ಅಮೇರಿಕನ್ನರು ಮತ್ತು ಭಾರತೀಯರು

ಅಮೇರಿಕನ್ನರು ಮತ್ತು ಭಾರತೀಯರು

ಹೊರದೇಶದಲ್ಲಿ ಕೆಲಕಾಲ ಇದ್ದು ಬಂದು ಅಲ್ಲಿನ ಜನರೊಡನೆ ಒಡನಾಟ, ಪರಿಚಯ, ಜೀವನ ಶೈಲಿಯನ್ನುಗಮನಿಸಿದ್ದೇನೆ. ಕೆಲವೊಮ್ಮೆ ಅವರ ಜೀವನದಲ್ಲಿ ಅಳವಡಿಸಿಕೊಂಡಿರುವ ಶಿಸ್ತು, ಸಂಯಮ, ತಾಳ್ಮೆ ಇವುಗಳನ್ನು ನೋಡಿ ಆಶ್ಚರ್ಯವಾಗುತ್ತದೆ. ಕಾಮ, ಕ್ರೋಧ, ಮದ..ಸುಳ್ಳು ಇತ್ಯಾದಿಗಳು ತ್ಯಜಿಸಬೇಕು ಇಂತಹ ಥಿಯರಿಗಳು ಭಾರತದಲ್ಲಿ ದಿನವಹಿ ಕೇಳಲು ಸಿಗುತ್ತವೆ. ಆದರೆ ಪಾಲಿಸುವರು ಮಾತ್ರ ಬಹಳ ಕಡಿಮೆ. ಅಲ್ಲಿನ ಕೆಲವು ಅಧಿಕಾರಿಗಳು ಯೋಗಿಗಳಂತೆ ಬಹಳ ತಾಳ್ಮೆ, ಸಂಯಮದಿಂದ ಇರುವುದನ್ನು ಕಂಡಿದ್ದೇನೆ. ಆಹಾರ ವಿಚಾರಗಳಲ್ಲೂ ಅಷ್ಟೆ. ಸ್ವೀಟು, ಫ್ಯಾಟು, ಮಸಾಲೆಗಳು ವರ್ಜ್ಯ. ಇನ್ನು ಸುಳ್ಳುಹೇಳುವುದಂತೂ ನೋಡಿಯೇ ಇಲ್ಲ. ಆದರೆ ನಾವುಗಳು ಅದನ್ನು ನಿತ್ಯಕಾಯಕವಾಗಿಸಿದ್ದೇವೆ. ಎಲ್ಲರಿಗೂ ಇದು ಅನ್ವಯಿಸುವುದಿಲ್ಲ. ಒಬ್ಬ ಟೈಲರು ಒಂದುವಾರದಲ್ಲಿ ಹೊಲಿದು ಕೊಡುತ್ತೇನೆ ಎನ್ನುವನು ಒಂದು ತಿಂಗಳಾದರೂ ನಾಳೆಬನ್ನಿ ಎನ್ನುತ್ತಿರುತ್ತಾನೆ. ಯಾರೋ ಸರ್ವೀಸು ಇಂಜಿನಿಯರು ಬೆಳಗ್ಗೆ ಹತ್ತು ಘಂಟೆಗೆ ಬರುತ್ತೇನೆ ಎಂದು ಸಂಜೆ ೫ ಬರುತ್ತಾನೆ. ಎಲೆ ಕ್ಟ್ರೀಶಿಯನ್ನು ನಾಳೆ ಬರುತ್ತೇನೆ ಎಂದವನು ಒಂದುವಾರದ ನಂತರ ಬಂದರೂ ಆಯ್ತು.

ಕೆಲವೊಮ್ಮೆಯಂತೂ ಅತ್ಯಂತ ಗಂಭೀರ ಸನ್ನಿವೇಶಗಳು ಎದುರಾಗಿದ್ದವು. ತೀರ ಕಂಪನಿಯ ಮೇಲ್ಮಟ್ಟದ ಅಧಿಕರಿಗಳಿಗೂ ತಲೆ ಬಿಸಿಯಾಗುವಷ್ಟು. ಅವಾಗ ನಾವುಗಳು ಬಹಳ ಭಯಗೊಂಡಿದ್ದೆವು. ಆದರೆ ಆ ಸನ್ನಿವೇಶಗಳನ್ನು ನಮ್ಮ ಕ್ಲೈಂಟ್ ಅಧಿಕಾರಿಗಳು ನಿಭಾಯಿಸಿದ ರೀತಿ ಇದೆಯಲ್ಲ. ಅದನ್ನು ಜೀವನದಲ್ಲಿ ಮರೆಯಲಾರೆ. ಆ ಸಂಧರ್ಭದಲ್ಲಿ ಕೂಗಾಡಲಿಲ್ಲ, ಕಿರಿಚಾಡಲಿಲ್ಲ, ಧಮಕಿ ಹಾಕಲಿಲ್ಲ, ಹಗಲೂ ರಾತ್ರಿ ಕೆಲಸಮಾಡಿ ಎಂದು ಒತ್ತಾಯಿಸಲೂ ಇಲ್ಲ. ವ್ಯವಸ್ಥಿತವಾಗಿ ಘಟನೆಗೆ ಕಾರಣವಾದ ಅಂಶಗಳನ್ನು ಸಂಭಂಧಪಟ್ಟವರಿಂದ ಕೂಲಂಕುಶವಾಗಿ ತರಿಸಿ, ಅವಲೋಕನ ಮಾಡಿ ಎಲ್ಲಿ ಲೋಪದೋಶಗಳಾಗಿವೆ ಎಂದು ಕಂಡುಹಿಡಿದು ಸರಿಪಡಿಸುವ ವಿಧಾನಗಳನ್ನೂ ಹೇಳಿ ರಿಪೋರ್ಟ್ ಕಳಿಸಿದರು.

ನಾನೂ ನನ್ನ ಸ್ನೇಹಿತರೂ ಕೆಲವೊಮ್ಮೆ ಈ ವಿಷಯಗಳ ವಿಷಯದಲ್ಲಿ ಗಂಟೆ ಗಟ್ಟಳೆ ಚರ್ಚಿಸಿದ್ದೇವೆ. ಅವರ ವಾದವೆಂದರೆ ಜನಸಂಖ್ಯೆ ಕಡಿಮೆ ಇದ್ದು, ಜೀವನ ಶೈಲಿ ಸುಗಮವಾಗಿದ್ದರೆ ಯಾರುತಾನೆ ಸುಳ್ಳು ಕಳ್ಲತನ ಮಾಡಿಯಾರು? ಅಲ್ಲಿ ಎಲ್ಲವೂ ಇದೆ ಅದಕ್ಕೆ ಅವರು ಹಾಗಿದ್ದಾರೆ. ಇಲ್ಲಿ ಎಲ್ಲದಕ್ಕೂ ಹೋರಾಡಿ ಪಡೆದುಕೊಳ್ಳುವಷ್ಟು ಸ್ಪರ್ಧೆ ಇದೆ. ಹೀಗಾಗಿ ಇಲ್ಲಿ ಕೆಲವೊಮ್ಮೆ ಒಂದೆರಡು ಸುಳ್ಳು, ಸಿಡುಕು ಇರಲೇಬೇಕು ಎಂಬುದು ಅವರವಾದ.
ಇನ್ನು ಕೆಲಸದ ವಿಷಯದಲ್ಲಿ. ಅಲ್ಲಿ ಇಲ್ಲಿಯಥರಹ ಲೇಬರ್ ಯೂನಿಯನ್ ಇತ್ಯಾದಿಗಳು ಇಲ್ಲ. ಸರ್ಕಾರಿ ಕೆಲಸ ೬೦ ವರ್ಷದವರೆಗೆ ಗಟ್ಟಿ ಎಂಬ ಭರವಸೆಯಿಲ್ಲ. ಆದ್ದರಿಂದ ನಿಷ್ಟೆಯಾಗಿ ಕೆಲಸ ಮಾಡುವುದು ಅವರಿಗೆ ಅನಿವಾರ್ಯ ಎನ್ನುತ್ತಾರೆ. ಏನಂತೀರಿ.

Rating
No votes yet

Comments