ಮಕ್ಕಳ ಬಗ್ಗೆ ಖಲೀಲ್‌ ಗಿಬ್ರಾನ್‌

ಮಕ್ಕಳ ಬಗ್ಗೆ ಖಲೀಲ್‌ ಗಿಬ್ರಾನ್‌

ಕಲ್ಪನಾ ಅವರು ಪ್ರೀತಿಯಿಂದ ಕಳಿಸಿದ ಖಲೀಲ್‌ ಗಿಬ್ರಾನ್‌ನ ಈ ಕವಿತೆಯ ಇಂಗ್ಲಿಷ್‌ ರೂಪಾಂತರ ಹೀಗಿದೆ:
Your children are not your children.
They come through you but not from you,
And though they are with you, yet they belong not to you.
You may give them your love but not your thoughts,
For they have their own thoughts.
You may house their bodies but not their souls,
For their souls dwell in the house of tomorrow, which you cannot visit, not even in your dreams.
You may strive to be like them, but seek not to make them like you.
For life goes not backwards nor tarries with yesterday.
You are the bows from which your children as living arrows are sent forth.

-Kahlil Gibran The Prophet

ಇದರ ಕನ್ನಡ ರೂಪಾಂತರ (ನನ್ನ ಮನೆಯವರ ಅನುವಾದ) ಹೀಗಿದೆ:

ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ
ಅವರು ನಿಮ್ಮೊಳಗಿಂದ ಬಂದಿರಬಹುದು, ಆದರೆ ನಿಮ್ಮಿಂದ ಅಲ್ಲ
ಅವರು ನಿಮ್ಮೊಂದಿಗಿದ್ದರೂ ಅವರು ನಿಮಗೆ ಸೇರಿದವರಲ್ಲ
ಅವರಿಗೆ ನಿಮ್ಮ ಪ್ರೀತಿ ನೀಡಬಹುದು, ಆದರೆ ನಿಮ್ಮ ವಿಚಾರಗಳನ್ನಲ್ಲ
ಏಕೆಂದರೆ, ಅವರಿಗೆ ತಮ್ಮದೇ ಆದ ವಿಚಾರಗಳಿವೆ
ನೀವು ಅವರ ದೇಹಗಳನ್ನು ರೂಪಿಸಬಹುದು, ಅವರ ಆತ್ಮಗಳನ್ನಲ್ಲ
ಏಕೆಂದರೆ, ಅವರ ಆತ್ಮಗಳು ನಾಳೆಗಳಲ್ಲಿರುತ್ತವೆ, ಅಲ್ಲಿಗೆ ನೀವು ಹೋಗಲಾರಿರಿ, ಕನಸಿನಲ್ಲಿ ಕೂಡಾ
ಅವರಂತಾಗಲು ನೀವು ಯತ್ನಿಸಬಹುದು, ಆದರೆ ಅವರನ್ನು ನಿಮ್ಮಂತೆ ಮಾಡುವುದು ಬೇಡ
ಏಕೆಂದರೆ, ಜೀವನ ಹಿಮ್ಮುಖವಾಗಿ ಹೋಗದು, ನಿನ್ನೆಗಳಲ್ಲಿ ನಿಲ್ಲದು
ನೀವು ಬಿಲ್ಲಿನಂತೆ, ಮಕ್ಕಳು ನಿಮ್ಮಿಂದ ಚಿಮ್ಮಿದ ಜೀವಂತ ಬಾಣಗಳು

(ಥ್ಯಾಂಕ್ಸ್‌ ಕಲ್ಪನಾ ಅವರೇ, ಅದ್ಭುತ ಕವಿತೆಯೊಂದನ್ನು ನೀಡಿದ್ದಕ್ಕೆ)

- ರೇಖಾ ಚಾಮರಾಜ

Rating
Average: 5 (1 vote)

Comments