ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನನ್ನ ಮೊದಲ ಮಾತುಗಳು .............

ಕನ್ನಡ ದ ಎಲ್ಲಾ ಆತ್ಮೀಯ ಬಂಧುಗಳೇ, ಕನ್ನಡ ದಲ್ಲಿ ನಮ್ಮ ವಿಚಾರಗಳನ್ನು ''ಬ್ಲಾಗ್'' ಗಳ ಮೂಲಕ ಹಂಚಿಕೊಳ್ಳಲು ಅವಕಾಶಮಾಡಿಕೊಟ್ಟ ಸಂಪದ ಅಂತರ್ಜಾಲ ತಾಣಕ್ಕೆ ಆತ್ಮೀಯ ಧನ್ಯವಾಧಗಳು. ನಾಗರಾಜ್ ಎಮ್ ಎಮ್. **************

ಆಶಾವಾದಿ

ಬಯಕೆ ಎನಗಿಲ್ಲ ಹೋಗಲು ವಿಶ್ವಪಯಣ
ಕಾರಣ, ಕುಳಿತಲ್ಲೇ ತೋರುವುದು ಪ್ರೀತಿಯ
ಜಗ ದಿಟ್ಟಿಸಿದರೆ ನಾ ನನ್ನಾಕೆಯ ನಯನ!

ಕಬ್ಬದ ಸವಿ

ಇದು ನಯಸೇನನ 'ಧರ್ಮಾಮೃತಂ' ಎಂಬ  ಹಳೆಗನ್ನಡ ಕಬ್ಬದ ಸಾಲುಗಳ ಹೊಸಗನ್ನಡಯಿಸುವಿಕೆ
ಬೇರು/ಮೂಲ ಸಾಲುಗಳು ಈಗ ಸಿಗ್ತಾ ಇಲ್ಲ. ಸಿಕ್ಕಿದಾಗ ಹಾಕುವೆ

ಉಪ್ಪಿಲ್ಲದೇ ಬರೀ
ತುಪ್ಪದೂಟ ಸವಿಯಬಹುದೇ?
ರಸಿಕತನವಿಲ್ಲದೇ ಬರೀ ಜಾಳು
ಪದಕಂತೆಗಳಿಂದ ಕಬ್ಬ ಹೊಮ್ಮುವುದೇ?

ನಾಳೆ ಮುಂಜಾನೆಯ ಕನ್ನಡದ ಮಾದರಿ ! ಇಂದೇ ನೋಡಿ!

(ಇದನ್ನು ಒಂದು ಬ್ಲಾಗಲ್ಲಿ ನೋಡಿದ್ದು , ಆ ಬ್ಲಾಗಿನ ಲಿಂಕನ್ನು ಇಲ್ಲಿ ಕೊಡಬಹುದಿತ್ತು , ಆದರೆ ನೀವು ಅದನ್ನು ನೋಡಲಿಕ್ಕಿಲ್ಲ ಎಂದು ಅಲ್ಲಿಂದ ಕತ್ತರಿಸಿ ಇಲ್ಲಿ ಹಾಕಿದ್ದೇನೆ)
ಸದರೀ ಬರಹಕ್ಕೆ ನಾನು ಹಾಕಿದ ಟಿಪ್ಪಣಿಯನ್ನೂ ಕೊನೆಯಲ್ಲಿ ನೋಡಿ )

-------------------------------------------------------------------------------------------------

ನಿರಾಶೆ

ನಿರಾಶೆ

ಸರಿಯುತಿದೆ ಅಂಕದ ಪರದೆ ರಂಗಭೂಮಿಯಲ್ಲಿ
ನಟರಿನ್ನೂ ಸರಿಯಾಗಿ ತಯಾರಾಗಿಲ್ಲ
ನಟಿಸುವ ಉತ್ಸಾಹವೂ ಅವರಲಿಲ್ಲ.

ತೆರೆಯುತಿದೆ ಅಂತರಪಟ ಜಗದ ಮಂಟಪದಲ್ಲಿ
ಮಧುಮಗನಿನ್ನೂ ಯಾತ್ರೆಯಿಂದಲೇ ಮರಳಿಲ್ಲ
ಕಾಲವೆಂಬ ವಧುವು ವರಿಸಲು ಆಗಲೇ ನಿಂತಿಹಳು.

ಕಡಲಿನಿಂದೆದ್ದು ಬರುತಿಹನು ರವಿಯು
ನೋಡಲೊಲ್ಲ ಕುರುಡು ಕವಿಯು
ಕೊನೆಗೆ ಮನದೊಳಗಿನ ಕಂಗಳಿಂದಲೂ.

ನನ್ನ ಮೊದಲ ಕವಿತೆ..............

'' ಆ ಬಾನ ಚಂದಿರನ ಕುರಿತು ನನಗೊಂದು ಕವಿತೆ ಬರೆಯುವ ಆಸೆ, ಅದರೇನು ಮಾಡಲಿ ಬರೆಯಲು ಕುಳಿತಾಗಲೆಲ್ಲಾ ಅಮವಾಸ್ಯೆ.......!!!!!"

 

ನಾಗರರಾಜ್ ಎಮ್ ಎಮ್

MY KANNADA BLOG : http://mmnagaraj.wordpress.com

ಕನ್ನಡ ಪದಗೊಳ್

ನನಗೆ ಇಶ್ಟವಾದ ಹಾಡು 

 ಕನ್ನಡ ಪದಗೊಳ್ 
ಬರೆದವರು:   ಜಿ.ಪಿ. ರಾಜರತ್ನಂ

 

ಯೆಂಡ ಯೆಡ್ತಿ ಕನ್ನಡ ಪದಗೊಳ್
ಅಂದ್ರೆ ರತ್ನಂಗ್ ಪ್ರಾಣ
ಬುಂಡೇನ್ ಎತ್ತಿ ಕುಡದ್ಬುಟ್ಟಾಂದ್ರೆ
ತಕ್ಕೊ! ಪದಗೊಳ್ ಬಾಣ!

ಬಗವಂತ್ ಏನ್ರ ಬೂಮಿಗ್ ಇಳದು
ನನ್ತಾಕ್ ಬಂದಾಂತ್ ಆನ್ನು;
ಪರ್ ಗಿರೀಕ್ಸೆ ಮಾಡ್ತಾನ್ ಔನು-
ಬಕ್ತನ್ ಮೇಲ್ ಔನ್ ಕಣ್ಣು !

ಭರ್ತೃಹರಿಯ ಸುಭಾಷಿತತ್ರಿಶತಿ - ಒಂದು ಅವಲೋಕನ

ಭಾರತೀಯ ಸಾಹಿತ್ಯದಲ್ಲಿ ಸಂಸ್ಕೃತ ಸಾಹಿತ್ಯ ಅತಿ ಪುರಾತನವಾದದ್ದು. ಅತಿ ಮುಂಚೆಯಿಂದಲೇ ಸಂಸ್ಕೃತ ಕಾವ್ಯದಲ್ಲಿ ಸುಭಾಷಿತ ಎಂಬ ಪ್ರಕಾರ ಬೆಳೆದು ಬಂದಿದೆ. ರಾಮಾಯಣ, ಮಹಾಭಾರತಗಳಲ್ಲೂ, ನಂತರ ಬಂದ ಭಾಸ-ಕಾಳಿದಾಸಾದಿಗಳ ನಾಟಕ ಹಾಗೂ ಮಹಾಕಾವ್ಯಗಳಲ್ಲಿಯೂ ಸುಭಾಷಿತಗಳ ಗುಂಪಿಗೆ ಸೇರಬಹುದಾದಂತಹ ಅನೇಕ ಶ್ಲೋಕಗಳು ಕಂಡು ಬರುತ್ತವೆ. ಸುಭಾಷಿತಕ್ಕೆ ಅಕ್ಷರಶಃ ಒಳ್ಳೆಯ ನುಡಿ ಎಂದು ಅರ್ಥ. ಎಷ್ಟೋ ಬಾರಿ ಒಗಟುಗಳು, ಚಮತ್ಕಾರೀ ಪದ್ಯಗಳು ಮುಂತಾದುವುಗಳನ್ನೂ ಸುಭಾಷಿತಗಳ ಗುಂಪಿಗೆ ಸೇರಿಸುವುದು ಉಂಟು. ಎಷ್ಟೋ ಸುಭಾಷಿತಗಳನ್ನು ಬರೆದವರು ಯಾರು ಎಂಬುದು ತಿಳಿಯದಿದ್ದರೂ, ಅವು ಶತಮಾನಗಳ ನಂತರವೂ ಬಳಕೆಯಲ್ಲಿರುವುದು ಗಮನಿಸಬೇಕಾದ ಸಂಗತಿ. ಅವುಗಳ ವಸ್ತು ಜಳ್ಳಾಗಿಲ್ಲದೇ, ಗಟ್ಟಿಯಾಗಿರುವುದು ಇದಕ್ಕೆ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ.

ಐಪಿ ಟೆಲಿಪೋನಿ - ಹೊಸ ಅಲೆ

ವಿಓಐಪಿ (VOIP) ಅನ್ನುವ ಟೆಕ್ನಾಲಜಿ ಕೊಡುವ ಸವಲತ್ತುಗಳು ಕಂಪನಿಗಳು ಪಿಬಿಎಕ್ಸಗಳನ್ನು ಬಿಟ್ಟು ಐಪಿ ಟೆಲಿಫೋನಿಗೆ ಬರುತ್ತಿದ್ದಾರೆ.

ಪಿಬಿಎಕ್ಸಗಳ(ಸದ್ಯಕ್ಕೆ ಇರುವಂತ ಟೆಕ್ನಾಲಜಿಗಳ ) ತೊಂದರೆಗಳು: