ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅಪರಾಧಿ ನಾನಲ್ಲ, ಅಪರಾಧವೆನಗಿಲ್ಲ

ಇದು ದಾಸವಾಣಿ. ಫುರಂದರದಾಸರೂ ’ಅಪರಾಧಿ ನಾನಲ್ಲ; ಅಪರಾಧವೆನಗಿಲ್ಲ’ ಎಂದು ಹೇಳಿದ್ದಾರೆ.
ಜಗನ್ನಾಥದಾಸರೂ ಸಹ ’ಇದೇ ಮಾತನ್ನು ತಮ್ಮ ತತ್ವ ಸುವ್ವಾಲಿಯಲ್ಲಿ ಹೇಳಿದ್ದಾರೆ. ಇದರರ್ಥ ಇಷ್ಟೇ: ನಮ್ಮಲ್ಲಿನ ಕ್ರಿಯೆಗಳಿಗೆಲ್ಲ ಭಗವಂತನೇ ಕರ್ತ್ರು. ಆದರೂ ಅವನಿಗೆ ಪಾಪ ಪುಣ್ಯಗಳ ಲೇಶವಿಲ್ಲ. ಅವನು ಸ್ವತಂತ್ರ. ನಾವು ಸ್ವತಂತ್ರರಲ್ಲ.

ಕಲ್ಲ ಕರಗಿಸುವುದೈ ಮಧುರ ನಾದ

ಕಲ್ಲ ಕರಗಿಸುವುದೈ
ಮಧುರ ನಾದ
ಸೊಲ್ಲ ಅಡಗಿಸುವುದೈ
ಸವಿಯಾದ ಪದ

ಸಕ್ಕರೆಯ ಮೆಲ್ಲುವಿರಿ
ಪಾಡಿ ಸವಿ ನುಡಿಯ
ಸಮರಸದ ಸವಿಕಾಣುವಿರಿ
ಅಲಿಸಿ ಸರಿಗಮದ ಮೋಡಿಯ

ಸಾಗಲಿ ಜೀವನದ ಕಡು ಪಯಣ
ರಾಗದಲೆಗಳ ಮೇಲೆ
ನಾದ ತಂಗಾಳಿಯ ತಕ್ಕೆಯಲಿ
ಪದನಕ್ಷತ್ರಗಳ ದಾರಿಯಲಿ

ಕೊಸರಿನ ಕಮಲ

ಕೊಸರಿನಲ್ಲಿ ಹೊಳೆವ ಕಮಲ
ಕೊಸರಿಗಂಜಿ ಅಳುವುದೇ
ಕೊಸರಿನಿಂದ ಬರುವುದೆಂದು
ಯಾರು ಅದನು ಬಗೆವರು

ಕೆಂಪು, ಬಿಳುಪು, ಹಳದಿ
ಬಣ್ಣ ದರಿಸಿ ಸೆಳೆವ ಗುಲಾಬಿ
ಮುಳ್ಳು ಜೊತೆಗೆ ಇರುವುದೆಂದು
ಯಾರು ಅದನು ತೊರೆವರು

ಹಾಲು, ಮೊಸರು, ಬೆಣ್ಣೆ, ತುಪ್ಪ
ಎಲ್ಲ ಇದನು ಸವಿಯುವರು
ಹುಲ್ಲು ತಿಂದು ಹಾಯುವುದೆಂದು
ಭಯದಿ ಹಸುವನ್ಯಾರು ಜರಿವರು

ಒಂದು, ಎರಡು, ಮೂರು, ನಾಕು

ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ-ಹತ್ತನೆಯ ಕಂತು

ನನ್ನ ಕಣ್ಣಿಗೆ ಅವನು ಆಧ್ಯಾತ್ಮಿಕ ವ್ಯಕ್ತಿಯ ಹಾಗೆ ಕಾಣಲಿಲ್ಲ. ಅವನೊಬ್ಬ ಅಗಲ ಭುಜದ , ದೊಡ್ಡತಲೆಯ ಧಡೂತಿ ವ್ಯಕ್ತಿ. ಉದ್ದಕ್ಕೆ ಕೂದಲು ಬಿಟ್ಟಿದ್ದ. ಆದರೆ ಅವನ ದವಡೆ ನುಣುಪಾಗಿದ್ದು ದೊಡ್ಡದಾಗಿ ಪ್ರಮುಖವಾಗಿ ಮುಂಚಾಚಿಕೊಂಡಿತ್ತು. ಇದರಿಂದಾಗಿ ಅವನಿಗೆ ಗೂಳಿಯಂಥ ಶಕ್ತಿಶಾಲಿ ಕಳೆ ಬಂದಿತ್ತು. ಅವನುಟ್ಟಿದ್ದು ಬರೀ ಒಂದು ಕಾವಿ ಬಟ್ಟೆ.

ಟಾಪ್ ಟೆನ್

ಅವಧಿ (http://avadhi.wordpress.com) ಬ್ಲಾಗ್ ನಿರ್ವಾಹಕರು ಅವರ ಓದುಗರೆಲ್ಲರಿಗೆ ನಿಮ್ಮ ಟಾಪ್ ಟೆನ್ ಪುಸ್ತಕ ಪಟ್ಟಿ ಹೇಳಿ ಎಂದಿದ್ದರು ಕೆಲವು ದಿನಗಳ ಹಿಂದೆ. ಪಟ್ಟಿ ಹೇಳುವುದು ಕಷ್ಟವೇ ಆದರೂ, ಆಗ ನೆನಪಾದವನ್ನು ಅವರಿಗೆ ಬರೆದು ಕಳಿಸಿದ್ದೆ. ಅದನ್ನೆ ಇಲ್ಲಿ ಮತ್ತೆ ಬರೆದಿದ್ದೇನೆ.

ಜನುಮ ಜನುಮಗಿಬಂಧ

ಕಿರುನಗೆಯ ಮೊಗ ಚಂದ
ಮುಡಿದ ಮಲ್ಲಿಗೆಯ ಗಂಧ
ಪಿಸು ಮಾತನಾಳಿಸುವಾನಂದ
ಇರಲಿ ಜನುಮ ಜನುಮಗಿಬಂಧ

ಮಾತಿನ ಉಯ್ಯಾಳೆಯಲಿ
ತೂಗಿ ತೇಲಿಸುವವಳಿವಳು
ಮಾತೆಯ ಮಮತೆ ತೋರಿ
ನನ್ನ ಮನವ ಗೆದ್ದವಳು

ಓರೆ ನೋಟಗಳಲ್ಲಿ
ಎಲ್ಲ ತಿಳಿಸುವವಳಿವಳು
ಪ್ರೀತಿಯ ಹುಬಾಣವ ಬಿಟ್ಟು
ನನ್ನ ಒಲವ ಸೆರೆಹಿಡಿದವಳು

ಭಿನ್ನ ಭಿನ್ನದ ತಿಂಡಿ
ಮನೆಯ ಮಂದಿಗೆ ಬಡಿಸಿ

ರುಚಿ

 

ತೊಡೆ ಸೊಂಟ ಮತ್ತು ಮೊಲೆಯನ್ನು
ಗಂಡಸರು ಚಪ್ಪರಿಸುವಂತಾದಾಗ
ಚಂದದ ಕುಣಿತವೂ
ತನ್ನ ಪ್ರಶ್ನೆಯ ಮೊನಚು ಕಳಕೊಂಡು
ಅರೆಭಾವಕ್ಕೆ ಉತ್ತರದಂತೆ.