ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ
ಹಂಪಿ ಸಂಗೀತ ಮಂಟಪ ಮುರಿದು ಬಿದ್ದಿದೆ ** ಅಂತೆ **
ಇದು ನಿಜವೇ?
ಕೇಳಿ ತುಂಬ ಬೇಜಾರು ಆಯಿತು ಆದ್ರೆ ನಂಬಕ್ಕೆ ಆಗ್ತ ಇಲ್ಲ...
ಹಂಪಿ ಹತ್ತಿರ ಇರೋವ್ರು /ಇತ್ತೀಚೆಗೆ ನೋಡಿದವರು ಸ್ವಲ್ಪ ಹೇಳ್ತೀರಾ??
--ಸಿರಿ
- Read more about ಹಂಪಿ ಸಂಗೀತ ಮಂಟಪ ಮುರಿದು ಬಿದ್ದಿದೆ ** ಅಂತೆ **
- Log in or register to post comments
ಅವಸ್ಥೆ
ನಮ್ಮ ಮುರುಕಲು ಗುಡಿಸಲ ಒಳಗೆ
ಬುಡ್ಡಿ ದೀಪದ ಸುತ್ತ
ಪಿಸು ಮಾತುಗಳು ಹುಟ್ಟುವುದಿಲ್ಲ
ಸ್ನೇಹ ಮಾತ್ರ ಪಸರಿಸುವ ನಮ್ಮವರ
ಗೋಡೆ, ಬೇಲಿಗಳಲ್ಲಿ ಕಳ್ಳಿ ಗಿಡಗಳೂ ಬೆಳೆಯುವುದಿಲ್ಲ
ಹಗಲಿರುಳು ದುಡಿದ ಕೈ ಕಾಲುಗಳ
ಚಾಚಿ ಮಲಗುವೆನೆಂದರೆ
ಅಷ್ಟೂ ಜಾಗವೂ ಇಲ್ಲಿಲ್ಲ ಬಿಡಿ,
ಹೊಟ್ಟೆ ಹಸಿದಾಗ ಕೆಲವೊಮ್ಮೆ
ಪಾತ್ರೆ ತಳದಲ್ಲಿ ಗಂಜಿ ನೀರೂ ಇರುವುದಿಲ್ಲ
- Read more about ಅವಸ್ಥೆ
- 1 comment
- Log in or register to post comments
ಉತ್ತರ ಕರ್ಣಾಟಕದವರಿಗೆ ಹೞಗನ್ನಡ ’ಱ’ ಮತ್ತು ’ೞ’ ಬಗೆಗಿನ ಅಱಿವು ಕಡಿಮೆ
ನಾನು ತಿಳಿದಂತೆ, ವಿಚಾರಿಸಿದಂತೆ, ಉತ್ತರ ಕರ್ಣಾಟಕದವರಿಗೆ ಹೞಗನ್ನಡದ ವಿಚಾರವಾಗಿ ಗೊತ್ತಿರುವುದು ಕಡಿಮೆ. ’ಱ’ ಮತ್ತು ’ೞ’ ಬಲುದೂರ. ಹೞಗನ್ನಡವೆಂದರೆ ಅದೇನು ತಮಿೞೋ ಎಂದುಕೊಳ್ಳುತ್ತಾರೆ. ಆದರೆ ಹೞಗನ್ನಡದ ಕವಿರಾಜಮಾರ್ಗಕಾರ, ಪಂಪ, ರನ್ನ, ಪೊನ್ನ, ನಾಗಚಂದ್ರ ಎಲ್ಲರೂ ಈ ಉತ್ತರಕರ್ಣಾಟಕದವರೇ ಎಂದರೆ ಒಮ್ಮೆಗೆ ಆಶ್ಚರ್ಯವಾಗುತ್ತದೆ.
ಅರಸು, ಅಱಸು
ಅರಸು, ಅರಸ=ರಾಜ, ಒಂದು ದೇಶ ಅಥವಾ ಪ್ರದೇಶವನ್ನು ಆಳುವವನು.
ಸ್ತ್ರೀಲಿಂಗ ಅರಸಿ
ಅರಸೊತ್ತಿಗೆ=ಅರಸುತನ
ಅರಮನೆ=ಅರಸ ವಾಸಿಸುವ ಮನೆ.
ಅಱಸು=ಹುಡುಕು
ಉದಾಹರಣೆ: ಅರಸನನ್ನಱಸಿ ಹೊಱಟಳರಸಿ.
- Read more about ಅರಸು, ಅಱಸು
- Log in or register to post comments
ರಾಷ್ಟ್ರಪಕ್ಷಿ ನಮ್ಮ ಊರಿನಲ್ಲಿ ‘ರೈತರ ಪರಪುಟ್ಟ’!
‘ನೀವು ನಮ್ಮ ಊರಿಗೆ ಮತ್ತ.. ನಮ್ಮ ಮನಿಗೆ ಬರಾಕ ಬೇಕು..’
ಕಳೆದ ಎರಡು ತಿಂಗಳಿನಿಂದ ದುಂಬಾಲು ಬಿದ್ದಿದ್ದ ನಮ್ಮ ಅಟೆಂಡರ್ ಸದಾನಂದ. ಎಲ್ಲಾರೂ ಕರೆಯೋ ಥರಹ ಇವನೂ ಕರೀತಾನ, ಒಮ್ಮೆ ಸವುಡು ನೋಡಿ ಹೋಗಿ ಬಂದ್ರಾತು’ ಅಂತ ತಿಂಗಳುಗಳ ಗಟ್ಟಲೆ ಮತ್ತೆ ಮುಂದೆ ಹಾಕಿದ್ದಾಯಿತು.
ಕೊನೆಗೆ ತಾಳ್ಮೆ ಮೀರಿ ಹೇಳಿಯೇ ಬಿಟ್ಟ. ‘ಸರ್..ನಮ್ಮ ಊರಾಗ ರೈತರು ಕೋಳಿ ಗೂಡಿನ್ಯಾಗ ನವಿಲಿನ ತತ್ತಿ ಇಟ್ಟು ಮರಿ ಮಾಡಸ್ತಾರಿ. ದೊಡ್ವಾದ ಬಳಿಕ ನಾಯಿ ಕಾಟಕ ಅಂಜಿ ಅಮ್ಮಿನಭಾವಿ ಊರ ಹೊರಗಿನ ಅಯ್ಯಪ್ಪಸ್ವಾಮಿ ಮಠಕ ಬಿಟ್ಟು ಬರ್ತಾರ್ರಿ. ಅಲ್ಲೆ ನಾರಾಯಣಸ್ವಾಮಿ ಅನ್ನೋ ಗುರುಸ್ವಾಮಿ ದೇಖರೇಖಿ ಮಾಡ್ತಾರ್ರಿ. ಈಗರೆ ಬರ್ತೀರೋ ಒಲ್ರೋ?’
ಈ ವಿಷಯ ಕಿವಿಗೆ ಬಿದ್ದಿದ್ದೇ ತಡ, ‘ನಡಿಯೋ ಮಾರಾಯಾ..ಇದ ರವಿವಾರ ಹೋಗೋಣು. ಊಟ ನಿಮ್ಮಮನ್ಯಾಗ ನೋಡಪಾ!’ ಅಂತ ಛೇಡಿಸಿದೆ. ಆತನ ಹೃದಯ ಶ್ರೀಮಂತಿಕೆ ನೆನೆದರೆ ಅದೇ ಒಂದು ನುಡಿಚಿತ್ರವಾದೀತು!
- Read more about ರಾಷ್ಟ್ರಪಕ್ಷಿ ನಮ್ಮ ಊರಿನಲ್ಲಿ ‘ರೈತರ ಪರಪುಟ್ಟ’!
- 10 comments
- Log in or register to post comments
ಆಱ್ (ಆಱು)
ಆಱ್ (ಕ್ರಿಯಾಪದವಾದಾಗ ಎರಡು ಅರ್ಥಗಳು)
೧) ಆಱ್=ಸಮರ್ಥವಾಗು. ಹೊಸಗನ್ನಡದಲ್ಲಿ ಸಾಮಾನ್ಯವಾಗಿ ನಿಷೇಧಾರ್ಥಕವಾಗಿ ಬೞಸಲಾಗುತ್ತಿದೆ. ನಾನು ಬರೆಯಲಾಱೆ(ನು). ಆದರೆ ಹೞಗನ್ನಡದಲ್ಲಿ ಎಲ್ಲಾ ಅರ್ಥಗಳಲ್ಲೂ ಬೞಕೆಯಲ್ಲಿದೆ.
ಭೂತಕಾಲದ ರೂಪ: ಆರ್ತೆನ್, ಆರ್ತನ್/ಳ್, ಆರ್ತುದು. ಇತ್ಯಾದಿ
ಭವಿಷ್ಯತ್: ಆರ್ಪೆನ್, ಆರ್ಪನ್/ಳ್, ಆರ್ಪುದು
- Read more about ಆಱ್ (ಆಱು)
- 1 comment
- Log in or register to post comments
ಹೊಸ ಪ್ರಧಾನ ಮಂತ್ರಿ ೧೫ ಚುಕ್ಕೆಗಳ ಕಾರ್ಯಕ್ರಮ
ನಮ್ಮ ಮನ ಮೋಹನರು ತಮ್ಮ ಹೊಸ ಪ್ರಧಾನ ಮಂತ್ರಿ ೧೫ ಚುಕ್ಕೆಗಳ ಕಾರ್ಯಕ್ರಮಲ್ಲಿ, ಮೈನೋರಿಟಿ ಧರ್ಮದ (ಮುಸ್ಲಿಂ, ಚ್ರಿಸ್ತಿಯನ್, ಸಿಖ್ ಮುಂತಾದವು) ಬಡವರಿಗೆ ಶಿಕ್ಷಣ ಕೊಡುವುದಾಗಿ ಘೋಷಿಸಿದ್ದಾರೆ...
ಹಿಂದೂ ದಲಿತರೂ ಕಾಂಗ್ರೆಸ್ಸ್ ಪಕ್ಷಕ್ಕೆ ವೋಟು ಹಾಕಿದರೂ, ಚಿಪ್ಪೇ ದೊರಕಿದೆಯೇ?
- Read more about ಹೊಸ ಪ್ರಧಾನ ಮಂತ್ರಿ ೧೫ ಚುಕ್ಕೆಗಳ ಕಾರ್ಯಕ್ರಮ
- 1 comment
- Log in or register to post comments
ಹೊಸ ಸರ್ವರ್ ಗೆ ಸಂಪದ
ಇಂದು ಹೊಸ ಸರ್ವರ್ ಗೆ ಸಂಪದವನ್ನು ಸ್ಥಳಾಂತರಿಸಲಾಗಿದೆ. ಹಳೆಯ ಸರ್ವರಿನಲ್ಲಿ ಜಾಗ ಕಡಿಮೆ ಇದ್ದದ್ದಲ್ಲದೆ ಬಹಳ ಹಳೆಯ ಹಾರ್ಡ್ ವೇರ್ ಇದ್ದದ್ದರಿಂದ ನಿಧಾನವಾಗಿ ಹೋಗಿತ್ತು. ಜೊತೆಗೆ ಸಂಪದದ ಓದುಗರ ಸಂಖ್ಯೆ ಪ್ರತಿದಿನ ಹೆಚ್ಚಾಗುತ್ತಿರುವುದರಿಂದ ಹೆಚ್ಚುತ್ತಿರುವ ಲೋಡ್ ಹಳೆಯ ಸರ್ವರ್ ತಡೆದುಕೊಳ್ಳುತ್ತಿರಲಿಲ್ಲ. ಈಗ ಹೊಸ ಸರ್ವರ್ ಓದುಗರಿಗೆಲ್ಲ ಸಂಪದದ ಓದು ಮತ್ತಷ್ಟು ಉತ್ತಮಗೊಳಿಸುವುದು.
ಹೊಸ ಸರ್ವರಿಗೆ ಸ್ಥಳಾಂತರ ಪೂರ್ಣಗೊಂಡಿಲ್ಲವಾದ್ದರಿಂದ ಕೆಲವೆಡೆ ಹೆಚ್ಚು ಕಡಿಮೆಯಾಗಬಹುದು (ಪುಟಗಳು ಎಂದಿನಂತೆ ಲೋಡ್ ಆಗುವುವು. ಇ-ಮೇಯ್ಲ್, ಚಿತ್ರಗಳು ಇತ್ಯಾದಿಗಳಲ್ಲಿ ಹೆಚ್ಚು ಕಡಿಮಯಾಗಬಹುದು). ಇಂಥದ್ದೇನಾದರೂ ಆದಲ್ಲಿ ದಯವಿಟ್ಟು ಕೂಡಲೆ ತಪ್ಪದೆ [:contact|ಸರ್ವರ್ ನಿರ್ವಾಹಕರಿಗೆ ತಿಳಿಸಿ] ಸಹಕರಿಸಿ.
ಪಯಣದ ದಾರಿಯು ಬೇಸರವಾಗಿದೆ
ನಮಸ್ಕಾರ ಗೆಳೆಯ/ತಿ ಯರೆ. ಇದೊ೦ದು ನಾನು ಬರೆದ ಪುಟ್ಟ ಕವಿತೆ. ನಿಮಗೆ ಯಾವುದೆ ತರಹದ ಪ್ರೆಶ್ನೆಗಳಿದ್ದರೆ. ಡಯವಿಟ್ಟು ಪ್ರತಿಕ್ರಿಯೆ ಮಾಡಿ.
--------------------------------------
ಪಯಣದ ದಾರಿಯು ಬೇಸರವಾಗಿದೆ
--------------------------------------
ಪಯಣದ ದಾರಿಯು ಬೇಸರವಾಗಿದೆ,
ಉತ್ಸಾಹದ ಭಾವಕೆ ನೀರಸವಾಗಿದೆ,
- Read more about ಪಯಣದ ದಾರಿಯು ಬೇಸರವಾಗಿದೆ
- 2 comments
- Log in or register to post comments