ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹೋಗಿ ಬರತೀನಿ - ಮನದಾಗಿಡೊ ನೆನಪ .. ಗೆಳೆಯಾ

ಜನವರಿ ೨೦೦೬ ರಲ್ಲಿ ನಾನು ಬ್ಲಾಗ್ ಬರೆಯಲು ಆರಂಭಿಸಿದ್ದು . ಕಳೆದ ನಲವತ್ತು ವರ್ಶದಲ್ಲಿ ನಾನು ಓದಿದ್ದ ಒಳ್ಳೆ ವಿಷಯಗಳನ್ನು ಕುರಿತು ಇಲ್ಲಿ ಬ್ಲಾಗ್ ರೂಪದಲ್ಲೂ ಕೆಲವು ಲೇಖನ ರೂಪದಲ್ಲೂ ( ಸುಭಾಶಿತ , ಝೆನ್ ಕತೆ , ಪುಸ್ತಕ ವಿಮರ್ಶೆ ಇತ್ಯಾದಿ) ಬರೆದಿದ್ದೇನೆ . ಸುಮಾರು ೨೦೦ ಬ್ಲಾಗ್ ಲೇಖನಗಳಿರಬಹುದು . ಲೇಖನಗಳು ಒಂದೈವತ್ತು ಇರಬಹುದು .

ನಾನ್ಯಾರು ?

೧. ನಾನು ಯಾರು ? ಏನ್ ಮಾಡ್ತಿದ್ದೀನಿ ? ಯಾಕೆ ಮಾಡ್ತಿದ್ದೀನಿ ? ಸುತ್ತ ಏನಾಗ್ತಿದೆ ? ಯಾರ್ ಏನ್ ಮಾಡ್ತಿದ್ದಾರೆ ? ಅಂತೆಲ್ಲ ವಿಚಾರ ಮಾಡ್ಲಿಕ್ಕೆ ಸ್ವಲ್ಪ ಹೊತ್ತು ಪ್ರತಿಯೊಬ್ರೂ ಪ್ರತಿದಿವಸದಲ್ಲಿ ಸ್ವಲ್ಪ ಹೊತ್ತು ತೆಗ್ದಿಡಬೇಕು .

ಕನಸಾದಳು ಕನ್ಯೆ

ಕಣ್ಣು ಕಣ್ಣಲ್ಲೇ ಕಂಗೆಡಿಸಿದಳು ಕನ್ಯೆ
ಕಣ್ಣಿನ ಕಣ್ಸನ್ನೆಯಿಂದ ನಾಚಿತವಳ ಕುಳಿಗೆನ್ನೆ.
ಕಣ್ನು ಕಣ್ಣು ಒಲಿದು, ಕಲೆತು
ಕಂಕಣ ಕಟ್ಟುವ ಹೊತ್ತಿಗೆ,
ಕನಸಾದಳು ಕನ್ಯೆ !!!
ಕಣ್ತೆರೆಯಲು......
ಕನಸಾದಳು ಕನ್ಯೆ....

ಕೋಟಿ ವಚನಗಳು??

ಶರಣರು ತಮ್ಮ ಅನುಭಾವದಿಂದ ಮರ್ಜಿಸಿ ತೆಗೆದ ವಚನಗಳು ಒಂದೆರಡಲ್ಲ ಕೋಟಿಗೂ ಮಿಕ್ಕಿದವಂತೆ.
ಸಿದ್ಧರಾಮೇಶ್ವರನ ಈ ವಚನವನ್ನು ನೋಡಿ.

ಅಲ್ಲಯ್ಯನ ವಚನ ಎರೆಡೆಂಬತ್ತು ಕೋಟಿ
ಅಪ್ಪಯ್ಯಗಳ ವಚನ ನಾಲ್ಕು ಲಕ್ಷದ ಮುವ್ವತ್ತಾರು ಸಾಸಿರ (ಬಸವಣ್ಣನ ವಚನಬಗ್ಗೆ)
ಎಮ್ಮಯ್ಯಗಳ ವಚನ ವಚನಕ್ಕೊಂದು (???..)
ನೀಲಮ್ಮನ ವಚನ ಲಕ್ಷದ ಹನ್ನೊಂದು ಸಾವಿರ

ಆಸ್ಪತ್ರೆಯ ಕಿಟಕಿ

(ಅಂತರ್ಜಾಲದಲ್ಲಿ ತೇಲಿ ಬಂದ ಒಂದು ಪುಟದ ಇಂಗ್ಲಿಷ್ ಕಥೆಯ ರೂಪಾಂತರ)
ಆಸ್ಪತ್ರೆಯ ಜನರಲ್ ವಾರ್ಡು ಎಂದರೆ ಮೊದಲಿಗೆ ನಮ್ಮ ಕಣ್ಣಿಗೆ ಕಾಣುವುದು ಸಾಲಾಗಿ ಜೋಡಿಸಿದ ಬಿಳಿ ಮಂಚಗಳು, ಅವುಗಳ ಮೇಲೆ ಮಲಗಿರುವ ರೋಗಿಗಳು, ಬಿಳಿ ಹೊದಿಕೆ, ಕೆಂಪು ಕಂಬಳಿ, ರೋಗನಿದಾನದ ವಿವರಪಟ್ಟಿ, ಬಾಟಲಿಯಿಂದ ನಳಿಕೆಯ ಮೂಲಕ ನಿಧಾನವಾಗಿ ರೋಗಿಯ ಮೈಗೆ ಇಳಿಯುತ್ತಿರುವ ಗ್ಲೂಕೋಸು, ಮಂಚದ ಪಕ್ಕದ ಸಣ್ಣ ಕಪಾಟು, ಅದರ ಮೇಲೆ ಥರ್ಮಾಸ್ ಫ್ಲಾಸ್ಕು, ಕಾಫಿಲೋಟ, ಬ್ರೆಡ್ಡು. ಕೆಲ ರೋಗಿಗಳು ನೋವಿನಿಂದ ನರಳುತ್ತಿದ್ದರೆ, ಇನ್ನು ಕೆಲವರು ಆರಾಮವಾಗಿ ಆಸ್ಪತ್ರೆಗೆ ಹೊಂದಿಕೊಂಡಿದ್ದಾರೆ ಒಂದಿಬ್ಬರು ತಮ್ಮ ಮಂಚದಿಂದ ಬೇರೊಂದು ಮಂಚದ ಬಳಿ ಬಂದು ಕುಳಿತು ಹರಟೆಯಲ್ಲಿ ತೊಡಗಿದ್ದಾರೆ. ಇನ್ನು ರೋಗಿಗಳನ್ನು ನೋಡಲು ಬರುವ ಹಿತೈಷಿಗಳ ದಂಡು ಬಂದರಂತೂ ಆ ವಾರ್ಡು ಒಂದು ವಠಾರವಾಗುತ್ತದೆ. ಪರಸ್ಪರ ಕುಶಲೋಪರಿ, ಊರು, ಮನೆ, ಮಕ್ಕಳು, ಮದುವೆ, ಆಸ್ತಿಪಾಸ್ತಿ ಒಟ್ಟಿನಲ್ಲಿ ಏನೆಲ್ಲ ವಿವರಗಳನ್ನು ಅಲ್ಲಿ ಕಲೆಹಾಕಬಹುದು. ಆದರೆ ಒಂದು ವಿಷಯ ಮಾತ್ರ ಸತ್ಯ, ಆಸ್ಪತ್ರೆಯ ವಾರ್ಡುಗಳಲ್ಲಿ ಇಷ್ಟೆಲ್ಲ ಜನ ಸೇರಿ ಏನೆಲ್ಲ ಮಾತುಕತೆಯಾಡಿದರೂ ಅಲ್ಲಿ ಜಗಳವೆಂಬುದೇ ಇರುವುದಿಲ್ಲ. ಜಗಳ ಮಾಡಲು ಎರಡು ವಿರುದ್ಧ ಅನಿಸಿಕೆಗಳಿರಬೇಕಲ್ಲ. ಆದರೆ ರೋಗಿಗಳೂ ಸೇರಿದಂತೆ ಬಂದವರೆಲ್ಲರೂ ಸಮಾನ ಹೃದಯಿಗಳೇ ಆಗಿರುವುದರಿಂದ ಅಲ್ಲಿ ಜಗಳಕ್ಕೇ ಆಸ್ಪದವೇ ಇಲ್ಲ ಬಿಡಿ. ಜಗಳವೇನಿದ್ದರೂ ಆಸ್ಪತ್ರೆಯ ವೈದ್ಯರ ಮೇಲೆ, ನರ್ಸುಗಳ ಮೇಲೆ ಇಲ್ಲವೇ ಇನ್ಯಾರೋ ಸಿಬ್ಬಂದಿಯ ಮೇಲೆ ಮಾತ್ರ.

ಸೂೞ್ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್

ಪಂಪನು ರಚಿಸಿದ ಮಹಾಭಾರತ ಮಹಾಕಾವ್ಯದ ಈ ಸಾಲು ಭೀಷ್ಮನ ಬಾಯಿಂದ ಬರುತ್ತದೆ. ದುರ್ಯೋಧನನ ಹೆಗಲೆಣೆಯಾಗಿ ಆತ್ಮೀಯ ಮಿತ್ರನಾಗಿ ಪ್ರೀತಿಯ ಸಖನಾಗಿದ್ದ ಕರ್ಣನು ಪಾಂಡವರ ವಿರುದ್ಧದ ಕೌರವರ ಯುದ್ಧದಲ್ಲಿ ಸೇನಾ ನಾಯಕತ್ವ ತನಗೇ ಸಿಗುತ್ತದೆಂಬ ನಿರೀಕ್ಷೆಯಲ್ಲಿದ್ದ. ಆದರೆ ಆ ಪಟ್ಟವನ್ನು ಎಲ್ಲರೂ ಸೇರಿ ಭೀಷ್ಮನಿಗೆ ವಹಿಸಿದಾಗ ಅವನಿಗೆ ತೀವ್ರ ಅಸಮಾಧಾನವಾಯಿತು. ಮುದುಕನಾಗಿರುವ ಭೀಷ್ಮ ಚುರುಕಾಗಿ ಕೆಲಸ ಮಾಡಲಾರ, ಪಾಂಡವರಿಗೆ ಆತ ಪರೋಕ್ಷವಾಗಿ ಸಹಾಯ ಮಾಡಲೂಬಹುದು, ತನ್ನಂತಹ ಯುವಕರಿಗೆ ಪಟ್ಟ ಕಟ್ಟಿದರೆ ಏನು ಬೇಕಾದರೂ ಸಾಧಿಸಬಲ್ಲೆವು ಎಂಬುದು ಆತನ ಅಭಿಪ್ರಾಯ.
ಆದರೆ ಭೀಷ್ಮ ನೀಡುವ ಮಾರ್ಮಿಕ ಉತ್ತರ ಇಂದಿನ ಜಗತ್ತಿಗೂ ಅನ್ವಯಿಸುತ್ತದೆ. ಪಾಂಡವರು ಅತಿರಥ ಮಹಾರಥರು. ಸಾತ್ವಿಕ ಮನೋಭಾವ ಹೊಂದಿದ ಅವರಿಗೆ ದೈವಬಲವೂ ಇದೆ. ಅವರೆದುರು ಯಾರೊಬ್ಬನೂ ಸತತವಾಗಿ ನಿಂತು ಯುದ್ಧ ಮಾಡಲಾಗದು.
ಜೀವನ ಎನ್ನುವ ರಣರಂಗದಲ್ಲಿ ಎಲ್ಲರಿಗೂ ತಮ್ಮ ಸರದಿ ಬಂದೇ ಬರುತ್ತದೆ. ಆ ಚಾನ್ಸ್ಗಾಗಿ ಕಾಯಬೇಕು.

ನನ್ನ ಮುಖಚಿತ್ರ

ನನ್ನ ಚಿತ್ರ ಬರಿಯೋದು ತುಂಬಾ ಸುಲಭ. ಸುಲಭ ಅಂದ ತಕ್ಷಣ ನನಗೆ ಬರಿ ಎರಡೇ ಆಯಾಮ ಅನ್ಕೋಬೇಡಿ. ಮೂರು ಆಯಾಮಾನೂ ಇದೆ. ಜಾಸ್ತಿ ಕೇಳಿದರೆ ನಾಕನೇ ಐದನೇ ಆಯಾಮಕ್ಕೂ ಚಾಚಿಕೋಬಹುದು. ಆದರೂ ಸ್ವಲ್ಪ ಹತ್ತಿರದಿಂದ ನೋಡಿದರೆ ಸಾಕು ತಕ್ಷಣ ನನ್ನ ಒಳಗೆಲ್ಲ ಗೊತ್ತಾಗೋ ಥರ ಚಿತ್ರ ಬರೀಬಹುದು.

ಓಕೆ. ಹೇಗಪ್ಪ ಅಂತ ತಲೆ ಕೆರಕೋಬೇಡಿ. ಹೀಗ್ಮಾಡಿ - ಮದ ಮತ್ಸರ ಲೋಭ ಮೋಹ ಎಲ್ಲಾನೂ ಒಂದು ಚೂರು ಚೂರು ಕತ್ತರಿಸಿ ಜೋಡಿಸಿ. ನೆಟ್ಟಗೆ ನೀಟಾಗಿ ಪಕ್ಕ ಪಕ್ಕದಲ್ಲಿ ಜೋಡಿಸಬೇಡಿ. ಒಂದರ ಮೇಲೆ ಇನ್ನೊಂದು ಇರಬೇಕು. ಲೋಭದ ಮೇಲೆ ವಕ್ರವಾಗಿ ಮದ. ಮೋಹದ ಮೂಲೆನಲ್ಲಿ ಮತ್ಸರ. ಹೀಗೆ ಸ್ವಲ್ಪ ಓರೆ ಕೋರೆ ಮಾಡಿ ಜೋಡಿಸಿ. ಎರಡು ಕಣ್ಣಗಳೂ ಸಮವಾಗಿ ಗುಂಡಗೆ ಇಡಬೇಡಿ. ಒಂದು ಸ್ವಲ್ಪ ಆಚೆಗಿಡಿ. ಒಂದು ಕಣ್ಣು ದೂರದಲ್ಲಿರೋದನ್ನ ಎವೆಯಿಕ್ಕದೆ ನೋಡೋ ಹಾಗೆ ಇದ್ದರೆ, ಮತ್ತೊಂದು ಕುರಿ ಕಣ್ಣು ಇಟ್ಟ ಹಾಗೆ ಇರಬೇಕು. ಯಾವ ಕಣ್ಣು ಹ್ಯಾಗೆ ಅಂತ ನಿಮಗೆ ನನ್ನನ್ನ ನೋಡಿದ ತಕ್ಷಣ ಗೊತ್ತಾಗತ್ತೆ. ಹಾಗೆ ಒಳ್ಳೆ ಉದ್ದನೆ ಮೂಗು ಬರೀಬೇಡಿ. ನಂದು ಮೊಂಡು. ಅಲ್ಲಲ್ಲಿ ಕೀರಿದ ಗಾಯ ಇದೆ ಮೂಗಿನ ಮೇಲೆ. ಅದನ್ನು ಮುಜುಗರ ಪಟ್ಕೊಂಡು ನೋಡದೇ ಇರಬೇಡಿ. ಬಾಯೂ ಅಷ್ಟೆ ಒಳ್ಳೇ ಗೆರೆಗಳೇನೂ ಬೇಡ. ತುಟ್ಟಿ ಹರಿದಿದೆ. ಒಂದೊಂದು ಸಲ ಅದಕ್ಕೆ ಪಿನ್ನು ಹಾಕಿಕೊಳ್ಳಬೇಕಾಗತ್ತೆ.

ಮತ್ತು

ಮುತ್ತು' ಎಂದೋದಿದಿರ? ಸಾರಿ
ಮುತ್ತು ಅಲ್ಲ ವಿಷಯ 'ಮತ್ತು'
ಅದೇ ಸರಿ

ಒಡನೆ, ಜೊತೆಗೆ ಸಹಜಾರ್ಥ
ಗುಂಡಿನ ಮತ್ತು ಮಾದಕಾರ್ಥ
ಮತ್ತು ಇಲ್ಲದಿರೆ ಆದೀತು ಅನರ್ಥ
ಅಲ್ಲಗಳೆಯದಿರಿ ಮತ್ತುವಿನ 'ಪರಮಾರ್ಥ'

ಮತ್ತು ಶಬ್ದಕುಂಟು ಗತ್ತು
ಮತ್ತು ಇಲ್ಲದಿರೆ ಸಾಹಿತ್ಯದಿ ಕುತ್ತು
ಮತ್ತು ಸೇರಿದರೆ ಹೆಚ್ಚೀತು ಕಿಮ್ಮತ್ತು
'ಮತ್ತು' ಇಂದಲೆ ಗುಂಪಿಗೆ ತಾಕತ್ತು