ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮೈಸೂರು ರಮಾನಂದರ ಹೊಸ ಸಾಮಾಜಿಕ ನಾಟಕ - ಕಾಣೆಯಾಗಿದ್ದಾನೆ - ಒಂದು ವಿಶ್ಲೇಷಣೆ

ನಾವು ದಿನ ಪತ್ರಿಕೆಗಳನ್ನು ನೋಡುತ್ತಿದ್ದರೆ ಕಡೇ ಪಕ್ಷ ವಾರಕ್ಕೆರಡುಬಾರಿಯಾದರೂ ಯಾರಾದರೊಬ್ಬ ವ್ಯಕ್ತಿ ಕಾಣೆಯಾಗಿ ಹೋಗಿರುವ ಸುದ್ದಿಯನ್ನು ಓದಿಯೇತೀರುತ್ತೇವೆ. ಅದು ಗಂಡಸಾಗಿರಬಹುದು, ಹೆಣ್ಣಾಗಿರಬಹುದು, ವಯಸ್ಕರಾಗಿರಬಹುದು ಅಥವಾ ವಯೋವೃದ್ಧರಾಗಿರಬಹುದು.

ಆತ್ಮಹತ್ಯೆ

ಮೊನ್ನೆ ಈ ಟೀವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಿಂಚು ಧಾರವಾಹಿಯಲ್ಲಿ ಶಂಕರ ದಾಸ್ ಯಾವುದೋ ಆತ್ಮಹತ್ಯೆಯ ಬಗ್ಗೆ ಮಾತಾಡುತ್ತಾರೆ. ಅಂದೇ ಅವರ ಅಳಿಯ ಆತ್ಮಹತ್ಯೆಯ ಪ್ರಯತ್ನ ಮಾಡುತ್ತಾರೆ. ಧಾರವಾಹಿ ಅಲ್ಲವೇ ಸುಖಾಂತ್ಯವಾಯಿತು. ಆದರೆ ನಿಜ ಜೀವನದಲ್ಲಿ ಎಲ್ಲಾ ಪ್ರಯತ್ನಗಳು ವಿಫಲವಾಗೋದಿಲ್ಲ.

ಬಾನಿಂದ ಜಾರಿಬಂದ ಹಕ್ಕಿಗೋಂದು

ಬಾನಿಂದ ಜಾರಿಬಂದ ಹಕ್ಕಿಯೊಂದು
ಹಾಡಿತು ಬಂದೆ ಇಲ್ಲಿ ನಿನಗಾಗೆಯೆಂದು
ಕುಣಿಯಿತು ನನ್ನ ಮನವು ಅಲ್ಲಿ
ಮಳೆಯಾಗಿ ಪ್ರೀತಿಯ ಚೆಲ್ಲಿ

ಎಲ್ಲೆಲ್ಲು ಆನಂದವೇ ಹೋ ಹೋ ......

ಬಾನಿಂದ ಜಾರಿಬಂದ ಹಕ್ಕಿಗೋಂದು
ಕಟ್ಟಿದೆ ಕಿಟಕಿ ಇಲ್ಲದ ಗೂಡನೊಂದು...
ತಂಗಾಳಿ ಬೀಸದು ಅಲ್ಲಿ
ತಂಪಾಗದು ನಿನಗೆಂದು ಇಲ್ಲಿ

ಇನೆಂದು ಉಲ್ಲಾಸವೇ ಹೋ ಹೋ ....

ಬಾನಿಂದ ಜಾರಿಬಂದ ಹಕ್ಕಿ ಅಂದು

ಏನಾಗಿದೆ ಉತ್ತರ ಭಾರತೀಯರಿಗೆ...

ನನಗೆ ನಿನ್ನೆ ಒಂದು ಇ-ಮೇಲ್ ಬಂತು...
ಓಪನ್ ಮಾಡಿ ನೋಡಿದಾಗ ಗೊತ್ತಾಯ್ತು, ಅದು ಬರಿ ಒಂದು ಮೇಲ್ ಅಲ್ಲ. ಒಂದು ಇ-ಮೇಲ್ ಸರಣಿ. ಒಬ್ಬ ಉತ್ತರ ಭಾರತೀಯ ಬರೆದಿರೋ ಮೇಲ್ ಮತ್ತು ಅದಕ್ಕೆ ತುಂಬ ಜನರ ಪ್ರತಿಕ್ರಿಯೆ ಹಾಗು ಒಬ್ಬ ದಕ್ಷಿಣ ಭಾರತೀಯನ ಜವಾಬು. ಅದನ್ನು ಈ ಲಿಂಕ್ ನಲ್ಲಿ ಓದಿ..
http://varunbhat.wordpress.com/2008/01/18/difference-among-indians/

ಇಳಿದ ಜ್ವರ

ಅರಿವಿರಲು ಮೊನೆಯಷ್ಟು ಕುರುಡಾಗಿದ್ದೆ ಸೊಕ್ಕಿದಾನೆಯೊಲು

ಗರುವದಲಿ ಮನವಿತ್ತು  ಎಲ್ಲನರಿತವವ ನಾನೆಂದು !

ಅರಿತವರ ಒಡನಾಟ ತರಲು ತುಸು ತುಸು ತಿಳಿವು,

ಮರುವ ನಾನೆಂದರಿತೆ; ಇಳಿಯಿತು ಸೊಕ್ಕಿನ ಜ್ವರವು.

(ಭರ್ತೃಹರಿಯ ಸುಭಾಷಿತವೊಂದರ ಭಾವಾನುವಾದ)

 

ಇದರ ಮೂಲ ಹೀಗಿದೆ:

ಯದಾ ಕಿಂಚಿದ್  ಜ್ಞೋಹಂ ಗಜ ಇವ ಮದಾಂಧಃ ಸಮಭವಮ್

ಅಗಾಧ ಸಾಧ್ಯತೆಗಳ ನ್ಯಾನೊ ಕಾರು...

ಟಾಟಾದವರ ನ್ಯಾನೊ ಕಾರು ಇನ್ನೇನು ಆರು ತಿಂಗಳಿನಲ್ಲಿ ಭಾರತದಾದ್ಯಂತ ಎಲ್ಲೆಲ್ಲೂ ಓಡಾಡಲಿದೆ. ಒಂದು ಲಕ್ಷ ರೂಪಾಯಿ ಎನ್ನುವುದು ಇದರ ಅಗ್ಗಳಿಕೆ ಆಗಿದ್ದರೂ, ನನ್ನ ಪ್ರಕಾರ ಈ ಕಾರಿನ "ಸಣ್ಣತನ" ಅನೇಕ ಪಾಸಿಟಿವ್ ಪ್ರಭಾವಗಳನ್ನು ಬೀರಲಿದೆ. ಭಾರತದಲ್ಲಿ ಇದಕ್ಕಿಂತ ದೊಡ್ಡ ಕಾರುಗಳ ಮಾರಾಟ ನ್ಯಾನೊವಿನಿಂದಾಗಿ ಇಳಿಮುಖವಾಗದಿದ್ದರೂ ಬೇಡಿಕೆಯ ಶೇಕಡಾವರು ಪ್ರಮಾಣ ನ್ಯಾನೊ ಇಲ್ಲದಿದ್ದರೆ ಏನಿರುತ್ತಿತ್ತೊ ಅದಕ್ಕಿಂತ ಕಮ್ಮಿ ಆಗುವುದಂತೂ ನಿಶ್ಚಿತ. ಹಾಗಾಗಿ ಪರೋಕ್ಷವಾಗಿಯೂ ಪರಿಸರಕ್ಕೆ ಒಳ್ಳೆಯದೆ. ಇದೆ ಎಳೆಯ ಮೇಲೆ ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಈ ವಾರದ "ಅಮೇರಿಕದಿಂದ ರವಿ" ಅಂಕಣ ಲೇಖನ ಬರೆದಿದ್ದೇನೆ. ಪೂರ್ಣ ಲೇಖನಕ್ಕಾಗಿ ಇಲ್ಲಿ ಕ್ಲಿಕ್ಕಿಸಿ.

ಇದೇ ಲೇಖನದಲ್ಲಿ ಅಮೇರಿಕದ ದೈತ್ಯ ತೈಲ ಕಂಪನಿಗಳು ಮತ್ತು ಆಟೊಮೊಬೈಲ್ ಕಂಪನಿಗಳು ಸೇರಿಕೊಂಡು ಹತ್ತು ವರ್ಷಗಳ ಹಿಂದೆಯೆ EV1 ಎಂಬ ಒಂದು ಉತ್ತಮ ವಿದ್ಯುತ್ ಕಾರನ್ನು ಕೊಂದು ಹಾಕಿದ ಕುರಿತಾದ ಟಿಪ್ಪಣಿಯೂ ಇದೆ.

ಉಡುಪಿ-ಪರ್ಯಾಯದ ಬಗ್ಗೆ ಕವನ

೧. ಬಾರೋ ಶ್ರೀ ಕೃಷ್ಣ

ವಿಷೇಶ ರಾಜಕೀಯ
ಸ್ಥಿತಿ ನೋಡಿ
ಆಸೆಯಾಗಿ
ಅನಿವಾರ್ಯವಾಗಿ
ಮರಳಿ ಬರುವನೋ
ರಾಜ್ಯಪಾಲ ಕೃಷ್ಣ?

ವಿಷಮಯ ರಾಜಕೀಯ
ಸ್ಥಿತಿ ನೋಡಿ
ಅಸಹ್ಯವಾಗಿ
ಅನಿವಾರ್ಯವಾಗಿ
ಎಂದೋ ಓಡಿ ಹೋಗಿದ್ದಾನೋ
ಲೋಕಪಾಲ ಶ್ರೀ ಕೃಷ್ಣ!

ದುರ್ಮನಸ್ಸಿನ
ಪೂಜೆಯ ಒಲ್ಲದೆ
ನಿಶ್ಕಲ್ಮಷ
ಭಕ್ತಿಗೆ ಒಲಿದೆ
ಕನಕನ ಕಡೆಗೆ ತಿರುಗಿದ್ದ ಹೇ ಕೃಷ್ಣಾ....

ಭೇದ-ಭಾವಗಳ
ಉಲ್ಲಂಘಿಸಿ,

ಪರಿಸರ ರಕ್ಷಣೆ: ಗಾಂಧೀಜಿ ಚಿಂತನೆ

ಅಭಿವೃದ್ಧಿ
ಸಾಧಿಸುವ ಭರದಲ್ಲಿ ಪರಿಸರ ನಾಶವಾಗುತ್ತಲೇ ಇದೆ. ಹೀಗಾಗಿ ಇವತ್ತು ಪರಿಸರ ಸಂರಕ್ಷಣೆ ಒಂದು ದೊಡ್ಡ
ಸವಾಲಾಗಿ ಪರಿಣಮಿಸಿದೆ. ಮಹಾತ್ಮ ಗಾಂಧೀಜಿ ಅವರು ಪರಿಸರ ಸಂರಕ್ಷಣೆಯ ಹಾದಿಯಲ್ಲಿ ಇಂದಿಗೂ
ಪ್ರಸ್ತುತವಾದವರು. ಪರಿಸರದ ಬಗೆಗಿನ ಗಾಂಧೀಜಿಯವರ ಕಾಳಜಿ ಅನುಕರಣೀಯ, ಅಷ್ಟೇ ಅಲ್ಲ ಸಮಸ್ಯೆಗೆ
ಸುಲಭ ಪರಿಹಾರ.

ಇಂದು
ವೈಜ್ಞಾನಿಕ ಸಾಧನೆ ಉತ್ತುಂಗದಲ್ಲಿದೆ. ಐವತ್ತು ವರ್ಷಗಳ ಹಿಂದೆ ಊಹಿಸಲೂ ಸಾಧ್ಯವಾಗದಷ್ಟು ಪ್ರಗತಿ
ವಿಜ್ಞಾನರಂಗದಲ್ಲಾಗಿದೆ. ಪ್ರಗತಿ ಮತ್ತು ಆಧುನಿಕತೆಯನ್ನು ಸಾಧಿಸುವ ಭರದಲ್ಲಿ ಪರಿಸರವನ್ನು
ಸಂಪೂರ್ಣ ಕಡೆಗಣಿಸಿದುದರ ಪರಿಣಾಮವಾಗಿ ಇಂದು ಪರಿಸರ ಸಂರಕ್ಷಣೆ ಅತ್ಯಂತ ದೊಡ್ಡ ಸವಾಲು ಹಾಗೂ
ಸಮಸ್ಯೆಯಾಗಿದೆ. ಇದುವರೆಗಿನ ಭೂಮಿಯ ಮೇಲಿನ ಎಲ್ಲ ಪ್ರಾಣಿಗಳಿಗಿಂತ ಮಾನವ ಅತ್ಯಂತ ಅಪಾಯಕಾರಿಯಾದ
ಪ್ರಾಣಿಯಾಗಿದ್ದಾನೆ. ವಿಜ್ಞಾನಿಗಳು ಹೇಳುವಂತೆ ಭೂಮಿಯ ಚರಿತ್ರೆಯಲ್ಲಿ ಇದುವರೆಗೆ ಆರು ಸಾರಿ
ಭೂಮಿಯ ಜೀವಸಂಕುಲಗಳು ನಿರ್ನಾಮವಾದ ಘಟನೆಗಳು ಸಂಭವಿಸಿವೆ. ಆ ಆರೂ ಸಾರಿಯೂ ಜೀವ ಮತ್ತೆ
ಪುಟಿದೆದ್ದಿದೆ. ಆದರೆ ಇನ್ನು ಮುಂದೆ ಮಾನವನ ದುರಾಸೆ, ಅಜಾಗರೂಕತೆಯಿಂದ ನಡೆಯಬಹುದಾದ
ದುರಂತಗಳಿಂದಾಗುವ ಜೀವಸಂಕುಲ ವಿನಾಶದಿಂದ ಬಹುಶಃ ಜೀವಸಂಕುಲ ಮತ್ತೆ ಚೇತರಿಸಿಕೊಳ್ಳಲು ಸಾಧ್ಯವೇ
ಆಗುವುದಿಲ್ಲ.

ಪರಿಸರ ರಕ್ಷಣೆ: ಗಾಂಧೀಜಿ ಚಿಂತನೆ

ಅಭಿವೃದ್ಧಿ
ಸಾಧಿಸುವ ಭರದಲ್ಲಿ ಪರಿಸರ ನಾಶವಾಗುತ್ತಲೇ ಇದೆ. ಹೀಗಾಗಿ ಇವತ್ತು ಪರಿಸರ ಸಂರಕ್ಷಣೆ ಒಂದು ದೊಡ್ಡ
ಸವಾಲಾಗಿ ಪರಿಣಮಿಸಿದೆ. ಮಹಾತ್ಮ ಗಾಂಧೀಜಿ ಅವರು ಪರಿಸರ ಸಂರಕ್ಷಣೆಯ ಹಾದಿಯಲ್ಲಿ ಇಂದಿಗೂ
ಪ್ರಸ್ತುತವಾದವರು. ಪರಿಸರದ ಬಗೆಗಿನ ಗಾಂಧೀಜಿಯವರ ಕಾಳಜಿ ಅನುಕರಣೀಯ, ಅಷ್ಟೇ ಅಲ್ಲ ಸಮಸ್ಯೆಗೆ
ಸುಲಭ ಪರಿಹಾರ.