ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಶರೀರಮಾದ್ಯಂ ಖಲು ಧರ್ಮಸಾಧನಂ

ಹಸಿವು ಒಂದು ರೋಗ ಎಂದು ತಿಳಿದುಕೋ. ಭಿಕ್ಷೆ ದೊರಕಿದುದನ್ನು ಔಷಧ ಎಂದು ಸೇವಿಸು. ಸಿಹಿಯನ್ನು ಬೇಡದಿರು. ದೊರೆತುದುದನ್ನು ಸೇವಿಸು. ರೋಗಕ್ಕೆ ಎಷ್ಟು ಪ್ರಮಾಣದ ಔಷಧ ಬೇಕೋ ಅಷ್ಟೇ ಆಹಾರ ಸೇವಿಸು. ಹೆಚ್ಚಲ್ಲ ಕಡಿಮೆಯಲ್ಲ.

— ಶಂಕರಾಚಾರ್ಯರು
ಶರೀರವೇ ಧರ್ಮವನ್ನಾಚರಿಸಲು ಬೇಕಾದ ಸಾಧನವೆಂದು ಹಿಂದಿನವರು ತಿಳಿದಿದ್ದರೇ?

‘ಸಂತೆ’ ಎಂಬ ವ್ಯಾವಹಾರಿಕ ಚೌಕಾಶಿಯ ‘ನಾಟಕ’!

ಪಾಲಸಿಯನು ಮಾಡೋ,
ನಿನ್ನದು ಒಂದು
ಪಾಲಸಿಯನು ಮಾಡೋ.
ಬರುವ ದಿನದ ಗತಿ ಬಲ್ಲವರಾರು?
ಇರುವಾಗಲೇ ಸಾವಿಗೆ ಸಹಿ ಮಾಡೋ!

ಸಾಯಿಬಾಬಾ ಕಣ್ಣು ತೆರೆದಿದ್ದು..ನಮ್ಮ ಮಾಧ್ಯಮಗಳು ಕಣ್ಣುಮುಚ್ಚಿದ್ದು!

ಗಣಪತಿ ಹಾಲು ಕುಡಿದಿದ್ದು ನಮ್ಮ ಮಾಧ್ಯಮಗಳಿಗೆ ಸುರಾಪಾನ ಮಾಡಿಸಿದಂತಾಗಿದ್ದು ಈಗ ಐತಿಹಾಸಿಕ ವಿಪರ್ಯಾಸ. ಆ ಘಟನೆಯ ಮುಂದುವರೆದ ಭಾಗವಾಗಿ ಶುಕ್ರವಾರ ಬೆಂಗಳೂರಿನ ಕೆಂಪೇಗೌಡ ನಗರ ಸಮೀಪದ ಗವಿಪುರದ ಐತಿಹಾಸಿಕ ಗಂಗಾಧರೇಶ್ವರ ದೇವಸ್ಥಾನದ ಹಿಂಭಾಗದ ಮನೆಯಲ್ಲಿ ಶಿರಡಿ ಸಾಯಿಬಾಬಾ ವಿಗ್ರಹ ತನ್ನ ಎಡಗಣ್ಣು ತೆರೆದಿದ್ದು!

ಒಂದಿಷ್ಟು ಬಿಕ್ಕುಗಳು...

ಗೆಳೆಯ ಹೇಳಿದ್ದನಂದು
ಪ್ರೀತಿ ಹುಟ್ಟುತ್ತವೆ
ಕಣ್ಣುಗಳಲ್ಲಿ ನಿನ್ನ
ನಿಜ ಹೇಳಿದ್ದಾನೇನು
ನಂಗೆ ತಿಳಿದಿಲ್ಲ

ಪ್ರೀತಿ ವಿರಹದೆಡೆ ಕಣ್ಣೀರು ಹಾಕಿದ್ದೆ
ನಿರೀಕ್ಷೆಗಳ ಪುಟಗಳಲಿ
ಕಣ್ಣು ನೆಟ್ಟಿರುವಾಗ
ಕಂಬನಿಗಳು ಹುಟ್ಟುತ್ತವೆ
ಪ್ರೀತಿ ಹುಟ್ಟಿದ ಕಣ್ಣಿನಿಂದಲೇ..

ನಿನಗಾಗಿ ಈ ಹೃದಯ
ಎಂದು ನಾನವನಿಗೆ ಹೇಳಿದ್ದೆ
ಇರಲಿ ಬಿಡು ಗೆಳತಿ ಸಹೃದಯತೆ

ದಮ್ಮಡಿ

ದಮ್ಮಡಿ=ಹಣದ ಒಂದು ಅಳತೆ, ಕಾಸು
ಉದಾ:- ನನ್ನ ಆಸ್ತಿಯಲ್ಲಿ ನಿನಗೆ ಒಂದು ದಮ್ಮಡಿಯೂ ಸಿಗದು.
ಇದಱ ಬೇರನ್ನು ಹುಡುಕಿದರೆ ಗ್ರೀಕರ ಹಣದ ಅಳತೆಯಾದ drachmaವೇ ಈ ದಮ್ಮಡಿ.
drachma=ದ್ರಮ್ಮ(ಸಂಸ್ಕೃತ)=ದಮ್ಮಡಿ(ಕನ್ನಡ).

ಪೊನ್

ಪೊನ್ (ನಾಮಪದ) [ತಮಿಳು, ಮಲಯಾಳ: ಪೊನ್, ತುಳು: ಪೊನ್ನು, ಕೊಡವ: ಪೊನ್, ತೆಲುಗು: ಪೊನ್ನು, ಹೊನ್ನು, ಹೊಂ]

ರೀ ಮತ್ತು ಸಾರೀ ಮತ್ತು ಸುರೆ

ಸಹವಾಸ ದೋಷ. ಯಾವುದೇ ಶಬ್ದ ಸಿಕ್ಕಿದರೂ-
ಅದು ಹೇಗೆ ಬಂದಿರಬಹುದು?
ಕನ್ನಡವೋ? ಇಂಗ್ಲೀಷೋ?
ಯಾಕೆ ಕನ್ನಡಕ್ಕೆ ಬಂತು?
ಯಾರು ತಂದರು? ಇದೇ ಕೆಲಸ ಈಗ ಸುರುಮಾಡಿದ್ದೇನೆ.

ಹೆಂಡತಿ ‘ರೀ..’ ಎಂದು ಕರೆದರೂ..ಉತ್ತರ ಕೊಡುವ ಬದಲು-
‘ರೀ’ ಇಂಗ್ಲೀಷ್‌ನಿಂದ ಬಂದುದೋ?
ಸಂಗೀತದಿಂದಲೋ?
‘ಸಾ..ರೀ..’ ಶಾಸ್ತ್ರೀಯ ಸಂಗೀತಕ್ಕೂ ಸಾರಿ(saree)ಗೂ ಸಂಬಂಧವಿದೆಯೋ?

ಚಂದ ಮಾಮಾ

ಬಾನಲ್ಲಿ ಬಂದ ಚಂದಮಾಮಾ ..
ಮಗು ಅಳಲಾರಂಭಿಸಿತು ಅಮ್ಮಾ,..ಅಮ್ಮಾ..
ಹಸುಗೂಸಿನ ಹಸಿವನರಿತಳು ಅಮ್ಮ..
ತುತ್ತು ಮಾಡಿ ಉಣಿಸುತ..ಕಂದನ ಕಣ್ಣೊರೆಸುತ.. ಬಾನೆಡೆ ಕೈ ಚಾಚಿ
ಕರೆದಳು ಬಾ ಬಾ ಚಂದ ಮಾಮಾ...

ಹಸಿವು ತಣಿಯಲು ಚಂದಮಾಮಾ ಕಾಣಲು..
ಕೂಸ ಅಳು ಮರೆಯಾಯ್ತು......
ನಗುವು ಮೂಡಿರೆ ಮುಖದಿ..ಅರೆ..ಚಂದ್ರನ ಕಾಣೆಯಾಗಿತ್ತು......
ಮೋಡ ಕವೆದಿತ್ತು......

ಸತ್ಯಹರಿಶ್ಚ೦ದ್ರದ ವೀರಭಾಹು ಇನ್ನಿಲ್ಲ.......................

ಸತ್ಯಹರಿಶ್ಚ೦ದ್ರ ಚಿತ್ರದಲ್ಲಿ ಕುಲದಲ್ಲಿ ಕೀಳ್ಯಾವುದೊ ಹುಚ್ಚಪ್ಪ ಮನದಲ್ಲಿ ಮೇಲ್ಯಾವುದೊ............. ಎ೦ದು ಕುಣಿದು ಎಲ್ಲರ ಮನ ಗೆದ್ದ ವೀರಭಾಹು (ಎ೦.ಪಿ.ಶ೦ಕರ್) ಅಸ್ತ೦ಗತ ವಾಗಿರುವುದು ನಮ್ಮ ಕನ್ನಡ ಚಲನ ಚಿತ್ರರ೦ಗಕ್ಕೆ ದೊಡ್ದ ನಷ್ಟ.........