ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸ್ವಿಚ್ಚ್ ಹೋಲ್ಚರ್ ಪಿನ್ ಹಾಗೂ ಅಡಾಪ್ಟರ್ ಗಳು

HOLDERS

ಇವು ವಿದ್ಯುತ್ ಬಲ್ಬ್‌ಹೋಲ್ಡರ್,ಸ್ಪಿಚ್,ಪಿನ್‌ಗಳು. ಹಾಗೂ ಅಡಾಪ್ಟರ್‌ಗಳು ಬಹುಶಃ ಇಲ್ಲಿರುವ ಒಂದು ಹಳೇಮಾದರಿ ಸ್ವಿಚ್ಚ್‌ನ್ನು ಹೊರತು ಪಡಿಸಿ ಉಳಿದ ಸ್ವಿಚ್‌ಗಳನ್ನು ಬಹಳಜನರು ನೋಡಿರಲಿಕ್ಕಿಲ್ಲ. ಉಳಿದ ಸ್ವಿಚ್‌ಗಳು ಎಲ್ಲಿವೆ? ಹುಡಿಕಿನೋಡಿ.

ನಮ್ಮ ಮನೆಯಲ್ಲಿ ಇವು ಅರ್ಧ ಶತಮಾನಕ್ಕಿಂತ ಪೂರ್ವದಿಂದ ಇಂದಿನವರೆಗೂ ನಿತ್ಯ ಕಾರ್ಯನಿರ್ವಹಿಸುತ್ತಿರುವವುಗಳು. ಚಿತ್ರದಲ್ಲಿರುವವು ಹೆಚ್ಚಿನವು ಹಿತ್ತಾಳೆಯಂತಃ ಲೋಹದಿಂದ ಮಾಡಿದ್ದವು. ಅರ್ಧ ಶತಮಾನ ದಾಟಿದೆ ಎಂಬುದಷ್ಟೇ ಇವುಗಳ ವಿಷೇಶತೆ ಅಲ್ಲ. ಇವು ಅಪರೂಪದ ಸೌಲಭ್ಯಗಳನ್ನೂ ಹೊಂದಿವೆ.

ಸರ್ಪ್ರೈಸ್

ಆ ದಿನ ನಾನು ತುಂಬ ಖುಷಿಯಲ್ಲಿದ್ದೆ.ಇವತ್ತಿನಿಂದ ಪಾತ್ರೆ ತೊಳೆಯೊ ರಗಳೆ ಇರೋಲ್ಲ,ನಾಳೆ ಬೆಳಗ್ಗೆ ಲೇಟಾಗಿ ಏಳ್ಬಹುದು,ಅಮ್ಮ ಮಾಡೊ ರುಚಿಯಾದ ಅನ್ನ ಸಾಂಬಾರ್ ತಿನ್ನಬಹುದು.. ಇನ್ನು ಏನೇನೋ.. ಯಾಕಂದ್ರೆ ಊರಿಗೆಂದು ಹೋಗಿದ್ದ ಅಮ್ಮ ಇವತ್ತು ವಾಪಸ್ ಬರ್ತಿದ್ದಾಳೆ.ಬೆಳಿಗ್ಗೆ ಏಳ್ತಾನೆ ಬಂದ ಆಲೋಚನೆ ಅಂದ್ರೆ ಇವತ್ತು ನಾನು ಕಾಲೇಜಿಗೆ ಹೋಗದೆ, ಒಂದು ವಾರದಿಂದ ದಿನಾಲು ಕಾಲೇಜಿಗೆ ಹೋಗುವ ಗಡಿಬಿಡಿಯಲ್ಲಿ ಚೆಲ್ಲಾಪಿಲ್ಲಿ ಮಾಡಿರುವ ಮನೆಯನ್ನು ಒಪ್ಪವಾಗಿ ಇಟ್ಟು, ಅಮ್ಮ ಬಂದ ತಕ್ಷ್ಣಣ ಅವಳಿಗೆ ಸರ್ಪ್ರೈಸ್ ಕೊಡಬೇಕೆಂದು.ಅದನ್ನು ಆಫೀಸಿಗೆ ಹೋಗಿದ್ದ ಅಪ್ಪನಿಗೆ ಕಾಲ್ ಮಾಡಿ ತಿಳಿಸಿದೆ.ಅಪ್ಪ ಸಹ ಒಪ್ಪಿದರು.ಅಮ್ಮನಿಗೆ ಮನೆ ಯಾವಗಲು ಕ್ಲೀನ್ ಅಗಿರಬೇಕು.ಅಂದುಕೊಂಡ ಹಾಗೇನೆ, ನಾನು ಕಾಲೇಜಿಗೆ ಚಕ್ಕರ್ ಹಾಕಿ ಎಲ್ಲ ಪಾತ್ರೆ ತೊಳೆದು,ಬಟ್ಟೆ ಬರೆ ಎತ್ತಿಟ್ಟು, ಮನೆಯನ್ನು ಚೊಕ್ಕವಾಗಿಟ್ಟೆ.ಅಮ್ಮ ಬರೋಕೆ ಇನ್ನ ಸ್ವಲ್ಪ ಹೊತ್ತಿತ್ತು.ನಾನು ಸ್ನಾನ ಮುಗಿಸಿ ರೆಡಿಯಾದೆ.ಅಮ್ಮ ಪಾಪ ಹಸಿದು ಬರ್ತಾಳೆ ಅಂತ ನಾನೆ ಅನ್ನಕ್ಕಿಟ್ಟೆ.ತಿಳಿಸಾರು ಮಾಡಿದೆ.ಇನ್ನು ಅಮ್ಮ ಬರಲೇ ಇಲ್ಲ.ಅದಾಗಲೇ ಘಂಟೆ ಒಂದಾಗಿತ್ತು. ಅಮ್ಮ ಹನ್ನೆರಡಕ್ಕೆ ಬರಬೇಕಿತ್ತು.ಬಸ್ಸು ಸಿಕ್ಕಿಲ್ಲವೇನೊ ಅಥವ, ಲೇಟಾಗಿ ಹೊರಟಳೇನೋ ಅಥವಾ.. ನನ್ನ ಯೋಚನೆಗಳು ನಿಲ್ತಾನೆ ಇರಲಿಲ್ಲ.ನನಗೆ ಅಮ್ಮನನ್ನು ಬಿಟ್ಟರೆ,ಈ ಊರಿನಲ್ಲಿ ಬೇರೆ ಯಾರು ಹತ್ತಿರದವರಿಲ್ಲ.ಶಾಲೆಯ ಗೆಳತಿಯರೆಲ್ಲ,ವರ್ಗವಾಗಿ,ಹೆಚ್ಚಿನ ಓದಿಗಾಗಿ, ಬೇರೆ ಬೇರೆ ಊರುಗಳಿಗೆ ಹೊರಟು ಹೋಗಿದ್ದಾರೆ. ಕಾಲೇಜಿನಲ್ಲಿ ಈಗೀಗ ಸ್ನೇಹಿತೆಯರ ಪರಿಚಯವಾಗುತ್ತಿದೆ.
ಅಮ್ಮ ಯಾಕಿಷ್ಟು ಲೇಟ್ ಮಾಡ್ತಿದಾಳೆ? ಅವಳಿಗೊತ್ತಿಲ್ವ ಇಲ್ಲಿ ನಾನೊಬ್ಬಳೆ ಇರ್ತೀನಿ ಅಂತ.. ಓ.. ಅಮ್ಮನಿಗೇನು ಗೊತ್ತು ನಾನು ಮನೆಯಲ್ಲಿರೊದು? ನಾನು ಕಾಲೇಜಿಗೆ ಹೋಗಿರ್ತೀನಿ ಅಂತ ಲೇಟಾಗೇನೇ ಹೊರ್ಟಿರ್ತಾಳೆ.ನಾನು ಸರ್ ಪ್ರೈ ಸ್ ಕೊಡಬೇಕು ಅಂತ ಅಂದುಕೊಂಡ ದಿವಸಾನೆ ಅಮ್ಮ ಲೇಟಾಗಿ ಹೊರ್ಡ್ಬೇಕಾ. ಛೆ.. ಮನೆ ಬೀಗ ಹಾಕಿದೀನ ನೋಡಿಬಿಡೋಣ,ಹಾಗೆ ಮಶಿನಿಗೆ ಬಟ್ಟೆ ಹಾಕಿಬಿಡೋದು,ಅಮ್ಮ ಬರೊವರೆಗೆ ಬಟ್ಟೆನು ಒಗೆದು ಮುಗಿದಿರುತ್ತೆ. ವ್ಹಾ.. ಇವತ್ತು ಅಮ್ಮ ತುಂಬಾನೆ ಸರ್ಪ್ರೈಸ್ ಆಗ್ತಾಳೆ.

ಕನ್ನಡ ರಸಪ್ರಶ್ನೆ - ೬

ಬೀಚಿಯವರ ಪೂರ್ಣ ಹೆಸರು ಏನು ಹಾಗು, ಅವರು "ಸುಧಾ" ವಾರಪತ್ರಿಕೆಯ "ನೀವು ಕೇಳಿದಿರಿ" ಅಂಕಣದಲ್ಲಿ ಯಾವ ಹೆಸರಿಂದ ಉತ್ತರಿಸುತ್ತ್ತಿದರು ?

ಶಂಕರ ಪ್ರಸಾದ

ಇದೆಂಥಾ ವಿಪರ್ಯಾಸ ?

ಅವತ್ತೊಂದು ದಿನ ಆಫೀಸಲ್ಲಿ ಮಾಡಕ್ಕೆ ಅಷ್ಟೊಂದು ಕೆಲ್ಸ ಇಲ್ಲ ಅಂತ ಮನೆಗೆ ಬೇಗ ಎಸ್ಕೇಪ್ ಆಗಿ ಬಂದೆ.
ಮನೇಲಿ ಕೂಡಾ ಮಾಡಕ್ಕೆ ಕೆಲ್ಸ ಇರ್ಲಿಲ್ಲಾ...ಶರೀರನಾ ಹಾಲ್ನಲ್ಲಿ ಇರೋ ದಿವಾನ ಮೇಲೆ ಬಿಸಾಕಿ ಟೀವಿ ಚಾನೆಲ್ ಗಳಲ್ಲಿ ಹಾಗೇ ಬೀಟ್ ಹಾಕ್ತಾ ಇದ್ದೆ..

ಹತ್ತು ಮುತ್ತುಗಳು: ರಾಗ ಕಲ್ಯಾಣಿ - ಭಾಗ ೨

ಹಲವು ದಿನಗಳ ಹಿಂದೆ ಕಲ್ಯಾಣಿಯ ಬಗ್ಗೆ ಬರಹವೊಂದನ್ನು ಬರೆದಿದ್ದೆ. ಅದರ ಮುಂದಿನ ಭಾಗ ಬರೆಯಬೇಕೆನ್ನುತ್ತಲೇ ತಿಂಗಳುಗಳು ಉರುಳಿವೆ.

ಇರಲಿ- ಇವತ್ತು ನನ್ನ ಮನಸ್ಸಿಗೆ ಹಿಡಿಸಿರುವ ಕಲ್ಯಾಣಿ ರಾಗದ ಹತ್ತು ರಚನೆಗಳ ಬಗ್ಗೆ ಈ ಕೆಳಗಿನ ಪುಟದಲ್ಲೊಂದಷ್ಟು ಮಾತುಗಳು ....

ಕಲ್ಯಾಣಿ - ಹತ್ತು ಮುತ್ತುಗಳು:  

ಮಾತು, ಸಮಯ, ಸಂದರ್ಭ..

"ಏನಮ್ಮಾ ಸಮಾಚಾರ, ತಿಂಡಿ, ಕಾಫಿ ಆಯ್ತಾ ??"...

ನನ್ನದೇ ಲೋಕದಲ್ಲಿ, ಜಲಬಾಧೆ ತೀರಿಸುತ್ತಾ, ಆನಂದ ಅನುಭವಿಸುತ್ತಾ ನಿಂತಿದೀನಿ...

ಯಾವುದಪ್ಪಾ ಈ VOICEಉ ಅಂತ ತಿರುಗಿ ನೋಡ್ತೀನಿ...ನನ್ನ Colleague..

ಅದೂ ಎಲ್ಲಿ ?? ಆಫೀಸಿನ ಟಾಯ್ಲೆಟ್ಟು... ತಿಂಡಿ, ಕಾಫಿ ಆಯ್ತಾ ಅನ್ನೋ ಪ್ರಶ್ನೆ ಕೇಳಕ್ಕೆ ಬೇರೆ ಜಾಗ ಸಿಗ್ಲಿಲ್ವಾ ಬಡ್ಡಿ ಮಗಂಗೆ ??

ಸೇರಿಗೆ ಸವಾಸೇರು

ಸಂಸ್ಕೃತ ಸಾಹಿತ್ಯದ ಅನೇಕ ಪ್ರಕಾರಗಳನ್ನು ಅಭ್ಯಾಸಮಾಡಿದವರಿಗೆ ಮಂಗಳ ಶ್ಲೋಕಗಳ ಪರಿಚಯ ಇದ್ದೇ ಇದೆ. ಅವುಗಳಲ್ಲಿ ಕೆಲವು ಏಕತಾನತೆಯಿಂದ ಬೇಸರ ಬರಿಸಿದರೆ ಮತ್ತೆ ಕೆಲವು ಕತ್ತಲಲ್ಲಿ ಮಿಂಚಿದಂತೆ ಹಾಯೆನಿಸುವಂತೆ ಮಾಡುತ್ತವೆ. ಕೇವಲ ಇಷ್ಟದೈವದ ಅನುಗ್ರಹ, ಆಶೀರ್ವಾದಗಳ ಬೇಡಿಕೆ, ನಮಸ್ಕಾರ ಹೆಚ್ಚಿನವುಗಳಲ್ಲಿದ್ದರೆ, ಅಲ್ಲಲ್ಲಿ ಮಾತಿನ ಚಮತ್ಕಾರಕ್ಕೂ ಸ್ಥಾನವಿದೆ.

ಲಲನೆ

ಮಲೆನಾಡಿನ ಮಗ್ಗುಲಲಿ ಅರಳಿದ ಹೂ ನೀ...
ವೈಯಾರದ ಬಳ್ಳಿ, ಘಮಿಸುವ ಮಲ್ಲಿಗೆ ನೀ...
ಶ್ರೇಷ್ಟತೆಯ ಗುಡಿ, ಬಯಕೆಯ ಗಡಿ ನೀ...

...ಒಡೆಯ