ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಂಪದ ಸದಸ್ಯರ ಕೂಟ ಮತ್ತು "ಮುಖಾಮುಖಿ" ಚಿತ್ರದ ಪ್ರದರ್ಶನ

ಸಂಪದಿಗರೆ,

ಇದೇ ಶನಿವಾರ ಸುಚಿತ್ರದಲ್ಲಿ 'ಮುಖಾಮುಖಿ' ಚಲನಚಿತ್ರದ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಸಂಪದದ ಸದಸ್ಯರೇ ಆದ ಅನಿವಾಸಿ ಚಿತ್ರಕತೆ ಬರೆದು, ಈ ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ. 'ಮುಖಾಮುಖಿ' ಚಿತ್ರಕ್ಕೆ ೨೦೦೬ನೇ ಸಾಲಿನ 'ಅತ್ಯುತ್ತಮ ಸಂಭಾಷಣೆ' ಪ್ರಶಸ್ತಿ ಸಿಕ್ಕಿದೆ. ಈ ಚಿತ್ರದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಹೆಸರಾಂತ ನಟ ದತ್ತಣ್ಣ, ಕಿರುತೆರೆಯಲ್ಲಿ ಹೆಸರುವಾಸಿಯಾದ ದಿಲೀಪ್ ರಾಜ್, ಶ್ವೇತಾ ಶ್ರೀವಾತ್ಸವ್ ಇನ್ನಿತರರು ನಟಿಸಿದ್ದಾರೆ. ಕನ್ನಡದಲ್ಲಿ ಅತ್ಯಂತ ಕಲಾತ್ಮಕ ಛಾಯಾಗ್ರಾಹಕರು ಎಂದೇ ಹೆಸರು ಪಡೆದ ರಾಮಚಂದ್ರ ಐತಾಳರು ಈ ಚಿತ್ರದ ನಿರ್ಮಾಣದಲ್ಲಿ ಕೈಗೂಡಿಸಿದ್ದಾರೆ.

ಈ ಚಿತ್ರದ ಬಗ್ಗೆ ಹೆಚ್ಚಿನ ವಿವರಗಳನ್ನು http://mukhamukhi.anivaasi.net ತಾಣದಲ್ಲಿ ನೋಡಬಹುದು. ಚಿತ್ರದ ಡ್ಯೂರೇಷನ್ - ೨ ಗಂಟೆ.

ಈ ಪ್ರದರ್ಶನಕ್ಕೆ ನೀವು ನಿಮ್ಮ ಜತೆಯವರೊಂದಿಗೆ ಬಂದು ಚಿತ್ರವನ್ನು ನೋಡಿ, ತನ್ಮೂಲಕ ಸಂಪದವನ್ನು ಬೆಂಬಲಿಸಬೇಕೆಂದು ಕೋರುತ್ತೇವೆ. ಸಂಪದ ನಡೆಸಲು ಹಾಗು ಬೆಳೆಸಲು ಸಂಪದ ಫೌಂಡೇಶನ್ನಿಗೆ ಕಾಣಿಕೆಯನ್ನು ಇದೇ ಪ್ರದರ್ಶನದ ಹೊತ್ತಿನಲ್ಲಿ ಸದಸ್ಯರು ನೀಡಬಹುದು.

ಇದೇ ದಿನ, ಸಿನೆಮಾ ಪ್ರದರ್ಶನದ ನಂತರ ಸಂಪದದ ಸದಸ್ಯರಿಗಾಗಿ ಒಂದು ಪುಟ್ಟ ಕೂಟವೂ ಏರ್ಪಡಿಸಲಾಗಿದೆ. ಇದರಲ್ಲಿ ನೀವೂ ಭಾಗವಹಿಸಲು ಕೋರುತ್ತೇವೆ.

ಝೆನ್ - ನಿಮಗೆಷ್ಟು ಗೊತ್ತು೟

ಯಾವುದೇ ಆಧಾರಗ್ರಂಥವಿಲ್ಲದೇ ಕೇವಲ ಮುಂಡಿಗೆ, ಒಗಟು, ಪ್ರಸಂಗಗಳ ಪರಂಪರೆಯನ್ನು ಮಾತ್ರ ಹೊಂದಿರುವ ಝೆನ್ ಯಾವುದೇ ಪೂರ್ವಾಗ್ರಹವಿಲ್ಲದೇ ಜೀವನಕ್ಕೆ ಹೊಂದಿಕೊಳ್ಳುತ್ತದೆ. ಆದರೆ ಯಾವ ಹಂತದಲ್ಲೂ ಸಹ ಹೀಗೆ ಜೀವಿಸು ಎಂಬುದಾಗಿ ಹೇಳುವುದಿಲ್ಲ.

ಕಡೆಯ ಸಲ

ಸಣ್ಣವನಿದ್ದಾಗಲೇ ಅಲೀಬಾಬಾ ನಾಟಕಕ್ಕೆ ನನ್ನನ್ನು ಸೇರಿಸಿಕೊಂಡು ಆಡಿಸಿದ ಪ್ರೇಮಾ ಕಾರಂತ್ ಈವತ್ತು ಕೊನೆ ಉಸಿರೆಳೆದರು... ಒಂದೆರಡು ವಾರದಿಂದ ಬಳಲುತ್ತಿದ್ದರು... ಆಸ್ಪತ್ರೆಯಲ್ಲಿದ್ದರು...

ಈ ಸಲ ಬೆಂಗಳೂರಿಗೆ ಬಂದಾಗ ಅವರ ಜತೆ ಗಂಟೆಗಟ್ಟಲೆ ಮಾತಾಡಿ ವಿಡಿಯೋ ಇಂಟರ್‌ವ್ಯೂ ಮಾಡಬೇಕು ಅಂತ ಲೆಕ್ಕ ಹಾಕಿದ್ದೆ. ಬೆಂಗಳೂರಿಗೆ ಬಂದಿಳಿದ ದಿನ ಫೋನ್ ಮಾಡಿದ್ದೆ. "ಯಾಕೋ ತುಂಬಾ ಬ್ರೆತ್‌ಲೆಸ್ ಆಗತ್ತೆ. ಜಾಸ್ತಿ ಮಾತಾಡಕ್ಕೆ ಆಗಲ್ಲ... ಈವತ್ತು ಆಸ್ಪತ್ರೆಗೆ ಹೋಗಿ ಒಂದೆರಡು ದಿನ ಇದ್ದು ಕೆಲವು ಟೆಸ್ಟ್ ಮಾಡಿಸಿಕೊಂಡು ಬರುತೀನಿ... ಆಮೇಲೆ ಬಾ... ಮಾತಾಡೋಣ ಅಂದಿದ್ದರು."

ಸಂಜೆ ಹೊತ್ತಿಗೆ ಬೆಂಗಳೂರಿನ ಕಲಾಕ್ಷೇತ್ರದ ಹಿಂದಿರುವ ಸಂಸ ಬಯಲು ರಂಗಮಂದಿರಕ್ಕೆ ಹೋಗಿ ಕಡೆ ಸಲ ನೋಡಿ ಬಂದೆ...

ಪ್ರೇಮಾಕಾರಂತರಿಗೊಂದು ನುಡಿನಮನ

ಕನ್ನಡ ರಂಗಭೂಮಿಗೆ ಹೊಸ ಆಯಾಮ ನೀಡುವಲ್ಲಿ ಹಲವು ರಂಗಕರ್ಮಿಗಳ ಶ್ರಮ ಸ್ಮರಣೀಯ. ಅಂಥಹವರಲ್ಲೊಬ್ಬರು ಕಾರಂತರು. ಅವರ ಪತ್ನಿಯಾಗಿ, ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ರಂಗಕರ್ಮಿಯಾಗಿ ಜೀವತೆಯ್ದವರು ಪ್ರೇಮಾಕಾರಂತರು. ಇಂದವರು ನಮ್ಮನ್ನಗಲಿದ್ದಾರೆ.

ಕುದಿ, ಚಳಿ, ಮಳೆ

ಒಳಗೊಳಗೆ ಏನೋ ಕುದಿ
ಏನನ್ನಾದರೂ ಮಾಡಬೇಕೆಂದು
ಹೊರಗೆ ತುಂಬ ಚಳಿ-ಮಳೆ
ಕುದಿಯನ್ನು ಆರಿಸಿ ಏನೂ ಮಾಡಕ್ಕೆ ಬಿಡಲ್ಲ
ಹೆಂಗೆ ತಪ್ಪಿಕೊಳ್ಳದು ಈ ಚಳಿ-ಮಳೆಯಿಂದ?
ಚಳಿಲಿ ನಡುಗಿ, ಮಳೆಯಲ್ಲಿ ನೆನ್ದು
ಆಮೇಲೂ ಕುದಿ ಇರುತ್ತಾ ನೋಡ್ತಿನಿ !!  :)

ದ್ವೈತ, ಅದ್ವೈತ, ವಿಶಿಶ್ಟಾದ್ವೈತ - ಯಾವುದು ಸರಿ?

ದ್ವೈತ - ಜೀವಾತ್ಮ, ಪರಮಾತ್ಮ ಬೇರೆ, ಬೇರೆ.
ಅದ್ವೈತ - ಎರಡೂ ಒಂದೇ.
ವಿಶಿಶ್ಟಾದ್ವೈತ - ?? ಏನು ಹೇಳುತ್ತದೆ?

ಈ ಮೂರು ತತ್ವಗಳಲ್ಲಿ ಯಾವುದು ಸರಿ?

ದ್ವೈತಿಗಳು ಸಮರ್ಥಿಸುವುದೇನೆಂದರೆ, ಪರಮಾತ್ಮ ಸರ್ವ ಸಮರ್ಥ. ಹಾಗಿದ್ದು ನಾವೇ ಬ್ರಹ್ಮ ಎಂಬುದು ಸರಿಯೇ? ಎಂದು. ಹಾಗೆಯೇ ಅವರು ತಾರತಮ್ಯವಾದವನ್ನು ಒಪ್ಪುತ್ತಾರೆ.

ಬಸವಣ್ಣ

ಕಲ್ಲ ದೇವರು ದೇವರಲ್ಲ, ಮಣ್ಣ ದೇವರು ದೇವರು ದೇವರಲ್ಲ, ಮರ ದೇವರು ದೇವರಲ್ಲ, ಪಂಚಲೋಹದಲ್ಲಿ ಮಾಡಿದ ದೇವರು ದೇವರಲ್ಲ, ಸೇತು ರಾಮೇಶ್ವರ, ಗೋಕರ್ಣ, ಕಾಶಿ, ಕೇದಾರ ಮೊದಲಾಗಿ ಅಷ್ಟಾಷಷ್ಟಿ ಕೋಟಿ ಪುಣ್ಯಕ್ಷೇತ್ರಗಳಲ್ಲಿನ ದೇವರು ದೇವರಲ್ಲ, ತನ್ನ ತಾನರಿದು ತಾನಾರೆಂದು ತಿಳಿದೆಡೆ ತಾನೇ ದೇವ ನೋಡಾ ಅಪ್ರಮಾಣ, ಕೂಡಲಸಂಗಮದೇವ...