊಗ್ಗ ಎಂಬ ಊರಿಗೆ ಬರಬೇಕೆಂದು ನಮ್ಮ ಆಶಯವಾಗಿದೆ. ಸಾಧ್ಯವಾದರೆ ಪೂರೈಸಬೇಕು. ಪೋಸ್ಟ್ ಆಫೀಸ್ ನಲ್ಲಿ ತಮ್ಮ ಆಗಮನವನ್ನು ನಿರೀಕ್ಷಿಸಲಾಗಿದೆ. ತಮ್ಮ ಪಾಸ್‌ಪೋರ್ಟ್ ಬೇಜಾರು ಮಾಡಿಕೊಂಡು ಅಲ್ಲಿಯೇ ಕೂತಿದೆಯಂತೆ.
ಇಲ್ಲಿ ವರ್ಷಧಾರೆಯು ಇಲ್ಲವಾಗಿದೆ. ಅಲ್ಲಿಗೆ ಕೊಟ್ಟಿದ್ದ ವೀಳ್ಯದೆಲೆ ಬಳ್ಳಿ ಚಿಗುರಿತೇ? ಬೆಂದಕಾಳೂರಿನ ಪರಿಚಯ ತಮಗಾಯಿತೇ? ( ಹಳೆಯ ವಿಚಾರ). ಎಲ್ಲ ನೆಂಟರ ಮನೆಗೆ ಭೇಟಿ ಕೊಟ್ಟಾಯಿತೇ?
ದೊಡ್ಡಮ್ಮ ಹಾಗೂ ದೊಡ್ಡಪ್ಪ ಎಲ್ಲರಿಗೂ ನಮ್ಮ ನಮಸ್ಕಾರಗಳನ್ನು ತಿಳಿಸಬೆಕಾಗಿ ವಿನಂತಿ. ಅವರೆಲ್ಲ ಇಲ್ಲಿಗೆ ಬಂದು ಬಹಳ ದಿನಗಳಾದವು. ಅವರೆಲ್ಲರನ್ನೂ ( ತಾವೂ ಜೊತೆಯಲ್ಲಿ) ಬರಲು ಹೇಳಬೇಕಾಗಿದೆ.
ಮನೆಯಲ್ಲಿ ಈಗಾಗಲೇ "google earth" ಇರುವುದನ್ನು ತಮ್ಮ ಗಮನಕ್ಕೆ ತರುತ್ತಿದ್ದೇನೆ. ತಾವು E ಫೋಲ್ಡರ್ ನಲ್ಲಿ ಹಾಕಿರುವ, ಯಾರೂ ಕೇಳದ ಹಿಂದಿ ಮತ್ತು ಇಂಗ್ಲೀಶ್ ಹಾಡುಗಳು ಸುಖವಾಗಿ ಕಂಪ್ಯೂಟರಿನಲ್ಲಿ GB ಗಟ್ಟಳೆ ಜಾಗವನ್ನು ತಿನ್ನುತ್ತಿರುವುದು ನನಗೆ ಬೇಸರ ತಂದಿದೆ. ಇವುಗಳನ್ನು CD ಗೆ ಹಾಕಲೇ ಅಥವಾ ಪೂರ್ಣವಾಗಿ delete ಮಾಡಲೇ? ಯಾವುದಕ್ಕಲ್ಲದಿದ್ದರೂ ಈ ವಿಷಯಕ್ಕಾಗಿಯಾದರೂ ಉತ್ತರ ಕೊಡಬೇಕೆಂದು ವಿನಂತಿ. ತಮ್ಮ programs/softwares ಗಳದ್ದೂ ಅದೇ ವಿಷಯವಾಗಿದೆ.
ಮತ್ತೆ ಬರೆಯಲು ಕೈ ನೋವಾಗುತ್ತಿರುವುದರಿಂದ ಅನಿವಾರ್ಯವಾಗಿ ಪತ್ರವನ್ನು ಮುಗಿಸುತ್ತಿದ್ದೇನೆ.
ತಮ್ಮ ಇಂಟರ್‌ವ್ಯೂಗೆ all the best of good luck.. ಚೆನ್ನಾಗಿ ಬರಿ. ಪತ್ರ ಓದಿದ ಮೇಲೆ ಒಮ್ಮೆ ನಗಲು ಕೋರುವೆನು ( ಸಾಧ್ಯವಾದಲ್ಲಿ)........

Rating
No votes yet

Comments