ಕೇಶಿರಾಜನ ಕುಳಾಂತಭ್ರಮೆ ಕುಱಿತು ಒಂದು ವಿಶ್ಲೇಷಣೆ

ಕೇಶಿರಾಜನ ಕುಳಾಂತಭ್ರಮೆ ಕುಱಿತು ಒಂದು ವಿಶ್ಲೇಷಣೆ

ಬರಹ

ಕೇಶಿರಾಜನೆಂದ

ಬೆರಲೊರಲೆರಲ್ಕೊರಲ್ ಸರ-
ಲರಲ್ ಪರಲ್ ಮರಲುಮಂತೆ ನರಲುಂ ಮುಂಗೈ-
ಸರಲುಂ ಲಾಂತಮಿವಂ ಗ್ರಾ-
ಮ್ಯರಱಿಯದುಚ್ಚರಿಸುವರ್ ಕುಳಾಂತಭ್ರಮೆಯಿಂ||

ಬೆರಲ್, ಒರಲ್, ಎರಲ್, ಕೊರಲ್, ಸರಲ್, ಅರಲ್, ಪರಲ್, ನರಲ್, ಮುಂಗೈಸರಲ್ ಇವೆಲ್ಲ ಲಾಂತಗಳು. ಇವನ್ನು ಹಳ್ಳಿಗರು ಅಱಿಯದೆ ಳಾಂತವಾಗಿ ಉಚ್ಚರಿಸುವರು. ಇವು ನಿಜವಾಗಿ ಲಾಂತಗಳು.
ಕೇಶಿರಾಜನ ಈ ತೀರ್ಮಾನಕ್ಕೆ ಆತನ ಹಿಂದಿನ ಕಾವ್ಯಗಳ ಪ್ರಯೋಗವೆಂದೇ ಕಾಣಲಾಱದು. ಪಂಪ ಮುಂತಾದವರು ಬೆರಳ್ ಎಂಬ ಪಂಪ ಮೊದಲಾದರೇ ಬೞಸಿದ್ದಾರೆ. ಉದಾಹರಣೆಗೆ ಧರ್ಮಾಮೃತದ ನಾಲ್ವೆರಳ್, ಮಲ್ಲಿಗೆಯರಳ್, ಸೂಳೆಯ ಕೊರಳ್, ನೀಡಿ ಕೊರಳ್ಗಳಂ. ಇದಕ್ಕೆ ಈತ ತಮಿೞ್ ಭಾಷೆಯ ಪ್ರಯೋಗಗಳನ್ನು ಗ್ರಹಿಸಿರಬಹುದು. ಕೇಶಿರಾಜನಿಗೆ ತಮಿೞಿನ ಅಱಿವಿತ್ತೆನ್ನುವುದಕ್ಕೆ ಆತನ ಚೋೞಪಾಲಕಚರಿತಂ ನ ಕಾವೇರಿಯ ಕಾಲನಾ ತಿಗುಳನೇಂ ಕಡಂಗೊಂಡನೇ ಬಡ್ಡಿಗೊಂಡನೇ ಎಂಬ ಮಾತೇ ಸಾಕ್ಷಿ ತಮಿೞಿನಲ್ಲಿ ವಿರಲ್, ಉರಲ್, ಕುರಲ್, ಪರಲ್, ಸರಲ್ ರೂಪಗಳನ್ನೆ ಇಂದಿಗೂ ಅಲ್ಲಿನ ಜನ ಬೞಸುವುದು ಇದಕ್ಕೆ ಸಾಕ್ಷಿಯಾಗಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet