ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮನುಷ್ಯನನ್ನು ಲಿಬರೇಟ್ ಮಾಡುತ್ತಲೇ ಹೋಗುವ `ಒಂದು ಕೈಫಿಯತ್'

ಚಂದ್ರಕಾಂತ ಕುಸನೂರರ ಹೊಸ ಕಾದಂಬರಿ `ಒಂದು ಕೈಫಿಯತ್' ಈ ದಿಸೆಯಲ್ಲಿ ಒಂದು ಹೊಸತನದ, ವಿಶಿಷ್ಟ ಪ್ರಯೋಗ. ಕುಸನೂರರ ಮೂಲಭೂತ ಕಾಳಜಿ ಮನುಷ್ಯನನ್ನು ಎಲ್ಲದರಿಂದ ಲಿಬರೇಟ್ ಮಾಡಿಯೂ ಅವನ ಜೀವನಾಸಕ್ತಿಯನ್ನು ಸಾಯಿಸದೇ, ಸಂನ್ಯಾಸಿಯಾಗಿಸದೇ ಬದುಕಿನೊಳಗೇ ಇರಿಸಿ ಈ ಶೋಧವನ್ನು ನಡೆಸಬೇಕೆನ್ನುವುದು. ಒಂದು ಅರ್ಥದಲ್ಲಿ ಇಲ್ಲಿರುವುದು ಒಂದು ಸಂಘರ್ಷ. ಕಾದಂಬರಿ ಮಾತು, ವಿವರ, ನೋಟಗಳಿಗಿಂತ ಮೌನ, ಅಮೂರ್ತ ಮತ್ತು ಅನೂಹ್ಯಗಳನ್ನೆ ಹೆಚ್ಚು ನೆಚ್ಚಿಕೊಂಡಿರುವಂತಿದೆ. ನಿಜಕ್ಕೂ ಇದೊಂದು ವಿಶಿಷ್ಟ ಪ್ರಯೋಗ, ಹೊಸತನದಿಂದ ಕೂಡಿದ ಕಾದಂಬರಿ.

 

ಕಾದಂಬರಿಯ ಹೆಸರು : ಒಂದು ಕೈಫಿಯತ್

ಮನುಷ್ಯನನ್ನು ಲಿಬರೇಟ್ ಮಾಡುತ್ತಲೇ ಹೋಗುವ `ಒಂದು ಕೈಫಿಯತ್'

ಪುಸ್ತಕದ ಲೇಖಕ/ಕವಿಯ ಹೆಸರು
ಚಂದ್ರಕಾಂತ ಕುಸನೂರ
ಪ್ರಕಾಶಕರು
ಪ್ರಗತಿ ಗ್ರಾಫಿಕ್ಸ್, ೧೧೯, ೩ನೆಯ ತಿರುವು, ೮ನೆಯ ಮುಖ್ಯ ರಸ್ತೆ, ಆರ್.ಪಿ.ಸಿ. ಬಡಾವಣೆ, ಬೆಂಗಳೂರು - ೫೬೦ ೦೪೦
ಪುಸ್ತಕದ ಬೆಲೆ
೬೦.೦೦

ಚಂದ್ರಕಾಂತ ಕುಸನೂರರ ಹೊಸ ಕಾದಂಬರಿ `ಒಂದು ಕೈಫಿಯತ್' ಈ ದಿಸೆಯಲ್ಲಿ ಒಂದು ಹೊಸತನದ, ವಿಶಿಷ್ಟ ಪ್ರಯೋಗ. ಕುಸನೂರರ ಮೂಲಭೂತ ಕಾಳಜಿ ಮನುಷ್ಯನನ್ನು ಎಲ್ಲದರಿಂದ ಲಿಬರೇಟ್ ಮಾಡಿಯೂ ಅವನ ಜೀವನಾಸಕ್ತಿಯನ್ನು ಸಾಯಿಸದೇ, ಸಂನ್ಯಾಸಿಯಾಗಿಸದೇ ಬದುಕಿನೊಳಗೇ ಇರಿಸಿ ಈ ಶೋಧವನ್ನು ನಡೆಸಬೇಕೆನ್ನುವುದು. ಒಂದು ಅರ್ಥದಲ್ಲಿ ಇಲ್ಲಿರುವುದು ಒಂದು ಸಂಘರ್ಷ. ಕಾದಂಬರಿ ಮಾತು, ವಿವರ, ನೋಟಗಳಿಗಿಂತ ಮೌನ, ಅಮೂರ್ತ ಮತ್ತು ಅನೂಹ್ಯಗಳನ್ನೆ ಹೆಚ್ಚು ನೆಚ್ಚಿಕೊಂಡಿರುವಂತಿದೆ. ನಿಜಕ್ಕೂ ಇದೊಂದು ವಿಶಿಷ್ಟ ಪ್ರಯೋಗ, ಹೊಸತನದಿಂದ ಕೂಡಿದ ಕಾದಂಬರಿ.

ಕಾದಂಬರಿಯ ಹೆಸರು : ಒಂದು ಕೈಫಿಯತ್

ನನ್ನ ಬದುಕು

ಮಂಜು ಮುಸುಕಿದ ಆ ಸೂರ್ಯನಂತೆ
ಮನದ ನೋವನು ಯದೆಯಲಿ ಕಟ್ಟಿ
ಬಿಗಿದ ಕೊರಳಸೆರೆಯಲಿ
ಬದುಕಿನ ಬಂಡೆಯನು
ತಿಗ್ಗು ಮುಗ್ಗಿನಿಂದ ಮುನ್ನುಗ್ಗಿಸುತಿಹೇನು !
ಬದುಕಿನ ಚಕ್ಕಡಿ
ಬಾಳ ದಾರಿಯಲಿ ಸೊಲುತಿರುವೇನೋ ಯಂಬ ಭಾವನೆ,
ಚಿಕ್ಕಂದಿನಿಂದ ಸಿಗದ ಆ ಪ್ರೀತಿಯ ಧಾರೆ,
ನೋವಲಿ ಬದುಕಿದ ಆ ನನ್ನ ಜೀವನ ಪಯಣ
ದಡ ಸೇರುವುದೋ ಇಲ್ಲವೊ ಯನ್ನುವ ಭಾವ.
ಕಡಿದು ತಿನ್ನುವ ಬಡತನ

ಸಿಹಿ ಗಾಳಿ, ಸಿಹಿ ಗಾಳಿ, ಸಹಿ ಹಾಕಿದೆ ಮನಸಿನಲೀ....!!

ಇತ್ತೀಚೆಗೆ ಕನ್ನಡ ಚಿತ್ರಗಳಲ್ಲಿ ಒಳ್ಳೊಳ್ಳೆಯ ಹಾಡುಗಳು ಬರುತ್ತಿವೆ. ಇತ್ತೀಚೆಗೆ ಬಿಡುಗಡೆಯಾದ ’ಆ ದಿನಗಳು ಚಿತ್ರದ’ ಸಿಹಿ ಗಾಳಿ, ಸಿಹಿ ಗಾಳಿ.....ಒಂದು ಇಂಪಾದ, ಮಧುರವಾದ ಹಾಡು. ಇದಕ್ಕೆ ಸಂಗೀತ ನೀಡಿ ಹಾಡಿರುವವರು ಇಳಯರಾಜ. ೧೩ ವರ್ಷಗಳ ಹಿಂದೆ ’ಶಿವಸೇನೆ’ ಚಿತ್ರಕ್ಕೂ ಇವರೇ ಸಂಗೀತ ನಿರ್ದೇಶಿಸಿದ್ದರು.

ಚಂಡ ಚಿತ್ರದ ಬಗ್ಗೆ ಒಂದೆರಡು ಮಾತುಗಳು- ರಘೋತ್ತಮ್ ಕೊಪ್ಪರ

ಚಂಡ ಚಿತ್ರದ ಬಗ್ಗೆ ಒಂದೆರಡು ಮಾತುಗಳು- ರಘೋತ್ತಮ್ ಕೊಪ್ಪರ

ಹತ್ಯಾರ ! (ಧಾರವಾಡ ಕನ್ನಡ - ಭಾಗ ಆರು)

ಮೊದಲು ಮಹೇಶ್ ಅವರು ಕೇಳಿದ ಪ್ರಶ್ನೆಗೆ ಉತ್ತರ :
ಅವರು ಕೇಳಿದ್ದು .
೧. ನಾನು ನಿನಗೆ ಕಾಗದ ಬರೆಯುತ್ತಾ ಇದೆ.
೨. ನಾನು ಮಗುವಿಗೆ ಸ್ನಾನ ಮಾಡಿಸ್ತಾ ಇದ್ದೀನಿ
೩. ಅವರು ಅವನಿಗೆ ಹೊಡೆಯುತ್ತಾ ಇದ್ರು..
ಇದನ್ನೆಲ್ಲ ಧಾರವಾಡದಲ್ಲಿ ಹೇಗೆ ಹೇಳುತ್ತೀರಿ ? ಅಂತ

ಉತ್ತರ :
೧. ನಾನು ನಿನಗ ಪತ್ರ (/ಪತ್ರಾ) ಬರೀಲಿಕ್ಕೆ ಹತ್ತೇನಿ ( /ಬರೀಲಿಕ್-ಹತ್ತೇನಿ) .

ಎಲ್ಲಾರ್ಗು ಪವರ್ ಬೆಕು, ಆದ್ರೆ ಜನಗಳ್ ಕಷ್ಟ- ಕಾರ್ಪಣ್ಯದ್ಕಡೆ ಗಮನಕೊಡೊ ಮಾತೆ ಇಲ್ವಲ್ಲಪ್ಪ ಸಿವ್ನೆ ? ಏನಾಗ್ತದೋಪ್ಪ ನಮ್ದೇಸ !

ದೊಗ್ನಾಳ್ ಮುನ್ಯಪ್ಪಾರು :

ಏನೇಳ್ಲಪ್ಪ ನಮ್ಮ ಕರ್ ನಾಟ್ಕ್ಕದ್ ಕತೆ-ವ್ಯತೆನ. ಇಂಗೆ ನಾಟ್ಕಮಾಡ್ಕಡ್ ಕುಂತಗಂಡ್ರೆ ಪ್ರಜೆಗಳ್ಗತಿಯೇನು ? ಮೊದ್ಲು ಓಟ್ಮಾಡರೆಲ್ಲ , ಒಟ್ಗೂಡ್ಕಂಡು ಇಂತ ನಾಯ್ಕರು ನಮಗ್ಬ್ಯಾಡ ಅಂದ್ರೇ, ಇವ್ರಿಗ್ಬುದ್ದಿ ಬರದು. ಇಂತ ಒಂದು ಕಿರಾಂತಿ ಏನಾದ್ರು ಅದೀತಾ ? ನನ್ಗೇನೊ ಅನ್ಮಾನ ಕಣಪ.

ವಕ್ರನಾದ ಶುಕ್ರ?

ಕೆಲವು ದಿನಗಳ ಹಿಂದೆ ಸವಿತೃ ಅವರು ಒಂದು ಪ್ರಶ್ನೆ ಕೇಳಿದರು. ಗ್ರಹಗಳ ವಕ್ರದೃಷ್ಟಿ ಯಾಕೆ ಬೀಳುತ್ತೆ ಅಂತ ಅವರ ಕೇಳಿಕೆ. ಅವರು ಆ ಪ್ರಶ್ನೆ ಕೇಳಿದ್ದು ನನಗೆ ಆಶ್ಚರ್ಯ ಆಯಿತು. ಯಾಕೆ ಗೊತ್ತೇ? ಗ್ರಹಗಳು ವಕ್ರವಾದರೆ, ಸೂರ್ಯನಿಗೇನು ಚಿಂತೆ ಅಲ್ಲವೇ? :) [ಸವಿತೃ, ಸವಿತಾ ಇವೆಲ್ಲ ಸೂರ್ಯನ ಹೆಸರುಗಳೇ!]. ಆಮೇಲನ್ನಿಸಿತು - ಅವರು ಹೀಗೆ ಕೇಳಿದ್ದು ಸರಿಯಾಗೇ ಇದೆ ಅಂತ. ಯಾಕಂದ್ರೆ, ಈ ಗ್ರಹಗಳು ವಕ್ರವಾಗೋದು ಈ ಬಡಪಾಯಿ ಭೂಮಿ (ಅಥವ ಇತರ ಗ್ರಹಗಳ ಮೇಲೆ) ನಿಂತೆ ನೋಡೋರಿಗೆ ಮಾತ್ರ. ಸೂರ್ಯನ ಮೇಲಿಂದ ನಿಂತು ನೋಡಿದರೆ, ವಕ್ರವಾಗೋದು ಸಾಧ್ಯವೇ ಇಲ್ಲ. ಸೂರ್ಯನ ಮೇಲೆ ನಿಂತಂತೂ ನೋಡಕ್ಕಾಗಲ್ಲ, ಇನ್ನು ಬೇರೆ ಗ್ರಹಗಳ ಮೇಲೆ ಯಾರಪ್ಪಾ ಇದಾರೆ ನಿಂತು ನೋಡಕ್ಕೆ ಅನ್ನಬೇಡಿ. ಇವತ್ತಲ್ಲದಿದ್ದರೆ ಇನ್ನೊಂದು ದಿನ ಆ ಪ್ರಯತ್ನವೂ ಯಶಸ್ಸು ಕಾಣುತ್ತೆ ಅನ್ನೋ ನಂಬಿಕೆ ನನ್ನದು.

ಶುಕ್ರನಿಗೆ ವಕ್ರದೃಷ್ಟಿ ಬೀರ್ತಾನೆ ಅನ್ನೊ (ಕು)ಖ್ಯಾತಿ ಅಷ್ಟೇನೂ ಇಲ್ಲ. ಹಾಗೆ ನೋಡಿದರೆ, ಶನಿಗೆ ಆ ಪಟ್ಟ ಸಿದ್ಧವಾಗಿಹೋಗಿದೆ. ರಾಮೇಶ್ವರಕ್ಕೆ ಹೋದ್ರೂ ಶನೀಶ್ವರ ಬಿಡ ಅನ್ನೋ ಗಾದೆ ಕೇಳಿದೀರಲ್ಲ. ಆದ್ರೆ, ನಿಜ ಹೇಳ್ಬೇಕೂಂದ್ರೆ, ಶನಿ ಅಂದ್ರೆ ಒಂದು ಪಾಪದ ಪ್ರಾಣಿ. ಬೇಡ. ಪ್ರಾಣಿ ಅಲ್ಲ. ಪಾಪದ ಗ್ರಹ ಅನ್ನೋಣ. ಅದರ ಹೆಸರಲ್ಲೇ ಅದು ಗೊತ್ತಾಗತ್ತೆ. ಅದು ನಿಜವಾಗಿ ಶನೀಶ್ವರನಲ್ಲ. ಶನೈಶ್ಚರ. ಶನೈ: ಚರತಿ ಅಯಂ ಇತಿ ಶನೈಶ್ಚರಃ. ಈ ಗ್ರಹ ನಿಧಾನವಾಗಿ(ಶನೈ:) ಹೋಗುತ್ತೆ (ಚರತಿ), ಅದಕ್ಕೆ ಅವನು ಶನೈಶ್ಚರ. ಅಷ್ಟೇ. ಆಕಾಶದಲ್ಲಿ ಯಾವುದೇ ಒಂದು ಜಾಗದಿಂದ ಹೊರಟು, ಮತ್ತೆ ಅದೇ ಜಾಗಕ್ಕೆ ಮರಳಿ ಬರೋದಕ್ಕೆ ಶನಿಗೆ ಮೂವತ್ತು ವರ್ಷ ಬೇಕು. ಅದೇ ಕೆಲಸ ಮಾಡೋದಕ್ಕೆ ಗುರುವಿಗೆ ಹನ್ನೆರಡು ವರ್ಷ ಬೇಕು. ಅಂದಹಾಗೆ, ಭಾರತದಲ್ಲಿ ಅರವತ್ತು ವರ್ಷಗಳ ಸಂವತ್ಸರ ಚಕ್ರ ಇದೆಯಲ್ಲ, ಅದು ಇವೆರಡರ ಮೇಲೇ ನಿಂತಿರೋದು. ಉದಾಹರಣೆಗೆ, ಈ ಇವತ್ತು ಶನಿ, ಗುರು ಎರಡೂ, ಆಕಾಶದಲ್ಲಿ ಒಂದಕ್ಕೊಂದಕ್ಕೆ ಹತ್ತಿರವಾಗಿ, ಎರಡೂ, ಜ್ಯೇಷ್ಟಾ ನಕ್ಷತ್ರದ ಹತ್ತಿರ ಇದೆ ಅಂತ ಇಟ್ಟುಕೊಳ್ಳಿ. (ಸುಮ್ಮನೆ ಇಟ್ಟುಕೊಳ್ಳಿ. ಯಾವ ನಕ್ಷತ್ರವಾದರೂ ಆಗಿರಬಹುದು. ಮೇಷ ವೃಷಭವೇ ಮೊದಲಾದ ರಾಶಿಚಕ್ರದಲ್ಲಿ ಅತೀ ಪ್ರಕಾಶಮಾನವಾದ ನಕ್ಷತ್ರ ಜ್ಯೇಷ್ಟಾ. ಅದಕ್ಕೇ ಅದರ ಉದಾಹರಣೆ ತೆಗೆದುಕೊಂಡೆನಷ್ಟೆ. ಇರಲಿ). ಮತ್ತೆ ಸುಮಾರು ಮೂವತ್ತು ವರ್ಷಗಳ ಬಳಿಕ ಶನಿ ಅಲ್ಲೇ ಬಂದಿರುತ್ತಾನೆ. ಹಾಗೇ ಅರವತ್ತು ವರ್ಷಗಳ ನಂತರವೂ ಅಲ್ಲೇ ಇರುತ್ತಾನೆ. ಈ ಅರವತ್ತು ವರ್ಷಗಳಲ್ಲಿ ಗುರು ಆಕಾಶದ ಸುತ್ತ ಐದು ಬಾರಿ ಪ್ರದಕ್ಷಿಣೆ ಮಾಡಿ, ಮತ್ತೆ ಜ್ಯೇಷ್ಟಾ ನಕ್ಷತ್ರದ ಬಳಿಯೇ ಬರುತ್ತಾನೆ. ಹಾಗಾಗಿ, ಪ್ರಭವ ವಿಭವ ಮೊದಲಾದ ಸಂವತ್ಸರ ಚಕ್ರ ಆಕಾಶದಲ್ಲಿ ಗುರುಶನಿಗಳು ಒಟ್ಟಿಗೆ ಕಾಣಿಸಿಕೊಳ್ಳುವ ಘಟನೆಯನ್ನಾಧರಿಸಿದೆ. ತಿಳೀತಲ್ಲ?