ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ದೇಶಭಕ್ತಿಯ ಕಿಚ್ಚು ಹೊತ್ತಿಸಿದ ‘ವಂದೇ ಮಾತರಂ’ ಗೀತೆಗೆ ೧೫೦ ವರ್ಷ !

‘ವಂದೇ ಮಾತರಂ’ ಎಂಬ ಪದವನ್ನು ಕೇಳಿದೊಡನೆಯೇ ನಮ್ಮ ನರನಾಡಿಗಳು ಸೆಟೆದು ನಿಲ್ಲುತ್ತವೆ. ಮನದಲ್ಲಿ ರಾಷ್ಟ್ರ ಪ್ರೇಮದ ಚಿಂಗಾರಿಗಳು ಏಳುತ್ತವೆ. ಭಾರತ ಮಾತೆಯ ಚಿತ್ರ ಕಣ್ಣೆದುರು ಕುಣಿದಾಡುತ್ತದೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೇಶದ ಎಲ್ಲಾ ನಾಗರಿಕರನ್ನು ಒಗ್ಗೂಡಿಸಿ ಸ್ವಾತಂತ್ರ್ಯದ ಕಿಚ್ಚನ್ನು ಮನ-ಮನೆಗಳನ್ನು ಜಾಗೃತಗೊಳಿಸಿದ ಶ್ರೇಯ ಸಲ್ಲಬೇಕಾದದ್ದು ವಂದೇ ಮಾತರಂ ಗೀತೆಗೆ.

Image

ಲಾಲ್ ಬಾಗ್ ಕಲ್ಲಿನೊಂದಿಗೆ ಸಲ್ಲಾಪ

ಪುಸ್ತಕದ ಲೇಖಕ/ಕವಿಯ ಹೆಸರು
ಸಂಪಾದಕರು: ಡಾ. ಸುಕನ್ಯಾ ಸೂನಗಹಳ್ಳಿ
ಪ್ರಕಾಶಕರು
ಹರಿವು ಬುಕ್ಸ್, ಬಸವನಗುಡಿ, ಬೆಂಗಳೂರು -೫೬೦೦೦೪
ಪುಸ್ತಕದ ಬೆಲೆ
ರೂ. ೫೦೦.೦೦, ಮುದ್ರಣ : ೨೦೨೫

‘ಲಾಲ್ ಬಾಗ್ ಕಲ್ಲಿನೊಂದಿಗೆ ಸಲ್ಲಾಪ’ ಎನ್ನುವುದು ಡಾ. ಟಿ ಆರ್ ಅನಂತರಾಮು ಅವರ ಆಯ್ದ ಪ್ರಬಂಧಗಳ ಸಂಕಲನ. ವಿಜ್ಞಾನ ಲೇಖಕರಾಗಿ ಅನಂತರಾಮು ಅವರು ನಾಡಿಗೆ ನೀಡಿದ ಕೊಡುಗೆ ಅಪಾರ. ಅವರ ಆಯ್ದ ಪ್ರಬಂಧಗಳನ್ನು ಸಂಪಾದಿಸುವ ಕಾರ್ಯ ಮಾಡಿದ್ದಾರೆ ಡಾ.

ಬ್ರೆಡ್ ಪಕೋಡಾ

Image

ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಜೀರಿಗೆ, ಇಂಗು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ. ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ಗಂಟು ಬಾರದಂತೆ ದೋಸೆ ಹಿಟ್ಟಿನ ಹದಕ್ಕೆ ತಯಾರಿಸಿರಿ. ಕೊತ್ತಂಬರಿ ಸೊಪ್ಪು, ಹಸಿರು ಮೆಣಸಿನಕಾಯಿ ಸೇರಿಸಿ. ಬ್ರೆಡ್ ಹಾಳೆಯ ಬದಿಗಳನ್ನು ಕತ್ತರಿಸಿ.

ಬೇಕಿರುವ ಸಾಮಗ್ರಿ

ಬ್ರೆಡ್ ಹಾಳೆಗಳು (ಸ್ಲೈಸ್) ೪, ಕಡಲೆ ಹಿಟ್ಟು ೧ ಕಪ್, ಅಕ್ಕಿ ಹಿಟ್ಟು ೨ ಚಮಚ, ಚಿಟಿಕೆ ಇಂಗು, ಜೀರಿಗೆ ೧ ಚಮಚ, ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ ೨, ಹೆಚ್ಚಿದ ಕೊತ್ತಂಬರಿ ಸೊಪ್ಪು ಕಾಲು ಕಪ್, ಎಣ್ಣೆ ೩ ಕಪ್, ರುಚಿಗೆ ತಕ್ಕಷ್ಟು ಉಪ್ಪು

ಯಾರು ಶ್ರೇಷ್ಠ ? ಯಾವ ವೃತ್ತಿ ಶ್ರೇಷ್ಠ ?

ದೇಶ ಕಾಯುವ ಸೈನಿಕ ದೇವರೇ ? ದೇಹ ಕಾಯುವ ವೈದ್ಯ ದೇವರೇ ? ಅನ್ನ ಬೆಳೆಯುವ ರೈತ ದೇವರೇ ? ವಿದ್ಯೆ ನೀಡುವ ಶಿಕ್ಷಕ ದೇವರೇ ? ಹುಟ್ಟಿಸುವ ತಂದೆ ದೇವರೇ ? ಜನ್ಮ ನೀಡುವ ತಾಯಿ ದೇವರೇ ? ಊಟ ಬಡಿಸುವ ಭಟ್ಟ ದೇವರೇ ? ಅವಶ್ಯ ಇರುವ ಸ್ಥಳಕ್ಕೆ ತಲುಪಿಸುವ ಚಾಲಕ ದೇವರೇ ? ವಕೀಲ ದೇವರೇ ? ಪೋಲೀಸ್ ದೇವರೇ ? ಅಧಿಕಾರಿ ದೇವರೇ? ರಾಜಕಾರಣಿ ದೇವರೇ ? ಧರ್ಮಾಧಿಕಾರಿ ದೇವರೇ ?

Image

ಸ್ಟೇಟಸ್ ಕತೆಗಳು (ಭಾಗ ೧೨೬೦) - ಯಾರಂತಾಗಬೇಕು?

ಕಣ್ಣ ಮುಂದೆ ಕಾಣಸಿಗುವ ಎಲ್ಲರೂ ಕೂಡ ಅವರಂತಾಗುವುದಕ್ಕೆ ಕೇಳಿಕೊಳ್ಳುತ್ತಿದ್ದಾರೆ. ನಾನು ಯಾರಂತಾಗಬೇಕು? ಮನೆ ಅಂಗಳದಲ್ಲಿ  ನಿಂತ ಮರ ನಾನು ಕಾಲಕ್ಕೆ ತಕ್ಕ ಹಾಗೆ ಬದಲಾಗ್ತೇನೆ, ಬೇರನ್ನಾಳಕ್ಕಿಳಿಸಿ ಜಗತ್ತಿಗೆ ಉಳಿತನ್ನ ನೀಡುತ್ತೇನೆ ನೀನು ಹೀಗಾಗಬೇಕು ಅನ್ನುತ್ತದೆ.

Image

ಡಿಮ್ - ಡಿಪ್ ಬಳಕೆ ಅತ್ಯಗತ್ಯ, ಏಕೆ?

ನಿಮ್ಮ ಗುರುಗಳು ನಿಮ್ಮ ಎದುರು ಇರುವಾಗ ನೀವು ಕಣ್ಣುಗಳನ್ನು ಹೊರಳಿಸುವ ಮೂಲಕ ನೀವು ಅವರನ್ನು ನಿಮ್ಮ ದೃಷ್ಟಿಯ ವ್ಯಾಪ್ತಿಯಲ್ಲಿರಿಸಿಕೊಳ್ಳಲು ಪ್ರಯತ್ನ ಮಾಡುತ್ತೀರಿ. ಇನ್ನೂ ಸ್ವಲ್ಪ ಆಚೆ ಹೋದರೆ ಕಣ್ಣನ್ನು ತಿರುಗಿಸಿದರೆ ಸಾಕಾಗುವುದಿಲ್ಲ. ಏಕೆಂದರೆ ನಮ್ಮ ಕಣ್ಣುಗಳ ಗರಿಷ್ಠ ದೃಷ್ಟಿ ವ್ಯಾಪ್ತಿ (visual angle) ಗರಿಷ್ಠ 60°. ಇದಕ್ಕಿಂತ ಹೆಚ್ಚಾದರೆ ನೀವು ನಿಮ್ಮ ಕುತ್ತಿಗೆಯನ್ನು ತಿರುಗಿಸಬೇಕಾಗುತ್ತದೆ.

Image

ಚಿನ್ನ ಕಳ್ಳಸಾಗಣೆ : ಸತ್ಯ ಹೊರಬರಲಿ

ಚಿತ್ರನಟಿ ರನ್ಯಾ ರಾವ್ ಚಿನ್ನ ಕಳ್ಳ ಸಾಗಣೆ ಪ್ರಕರಣವು ದಿನಗಳೆದಂತೆ ಹೆಚ್ಚೆಚ್ಚು ನಿಗೂಢವಾಗುತ್ತ ಸಾಗುತ್ತಿದೆ. ಈ ಚಿನ್ನ ಕಳ್ಳಸಾಗಣೆಯಲ್ಲಿ ಅವರೊಬ್ಬರೇ ಶಾಮೀಲಾಗಿರುವುದಲ್ಲ, ಬದಲಾಗಿ ಇನ್ನಿತರ ಹಲವಾರು ‘ದೊಡ್ಡ’ ಮನುಷ್ಯರೂ ಶಾಮೀಲಾಗಿದ್ದಾರೆ ಎಂಬ ಶಂಕೆ ಹೆಚ್ಚೆಚ್ಚು ಧೃಢವಾಗುತ್ತಿದೆ.

Image

ಹೋಳಿ ಮತ್ತು ಮಾನವೀಯ ಮೌಲ್ಯ

ಇಂದು (ಮಾರ್ಚ್ ೧೩) ಇಡೀ ರಾಷ್ಟ್ರಾದ್ಯಂತ ಅದರಲ್ಲೂ ಉತ್ತರ ಭಾರತದ ಕಡೆ ಹೋಳಿ ಹಬ್ಬದ ಸಂಭ್ರಮವೋ ಸಂಭ್ರಮ. ಮುಖ್ಯವಾಗಿ ಕಾಲೇಜು ವಿದ್ಯಾರ್ಥಿಗಳ ಬಣ್ಣ ಬಣ್ಣದ ಓಕುಳಿಯಾಟ ನೋಡಲು ಚಂದ. ಇಂತಹ ಹೋಳಿ ಹಬ್ಬದ ಸಂದರ್ಭದಲ್ಲಿ ಆ ಬಣ್ಣಗಳ ಚೆಲುವಿನ ಚಿತ್ತಾರದ ನಡುವೆ ಮನುಷ್ಯ ಸಂಬಂಧಗಳ ಬೆಸೆಯುವಿಕೆಯ ಹುಡುಕಾಟ ಸಹ ಬಹಳ ಮುಖ್ಯ.

Image

ಸ್ಟೇಟಸ್ ಕತೆಗಳು (ಭಾಗ ೧೨೫೯) - ಅಂತ್ಯವಲ್ಲ

ಅವನು ಆ ಕೋಣೆಯ ಕೊನೆ ತಲುಪಿದ್ದಾನೆ ಅಷ್ಟೇ, ಅಲ್ಲೇ ಕುಳಿತು ಇನ್ನು ಮುಂದೆ ಈ ಕೋಣೆಯನ್ನು ತೊರೆದು ಹೊರ ಹೋಗಬೇಕಲ್ಲಾ ಹೊರ ಹೋಗುವ ದಾರಿ ಅಂತ ಬರೆದ ಬಾಗಿಲನ್ನು ತೆರೆದು ಹೆಜ್ಜೆ ಇಡಬೇಕಲ್ಲಾ ಮುಂದೇನೋ ಹೇಗೋ ಅಂತ ನೊಂದು ಬಿಟ್ಟಿದ್ದಾನೆ. ಆತನಿಗೆ ಈ ಸ್ಥಳವನ್ನು ಬಿಟ್ಟು ಹೋಗೋಕೆ ಮನಸ್ಸಿಲ್ಲ. ಆತ ಈ ಕೋಣೆಗೆ ಒಪ್ಪಿಕೊಂಡಿದ್ದಾನೆ. ಇದರಲ್ಲಿ ಜೀವನವನ್ನು ಅದ್ಭುತವಾಗಿ ರೂಪಿಸಿಕೊಳ್ಳಬೇಕು ಅಂತ ಅಂದುಕೊಂಡಿದ್ದಾನೆ.

Image