ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪತ್ನಿಯ ಶಿಕ್ಷಣಕ್ಕೆ ಅಡ್ಡಿ ಕ್ರೌರ್ಯ : ಹೈಕೋರ್ಟ್ ತೀರ್ಪು ದಾರಿದೀಪ

ಪತ್ನಿಯ ಶಿಕ್ಷಣಕ್ಕೆ ಅಡ್ದಿಪಡಿಸುವುದು ಮಾನಸಿಕ ಕ್ರೌರ್ಯವಾಗಿದ್ದು ಅದು ತಪ್ಪು. ಅಲ್ಲದೆ ಹೀಗೆ ಅಡ್ಡಿಪಡಿಸುವುದು ಹಿಂದೂ ವಿವಾಹ ಕಾಯ್ದೆಯ ಅನ್ವಯ ವಿಚ್ಚೇದನಕ್ಕೆ ಸೂಕ್ತ ಕಾರಣ ಎನಿಸಿಕೊಳ್ಳುತ್ತದೆ ಎಂದು ಮಧ್ಯಪ್ರದೇಶ ಹೈಕೋರ್ಟ್ ಇತ್ತೀಚೆಗೆ ಮಹತ್ವದ ತೀರ್ಪು ನೀಡಿದೆ.

Image

ರಂಜಾನ್ ಉಪವಾಸ : ದೇಹ ಮತ್ತು ಮನಸ್ಸುಗಳ ಶುದ್ದೀಕರಣ ವಿಧಾನ

ಭಾರತೀಯ ಮುಸ್ಲಿಂ ಸಮುದಾಯದ ಆತ್ಮಾವಲೋಕನಕ್ಕೆ ಒಂದು ಶುಭ ಸಂದರ್ಭ. ಖುರಾನ್ - ಸಂವಿಧಾನ - ಹಿಂದುತ್ವ - ಭಾರತೀಯತೆ - ಇವುಗಳ ನಿಜ ಅರ್ಥದ ಹುಡುಕಾಟ ನಡೆಯುತ್ತಿರುವ ಸಂದರ್ಭದಲ್ಲಿ ರಂಜಾನ್ ಹಬ್ಬದ ಒಂದು ತಿಂಗಳ ದೀರ್ಘ ಉಪವಾಸ ವ್ರತ ಆರಂಭವಾಗಿದೆ. ಮೂರು ರೀತಿಯ ಭಾವನೆಗಳು ಈಗ ಮೇಲುಗೈ ಪಡೆದು ಚರ್ಚೆಯ ಮುನ್ನೆಲೆಗೆ ಬಂದಿದೆ.

Image

ಸ್ವಾದಿಷ್ಟ ದಿಢೀರ್ ಗಿಣ್ಣು

Image

ಚರೋಟಿರವೆಯನ್ನು ಸಣ್ಣ ಉರಿಯಲ್ಲಿ ಕಮ್ಮಗೆ ಹುರಿಯಬೇಕು, ೧೦ ನಿಮಿಷ ದಪ್ಪ ಅವಲಕ್ಕಿ ನೀರಿನಲ್ಲಿ ನೆನಸಿಡಿ. ದಪ್ಪ ತಳದ ಪಾತ್ರೆಯಲ್ಲಿ ನೀರು, ಹಾಲು, ಮೊಸರು, ಸಕ್ಕರೆ ಬೆರಸಿ ಸಣ್ಣ ಉರಿಯಲ್ಲಿ ಕೈ ಆಡಿಸುತ್ತಾ ಕುದಿಸಿ, ಹುರಿದ ರವೆ ಹಾಕಿ ಬೇಯುವ ತನಕ ಮಗುಚಬೇಕು. ಇದಕ್ಕೆ ನೆನಸಿದ ಅವಲಕ್ಕಿ ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ, ಏಲಕ್ಕಿ ಹಾಕಿ ಚೆನ್ನಾಗಿ ಮಿಶ್ರಮಾಡಿ ಮಗುಚಿ ಇಳಿಸಿ.

ಬೇಕಿರುವ ಸಾಮಗ್ರಿ

೧ ಬಟ್ಟಲು ಸಿಹಿ ಮೊಸರು, ೧ ಬಟ್ಟಲು ಹಾಲು, ¾ ಬಟ್ಟಲು ಸಕ್ಕರೆ, ¼ ಬಟ್ಟಲು ಚರೋಟಿ ರವೆ, ೧ ಬಟ್ಟಲು ನೀರು, ೪-೬ ಒಣದ್ರಾಕ್ಷಿ, ¼ ಬಟ್ಟಲು ದಪ್ಪ ಅವಲಕ್ಕಿ, ಸಣ್ಣಸಣ್ಣ ಚೂರು ಮಾಡಿದ ೮ ಗೋಡಂಬಿ, ೧ ಚಮಚ ಏಲಕ್ಕಿಪುಡಿ, ೨ ಲವಂಗ

ವಿಧೇಯ ವಿದ್ಯಾರ್ಥಿ

ಅಂದು ಶಾಲಾವಾರ್ಷಿಕೋತ್ಸವಕ್ಕೆ ಭರ್ಜರಿ ತಯಾರಿ ನಡೆಯುತ್ತಿರುವ ಸಂದರ್ಭದಲ್ಲಿ ಬೆಳಗಿನ ಅವಧಿಯಲ್ಲಿ ಮಕ್ಕಳಿಗೆ ಪಾಠ ಮಧ್ಯಾಹ್ನದ ಅವಧಿಯಲ್ಲಿ ಯಥಾಪ್ರಕಾರ ನೃತ್ಯ ತರಬೇತಿ ನಡೆಸಲಾಗುತಿತ್ತು. ಬೆಳಗಿನ ಶಾಲಾ ತರಗತಿ ಅವಧಿಯಲ್ಲಿ ಎಂದಿನಂತೆ ನಾನು ತರಗತಿಗೆ ಹೋದೆ. ಆ ದಿನ ಮಕ್ಕಳಿಗೆ ನಾಳೆಯ ತರಗತಿಗೆ ಉತ್ತರ ಲೇಖನ ಕೊಡುವಂತೆ ಕೊಟ್ಟಿರುವ ೧೦ ಪದಗಳನ್ನು ಪಠ್ಯ ಪುಸ್ತಕದಲ್ಲಿ ಅಡಿಗೆರೆ ಹಾಕಿಸಿದೆನು.

Image

ಭಾರತಕ್ಕೆ ಹಣ್ಣು ಮತ್ತು ತರಕಾರಿ ರಫ್ತಿಗಾಗಿ ಇರುವ ವಿಪುಲ ಅವಕಾಶಗಳು

ಸಸ್ಯಾಹಾರದ ಪ್ರಾಮುಖ್ಯತೆ ಬಗ್ಗೆ ವಿಶ್ವದಲ್ಲಿ ಹೆಚ್ಚಿನ ಜಾಗೃತಿ ಉಂಟಾಗಿದೆ. ಆಯುರ್ವೇದವು ಪರಿಣಾಮಕಾರಿ ಔಷಧ ಪದ್ಧತಿಯಾಗಿ ಪರಿಣಮಿಸಿದೆ. ಅಮೇರಿಕಾವು ತನ್ನ ಪ್ರಜೆಗಳಿಗೆ ಧಾನ್ಯ, ತರಕಾರಿ ಮತ್ತು ಹಣ್ಣುಗಳನ್ನು ಹೆಚ್ಚು ಸೇವಿಸಿ ಮಾಂಸ ಸೇವನೆ ಪ್ರಮಾಣವನ್ನು ಕಡಿಮೆಗೊಳಿಸಲು ಸೂಚಿಸಿದೆ. ಯುರೋಪಿನಲ್ಲಿ ಹುಚ್ಚು ಕೆರಳಿಸುವ ಹಸುಗಳ ಖಾಯಿಲೆಯಿಂದ ಜನರು ವೇಗವಾಗಿ ಸಸ್ಯಾಹರದತ್ತ ಒಲಿಯುತ್ತಿದ್ದಾರೆ.

Image

ಕುಂದಾಪ್ರ ಕನ್ನಡ ನಿಘಂಟು

ಪುಸ್ತಕದ ಲೇಖಕ/ಕವಿಯ ಹೆಸರು
ಪ್ರಧಾನ ಸಂಪಾದಕರು : ಪಂಜು ಗಂಗೊಳ್ಳಿ
ಪ್ರಕಾಶಕರು
ಪ್ರೊ - ಡಿಜಿ ಪ್ರಿಂಟಿಂಗ್, ಮಿಷನ್ ಆಸ್ಪತ್ರೆ ರಸ್ತೆ, ಉಡುಪಿ
ಪುಸ್ತಕದ ಬೆಲೆ
ರೂ. ೬೦೦.೦೦, ಮುದ್ರಣ: ೨೦೨೦

ಕರ್ನಾಟಕದ ಅಧಿಕೃತ ಭಾಷೆ ಕನ್ನಡವೇ ಆದರೂ ಹಲವಾರು ಬಗೆಯ ಕನ್ನಡ ಮಾತನಾಡುವ ಜನರಿದ್ದಾರೆ. ಉತ್ತರ ಕರ್ನಾಟಕದ ಕನ್ನಡ, ಬೆಂಗಳೂರು ಕನ್ನಡ, ಮಂಗಳೂರು ಕನ್ನಡ, ಅರೆ ಭಾಷೆ ಕನ್ನಡ, ಕುಂದಾಪುರದಲ್ಲಿ ಮಾತನಾಡುವ ಕುಂದಪ್ರ ಕನ್ನಡ ಹೀಗೆ ಹತ್ತು ಹಲವು ವಿಧಗಳಿವೆ. ಪ್ರತಿಯೊಂದು ಕನ್ನಡದ ಸೊಗಡೇ ಅದ್ಭುತ.

ಪ್ರಶ್ನೆ - ಉತ್ತರ - ನಮ್ಮ ಆತ್ಮಸಾಕ್ಷಿ....

ಅಂಕಲ್," ಸಿಗರೇಟು ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ " ಅಂತ ಎಲ್ಲಾ ಕಡೆ ಬರೆದಿರುತ್ತಾರೆ. ಅದು ಕ್ಯಾನ್ಸರ್ ಗೆ ಕಾರಣವಾಗುತ್ತದೆ ಎಂದು ಹೇಳುತ್ತಾರೆ. ಆದರೂ ಸಿಗರೇಟ್ ಎಲ್ಲಾ ಕಡೆ ಸಿಗುತ್ತದೆ. ಹಾಗಾದರೆ ಅದರ ಮೇಲೆ ಬರೆದಿರುವುದು ಸುಳ್ಳೇ ?

Image

ಸ್ಟೇಟಸ್ ಕತೆಗಳು (ಭಾಗ ೧೨೫೬) - ಅರ್ಥ

ಅಪ್ಪ ಆಗಾಗ ಒಂದು  ಹೇಳ್ತಾ ಇದ್ರು ನಮಗೂ ಒಂದು ದಿನ ಬರುತ್ತದೆ ಕಾಯ್ತಾ ಇರು ಆ ದಿನ ನಮ್ಮ ಜೀವನವನ್ನು ಬದಲಿಸಿ ಬಿಡುತ್ತೆ. ಆ ದಿನದಿಂದ ನಾವು ಅನುಭವಿಸಿದ ಎಲ್ಲ ನೋವುಗಳು ಮಾಯವಾಗಿ ನಗುವೊಂದೇ ನಮ್ಮ ಜೊತೆಗೆ ನಡೆದು ಬಿಡುತ್ತದೆ. ಎಲ್ಲ ಪ್ರಶ್ನೆಗಳಿಗೆ ಅವತ್ತು ಉತ್ತರ ಸಿಗುತ್ತದೆ ಹೀಗೆ ಅಪ್ಪ ಹೇಳಿದ ಎಲ್ಲ ಮಾತುಗಳನ್ನು ಗಟ್ಟಿಯಾಗಿ ನೆಚ್ಚಿಕೊಂಡು ಹೆಜ್ಜೆಗಳನ್ನು ಇಟ್ಟವ ರಮೇಶ.

Image