ಎಲ್ಲಾ ಓಕೆ , ಸೆನ್ಸಾರ್ ಯಾಕೆ?
censor ಎಂದೊಡನೆ ತಕ್ಷಣ ಮನಸ್ಸು ಸೆನ್ಸಾರ್ ಬೋರ್ಡ್ ಕಡೆಗೆ ಯೋಚನೆ ಮಾಡುವುದು ಯಾಕೆ?! corporate censorship, political censorship ಬಗ್ಗೆ ಯೊಚನೆ ಮಾಡುವುದು ಬಿಟ್ಟು.
ಸೆನ್ಸಾರ್ ಬಗೆಗೆ ನನ್ನ ಅನಿಸಿಕೆಗಳು
೧. ಫಿಲ್ಮಿನ ಸೆನ್ಸಾರ್ :
ಸೆನ್ಸಾರ್ ಬೋರ್ಡ್ ಅವರ ಪ್ರಯತ್ನಗಳಿಂದ ಪೋರ್ನ್/offesive ಸಿನಿಮಾಗಳು ತೆರೆ ಕಾಣುವುದು ನಿಂತಿದೆಯಾ? ಅವರು ರೇಟಿಂಗ್ ಕೊಟ್ಟ ಮಾತ್ರಕ್ಕೆ ಜನ ನೋಡುವುದು ನಿಲ್ಲಿಸಿದ್ದಾರ? ಅಥವಾ ನಮ್ಮ ದೇಶದಲ್ಲಿ "refusal for public display" ಅಂತ ಕೊಟ್ಟರೂ ಇಂಟರ್ನೆಟ್ಟಿನಲ್ಲಿ ಸಿಗಲಾರದೇ? ಮೊರಾಲಿಟಿ (morality) ಪ್ರಪಂಚದ ಎಲ್ಲಾ ಜನರಿಗೂ ಒಂದೇ ಆಗಿರುತ್ತದಾ? ಅಥವಾ ನಾವು "ಅಂತ" ಸಿನಿಮಾಗಳನ್ನು ನೋಡದಿದ್ದರಿಂಲೇ, ನಮ್ಮ ಜನಸಂಖ್ಯೆ, ನಮ್ಮ ಸಮಾಜದಲ್ಲಿ ನಡೆಯುವ ಅಪರಾಧಗಳು ಬಹಳ ಕಮ್ಮಿಯಾಗಿದೆಯಾ?
೨. ಪತ್ರಿಕೆಗಳ ಸೆನ್ಸಾರ್
ಪೇಪರ್ ಗಳೆಲ್ಲಾ ಪ್ರತಿಯೊಂದು ಶಬ್ದವನ್ನೂ ಸೆನ್ಸಾರ್ ಮಾಡಿದರೆ ಪೇಪರ್ರಿನ ಗತಿ ಅಧೋಗತಿ ಆಗುತ್ತದೆ. ಸೆನ್ಸಾರ್ ಮಾಡದಿದ್ದರೆ ಅಲ್ಲ. (ಇದು ಪೋರ್ನ್ ಅಥವಾ ಕೆಟ್ಟ ಶಬ್ದಗಳ ಸೆನ್ಸಾರ್ ಬಗ್ಗೆ ಅಲ್ಲ). ಅಲ್-ಜಸಿರಾ ಪತ್ರಿಕೆ ಇರಬಾರದೇ? (ಅಥವಾ ಬರೀ fox/CNN ಇರಬೇಕೇ?). Jyllands-Posten ( http://en.wikipedia.org/wiki/Jyllands-Posten_Muhammad_cartoons_controversy ) ಬಗ್ಗೆ, ಏನೆಂತೀರ? ಕಲ್ಕತ್ತ ಕುರಾನ್ ಪಿಟಿಷನ್ ಬಗ್ಗೆ ಕೇಳಿದ್ದೀರಾ? ಸೆನ್ಸಾರ್ ಬಗ್ಗೆ ಬರೆದ ಬರಹ ಸೆನ್ಸಾರ್ ಆಗಬೇಕೆ ಬೇಡವೇ?
೩.ಯಾವುದೇ ಯೋಚನೆ ಅಥವಾ ಬರಹ censor ಮಾಡಿದರೆ ಎಲ್ಲರಿಗೂ ಅದನ್ನು ಓದುವ/ಅದರ ತಪ್ಪುಗಳನ್ನು ತೋರಿಸಿ ಆ ಯೊಚನೆ ಸರಿಯಲ್ಲ ಎಂದು ಬೇರೆಯವರಿಗೆ ತಿಳಿಸುವ ಹಕ್ಕು ಕೂಡ ಇರುವುದಿಲ್ಲ. ಆ ಬರಹವೇ ಇಲ್ಲದಿದ್ದರೆ ಯಾವುದನ್ನು ಖಂಡಿಸೀರಿ? ಆಗ ಬರೆದವನು , ಅವನ ಹಿಂಬಾಲಕರಿಗೆ ಅವರು ಬರೆದಿದ್ದು ಸರಿಯಾಗಿ ಹೋಗುತ್ತದೆ. ಬೇರೆ ಜನರಿಗೆ ಅದರ ಕೀಳ್ಮೆ ಬಗ್ಗೆ ತಿಳಿಯುವುದೇ ಇಲ್ಲ!
೪. ಬರಹ ಬಿಟ್ಟು ಮನಸ್ಸಿನ ಆಲೋಚನೆ ತಡೆಯಲು ಸಾಧ್ಯವಾ? ( thought police ಬಗ್ಗೆ ಗೂಗ್ಲಿಸಿ/ಓದಿ).
೫. ಇಂದು ತಮಗೆ ಇಷ್ಟ ಇಲ್ಲದ್ದ ಬರಹ ಸೆನ್ಸಾರ್ ಮಾಡಿದರೆ, ನಾಳೆ ಯಾವುದೋ ಒಂದು ರಾಜಕೀಯ ಪಕ್ಷದ ವಿರುದ್ಧ ಆಡಿದ ಮಾತು/ಬರಹ ಸೆನ್ಸಾರ್ ಮಾಡುವುದಿಲ್ಲ ಎಂದೇನು? ಇದು ನಮ್ಮ ದೇಶದಲ್ಲೇ ಇಂದಿರಾ ಗಾಂಧಿ ಅವರ ದುರಾಡಳಿತದ ಕಾಲದಲ್ಲಿ ಆಗಿಲ್ಲವೇ? ಇಂದಿಗೂ ಚೀನಾ/ಉತ್ತರ ಕೊರಿಯಾ/ಥಾಯ್ಲ್ಯಾಂಡಿನಲ್ಲಿ ಆಗುತ್ತಿಲ್ಲವೇ? (ಕೆಲವರ ಕಣ್ಣು "ಕೆಂಪಾ"ಗುವುದಕ್ಕೆ ಮೊದಲು ಇದು ಅಮೇರಿಕಾದಲ್ಲೂ, ಒಂದು ರೀತಿಯಲ್ಲಿ ನಡೆಯುತ್ತಿದೆ ಅಂತ ಹೇಳಿಬಿಡುತ್ತೇನೆ !) ಯಾವುದು cut-off?
ಧರ್ಮದ ಬಗ್ಗೆ ಸೆನ್ಸಾರ್ ಇರಬೇಕಾದರೆ, ದೇವರನ್ನು ನಂಬದವರು-ಧರ್ಮವನ್ನು ನಂಬದವರು ಇರಬಾರದೇ? ಅಥವಾ ಒಂದು ಧರ್ಮದ (ಇದನ್ನು religon ಅಂದುಕೊಳ್ಳಿ) ವಿಮರ್ಶೆ ಹೇಳಬಾರದೇ? historical research ಮಾಡಬಾರದೇ? ಅಥವಾ ಒಬ್ಬ ಪ್ರವಾದಿ, ಒಬ್ಬ ಸನ್ಯಾಸಿ ಮಾಡಿರುವ ಕೆಲಸಗಳ ಓದು, ಅವರ ಬಗೆಗೆ ನೇರವಾದ ಬರಹ ಇರಬಾರದೇ? ಹೀಗೆ ಸೆನ್ಸಾರ್ ಮಾಡಿದರೆ ನಮ್ಮ ವಿಶ್ವವಿದ್ಯಾಲಯಗಳಲ್ಲಿರುವ ಸಾವಿರ ಸಾವಿರ ಪುಸ್ತಕಗಳನ್ನು, ನೂರಾರು PhDಗಳನ್ನು ತೆಗೆದು ಒಗೆಯಬೇಕಾದೀತು ಅಲ್ಲವೇ?
ಗೂಗ್ಲಿಸಲು ಕೆಲವು ಶಬ್ದಗಳು (ನನ್ನ ಲಿಸ್ಟಿಗೇ ನಿಮ್ಮನ್ನು ಕಟ್ಟಿ ಹಾಕಿಕೊಂಡು ಬಿಡಬೇಡಿ. ಹುಡುಕಿದರೆ ಬೇರೆ ಸಿಕ್ಕಾವು)
self-cesorship, thought police, newspeak, chilling effect, book burning, internet censorship, wikileaks (ಇದು ಬಹಳ ಆಸಕ್ತಿಕರವಾಗಿದೆ!) ಮತ್ತು ಕೊನೆಯದಾಗಿ http://www.eff.org/
ವಿ.ಸೂ : cross-posting ಬಗ್ಗೆ ಕ್ಷಮೆ ಇರಲಿ.