ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪ್ರಸಾದ್ ಹೆಗ್ಡೆ

ಮೊನ್ನೆ ಅಸ್ತೆ S.L. ಬೈರಪ್ಪ ಅವರ "ವಂಶವೃಕ್ಷ" ಓದಿ ಮುಗಿಸಿದೆ..ಅದ್ರೆ ಏಕೋ ಏನು ನನಗೆ ಬೈರಪ್ಪನವರು ಕತ್ಯಯಿನಿ ಪತ್ರಕ್ಕೆ ಮೋಸ ಮಾಡಿದಂಗೆ ಅನಿಸುಥ ಇದೆ..ಏಕೆಂದರೆ ಪಾಪ,ಅವಳು ತನ್ನ ಯೌವನದಲ್ಲೇ ಗಂಡನನ್ನು ಕಳೆದುಕೊಂಡು,ನಂತರ ಅವಳು ರಾಜನನ್ನು ಮದುವೆ ಆಗಿದ್ದು ನನಗೆ ಸರಿ ಅನಿಸಿತ್ತು.

ತಲುಪಿದೆನೆ?

 

ಸಿಡ್ನಿಗೆ ಬಂದ ಮರುದಿನವೇ ಕೆಲಸದಲ್ಲಿ ತೊಡಗಿಕೊಂಡೆ. ಒಂದು ವಾರ ನೋಡ ನೋಡುತ್ತಲೇ ಜಾರಿ ಹೋಗಿತ್ತು. ಆದರೂ ಸಿಡ್ನಿ ತಲುಪಿದ್ದೇನೆ ಅನಿಸುತ್ತಿಲ್ಲ. ಇನ್ನೂ ಬೆಂಗಳೂರಿನಲ್ಲಿರುವಂತೇ.

ಎಲೆ

ಎಲೆ
ನೀನೇಕೆ ನಡುಗುವೆ
ಬೀಸುವ ಗಾಳಿಗೆ ತಲೆ ಬಾಗಿ ನಡೆದರೆ
ನಡುಗಬೇಕಿಲ್ಲವಲ್ಲೆ

ನಿನ್ನ ಈ ನಡು-ಗುವ
ಬಳುಕುವ
ಬಡನಡುವನು ನೋಡಿ
ಗಾಳಿಯೇ ನಾಚಿ ಓಡಿ ಹೋಯಿತಲ್ಲೆ

ಎಲೆ

ಎಲೆ
ನೀನೇಕೆ ನಡುಗುವೆ
ಬೀಸುವ ಗಾಳಿಗೆ ತಲೆ ಬಾಗಿ ನಡೆದರೆ
ನಡುಗಬೇಕಿಲ್ಲವಲ್ಲೆ

ನಿನ್ನ ಈ ನಡು-ಗುವ
ಬಳುಕುವ
ಬಡನಡುವನು ನೋಡಿ
ಗಾಳಿಯೇ ನಾಚಿ ಓಡಿ ಹೋಯಿತಲ್ಲೆ

ಮಹಾ ದರ್ಶನ : ನಿಜವಾಗಿಯೂ ದಿವ್ಯ ದರ್ಶನ

ಇತ್ತೀಚೆಗೆ ನಾನು ದೇವುಡು ನರಸಿಂಹ ಶಾಸ್ತ್ರಿಯವರು ಬರೆದ ಕೊನೆಯ ಗ್ರಂಥವಾದ ’ಮಹಾ ದರ್ಶನ’ ವನ್ನು ಓದಿದೆ. ದೇವುಡು ರವರ ’ಮಹಾ ಕ್ಷತ್ರಿಯ’ ಕೃತಿಗೆ ೧೯೬೨ ರ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ’ಮಹಾ ಬ್ರಾಹ್ಮಣ’ ಅವರ ಇನ್ನೊಂದು ಗ್ರಂಥ.

ಹೆಸರು ಕೆಡಿಸಿ-ಹೆಸರುವಾಸಿಯಾಗಿ!!

೪೦ ವರ್ಷದಿಂದ ನಾನೂ ನಮ್ಮ ಕಂಪೆನಿಗೆ ಮಣ್ಣು ಹೊರುತ್ತಿದ್ದೇನೆ.
ನನಗಿಂತ ಸಣ್ಣವರೆಲ್ಲಾ ಬಾಸ್ ಗಳಾಗಿ ಬಂದು ಮೆರೆದು ಹೋದರು.ನಾನೂ ನಿವೃತ್ತನಾಗುವ
ಮೊದಲು 'ಬಾಸ್'ಖುರ್ಚಿ ಏರಬೇಕು.ಇದು ನನ್ನ ಆಸೆ ಅಲ್ಲ."ಐದು ಕೋಟಿ ಜನತೆಯ"(ಲ್ಲಿ ಒಬ್ಬರಾದ ನನ್ನಾಕೆಯ) ಆಸೆ.

ಮಾತಾಡ್ ಮಾತಾಡ್ ಮಲ್ಲಿಗೆ

ಮಲ್ಲಿಗೆ ಇಂಗ್ಲೆಂಡಿನಲ್ಲೂ ಮಾತಾಡಿತು!ಜೊತೆಗೆ ನಾಗತಿಹಳ್ಳಿಯವರೂ ಮಾತಾಡಿದರು!! ಹಾಡುಗಳನ್ನೆಲ್ಲ (ಒಂದನ್ನು ಬಿಟ್ಟು)ಕತ್ತರಿಸಿ, ಇಂಗ್ಲೀಷ್ ಅನುವಾದಗಳನ್ನು (subtitles) ಸೇರಿಸಿ, ಕನ್ನಡಿಗರು-ಯು.ಕೆಯವರು ಇಂಗ್ಲೆಂಡಿನ ರೆಡ್ದಿಂಗ್ನಲ್ಲಿ ನಮಗೆಲ್ಲ ತೋರಿಸಿದರು.

ನಾನೀಗ ಬರೆಯಹೊರಟಿರುವುದು ಖಂಡಿತ ಚಿತ್ರದ ವಿಮರ್ಶೆಯಲ್ಲ. ಇದು ಅನಿವಾಸಿಯಲ್ಲದ ಕನ್ನಡಿಗರಿಗೆ ಹಳೆಯ ಚಿತ್ರ ಮತ್ತು ನಾಗತಿಹಳ್ಳಿಯವರು ಹೇಳಿದಂತೆ ಗಲ್ಲಾಪೆಟ್ಟಿಗೆಯಲ್ಲಿ ಅಷ್ಟೇನೂ ಓಡಿರದ ಚಿತ್ರ. ಈಗಾಗಲೇ ಈ ಚಿತ್ರದ ಬಗ್ಗೆ ಒಳ್ಳೆಯ ಮತ್ತು ಕೆಟ್ಟ ವಿಮರ್ಶೆಗಳು ಪತ್ರಿಕೆಗಳಲ್ಲಿ, ಬ್ಲಾಗುಗಳಲ್ಲಿ ಬಂದಿವೆ.