ಅದೊಂದು ದಿನ

ಅದೊಂದು ದಿನ

ಬರಹ

ಅದೊಂದು ದಿನ, ಮತ್ತೊಂದು  ಹಾಡು,
ಭಾರವಾಗಿತ್ತು ಮನ, ಮತ್ತದೇ ಪಾಡು.
ಇರಿದು ಮುಗಿಸಿತ್ತು ಮೊಗದಲ್ಲಿನ ಛಾಯೆ
ತಿಳೀದೇ ಹೋಯಿತು ಯಾವುದೀ ಮಾಯೆ

ಎಲ್ಲಿಂದೆಲ್ಲಿಗೆ ಹತ್ತಿಳಿಯಿತೋ,
ಹೊತ್ತಿನ ಜೊತೆಯಲಿ ಅದೃಷ್ಟ
ಬಂದುಳಿದರೂ ಮಿಗಲಿಲ್ಲವಲ್ಲಾ
ಕೊಂಚವಾದರೂ ಕನಿಷ್ಠ

ಯೋಚನೆಗಳೆಂಬ ಇರುವೆಯ ಹುತ್ತದಲಿ
ಸಮಯವೆಂಬ ಕೊನೆಯಿಲ್ಲದ ತೊರೆಯಲಿ
ಜೀವನವೆಂಬ ಬಯಲ ನಡುವಿನಲಿ
ಅಡೆತಡೆಗಳ ದಾಟಬಲ್ಲೆನೆ ನಾ?

ಬುದ್ಢಿಯ ಮಂಗನಾಟಗಳ
ದೇಹದ ದೌರ್ಬಲ್ಯಗಳ
ವಿಧಿಯು ಬರೆದಿಟ್ಟ ಗೆರೆಗಳ
ಮೀರಬಲ್ಲೆನೆ ನಾ ?

ಪ್ರತಿಕ್ಷಣವೂ ಶ್ರೇಷ್ಠ ಕಾಲ
ಸಾಧಿಸುವೆಯೆಂಬ ನಂಬಿಕೆ ಅಚಲ
ಜೊತೆಗೆ ಮಾಡಬಲ್ಲೆನೆಂಬ  ಛಲ
ಇವೇ ನನಗೆ ಅಕ್ಷೋಹಿಣಿ ಬಲ!