ದಿನಕ್ಕೊಂದು ಪದ
ಭಿತ್ತಿ (ನಾ)
೧. ಮುರಿಯುವುದು; ಒಡೆಯುವುದು; ಬೇರ್ಪಡಿಸುವುದು.
೨. ಚೂರು; ಮುರುಕು; ತುಂಡು.
೩. ಒಡೆದುಹೋಗಿರುವ ಅಥವಾ ಭಾಗವಾಗಿರುವ ಯಾವುದಾದರೂ ವಸ್ತು.
೪. ಬಿರುಕು; ಸೀಳು; ಛಿದ್ರ.
- Read more about ದಿನಕ್ಕೊಂದು ಪದ
- 5 comments
- Log in or register to post comments
ಭಿತ್ತಿ (ನಾ)
೧. ಮುರಿಯುವುದು; ಒಡೆಯುವುದು; ಬೇರ್ಪಡಿಸುವುದು.
೨. ಚೂರು; ಮುರುಕು; ತುಂಡು.
೩. ಒಡೆದುಹೋಗಿರುವ ಅಥವಾ ಭಾಗವಾಗಿರುವ ಯಾವುದಾದರೂ ವಸ್ತು.
೪. ಬಿರುಕು; ಸೀಳು; ಛಿದ್ರ.
ಕನ್ನಡ ತಾಯಿ
ಕನ್ನಡ ಕನ್ನಡ ಕನ್ನಡ
ನಿರ್ಲಕ್ಷಿಸದಿರು ಕನ್ನಡ
ಸಂರಕ್ಷಿಸು ಕನ್ನಡ
ಸ್ವರ್ಗಕ್ಕಿಂತ ಮಿಗಿಲು ತಾಯಿ , ತಾಯಿ ಭಾಷೆ ಕನ್ನಡ.
ಹಚ್ಚ ಹಸಿರಿನ ಉಡುಗೆಯುಟ್ಟು
ಮೇಘಗಳಾ ಮಾಲೆ ತೊಟ್ಟು
ಗಿರಿ ಶಿಖರಗಳ ಬಾಸಿಂಗವ ತೊಟ್ಟು
ಹರಿವ ನೀರಲಿ ಗೆಜ್ಜೆಯ ಸದ್ದಿನ ನಾದವನ್ನಿತ್ತು
ಉದಯ ಕಿರಣದ ಸಿಂಧೂರವ ತೊಟ್ಟು
ಪರಿಮಳದ ಹೂವ ಮುಡಿಗಿಟ್ಟು
(ಈ ಲೇಖನದ ಮೂಲ ಇಂಗ್ಲೀಶ್ ನಲ್ಲಿರುವುದರಿಂದ ಇದು ಪರಭಾಷೆಯವರನ್ನು ಉದ್ದೇಶಿಸಿ ಬರೆಯಲಾಗಿದೆ ಎಂದು ಅಥವಾ ಕನ್ನಡ ತಾಯಿನುಡಿಯಾದರೂ ಇಂಗ್ಲೀಶ್ ನಲ್ಲಿಯೇ ಓದಬಯಸುವವರಿಗೆಂದೇ ಬರೆಯಲಾಗಿದೆ ಎಂದು ಭಾವಿಸಬಹುದು. ಇದನ್ನು ನನ್ನ ಗೆಳೆಯನೊಬ್ಬ ಇ-ಮೇಲ್ ಮಾಡಿದ್ದರಿಂದಾಗಿ ಯಾರು ಬರೆದಿರುವುದು ಎಂದು ತಿಳೀದಿಲ್ಲ.
----1---------
ಇರುವುದಿದೊಂದೇ ಹೂ
ಬಾಡದಂತಿರಲಿ.
ಕುಲಕ್ಕೊಬ್ಬಳೇ ಮಗಳವಳು
ಎಂದೂ ನಗುತಿರಲಿ
ಕಿರಿಯವಳು ನಿಮಗೆ
ಅರಿಯದಾ ಹುಡುಗಿ.
ತಪ್ಪ ಮಾಡಿದರೆ ಮರೆತು
ಬಿಡಿ ಅಳಿಯರೇ...
------2------
ಅರಮನೆಯು ನನಗಿಲ್ಲ
ಿರುವ ಗುಡಿಸಲಿಗೆ ಇವಳೆ ರಾಣಿ.
ಹೂ ಇವಳು ನಿಮಗೆ
ಅರಸಿ ಎನಗೆ....
ತಪ್ಪಿರಲಿ, ಒಪ್ಪಿರಲಿ
ಒಪ್ಪುವೆನು ನಾನು.
ಕಣ್ಣರೆಪ್ಪೆಯಲಿಟ್ಟು
ಇವಳ ಕಾಯುವೆನು...
ನೀರು ಬರದಿರಲಿ
ನಡೆ ಸರಳ ನುಡಿ ಸರಳ
ಸುಕುಮಾರಿ ಅಚ್ಛ ಸುಂದರಿ
ಮುಡಿಯಲ್ಲಿ ಮುಡಿದಿಹಳು
ದುಂಡು ಮಲ್ಲೆಯ ಮೊಗ್ಗು
ಬೀಸುವ ಸುಳಿಗಾಳಿಗೆ
ಹರಿದಾಡಿಹವು ಮುಂಗುರುಳು
ಕಂಗಳವು ಹೊಳೆದಿಹವು
ಮುಂಗಾರಿನ ಕೋಲ್ಮಿಂಚಿನಂತೆ
ಬಳುಕು ಬಳ್ಳಿಯ ಹಾಗೆ ನಿಲುವು
ಮೊಗವದೋ ಅರಳಿದ ಕೆಂದಾವರೆಯು
ಜೋಡಿಸಿಟ್ಟಿಹ ಹಾಲಂದದ ಹಲ್ಲುಗಳು
ಮೂಗಿಗಿಟ್ಟ ಮುತ್ತಿನ ಮೂಗುತಿಯು
ಕಾಲಲ್ಲಿ ಗೆಜ್ಜೆ ಗಲ್-ಗಲ್
ಒಲವಿನ ಹೊಳೆ ಹುಟ್ಟಿ ನನ್ನೆದೆಯ ಒಳಗೆ
ಹರಿದು ಬರೊವರೆಗೂ ನಿನ್ನೆದೆಯ ಕಡೆಗೆ
ನನ್ನೊಡಲ ಕಡಲಾಗಿ ನಾ ಮಾಡಿಕೊಂಡು
ಕಾಯುವೆನಬ್ಬರಿಸದೆ ಶಾಂತಿಯಿಂದಿದ್ದುಕೊಂಡು
ಮೊದಲ ಮಳೆ ಬರುವುದನು ನೆಲವು ಕಾದಂತೆ
ಅರಳುವಾ ಹೂಗಳಿಗೆ ತುಂಬಿಗಳು ಕಾದಂತೆ
ತಿಂಗಳೊಡಮೂಡುವುದ ನೈದಿಲೆಯು ಕಾದಂತೆ
ನಿನಗಾಗಿ ಕಾಯುವೆನು ಬಾಳ ಹೊಸ್ತಿಲಲಿ ನಿಂತು
ನಾವೇಕೆ ಹೀಗೆ?
ನಾವೇಕೆ ಹೀಗೆ?
ಗುಡ್ಡ ಸುತ್ತಿ ಮೈಲಾರಕ್ಕೆ ಹೋದಹಾಗೆ? ಯಾವುದೇ ವಿಷಯವಿರಲಿ, ಆ ಪರಿಸ್ಥಿತಿಯ ಆಳ, ಅಗಲ, ವ್ಯಾಪ್ತಿ ಮತ್ತು ಪರಿಣಾಮಗಳನ್ನು ಗಮನಿಸದೇ ಸಾರ್ವತ್ರಿಕವಾಗಿ ಹೇರ ಹೋಗುವುದು?
ಹೋಗಲಿ. ಅದು ವ್ಯಕ್ತಿ, ಸಮುದಾಯ ಅಥವಾ ಪ್ರಾದೇಶಿಕ ಹಂತದಲ್ಲಿ ಪರಿಹಾರ ಕಂಡುಕೊಳ್ಳಬಲ್ಲ ಸಮಸ್ಯೆಯಾಗಿದ್ದರೆ ಅಡ್ಡಿ ಇಲ್ಲ.
ಆತ ಸಣ್ಣ ಕಾರ್ಖಾನೆಯೊಂದರಲ್ಲಿ ಕೆಲಸದಲ್ಲಿದ್ದ. ಮಹಾ ಜಿಪುಣ. ಪೈಸೆಗೆ ಪೈಸೆ ಲೆಕ್ಕ ಹಾಕಿದ. ಆದರೆ ಕೆಲಸದ ಸಮಯದಲ್ಲಿ ಕಾಫಿ, ತಿಂಡಿಗೆಂದು ಹಣ ಖರ್ಚು ಮಾಡುತ್ತಿದ್ದ. ಒಮ್ಮೆ ಅವನ ಆಪ್ತ ಗೆಳೆಯ ಸಲಹೆ ಮಾಡಿದ- "ಕೆಲಸದ ವೇಳೆ ಹೊರಗಿನ ಕಾಫಿ, ತಿಂಡಿ ತಿನ್ನುವುದಕ್ಕಿಂತ ಮನೆಯಿಂದಲೇ ಬುತ್ತಿ ತಂದರೆ ಉಳಿತಾಯವಾಲ್ಲವೇ?". ಆತನಿಗೆ ಹೌದು ಎಂದೆನಿಸಿತು.
ವೆಂಕಟರಮಣ ಸ್ವಾಮಿ ದೇವಸ್ಥಾನದ ಹೊರಭಾಗದಲ್ಲಿ ಹೂ ಮಾರುವ ಕಾಯಕ ಹೊತ್ತ ಹೂಗಾರನನ್ನು ನೋಡಿದಾಗಲೆಲ್ಲಾ ನನ್ನಲ್ಲಿ ಒಂದು ಕುತೂಹಲ ಮನೆ ಮಾಡುತಿತ್ತು. ಕಾರಣ ಆತನ ಕೈಯಲ್ಲಿ ಸದಾ ಯಾವುದಾದರೊಂದು ಕನ್ನಡ ಪುಸ್ತಕವಿರುತ್ತಿತ್ತು, ಬೆಳಗ್ಗೆ ೬ ರಿಂದ ರಾತ್ರಿ ೧೦ ವರೆಗೆ ಆತ ಅಲ್ಲಿರುತ್ತಿದ್ದ, ಆತನಿಲ್ಲದ ಸಮಯದಲ್ಲಿ ಆತನ ಅಮ್ಮ ಅಲ್ಲಿರುತ್ತಿದ್ದಳು.