’ಎಲೆಲ್ಲೊಕಸ್ತೂರಿ ಕ೦ಪು’ ಕಸ್ತೂರಿಗೆ ಇನ್ನೂರರ ಸಂಭ್ರಮ

’ಎಲೆಲ್ಲೊಕಸ್ತೂರಿ ಕ೦ಪು’ ಕಸ್ತೂರಿಗೆ ಇನ್ನೂರರ ಸಂಭ್ರಮ

’ಎಲೆಲ್ಲೊಕಸ್ತೂರಿ ಕ೦ಪು’ ಕಸ್ತೂರಿಗೆ ಇನ್ನೂರರ ಸಂಭ್ರಮ
ಕಸ್ತೂರಿವಾಹಿನಿಯಲ್ಲಿ ಪ್ರ್ರಸಾರವಾಗುತ್ತಿರುವ ’ ಕಸ್ತೂರಿ’ಗೆ ೨೦೦ ರ ಸಂಭ್ರಮ. ರವಿ ಗರಣಿ ಅವರ ನಿರ್ದೇಶನದ ’ ಕಸ್ತೂರಿ’ಎ೦ದರೆ ಸಾಕು ಮನೆ ಮ೦ದಿಯೆಲ್ಲಾ ಕೆಲಸ ಕಾರ್ಯ ಮೂಲೆಗೊತ್ತಿ ಟಿವಿ ಮುಂದೆ ಹಾಜರ್ . ಈಗಾಗಲೇ ಜನಪ್ರಿಯತೆಗಳಿಸಿರುವ ಕಸ್ತೂರಿ ಧಾರಾವಾಹಿಯ ೨೦೦ನೇ ಸಂಚಿಕೆ ಇದೇ ಜುಲೈ ೧೦ರಂದು ಪ್ರಸಾರವಾಗುತ್ತದೆ. ಅಕ್ಕ ತಂಗಿಯರಾದ ಕಸ್ತೂರಿ ಹಾಗೂ ಕಲ್ಯಾಣಿಯರ ಜೀವನದಲ್ಲಿ ಬಂದು ಹೋಗುವ ಘmನೆಗಳನ್ನು ಆದರಿಸಿ,ಜನಮಾನಸದಲ್ಲಿಹೊಸ ಅನುಭವ ನೀಡುವಲ್ಲಿ ಗರಣಿ ಯಶ್ವಿಸಿಯಾಗಿದ್ದಾರೆ.
ಸೇವೆಯಲ್ಲಿ ನರ್ಸ್ ಆಗಿದ್ದ ಕಸ್ತೂರಿ, ತನ್ನ ಆರೈಕೆಯಲ್ಲಿಯೇ ಕೊನೆಯುಸಿರೆಳೆದ ಶ್ರೀವಿದ್ಯಾ ಬಯಕೆಯಂತೆ,ಆಕೆಯ ಶ್ರೀಮಂತ ಪತಿ ವಿಶ್ವನಾಥ್‌ನನ್ನು ಮದುವೆಯಾಗುವುದು ಆಕಸ್ಮಿಕ !.. ತನ್ನ ತ೦ಗಿಯ ಬದುಕು ಸರಿಪಡಿಸಲು ಹೋಗುವುದು ಅನಿವಾರ್ಯ! ಆದರೆ ತನ್ನ ತಂಗಿ ಕಲ್ಯಾಣಿ ಮದುವೆಯಾಗಿರುವ ಕಾರ್ತಿಕ್ , ವಿಶ್ವನಾಥ್, ಹಾಗೂ ಶ್ರೀ ವಿದ್ಯಾರ ಮಗ ಎಂಬುವುದು ಅರಿವಾದಾಗ ಆಕೆಯ ಮತ್ತು ವಿಶ್ವನಾಥನ ಮದುವೆ ಮುಗಿದು ಹೋಗಿರುತ್ತದೆ!...
ಇದು ದೈವಸಂಕಲ್ಪ ಎಂದು ಹೊಂದಿಕೊಂಡು ಹೋಗ್ತುತಾರೆ ಅತ್ತೆಸೊಸೆಯರಾದ ಅಕ್ಕ ತಂಗಿಯರು!... ಆದರೆ ಅವರ ವಾತ್ಸಲ್ಯದ ಬಂಧವನ್ನು ಮುರಿಯಲು ಅದೆಷ್ಟೆ ಪ್ರಯತ್ನ ಸಾಗಿಂi ಇದೆ!...
ಈ ಪಾತ್ರಕ್ಕಾಗೇ ನಾನು ಹುಟ್ಟಿದೆನಾ ಎಂದು ಭಾವುಕರಾಗಿರುವ ’ಕಸ್ತೂರಿ’ ಪಾತ್ರಧಾರಿಯಾದ ಸಿಂಧು ಮನೋಹರ್‌ರವರು ಈ ಪಾತ್ರ ನನ್ನ ವ್ಯಕ್ತಿತವನ್ನು ಬದಲಿಸುತ್ತಿದೆ ಎನ್ನುತಾರೆ.
ಧಾರಾವಾಹಿಯ ನಿರ್ಮಾಪಕರೂ ಆಗಿರುವ ರವಿ.ಆರ್ ಗರಣಿಯವರು ಕಾವ್ಯಾಂಜಲಿ ನನಗೆ ತುಂಬಾ ಹೆಸರು ತಂದು ಕೊಟ್ಟಿರಬಹುದು.ಆದರೆ ನನಗೆ ತುಂಬಾ ತ್ರುಪ್ತಿ ಕೊಟ್ಟಂತಹ ಧಾರಾವಾಹಿ... ಈ ’ಕಸ್ತೂರಿ’ ಈಗಾಗಲೇ ಅದು ಅತ್ಯಂತ ಜನಪ್ರೀಯವಾಗಿದೆ,ಇದಕ್ಕಾಗಿ ವೀಕ್ಷಕರಿಗೆ ನಾನು ಚಿರರುಣಿಯಾಗಿದ್ದೆನೆ ಎಂದಿದ್ದಾರೆ.
ಆಶೋಕ್ ಕುಮಾರ್ ಚಿತ್ರಕಥೆ ಬರೆದಿದ್ದು ಎಂ. ಎಲ್‌ಪ್ರಸನ್ನ ಸ೦ಭಾಷಣೆ, ವಿ ಮನೋಹರ್ ಸಾಹಿತ್ಯ ಸಂಗೀತವಿದೆ. ಮೇಘ ಶ್ರೀ ಭಾಗವತ್, ಚಂದ್ರಕಲಾ ಮೋಹನ್ ,ಶ್ರೀಕಾಂತ್‌ಹೆಬ್ಲಿಕರ್, ಕ್ರಷ್ಣ್ಶ ಅಡಿಗ, ಮುಂತಾದವರ ತಾರಾಗಣವಿದೆ. ಹಾಗೂ ಕೆ.ಶಶಿಧರ್‌ರವರ ಛಾಯಾಗ್ರಾಹಣವಿದೆ.

Rating
No votes yet