ಬಾನಿನಂಗಳ
ಕವನ
ಬಾನ ಸುಂದರ ದೃಶ್ಯಕಾವ್ಯವು
ನನ್ನ ಮನಸನು ಮುಟ್ಟಲು
ಸೋತು ಹೋಗಲು ತಾರೆ ಸೆಳೆದಳು
ಎನ್ನ ಒಪ್ಪುತ ತಬ್ಬಲು
ಮಧುರ ಚಂದಿರ ತಂಪ ಬೀರಲು
ಹಾಲು ಚೆಲ್ಲಿತು ಮನೆಯೊಳು
ಸುಖದ ಹೊನಲೊಳು ಸೋತು ಹೋಗಲು
ಮೌನ ಮುರಿಯಿತು ಬಾಳೊಳು
ಜೀವ ರೂಪದ ಭಾವ ಸ್ಪಂದನೆ
ಎದೆಯ ಗೂಡೊಳು ಮೂಡಿತು
ಮತ್ತೆ ಹಾಡಿತು ಕುಕಿಲ ಕೋಗಿಲೆ
ತಳಿರು ತೋರಣ ಕಟ್ಟಿತು
ಪ್ರಕೃತಿಯೊಳಗಿನ ಒಲುಮೆ ಕಾಣಲು
ಅರುಣ ರಾಗವು ಹರಡಿತು
ಚೈತ್ರ ಸುಮವನ ಸುತ್ತ ಸೇರಲು
ನಮ್ಮ ಪ್ರೀತಿಯು ಅರಳಿತು
-ಹಾ ಮ ಸತೀಶ ಬೆಂಗಳೂರು
ಚಿತ್ರ್
