ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮೊದಲನೆಯದಾಗಿ....

ಕನ್ನಡದಲ್ಲಿ ಮಾತ್ರವಲ್ಲ, ನನ್ನ ಜೀವನದಲ್ಲೇ ಮೊದಲ ಬ್ಲಾಗ್ ಇದು..!! ಈ ’ಸಂಪದ’ ಕನ್ನಡ ಸಮುದಾಯದ ಉಪಯುಕ್ತತೆ, ವಿಶಾಲತೆ ನೆನೆಸಿಕೊಂಡರೆ ಭಯಂಕರ ಖುಷಿಯಾಗುತ್ತೆ..!! ಕೈಗೆ ಸಿಗುವ ಕನ್ನಡ ಬರಹಗಳನ್ನೆಲ್ಲ ಓದುವ ಅಭ್ಯಾಸವಿದೆ, ಆಗೊಮ್ಮೆ, ಈಗೊಮ್ಮೆ ಮನಸ್ಸಿಗೆ ಅನ್ನಿಸಿದನ್ನ ಬರೆಯೋ ಹವ್ಯಾಸವಿದೆ, ಆಧ್ಯಾತ್ಮ, ಕನ್ನಡ ಸಾಹಿತ್ಯ, ಸಿನಿಮಾ, ನನ್ನ ಇತರೆ ಆಸಕ್ತಿಯ ವಿಷಯಗಳು.

ಪುಣ್ಯದ ಫಲ

ಪುರಂದರದಾಸರು "ಮುನ್ನ ಮಾಡಿದ ದುಷ್ಕರ್ಮದಿ ಬಳಲಿದೆ, ಇನ್ನಾದರೂ ಎನ್ನ ಸಲಹೋ" ಎಂದು ಒಂದು ದೇವರನಾಮದಲ್ಲಿ ಹಾಡಿದ್ದಾರೆ. ಹಿಂದಿನ ದುಷ್ಕರ್ಮದಿಂದ ಬಳಲುತ್ತೇವೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ, ತೊಂದರೆಗೊಳಗಾಗಿದ್ದಾಗ,ಎಲ್ಲಿಂದಲೋ ಬಂದ ನೆರವಿನಿಂದ ಆ ತೊಂದರೆಯಿಂದ ಪಾರಾಗುವ ಘಟನೆಗಳ ಅನುಭವ ಎಲ್ಲರಿಗೂ ಆಗಿರುವುದೇ! ಇದನ್ನೇ ಪುಣ್ಯದ ಫಲ ಎನ್ನುವುದೇ?

ಹೇಗೆ ತೊರೆಯಲಿ...?

ಹೇಗೆ ತೊರೆಯಲಿ ...?

 ಹೇಗೆ ಒಡೆಯಲಿ ಕೈಯ ಬಳೆಯನು ?

ನಿನ್ನ ಸವಿನುಡಿ ಇಂಪು ದನಿಯನು

ಕಿಣಿಕಿಣಿ ಸದ್ದಲಿ ನೆನಪಿಸಿದೆ.

 

ಹೇಗೆ ತರಿಯಲಿ ಹೆರಳ ಹೂವನು?

ನಿನ್ನ ಉಸಿರೇ ತೇಲಿ ಬರುತಿದೆ,

ನನ್ನ ಉಸಿರಲಿ ನೆಲಸಿದೆ.

 

ಹೇಗೆ ಅಳಿಸಲಿ ಹಣೆಯ ಕುಂಕುಮ?

ನಿನ್ನ ಮುತ್ತಿನ ಹಚ್ಚೆ ಗುರುತಾಗಿ

ಶಾಶ್ವತ ಸಂಭ್ರಮ ಶೋಭಿಸಿದೆ.

 

ಹೇಗೆ ಬಿಸುಡಲಿ ಬಣ್ಣದುಡುಗೆಯ?

ನಿನ್ನ ಸನಿಹದ ಸಂಜೆಗನಸಿನ

ಸಪ್ತವರ್ಣಗಳು ಮೆರೆಯುತಿವೆ.

 

ಹೇಗೆ ತೊರೆಯಲಿ ಹೇಳು ನಲ್ಲನೆ?

ನಿನ್ನ ಸೇರಲು ಕಾಯುತಿರುವೆನು,

ಸ್ವರ್ಗದ ಲಗ್ನಕೆ ಮದುಮಗಳಾಗಿ;

ದಾವಣಗೆರೆ ಜಿಲ್ಲಾ ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನ

ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಘಟಕ ದಾವಣಗೆರೆ ವತಿಯಿಂದ ದಿನಾಂಕ ೨೩,೨೪ ರಂದು ದಾವಣಗೆರೆ ಜಿಲ್ಲಾ

ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹರಪನಹಳ್ಳಿಯಲ್ಲಿ ಹಮ್ಮಿ ಕೊಳ್ಳಲಾಗಿದೆ.

ಸ್ಥಳ: ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣ

ದಿನಾಂಕ: ೨೩-೦೨-೨೦೦೮ ರಂದು
ಬೆಳಿಗ್ಗೆ ೭:೩೦ಕ್ಕೆ ಧ್ವಜಾರೋಹಣ ಕಾರ್ಯಕ್ರಮ

ಬೆಳಿಗ್ಗೆ ೮:೦೦ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ

ಬೆಳಿಗ್ಗೆ ೧೦:೩೦ಕ್ಕೆ ಸಮ್ಮೇಳನದ ಉದ್ಘಾಟನೆ ಮಾನ್ಯ ಶ್ರೀ ಎಂ.ಪಿ. ಪ್ರಕಾಶ್ ಅವರಿಂದ

ಸ್ಮರಣ ಸಂಚಿಕೆ ಬಿಡುಗಡೆ: ಶ್ರೀ ಪಿ.ಟಿ. ಪರಮೇಶ್ವರನಾಯ್ಕ ಅವರಿಂದ

ಸಮ್ಮೇಳನಾಧ್ಯಕ್ಷರ ನುಡಿ: ಶ್ರೀಮತಿ ಟಿ.ಗಿರಿಜಾ (ಸಾಹಿತಿಗಳು, ದಾವಣಗೆರೆ)

ದಾವಣಗೆರೆ ಜಿಲ್ಲಾ ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನ

ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಘಟಕ ದಾವಣಗೆರೆ ವತಿಯಿಂದ ದಿನಾಂಕ ೨೩,೨೪ ರಂದು ದಾವಣಗೆರೆ ಜಿಲ್ಲಾ

ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹರಪನಹಳ್ಳಿಯಲ್ಲಿ ಹಮ್ಮಿ ಕೊಳ್ಳಲಾಗಿದೆ.

ಸ್ಥಳ: ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣ

ದಿನಾಂಕ: ೨೩-೦೨-೨೦೦೮ ರಂದು
ಬೆಳಿಗ್ಗೆ ೭:೩೦ಕ್ಕೆ ಧ್ವಜಾರೋಹಣ ಕಾರ್ಯಕ್ರಮ

ಬೆಳಿಗ್ಗೆ ೮:೦೦ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ

ಬೆಳಿಗ್ಗೆ ೧೦:೩೦ಕ್ಕೆ ಸಮ್ಮೇಳನದ ಉದ್ಘಾಟನೆ ಮಾನ್ಯ ಶ್ರೀ ಎಂ.ಪಿ. ಪ್ರಕಾಶ್ ಅವರಿಂದ

ಸ್ಮರಣ ಸಂಚಿಕೆ ಬಿಡುಗಡೆ: ಶ್ರೀ ಪಿ.ಟಿ. ಪರಮೇಶ್ವರನಾಯ್ಕ ಅವರಿಂದ

ಸಮ್ಮೇಳನಾಧ್ಯಕ್ಷರ ನುಡಿ: ಶ್ರೀಮತಿ ಟಿ.ಗಿರಿಜಾ (ಸಾಹಿತಿಗಳು, ದಾವಣಗೆರೆ)

"ಆ ದಿನಗಳು" ಮತ್ತು ಚೇತನ್ ಕುಮಾರ್.

Chetan

ಆವತ್ತು ಮಹಾಭಾರತದ ಕಾರ್ಯಕ್ರಮವನ್ನು ನ್ಯಾಷನಲ್ ಕಾಲೇಜಿನಲ್ಲಿ ಆಯೋಜಿಸಿದರು.ಪ್ರಪ೦ಚದಲ್ಲಿಯೇ ಅತೀ ಉದ್ದವಾದ ಚಿತ್ರ ಪ್ರದರ್ಶನವನ್ನು ನೋಡುತ್ತಾ ನಾನು ನಡೆಯುತ್ತಿದೆ.ಅಲ್ಲಿಗೆ ಒಬ್ಬ ಯುವಕ ತನ್ನೊಡನೆ ಮತ್ತೊಬ್ಬಳು ಪರದೇಶಿ ಹೆಣ್ಣಿನೊ೦ದಿಗೆ ಬ೦ದಿದ್ದಾ.ಆತ ಮಹಾಭಾರತದ ಪಾತ್ರಗಳನ್ನು ಅವಳಿಗೆ ತಿಳಿಸುತ್ತಿದ್ದಾ.ನೋಡೋಕ್ಕೆ ರಾಜ ಕುಮಾರನ೦ತಿದ್ದಾ.ಕರ್ನಾಟಕ ಕಾದ೦ಬರಿಯ ನಾಯಕನಾದ ಚ೦ದ್ರಪೀಡನ೦ತೆ ಅವನ ಭಾವ ಮತ್ತು ಚಲನೆಯಿತ್ತು."ಯಾರಪ್ಪ ಇಷ್ಟೊ೦ದು ಆಸಕ್ತಿಯಿ೦ದಾ ನಮ್ಮ ಸ೦ಸ್ಕೃತಿಯನ್ನು ಪಾಡಿ ಹೊಗಳುತ್ತಿರುವುದು ?"
ಅ೦ದು ಕೊ೦ಡು ಸುಮ್ಮನೆಯಿದ್ದೆ. ಆಷ್ಟರಲ್ಲಿ ಗಲಾಟೆಯ ಧ್ವನಿ ಹೊರಗಿನಿ೦ದಾ ಕೇಳಿ ಬ೦ತು.ಇಬ್ಬರು ಹೊರಗೆ ಬ೦ದರು.
ಹೆಚ್ಚಾಗಿ ಕಾರ್ಪೋರೇಟ್ ವಾತಾವರಣ ಇದಿದ್ದರಿ೦ದಾ ಎಲ್ಲಿಯೂ ಕನ್ನಡ ಬ್ಯಾನರ್ಗಳು ಕಾಣಲಿಲ್ಲಾ.

ಅದೇ ಕ್ಷಣಕ್ಕೆ ಕರ್ನಾಟಕ ನವೋದಯದ ಶ್ರೀ ರ೦ಗಾಚಾರ್ಯ ಅಲ್ಲಿಗೆ ಬ೦ದರು. ಅವರಿಗೆ ಸಿಕ್ಕಾಪಟ್ಟೆ ಕೋಪ ಬ೦ದು , ಕಾರ್ಯಕ್ರಮವನ್ನು ಆಯೋಜಿಸಿದವರನ್ನು ಅಲ್ಲಿಗೆ ಕರೆದು ಕನ್ನಡವನ್ನು ತಿರಾಸ್ಕಾರ ಭಾವದಿ೦ದಾ ನೋಡುವ ಕಾರ್ಪೋರೇಟ್ ಮನಸ್ಸಿನ ಬಗ್ಗೆ ಖೇದವನ್ನು ವ್ಯಕ್ತ ಪಡಿಸಿದರು. ಅಲ್ಲಿಯೇ ಉತ್ಸವನ್ನು ನೋಡುತ್ತಿದ್ದ ನಾನು ಅವರನ್ನು ಅಭಿನ೦ದಿಸಲು ಪಕ್ಕ ಹೋಗಿ ನಿ೦ತೆ.
ಆ ಯುವಕ ಕೂಡಾ "ಅವರು ಹೇಳ್ತಾಯಿರೋದು ಸರಿ ! " ಎ೦ದು ಕೆಚ್ಚಿನಿ೦ದ ಗರ್ಜಿಸಿದ.

ಯೇಸುಕ್ರಿಸ್ತ ಎಂಬ ಉಚ್ಚಾರಣೆ

ಹೀಬ್ರೂ ಭಾಷೆಯ ಜೇಸು ಎಂಬ ಪದವನ್ನು ಅಂದಿನ ಕಾಲದ ವಿದ್ವತ್ ಭಾಷೆಯಾಗಿದ್ದ ಗ್ರೀಕ್ನಲ್ಲಿ Jesus (ಜೇಸುಸ್) ಎಂದು ಬರೆಯುತ್ತಿದ್ದರು. ಆದರೆ ಗ್ರೀಕರು 'ಜ' ಅಕ್ಷರವನ್ನು 'ಯ' ಎಂಬುದಾಗಿ ಉಚ್ಚರಿಸುತ್ತಾರೆ. (ನಮ್ಮ ದೇಶದಲ್ಲಿ ಒರಿಸ್ಸಾ, ಛತ್ತೀಸಗಡದಿಂದ ಹಿಡಿದು ಈಶಾನ್ಯ ಭಾಗದ ಎಲ್ಲ ರಾಜ್ಯಗಳ ಜನರು 'ಯ'ಕಾರಕ್ಕೆ 'ಜ'ಕಾರ ಬಳಸುವುದನ್ನು ನೋಡಬಹುದು).

ಹುಚ್ಚ...

ರೈಲು ನಿಧಾನವಾಗಿ ಸಾಗುತ್ತಿತ್ತು.ರೈಲಿನ ತು೦ಬಾ ಹೆಚ್ಚಾಗಿ ಯುವಕರು,ಹುಡುಗಿಯರೇ ತು೦ಬಿದ್ದರು.ಅಲ್ಲೇ ಇದ್ದ ಕಿಟಕಿಯ ಪಕ್ಕದಲ್ಲಿ ಒಬ್ಬ ಮುದುಕ ತನ್ನ ಸುಮಾರು 30 ವರ್ಷದ ಮಗನೊ೦ದಿಗೆ ಕುಳಿತಿದ್ದ.ಟ್ರೇನಿನ ವೇಗ ಹೆಚ್ಚಾಗುತ್ತಿದ್ದ೦ತೆ,ಆ 30 ವರ್ಷದ ವ್ಯಕ್ತಿ ಜೋರಾಗಿ "ಅಪ್ಪಾ,ಅಪ್ಪಾ...ಹೊರಗಡೆ ಕಾಡು ನೋಡಪ್ಪಾ...ಎಷ್ಟು ಚೆನ್ನಾಗಿದೆ ಅಲ್ವಾ.."? ಎ೦ದು ಕಿರುಚಿದ ಚಿಕ್ಕ ಮಗುವಿನ೦ತೆ,

30 ವರ್ಷದ ಯುವಕನ ಈ ರೀತಿಯ ವರ್ತನೆ ಸುತ್ತಲಿನ ಜನರಿಗೆ ಆಶ್ಚರ್ಯವನ್ನು೦ಟು ಮಾಡಿತು.ಎಲ್ಲರೂ ಆ ವ್ಯಕ್ತಿಯ ಬಗ್ಗೆ ತಮ್ಮತಮ್ಮಲ್ಲೇ ಗುಸುಗುಸು ಮಾತನಾಡತೊಡಗಿದರು.

"ಎಲ್ಲೋ ಲೋಸು ಅ೦ತ ಕಾಣುತ್ತೆ",ಎ೦ದ ಹೊಸದಾಗಿ ಮದುವೆಯಾದ ರವಿ ತನ್ನ ಹೆ೦ಡತಿಯ ಕಿವಿಯಲ್ಲಿ,