ಕನ್ನಡ ತಾಯಿ ಭುವನೇಶ್ವರಿ

ಕನ್ನಡ ತಾಯಿ ಭುವನೇಶ್ವರಿ

ಬರಹ

ಕನ್ನಡ ತಾಯಿ

ಕನ್ನಡ ಕನ್ನಡ ಕನ್ನಡ
ನಿರ್ಲಕ್ಷಿಸದಿರು ಕನ್ನಡ
ಸಂರಕ್ಷಿಸು ಕನ್ನಡ
ಸ್ವರ್ಗಕ್ಕಿಂತ ಮಿಗಿಲು ತಾಯಿ , ತಾಯಿ ಭಾಷೆ ಕನ್ನಡ.

ಹಚ್ಚ ಹಸಿರಿನ ಉಡುಗೆಯುಟ್ಟು
ಮೇಘಗಳಾ ಮಾಲೆ ತೊಟ್ಟು
ಗಿರಿ ಶಿಖರಗಳ ಬಾಸಿಂಗವ ತೊಟ್ಟು
ಹರಿವ ನೀರಲಿ ಗೆಜ್ಜೆಯ ಸದ್ದಿನ ನಾದವನ್ನಿತ್ತು
ಉದಯ ಕಿರಣದ ಸಿಂಧೂರವ ತೊಟ್ಟು
ಪರಿಮಳದ ಹೂವ ಮುಡಿಗಿಟ್ಟು
ಏನೆಂದು ವರ್ಣಿಸಲಿ ತಾಯಿ ನಿನ್ನನು ....?

ಅಮ್ಮ ಎನ್ನುವ ಕಂದಮ್ಮನ ತೊದಲ ನುಡಿ
ಅವಳಿಗದೆ ಸಂತಸದ ಮೋಡಿ, ವಾತ್ಸಲ್ಯದ ನುಡಿ
ಕರುಣಾಮಯಿ ಈ ತಾಯಿ
ಇವಳೇ ಭುವನೇಶ್ವರಿ ಕನ್ನಡ ತಾಯಿ.

ನಿನ್ನ ಅಪೂರ್ವ ಮಕ್ಕಳಿವರು
ಜ್ಞಾನಪೀಠ ತಂದವರು
ನಿನ್ನನ್ನು ಸಾಹಿತ್ಯ ಸಂಗೀತದಲಿ ಗುಣಗಾನ ಮಾಡಿದವರು
ಇತರೆ ನಿನ್ನ ಮಕ್ಕಳಿಗೆ ಮಾದರಿಯಾದವರು.

ಜ್ಞಾನ- ಅಜ್ಞಾನದ ಬಲೆಯೊಳಗೆ
ಸಿಲುಕಿಹರು ನಿನ್ನ ಮಕ್ಕಳು
ಆಧುನಿಕತೆಯಲಿ ಎಲ್ಲಾ ಮರೆಯುತ್ತಲಿಹರು
ಮಮ್ಮಿ - ಡ್ಯಾಡಿ ಎಂದು ಕೋಲಾಹಲ ಎಬ್ಬಿಸುತಿಹರು.

ಉಳಿಸಬೇಕು ಕರುನಾಡಲಿ ತಾಯಿಯ ಸ್ಥಾನ
ಅವಳಾಗಬೇಕು ನಮ್ಮೆಲ್ಲರ ಪ್ರಾಣ
ಕೊಡಬೇಕೆಲ್ಲರು ಅವಳಿಗೆ ಸ್ಥಾನ
ಎಂದು ಸಿಗುವುದೋ ತಾಯಿ ನಿನಗೆ ಶಾಸ್ತ್ರೀಯ ಸ್ಥಾನಮಾನ.........

ಮಾವಿನಕೆರೆ ಪ್ರಶಾಂತ್