ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ
ಕನಸು ಭವಿಷ್ಯ ಸೂಚಕವೇ?
ನನಗೆ ಸುಮಾರು ಐದು ವರ್ಷದ ಹಿಂದೆ ಸತತವಾಗಿ ಒಂದು ಹದಿನೈದು ದಿನ ಕನಸೊಂದು ಬೀಳುತ್ತಲೇ ಇತ್ತು.
ಆ ಕನಸು ಹೀಗಿತ್ತು
ಮಡಿವಾಳ ಪೋಲಿಸ್ ಸ್ಟೇಷನ್ ಎದುರುಗಡೆ ಮಸೀದಿಯೊಂದಿದೆ
ನಾನು ಯಾವುದೋ ಕಾರಣಕ್ಕೆ ಆ ಮಸೀದಿಯ ಒಳಗಡೆ ಹೋಗುತ್ತೇನೆ
- Read more about ಕನಸು ಭವಿಷ್ಯ ಸೂಚಕವೇ?
- 13 comments
- Log in or register to post comments
ರಾಹು-ಕೇತು ಕಾಟ, ಮತ್ತು ನವಗ್ರಹ ಸ್ತೋತ್ರ
ಚಕ್ರವತ್ಪರಿವರ್ತಂತೇ ದು:ಖಾನಿ ಚ ಸುಖಾನಿ ಚ ಅನ್ನೋದು ಸಂಸ್ಕೃತದ ಪ್ರಸಿದ್ಧ ಮಾತು. ಅಂದರೆ, ಸೋವು ನಲಿವುಗಳೆರಡೂ ಚಕ್ರದಂತೆ ಮತ್ತೆ ಮತ್ತೆ ತಿರುಗಿ ತಿರುಗಿ ಮರಳಿ ಮರಳಿ ಬರುತ್ತಿರುತ್ತವೆ ಎಂದರ್ಥ. ಚಕ್ರದಂತೆ ಬರೋದು ಬರೀ ಸುಖದು:ಖಗಳು ಮಾತ್ರ ಅಲ್ಲ ಅನ್ನೋದು ಮಾತ್ರ, ಚಿಕ್ಕ ಮಕ್ಕಳಿಗೂ ಗೊತ್ತಿರೋ ಸಂಗತಿ. ಹಗಲು ರಾತ್ರಿಯ ಚಕ್ರಕ್ಕಿಂತ ಬೇಕೇ ಮರಳಿ ಮರಳಿ ಸುತ್ತುವ ಚಕ್ರ? ಅದೇ ರೀತಿ ಆಕಾಶದಲ್ಲಿ ಇನ್ನೊಂದು ಕಾಲಕಾಲಕ್ಕೆ ಮರಳಿ ಬರೋ ಚಕ್ರ ಇದೆ - ಆದರೆ ಇದು ಸಾಧಾರಣವಾಗಿ ಎಲ್ಲರಿಗೂ ತಿಳಿದಿರಲ್ಲ, ಅಷ್ಟೇ. ಇದೇ ಗ್ರಹಣ ಚಕ್ರ (Saros cycle- ಸೆರಾಸ್ ಚಕ್ರ. ಇದಕ್ಕೆ ನಮ್ಮ ದೇಶದಲ್ಲಿ, ನಮ್ಮ ಭಾಷೇಲಿ ಬೇರೆ ಹೆಸರಿದೆಯೋ ಇಲ್ಲವೋ ತಿಳಿಯದು. ಅದಕ್ಕೆ ಅರ್ಥ ಗೊತ್ತಾಗೋ ಹಾಗೆ ಗ್ರಹಣಚಕ್ರ ಅನ್ನೋ ಭಾವಾನುವಾದವನ್ನು ಮಾಡಿದೀನಿ. ತಪ್ಪಿದ್ದ್ರೆ ತಿದ್ದಿ! ತಿದ್ಕೋತೀನಿ.)
ಕೆಲವು ದಿನದ ಮೊದಲು ರಾಹು-ಕೇತು ಕಾಟ ಅಂತ ಸ್ವಲ್ಪ ಗಳಹಿದ್ದೆ.ಮತ್ತೆ ಇವತ್ತು ಅದನ್ನ ಮುಂದುವರ್ಸೋಣ ಅಂತ ..ಅಲ್ಲದೆ, ಗ್ರಹಣಚಕ್ರ ಅರ್ಥ ಆಗ್ಬೇಕಾರೆ ರಾಹು ಕೇತು ವಿಷ್ಯ ಸ್ಪಷ್ಟ ಆಗ್ಬೇಕು ಮೊದಲು.
ನಮಗೆಲ್ಲ ಸೂರ್ಯನ ಸುತ್ತ ಭೂಮಿ ಸುತ್ತೋದೂ, ಭೂಮಿ ಸುತ್ತ ಚಂದ್ರ ಸುತ್ತೋದೂ ಗೊತ್ತೇ ಇದೆ. ಆ ಮೇಲೆ, ಒಂದು ಕಾಕತಾಳೀಯವಾದ ಒಂದು ವಿಚಾರದಿಂದ ಗ್ರಹಣಗಳನ್ನು ನಾವು ನೋಡ್ತೀವಿ. ಅದೇನಂದ್ರೆ, ನಮಗೆ ಭೂಮಿಯಿಂದ ನೋಡೋವಾಗ ಸೂರ್ಯನ ಗಾತ್ರವೂ, ಚಂದ್ರನ ಗಾತ್ರವೂ ಸರಿಸುಮಾರು ಒಂದೇ. ಚಂದ್ರನಿಗಿಂದ ಸೂರ್ಯ ಸುಮಾರು ನಾನೂರರಷ್ಟು ದೊಡ್ಡವ್ನು. ಹಾಗೇ ಸುಮಾರು ನಾನೂರರಷ್ಟು ಹೆಚ್ಚು ದೂರ್ದಲ್ಲೂ ಇದಾನೆ. ಅದಕ್ಕೆ ನಮ್ಗೆ ಅಪರೂಪಕ್ಕಾದ್ರೂ ಪೂರ್ಣ ಸೂರ್ಯಗ್ರಹಣ ಕಾಣ್ಸುತ್ತೆ. ಹತ್ತು, ಇಪ್ಪತ್ತು ಚಂದ್ರಗಳಿರೋ ಗುರು, ಶನಿಗಳ ಮೇಲೆ ಈ ರೀತಿ ಗ್ರಹಣಗಳು ಕಾಣೋಲ್ಲ. ಗ್ರಹಣ ಸಾಧ್ಯವಾಗೋಕೆ ಬೇಕಾದ ಇನ್ನೊಂದು ವಿಷಯಏನೂಂದ್ರೆ, ಭೂಮಿ ಸೂರ್ಯನ ಸುತ್ತ ಸುತ್ತೋ ಪಾತಳೀನೂ,ಚಂದ್ರ ಭೂಮಿ ಸುತ್ತ ಸುತ್ತೋ ಸಮಪಾತಳೀನೂ ಸುಮಾರಾಗಿ ಒಂದೇ. ಹಾಗಾಗಿ, ಒಂದೊಂದು ಸಲ ಸೂರ್ಯ ಭೂಮಿ ನಡುವೆ ಚಂದ್ರನೂ, ಕೆಲವೊಮ್ಮೆ ಸೂರ್ಯ ಚಂದ್ರ ನಡುವೆ ಭೂಮಿಯೂ ಬರತ್ತೆ. ಆಗ ಒಂದರ ನೆರಳು ಒಂದರ ಮೇಲೆ ಬಿದ್ದು ಗ್ರಹಣ ಆಗತ್ತೆ. ಇದು ಬಿಡಿ, ಚಿಕ್ಚಿಕ್ ಮಕ್ಕಳ್ಗೂ ಗೊತ್ತಿರೋ ವಿಷ್ಯ.
- Read more about ರಾಹು-ಕೇತು ಕಾಟ, ಮತ್ತು ನವಗ್ರಹ ಸ್ತೋತ್ರ
- 6 comments
- Log in or register to post comments
ಬರಹಗಳ ಸಂಪೂರ್ಣ ಪಟ್ಟಿ
ಸಂಪದಿಗರು ಈಗ 'ಸಂಪದ'ದಲ್ಲಿ ತಾವು ಬರೆದು ಹಾಕಿದ ಲೇಖನಗಳ ಸಂಪೂರ್ಣ ಪಟ್ಟಿ ಒಂದೇ ಪುಟದಲ್ಲಿ ಪಡೆಯಬಹುದು.
ಅದೊಂದು ದಿನ
ಅದೊಂದು ದಿನ, ಮತ್ತೊಂದು ಹಾಡು,
ಭಾರವಾಗಿತ್ತು ಮನ, ಮತ್ತದೇ ಪಾಡು.
ಇರಿದು ಮುಗಿಸಿತ್ತು ಮೊಗದಲ್ಲಿನ ಛಾಯೆ
ತಿಳೀದೇ ಹೋಯಿತು ಯಾವುದೀ ಮಾಯೆ
ಎಲ್ಲಿಂದೆಲ್ಲಿಗೆ ಹತ್ತಿಳಿಯಿತೋ,
ಹೊತ್ತಿನ ಜೊತೆಯಲಿ ಅದೃಷ್ಟ
ಬಂದುಳಿದರೂ ಮಿಗಲಿಲ್ಲವಲ್ಲಾ
ಕೊಂಚವಾದರೂ ಕನಿಷ್ಠ
ಯೋಚನೆಗಳೆಂಬ ಇರುವೆಯ ಹುತ್ತದಲಿ
ಸಮಯವೆಂಬ ಕೊನೆಯಿಲ್ಲದ ತೊರೆಯಲಿ
- Read more about ಅದೊಂದು ದಿನ
- 1 comment
- Log in or register to post comments
ಮನ ತುಂಬಿದ ಕವಿ
ಮನ ತುಂಬಿದ ಕವಿ
“ಎದೆ ತುಂಬಿ ಹಾಡಿದೆನು ಅಂದು ನಾನು” ಎಂದು ಹಾಡಿದರು ಜಿ.ಎಸ್. ಶಿವರುದ್ರಪ್ಪನವರು.
“I write when I cannot help writing” ಎಂದರು ಕವಿ ರವೀಂದ್ರ ನಾಥ ಟಾಗೂರರು
“ಎನ್ನಪಾಡೆನಗಿರಲಿ ಅದರ ಹಾಡನಷ್ಟೇ ಹಾಡುವೆನು ರಸಿಕ ನಿನಗೆ,
ಕಲ್ಲು ಸಕ್ಕರೆಯಂಥ ನಿನ್ನೆದೆಯು ಕರಗಿದರೆ ಅದರ ಸವಿಯನಷ್ಟೇ ಹಣಿಸು ನನಗೆ”
ಹೀಗೆಂದವರು ಕನ್ನಡದ ವರಕವಿ ದ.ರಾ.ಬೇಂದ್ರೆಯವರು.
ಸಾಹಿತ್ಯ ಲೋಕದಲ್ಲಿ ಅರಳಿದ ಕುಸುಮಗಳೆಂದರೆ ಈ ಸಾಹಿತಿಗಳು. ಸಂವೇದನಾಶೀಲ ವ್ಯಕ್ತಿಗಳು. ತಮ್ಮ ನೋವು ನಲಿವುಗಳನ್ನೆಲ್ಲಾ ಹಾಡಾಗಿ ಹೊರ ಹೊಮ್ಮಿಸಿ ಹಗುರಾಗುತ್ತಿದ್ದರೇನೋ ಮನದೊಳಗೆ. ಹಾಗೆಯೇ ದ.ರಾ.ಬೇಂದ್ರೆಯವರ ಅನೇಕ ಕವನಗಳು ಅಂತಃಕರಣ ಕುದ್ದು ಕುದ್ದು ಹೊರಬಿದ್ದ ಕವನಗಳಾಗಿರಬೇಕು. ಅವರು ತಮ್ಮ ಬದುಕಿನಲ್ಲಿ ಪಟ್ಟ ಪಾಡೇ ಹಾಡಾಗಿ ಹೊರಬಂದು ಓದುಗರ ಮನ ಮುಟ್ಟಿದೆ. ಹೀಗೆ ಅವರ ನೋವಿನ ಹಾಡುಗಳನ್ನು ಓದಿದಾಗ ಕಣ್ಣೀರು ಮಿಡಿದು ಅವರ ಹಾಸ್ಯ ಮಾತುಗಳ ಬಗ್ಗೆ ಕೇಳಿದಾಗ ಉಲ್ಲಾಸಗೊಂಡು ನಾನು ನಕ್ಕು ಸಂತೋಷ ಅನುಭವಿಸಿದ್ದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆ ನನಗೆ.
ಬೇಂದ್ರೆ ಬಡತನದಲ್ಲಿ ಬೆಂದವರು. ಸಾವು ನೋವುಗಳ ಬೆಂಕಿಯಲ್ಲಿ ಬೆಂದವರು. ಎದೆಯುದ್ದದ ಮಗನನ್ನು ಕಳೆದುಕೊಂಡಾಗ,
- Read more about ಮನ ತುಂಬಿದ ಕವಿ
- 7 comments
- Log in or register to post comments
ಮುಂಗಾರು ಮಳೆ ಸಂಭಾಷಣೆ ಐ.ಟಿ ನೌಕರನ ಮಾತಲ್ಲಿ.
Ganesh's Mungaaru Male Hero DIALOUGE IF HE IS WORKING IN MNC... (May be with lady Manager!!!)
ನಿಮ್ಮ ಟ್ರೇನಿಂಗು, ನಿಮ್ಮ ಪ್ರೊಜೆಕ್ಟು, ನಿಮ್ಮ ಮಾತು, ನಿಮ್ಮ ಆನ್ಸೈಟು,ಈ ಬಿಕನಾಸಿ ಅಪ್ರೈಸಲ್ಲು, ಆ ಸುಪರ್‍ವೈಸರ್ ಬೈಗುಳ,ಆ ಟಾರ್ಗೆಟ್ಸು, ಆ ಟೀಮ್ ಮೀಟಿಂಗ್ಸು,ಅದರಜ್ಜಿ ಕಸ್ಟಮರ್ ಫೋನ್ ಮಾಡೋ ಸದ್ದು ಎಲ್ಲಾ ಸೇರಿ ನನ್ನ ಕರಿಯರ್ ನಲ್ಲಿ ರಿಪೇರಿ ಮಾಡಕ್ಕಾಗ್ದೆ ಇರುವಷ್ಟು ಗಾಯ ಮಾಡಿಬಿಟ್ಟಿದೆ ಕಣ್ರಿ.
- Read more about ಮುಂಗಾರು ಮಳೆ ಸಂಭಾಷಣೆ ಐ.ಟಿ ನೌಕರನ ಮಾತಲ್ಲಿ.
- 3 comments
- Log in or register to post comments
ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ!
ಮಾಧ್ಯಮ ಎತ್ತ ಹೋಗುತ್ತಿದೆ?
ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿರುವ ಹಲವಾರು ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಪ್ರಶ್ನೆ ಮತ್ತೆ ಮತ್ತೆ ಉದ್ಭವವಾಗುತ್ತಲೇ ಇದೆ. ನಾಲ್ಕು ಗೋಡೆಗಳ ಬೆಚ್ಚನೆಯ ವಾತಾವರಣದಲ್ಲಿ ಏನೋ ಕಂಪನವಾಗುತ್ತದೆ. ಅದು ಪಕ್ಕದ ಮನೆಯವರಿಗೆ ಗೊತ್ತಾಗುವುದಕ್ಕೂ ಮುನ್ನ ಮಾಧ್ಯಮದ ಕಿವಿಗೆ ಬಿದ್ದಿರುತ್ತದೆ. ಇದ್ದಕ್ಕಿದ್ದಂತೆ ಕ್ಯಾಮೆರಾಗಳು, ಮೈಕ್‌ಗಳು, ಲೋಗೋಗಳು, ಪೆನ್, ಪ್ಯಾಡ್‌ಗಳು ಬಂದಿಳಿಯುತ್ತವೆ. ಅದುವರೆಗೆ ಜತನದಿಂದ ಕಾಪಾಡಿಕೊಂಡು ಬಂದಿದ್ದ ನಮ್ಮ ಖಾಸಗಿ ಬದುಕು ಮನೆಮನೆಗಳ ಟಿವಿಗಳಲ್ಲಿ, ಪತ್ರಿಕೆಗಳಲ್ಲಿ ಬೆತ್ತಲಾಗಿ ಬಿದ್ದುಬಿಡುತ್ತದೆ.
ಮಾಧ್ಯಮಕ್ಕೆ ಈ ಹಕ್ಕು ಕೊಟ್ಟವರು ಯಾರು? ಇನ್ನೊಬ್ಬರ ಖಾಸಗಿ ಬದುಕನ್ನು ಸಾರ್ವತ್ರಿಕಗೊಳಿಸುವ ಜರೂರತ್ತು ಏನಿದೆ?
ಇಲ್ಲಿ ನನಗೆ ಹಳೆಯ ಮಾತೊಂದು ನೆನಪಾಗುತ್ತದೆ: ’ಸಾರ್ವಜನಿಕ ವ್ಯಕ್ತಿಗೆ ಖಾಸಗಿ ಬದುಕು ಇರಲಾರದು’.
- Read more about ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ!
- 13 comments
- Log in or register to post comments
ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ!
ಮಾಧ್ಯಮ ಎತ್ತ ಹೋಗುತ್ತಿದೆ?
- Read more about ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ!
- 2 comments
- Log in or register to post comments