ಕನಸು ಭವಿಷ್ಯದ ಸೂಚಕ ಖಂಡಿತಾ ಹೌದು

ಕನಸು ಭವಿಷ್ಯದ ಸೂಚಕ ಖಂಡಿತಾ ಹೌದು

ನನ್ನ ಹಿಂದಿನ ಬರಹ ಇಲ್ಲಿದೆ
http://www.sampada.net/blog/roopablrao/18/06/2008/9343#comment-21111

ನಮ್ಮ ಸಿಸಿಲಿ ಮೇಡಮ್ ನನ್ನ ಕನಸಿಗೆ ಹೀಗೆ ಅರ್ಥ ಹೇಳಿದ್ದರು

"ಮಡಿವಾಳ ಪೋಲಿಸ್ ಸ್ಟೇಷನ್ ಎದುರುಗಡೆ ಮಸೀದಿಯೊಂದಿದೆ "

ಪೋಲಿಸ್ ಸ್ಟೇಶನ್ ಸಾವಿನ ಸೂಚಕವಂತೆ ನಾನು ಅದರ ಎದುರಿರುವ ಮಸೀದಿಯೊಂದಕ್ಕೆ ಹೋದದ್ದು ಸಾವನ್ನು ಎದುರಿಸಿ ಮುನ್ನುಗ್ಗುತ್ತೇನೆ ಎಂದು ಅರ್ಥ

"ಆದರೆ ಮಸೀದಿಯ ಒಳಗಡೆ ಚರ್ಚಿನ ವಾತಾವರಣವಿದೆ . "
ನನಗೆ ಜಾತಿ ಧರ್ಮ ಬೇಧವಿಲ್ಲದೆ ಜನ ಸಹಾಯ ಮಾಡುತ್ತಾರೆ
ಅಲ್ಲಿ ಶ್ವೇತ ನಿಲುವಂಗಿ ಧರಿಸಿದ ಜನ ಓಡಾಡುತ್ತಿದ್ದಾರೆ."

ಶ್ವೇತ ನಿಲುವಂಗಿ ಧರಿಸಿದವರು ಎಂದರೆ ಫಾದ್ರ್ಗಿಗಳು (ಫಾದ್ರಿಗಳು, ಅರ್ಚಕರು, ದೇವರನ್ನು ಪೂಜಿಸುವವರಾಗಬಹುದು) ಇವರಲ್ಲಿ ಯಾರು ಕನಸಲ್ಲಿ ಬಿದ್ದರೂ ಜೀವನ ಹೋರಾಟಮಯವಾಗಿರುತ್ತದೆ ಎಂದರ್ಥ

"ಯಾರೊ ನನಗೆ ಪವಿತ್ರ ಸ್ನಾನ ಮಾಡಲು ಹೇಳುತ್ತಾರೆ. "

ಪವಿತ್ರ ಸ್ನಾನ ಎಂದರೆ ಹೊಸ ಜನ್ಮ್ದದ ಸೂಚಕ. ಅಂದರೆ ಮುಂದೆ ಕಾಣುವುದೆಲ್ಲಾ ನನಗೆ ಹೊಸಬದುಕಿನ ಸೂಚಕವಾಗಿರುತ್ತದೆ

ಅಲ್ಲೊಂದೆಡೆ ನನಗೆ ತಲೆಯ ಮೇಲೆ ನೀರನ್ನು ಎರೆಚಿ ನಂತರ ಒಳಗೆ ಬಿಡುತ್ತಾರೆ.
"ಅದೊಂದು ರೀತಿಯ ಹಜಾರ . ಹಜಾರದ ಮೂಲಕ ಕಾರಿಡಾರ್ ಪ್ರವೇಶಿಸುತ್ತಿದ್ದಂತೆ ಯಾರೋ ನನಗೆ ತೀರ್ಥ ಕೊಡುತ್ತಾರೆ."
ತೀರ್ಥದ ಅರ್ಥ ನನಗೆ ಚೈತನ್ಯ ಕೊಡುತ್ತಾರೆ ಎಂದು

"ಸ್ವಲ್ಪ ಮುಂದೆ ನಡೆದಂತೆ ಸುಮಾರು ಕೊಠಡಿಗಳು ಕಾಣುತ್ತವೆ . ಸುತ್ತಲೂ ಗಾಡಾಂಧಕಾರ . ಅಷ್ಟರಲ್ಲಿ ಯಾರೊ ನನ್ನ ಕೈಗೆ ಕ್ಯಾಂಡೆಲ್ ಕೊಡುತ್ತಾರೆ.
ಕ್ಯಾಂಡೆಲ್‌ನ ಸಹಾಯದಿಂದ ನಾನು ಮುನ್ನಡೆಯುತ್ತೇನೆ. "

ಕತ್ತಲಾದ ಬಾಳಿಗೆ ಯಾರೋ ಒಬ್ಬರು ಬೆಳಕಿನಂತೆ ಬಂದು ಸಹಾಯ ಮಾಡುತ್ತಾರೆ

"ಸುತ್ತಲೂ ಕ್ಯಾಂಡೆಲ್‍ನ ಪ್ರಕಾಶ. ನಾನು ಪ್ರತಿಯೊಂದು ಕೊಠಡಿಯನ್ನು ಪ್ರವೇಶಿಸುತ್ತಿದ್ದಂತೆ ಕತ್ತಲಾಗಿದ್ದ ಕೋಣೆಯಲಿ ಒಂದು ಕ್ಯಾಂಡೆಲ್‍ ಇಟ್ಟು ಬರುತ್ತಿರುತ್ತೇನೆ. ಅದು ಒಂದೇ ಸಮನೆ "

ಹೀಗೆ ಪಡೆದ ಸಹಾಯವನ್ನು ನಾನು ಎಲ್ಲರಿಗೂ ಹಂಚುತ್ತಾ ಹೋಗುತ್ತೇನೆ . ಅದರ ಅರ್ಥ ಅಜ್ನಾನದ ಅಂಧಕಾರವನ್ನು ಹೋಗಲಾಡಿಸುತ್ತಾ ಜ್ನಾನದ ಬೆಳಕನ್ನು ಹಂಚುತ್ತಾ ಹೋಗುತ್ತೇನೆ

ಈಗ ನನ್ನ ಬದುಕಿಗೆ ಇದು ಹೇಗೆ ಪೂರಕವಾಗುತ್ತದೆ ಎಂದರೆ

ನಾನೀಗ ಒಂದು ವಿದ್ಯೆ ನೀಡುವ ಕೇಂದ್ರವನ್ನು ಆರಂಭಿಸಿದ್ದೇನೆ .
ಕೆಲಸವಿಲ್ಲ ಎನ್ನುವವರಿಗೆ ನಿಮ್ಮಂತಹ ಗೆಳೆಯ/ಗೆಳತಿಯರಿಂದ ಕೆಲಸ ಕೊಡಿಸಿದ್ದೇನೆ
ಈ ಹಾದಿಯಲ್ಲಿ ನನಗೆ ನೆರವಾದವರು ಬಹಳ ಮಂದಿ ಅವರು ಮುಸ್ಲಿಮ್ ಆಗಿರಬಹುದು, ಕ್ರಿಸಿಯನ್ ಆಗಿರಬಹುದು, ಅಥವ ನನ್ನಂತೆ ಹಿಂದೂ ವಾಗಿರಬಹುದು.

ಆದರೆ ಒಬ್ಬ ವ್ಯಕ್ತಿ ನನ್ನ ಈ ವೃತ್ತಿ ಬದುಕಿನಲ್ಲಿ ಬಹಳ ನೆರವನ್ನು ನೀಡಿದರು. ಆ ವ್ಯಕ್ತಿ ಎಲ್ಲರಿಗೂ ಗೊತ್ತಿರುವಂತಹವರು

ಅವರಿಗೆ ಕೊಟ್ಟ ಮಾತಿನಂತೆ ನಾನು ನಡೆಯುತ್ತಿದ್ದೇನೆ ಬಡವರಿಗೆ , ಕಷ್ಟದಲ್ಲಿ ಸಿಲುಕಿದ ಹೆಂಗಸರಿಗೆ ನನ್ನ ಕೈಲಾದಷ್ಟು ಸಹಾಯ ,ಮಾಡುತ್ತಿದ್ದೇನೆ.

ಬದುಕು ಹೋರಾಟವೇ ಹೌದು
ಇದು ಒಂದು ಹೊಸ ಜನ್ಮವೇ ಹೌದು . ಬೇರೆಯವರ ಮುಂದೆ ಕೆಲಸಕ್ಕಾಗಿ ಅಲೆಯುತ್ತಿದ್ದ ಆ ರೂಪ ಎಲ್ಲಿ . ಒಂದು ಇಪ್ಪತ್ತು ಜನಕ್ಕೆ ಕೆಲಸ ಕೊಟ್ಟು ಜನ್ಮ ಪಾವನವೆನಿಸಿಕೊಳ್ಳುತ್ತಿರುವ ಈ ರೂಪ ಎಲ್ಲಿ (ದಯವಿಟ್ಟು ಗಮನಿಸಿ ಈ ಮಾತಿನಲ್ಲಿ ಅಹಂಕಾರವಿಲ್ಲ)

ಇದು ನನ್ನ ಈಗಿನ ಬದುಕು.

--------------------------------------------********************************************

ಈಗಿನ ನನ್ನ ಬದುಕು ಐದಾರು ವರ್ಷದ ಹಿಂದೆಯೇ ನನಗೆ ಗೋಚರಿಸಿತ್ತು .

ಅದು ಹೇಗೆ ಎಂಬ ಪ್ರಶ್ನೆಗೆ ನಾನೆ ಕಂಡುಕೊಂಡಿರುವ ಸತ್ಯ

ಕನಸು ನಮ್ಮ ಮನಸಿನ ಒಂದು ಪ್ರತಿರೂಪ

ಸುಪ್ತಾವಸ್ತೆಯೇ ಕನಸು

ಆ ಸುಪ್ತ್ರಾವಸ್ತೆಯಲ್ಲಿ ಕೆಲವುಸಲ ಮುಂದಾಗಬಹುದ್ದಾದ್ದದ್ದೂ ಗೋಚರಿಸುತ್ತದೆ . ಅದು ಟೆಲಿಪತಿಯೋ ಅಥವ ಸುಪ್ತ ಶಕ್ತಿಯೋ ತಿಳಿಯದು.

ಎಷ್ಟೊ ಸಲ ಈಗ ನಮ್ಮ ಮುಂದೆ ನಡೆಯುತ್ತಿರುವುದು ನಾವು ಈಗಾಗಲೆ ನೋಡಿದಂತೆ ಅನಿಸುವುದು ಈ ಕಾರಣದಿಂದಲೇ ಅಲ್ಲವಾ ?

ಹಾಗಾಗಿ ಕನಸು ನಮ್ಮ ಆಲೋಚನೆಯ ಪ್ರತಿಬಿಂಬವಷ್ಟೆ ಅಲ್ಲ . ಮುಂದಾಗುವುದರ ಸೂಚಕವೂ ಹೌದು

ಕನಸನ್ನು ಅಸಂಭದ್ದ , ಜೋಕು, ಮಾನಸಿಕ ತೊಳಲಾಟ ಎನ್ನುವವರು ಏನನ್ನುತ್ತಾರೆ ನೋಡೋಣ

ಈಗ ಹೇಳಿ ಕನಸು ಭವಿಷ್ಯ್ದ ಸೂಚಕವಲ್ಲ ಅನ್ನುತ್ತೀರಾ?

Rating
No votes yet

Comments