ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ರಿಲಯನ್ಸ್ ಪವರ್ ಘೋಶಿಸಿರುವ ಬೋನಸ್ ಶೇರು ಸರಿಯೇ?

ಅತ್ಯಂತ ಹೆಚ್ಚಿನ ಬರವಸೆಯೊಂದಿಗೆ ಶೇರು ಮಾರುಕಟ್ಟೆ ಪ್ರವೇಶಿಸಿದ ರಿಲಯನ್ಸ್ ಪವರ್ ಶೇರುಗಳು ಮೊದಲದಿನವೇ ಮುಗ್ಗರಿಸಿ ಮೂಗು ಜಜ್ಜಿಸಿಕೊಂಡದ್ದು ಎಲ್ಲರಿಗೂ ತಿಳಿದ ವಿಷಯವೇ. ಈ ರೀತಿಯಲ್ಲಿ ಹೂಡಿಕೆದಾರರು ಅನುಭವಿಸುತ್ತಿರುವ ನಷ್ಟವನ್ನು ತುಂಬಿಕೊಡಲು ರಿಲಯನ್ಸ್ ಪವರ್ ಸಂಸ್ಥೆಯು ಬೋನಸ್ ಶೇರು ನೀಡುವ ಘೋಷಣೆ ಮಾಡಿದೆ.

ಡಿಸ್ನಿ, UTV ಹಾಗೂ ಭಾರತದ ಮನರಂಜನೆ ಉದ್ಯಮ

ಹೆಚ್ಚಾಗಿ ಭಾರತದಲ್ಲಿ ಹೊರಬರುವ ಸಿನಿಮಾಗಳು ಪ್ರೀತಿ, ಪ್ರೇಮ, ಹೀರೋ ಹೀರೋಯಿನ್ನುಗಳಲ್ಲೇ ಮುಗಿದುಹೋಗುತ್ತವೆ. ಇದೇ ರೀತಿಯ ಹಾಡು ಕುಣಿತ ಇರುವ ಚಿತ್ರಗಳ ಟ್ರೆಂಡೇ ಹೆಚ್ಚಿರುವಾಗ ಇಗೋ ಇಲ್ಲೊಂದು ಪಾಸಿಟಿವ್ ಡೆವಲಪ್ಮೆಂಟು!

UTV Motion Pictures
ದಿ ಹಿಂದೂ ವರದಿ ಪ್ರಕಾರ ಡಿಸ್ನಿ ಕಂಪೆನಿ ತನ್ನ ಸಬ್ಸಿಡರಿಯ ಮೂಲಕ ಭಾರತದ ಕಂಪೆನಿಯಾದ [:http://en.wikipedia.org/wiki/UTV_Software_Communications|ಯೂ ಟಿ ವಿ]ಯಲ್ಲಿ [:http://www.hinduonnet.com/thehindu/thscrip/print.pl?file=2008021953331600.htm&date=2008/02/19/&prd=th&|ಹಣ ಹೂಡಿಸುತ್ತಿದೆಯಂತೆ]!

UTVಯ ನಿರ್ಮಾಣಗಳನ್ನು ಗಮನಿಸಿದರೆ ಬಾಲಿವುಡ್ ಟ್ರೆಂಡಿನ ನಡುವೆ ಅವರು ಧೈರ್ಯದಿಂದ ನಡೆಸಿರುವ ಪ್ರಯೋಗಗಳು ಕಣ್ಣಿಗೆ ಬೀಳುತ್ತವೆ. ಅದರಲ್ಲಿ ಕೆಲವು [:http://www.imdb.com/title/tt0466460/|ಕೋಸ್ಲಾ ಕಾ ಘೋಸ್ಲಾ], [:http://utvmotionpictures.com/blueumbrella-movie.asp|ಛತ್ರಿ ಚೋರ್] ಹಾಗೂ ಈಗ ತಾನೆ ಹೊರಬಂದಿರುವ [:http://www.jodhaaakbar.com/|ಜೋಧ ಅಕ್ಬರ್]. ಈ ಪಟ್ಟಿಯಲ್ಲಿ ಮೊದಲೆರಡು ಬಹಳ ಸೃಜನಶೀಲ ಚಿತ್ರಗಳಾದರೆ ಕೊನೆಯದು ಹಾಲಿವುಡ್ ಸಿನಿಮಾಗಳೊಂದಿಗೆ ಗುರುತಿಸಿಕೊಳ್ಳುವಷ್ಟು ಚೆಂದವಾದ ತಂತ್ರಜ್ಞಾನವಿರುವಂಥದ್ದು. ಇವರ ಮೊದಲ ಹಲವು ನಿರ್ಮಾಣಗಳಲ್ಲಿ ಒಂದಾದ ಶಾಂತಿ ಬಹಳ ಜನಪ್ರಿಯತೆ ಪಡೆದಿತ್ತು. ಡಿಡಿ ೧ರಲ್ಲೇ ಬರುತ್ತಿದ್ದ ಮಹಾಭಾರತ ಹಾಗೂ ಮಾಯಾಮೃಗದಂತಹ ದಾರಾವಾಹಿಗಳನ್ನು ಕೂತು ನೋಡುವಂತೆ ಮನೆಯ ಎಲ್ಲರೂ ಇದನ್ನು ಎಲ್ಲ ಕೆಲಸ ಬಿಟ್ಟು ಜೊತೆಗೆ ಕೂತು ನೋಡುತ್ತಿದ್ದರು.

ಐಟಿ ಸಿಟಿ

"ಹತ್ತು ಸಾವಿರ " ಮಹೇಶ ಬಿಟ್ಟ ಬಾಯಿ ಬಿಟ್ಟ ಹಾಗೆ ಕೂತಿದ್ದ.
ಶಿವು ಹೇಳುತಿದ್ದ " ಲೊ ಮಹಿ ಇನ್ನೆಷ್ಟು ದಿನ ಅಂತ ಹೀಗೆ ಈ ಹಳ್ಳಿನಲ್ಲಿ ಕೂತಿರ್ತೀಯ?. ನನ್ನನ್ನು ನೋಡು ಬೆಂಗಳೂರಿಗೆ ಹೋಗಿದ್ದೇ ಆಟೊಂದು ದೊಡ್ಡ ಕಂಪನಿನಾಗೆ ಕೆಲಸ ಸಿಕ್ತು . ನಿಂಗೊತ್ತೇ ನಂಗೇ ಏಟು ಸಂಬಳ ಅಂತ. ನಿಂಗೆ ಕನಸಲ್ಲೊ ತಿಳಿಯಾಕಿಲ್ಲ ಬಿಡು . ಹತ್ತು ಸಾವಿರ ರೂಪಾಯಿ ಸಂಬ್ಳ ."

ಚುಟುಕುಗಳು

ಕನಸಿನ ಕೆನ್ನೆ

ಆಫೀಸಿನಲ್ಲಿದ್ದಾಳೆ ನನ್ನ ಕನಸಿನ ಕನ್ಯೆ
ನಗುತ್ತ ಸಮೀಪಿಸಿದಳು ನನ್ನನ್ನೇ
ಸುದ್ದಿ ಕೇಳಿ ಏಟು ತಿ೦ದತಾಯ್ತು ಕೆನ್ನೆ
ಏಕೆ೦ದರೆ ಮದುವೆ ಆಯ್ತ೦ತವಳಿಗೆ ಮೊನ್ನೆ..!

ದಾನ.....

ಮಕ್ಕಳಿಗೆ ಮಾಡುವುದು ವಿದ್ಯಾದಾನ,
ಬಡವರಿಗಾಗಿ ಮಾಡುವುದು ಅನ್ನದಾನ,
ಹಾಗಾದರೆ ಕಳ್ಳ ಕಾಕರಿಗೆ.........?
ಮಾಡುತ್ತೇವಲ್ಲ, ಮತದಾನ !

ಬಾಕ್ಸಿ೦ಗ್ ಪ್ರೇಮ

ಅಮೃತೇಶ್ವರ ದೇವಾಲಯ - ಅಣ್ಣಿಗೇರಿ

ನಿರ್ಮಾಣಗೊಂಡದ್ದು: ಇಸವಿ ೧೦೫೦ - ಐದನೇ ಪಶ್ಚಿಮ ಚಾಲುಕ್ಯ ದೊರೆ ಒಂದನೇ ಸೋಮೇಶ್ವರನ ಕಾಲದಲ್ಲಿ.
ಸ್ಥಳ: ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅಣ್ಣಿಗೇರಿ.

ಕಾಯಿಲೆಗಳ ಬಗ್ಗೆ ಒ೦ದಿಷ್ಟು...

ಸುಮ್ಮನೇ ಗಮನಿಸಿ ನೋಡಿ,ನಮ್ಮ ಸುತ್ತಮುತ್ತಲಿನ ಸ್ನೇಹಿತರಲ್ಲಿ (ಸುಮಾರು ೨೦ - ೩೦ವರ್ಷ ವಯಸ್ಸಿನವರಲ್ಲಿ) ಯಾರಿಗಾದರೂ,ಏನೋ ಒ೦ದು ದೈಹಿಕ ಸಮಸ್ಯೆ ಇರುತ್ತದೆ.ಅವರು ವೈದ್ಯಕೀಯ ತಪಾಸಣೆ ಮಾಡಿಸಿ,ಕೆಲವು ಪಥ್ಯಗಳನ್ನು ಅನುಸರಿಸುತ್ತಿರುತ್ತಾರೆ.ಕುಡಿತ ಬಿಡುವುದು,ಸಿಗರೇಟು ಕಡಿಮೆ ಮಾಡುವುದು,ಮಾ೦ಸ ನಿಲ್ಲಿಸುವುದು ಹೀಗೆ,ಇನ್ನೂ ಏನೇನೋ. ಆಗ ಬರುತ್ತದೆ ಈ ಮಾತು,