"ಪಾತ್ರೆಗೆ ಮಸಿ ಹತ್ತಿಸುವುದು"
ನೀವು ’ಪಾತ್ರೆಗೆ ಮಸಿ ಹತ್ತಿಸುವುದು’ ಎಂಬುದನ್ನು ಕೇಳಿದ್ದೀರಾ?
- Read more about "ಪಾತ್ರೆಗೆ ಮಸಿ ಹತ್ತಿಸುವುದು"
- Log in or register to post comments
ನೀವು ’ಪಾತ್ರೆಗೆ ಮಸಿ ಹತ್ತಿಸುವುದು’ ಎಂಬುದನ್ನು ಕೇಳಿದ್ದೀರಾ?
ಚೆಲುವೆಯ ಬಣ್ಣಿಸಲಾಗದೆ
ಕವಿತೆ ಸೋತಿದೆ
ಈ ರೂಪ ಹಿಡಿದಿಡಲು
ಪದಗಳೇ ಸಾಲದೆ
ಈ ನಡಿಗೆಯ ಮೋಡಿಗೆ
ನವಿಲು ನಾಚಿದೆ
ಕುಡಿನೋಟದ ಮಿಂಚಿಗೆ
ಉಪಮೇ ಎಲ್ಲಿದೆ
ತುಟಿ ಅಂಚಿನ
ಕಿರು ನಗೆ ಕಾದಿದೆ
ಮುಖ ಚಂದಿರ ಬೆಳದಿಂಗಳ
ಹಾಲು ಸುರಿದಿದೆ
ಮುಂಗುಳುರಿನ ಮಾಟವು
ಸನಿಹ ಕರೆದಿದೆ
ಈ ಸೊಬಗಿಗೆ
ಹೋಲಿಕೆ ಎಲ್ಲಿದೆ
ಹಗಲಲ್ಲು ಹೊಳೆವ
ತಾರೆ ಇವಳ ಕಂಗಳು
ಸವಿ ಮಾತು
ಯಾರಿಗದ್ರೂ ಇದರ ಬಗ್ಗೆ ಹೆಚ್ಚಿನ ಮಾಹಿತಿ ಗೊತ್ತಾ?
http://thatskannada.oneindia.in/news/2008/03/03/poem-to-ridicule-kannadigas-by-lee.html
ಹರ್ಯಾನಾ ರಾಜ್ಯದಲ್ಲಿರುವ ಅಂಬಾಲಾ ಶಹರ್ ಎಂಬುದು ಬಟ್ಟೆಗಳ ಸಗಟು ಮಾರಾಟ ಕೇಂದ್ರ. ಆದರೆ ನಿಜವಾದ ಜೀವತುಡಿತವಿರುವುದು ಅಂಬಾಲಾ ಕಂಟೋನ್ಮೆಂಟಿನಲ್ಲಿ ಮಾತ್ರ. ಬೇಸಿಗೆಯ ಹಗಲಿನ ಬೆಂಕಿಯಂಥ ಬಿರುಬಿಸಿಲಿಗೆ ಬೆಂದ ನಂತರ ಸಂಜೆ ತಂಪುಗಾಳಿ ಬೀಸುವಾಗ ವಾಕಿಂಗ್ ಹೊರಟು ತಳ್ಳುಗಾಡಿಗಳಲ್ಲಿ ಮಾರುವ ಗೋಲ್ ಗಪ್ಪೆ ಚಪ್ಪರಿಸುವುದು ತುಂಬಾ ಮಜವಾಗಿರುತ್ತೆ.
ತಾರೆಗಳಿಗೇಕಿಂತ ನಾಚಿಕೆ..
ಸುಮ್ಮನೆ ನನ್ನವಳ ನೋಡಲು
ಅದೆಷ್ಟೋ ಪ್ರೀತಿಯ ಬೇಡಿಕೆ ..
ಅವಳು ನಗುತಮಾತಡಲು
ಅವಳ ನೆನದಾಕ್ಷಣ
ಹೂಬನದ ಹೂಬಾಣ
ನರ್ತಿಸುವ ನವಿಲಿನ ಗಾನದ ಗುನುಗು
ನಾನು ಕಂಡ ಬೆಳದಿಂಗಳ ಸೊಬಗು
; ಅರಳುತ್ತದೆ ಹೂವಲ್ಲ, ಬಿಸಿಲಿಗೆ ಬಾಡುವುದಿಲ್ಲ....?
; ಅಪ್ಪಾಂದ್ರೆ ಹೊಡೀತದೆ, ಅವ್ವಾಂದ್ರೆ ಹೊಡೆಯೋದಿಲ್ಲ......?
? ಪ್ರ ಸಾ ದ್ .ಬಿ. ಶೆ ಟ್ಟಿ
ಇದೇ ತಿಂಗಳ ೫ - ೬ನೇ ದಿನಾಂಕಗಳಂದು ಬರುವ (ಪಾಲ್ಗುಣ ಚತುರ್ದಶಿ) ಶಿವರಾತ್ರಿ ನಮಗೆಲ್ಲಾ ಒಂದು ಪ್ರಮುಖ ಹಬ್ಬ. ಅಂದು ಶಿವನನ್ನು ಆರಾಧಿಸಿ ಪುಣ್ಯ ಸಂಪಾದನೆಯಲ್ಲಿ ಅತಿ ಹೆಚ್ಚಿನ ಗಳಿಕೆ ದೊರಕಿಸಿಕೊಳ್ಳುವ ಕಾತುರ, ಆತುರ ಭಕ್ತರೆಲ್ಲರಿಗೆ. ಶಿವದೇವಾಲಯಗಳಿಗೆ ಭಕ್ತರು ತಮ್ಮೆಲ್ಲಾ ಆಸೆ ಆಕಾಂಕ್ಷೆಗಳನ್ನು ಹೊತ್ತು ಶಿವನ ಆರಾಧನೆಯನ್ನು ಮಾಡುವ ತವಕ.
೯೦ರ ದಶಕದಲ್ಲಿ ಎಷ್ಟೋ ಮಂದಿ ಕಂಪ್ಯೂಟರ್ ಬಳಸುವವರಿಗೆ ನಿತ್ಯದ ಬಳಕೆಯ ತಂತ್ರಾಂಶವಾಗಿದ್ದ ನೆಟ್‌ಸ್ಕೇಪ್ ಗೆ ಈಗ ವಿದಾಯ ಹೇಳುವ ಸಮಯ. ಆಗೊಮ್ಮೆ ಎಲ್ಲರೂ ಬಳಸುತ್ತಿದ್ದ ಬ್ರೌಸರ್ ಇದು. ಹಲವು ಬಳಕೆದಾರರಿಗಂತೂ ಇದು ಸಾಕ್ಷಾತ್ ಇಂಟರ್ನೆಟ್ಟೇ ಆಗಿತ್ತು!
ಮೊಸಾಯ್ಕ್ ಎಂಬ ಮೊದಲ ಬ್ರೌಸರನ್ನು ಬರೆದ ಮಾರ್ಕ್ ಆಂಡರ್ಸನ್ ನೇತೃತ್ವದಲ್ಲೇ ನೆಟ್‌ಸ್ಕೇಪ್ ಮೊದಲ ಆವೃತ್ತಿ ೧೯೯೪ರಲ್ಲಿ ಹೊರಬಂದಿತ್ತು. ಒಂದು ಕಾಲದಲ್ಲಿ ಶೇಕಡಾ ೯೦ರಷ್ಟು ಇಂಟರ್ನೆಟ್ ಬಳಕೆದಾರರಿಂದ ಬಳಸಲ್ಪಡುತ್ತಿದ್ದ ಈ ಬ್ರೌಸರಿನ ಬಳಕೆ ವರ್ಷಗಳು ಕಳೆದಂತೆ ಕ್ರಮೇಣ ೦.೬% ಗೆ ಇಳಿಮುಖವಾಯಿತು.
ವಿಡಂಬನೆಯೆಂದರೆ ಇದೇ ನೆಟ್‍ಸ್ಕೇಪ್ ನ ಮತ್ತೊಂದು ರೂಪ ಮುಕ್ತ ತಂತ್ರಾಂಶವಾದ ಫೈರ್ ಫಾಕ್ಸ್ ನ ಜನಪ್ರಿಯತೆ ದಿನೇ ದಿನೇ ಹೆಚ್ಚುತ್ತ ಬಂದಿದೆ ಹಾಗು ಹೆಚ್ಚುತ್ತಲೇ ಇದೆ. ಫೈರ್ ಫಾಕ್ಸ್ ಜಗತ್ತಿನಾದ್ಯಂತ ೫೦೦ ಮಿಲಿಯನ್ ಗೂ ಹೆಚ್ಚು ಬಾರಿ ಡೌನ್ಲೋಡ್ ಮಾಡಲ್ಪಟ್ಟಿದೆ ಎಂದು ಇತ್ತೀಚೆಗಷ್ಟೆ ಈ ಯೋಜನೆಯನ್ನು ನಿರ್ವಹಿಸುತ್ತಿರುವ ಮಾಝಿಲ್ಲಾ ಫೌಂಡೇಶನ್ ಪ್ರಕಟಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿತು.
ತುಂಬ ದಿನ ಆದ ಮೇಲೆ ಯಾವುದಾದರು ಹಳೆಗನ್ನಡದ(ಅಲ್ಲ ಹಿರಿಗನ್ನಡದ) ಕಬ್ಬವೋದಬೇಕೆಂಬ ಆಸೆಯಾಯಿತು. ತುಂಬ ದಿನಗಳ ಕೆಳಗೆ ನಯಸೇನನ 'ದರ್ಮಾಮ್ರುತಂ' ಇಲ್ಲಿಂದ ಇಳಿಸಿಟ್ಟಿದ್ದೆ.
ಪ್ರಹ್ಲಾದ ಅಗಸನಕಟ್ಟೆಯವರ `ಮನದ ಮುಂದಣ ಮಾಯೆ' ಸಂಕಲನಕ್ಕೆ ಸಾಹಿತ್ಯ ಅಕೆಡಮಿಯ ಪುರಸ್ಕಾರ ಸಂದಿದೆ. ಈ ಸಂಕಲನದಲ್ಲಿ ಒಟ್ಟು ಹನ್ನೆರಡು ಕಥೆಗಳಿವೆ. ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘ ಹೊರತಂದಿದೆ.