ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.

ಒಂದು ಕನ್ನಡ ಸಂಸ್ಥೆಗೆ ವೆಬ್ ಸೈಟ್ ಮಾಡಬೇಕಾಗಿದೆ. ಈ ವಿಷಯದಲ್ಲಿ ನನಗೆ ಕೆಳಕಂಡ ಸಹಾಯ / ಮಾಹಿತಿ ಬೇಕಾಗಿದೆ.

೧. ಸ್ಪೆಸಿಫಿಕೇಷನ್ ಮಾಡುವುದು ಹೇಗೆ?
೨. ಖರ್ಚು ಅಂದಾಜು ಎಷ್ಟು ಬರಬಹುದು?

ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಬಹಳ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ

ವಿಶ್ವದೆಲ್ಲೆಡೆ ಸಂಭವಿಸುತ್ತಿರುವ ಆಹಾರದ ಬೆಲೆ ಏರಿಕೆಯಿಂದ ಭಾರತದಲ್ಲಿರುವ ೧.೫ ಮಿಲಿಯನ್ ಗಿಂತಲೂ ಹೆಚ್ಚು ಮಕ್ಕಳಿಗೆ ಬಹಳ ತೊಂದರೆಯಾಗಲಿದೆ ಎಂದು ಯೂನಿಸೆಫ್ ಎಚ್ಚರ ನೀಡಿರುವ ಬಗ್ಗೆ [:http://news.bbc.co.uk/2/hi/south_asia/7398750.stm|ಬಿಬಿಸಿ ವರದಿ ಮಾಡಿದೆ].

ಸಿಟಿಗಳಲ್ಲಿರುವವರಿಗೆ ಬಹುಶಃ ಬೆಲೆ ಏರಿಕೆಯ ಹಬೆ ಇನ್ನೂ ಅಷ್ಟಾಗಿ ತಟ್ಟುತ್ತಿರುವಂತೆ ಕಾಣುತ್ತಿಲ್ಲ. ದಿನಗೂಲಿ ಅಥವ ಕಡಿಮೆ ಸಂಬಳದ ನೌಕರಿಗಳಲ್ಲಿರುವ ಸಂಸಾರಗಳಿಗೆ ಬಹುಶಃ ವ್ಯತ್ಯಾಸ ಹೆಚ್ಚು ಗೊತ್ತಾಗಬಹುದು.

ಬಿಬಿಸಿ ವರದಿಯಲ್ಲಿ ಪಟ್ಟಿ ಮಾಡಿರುವ ಕೆಲವು ಅಂಶಗಳು:
• ಇಡಿಯ ವಿಶ್ವದಲ್ಲಿ ಆಗಲೇ ಸರಿಯಾಗಿ ಆಹಾರ ಲಭ್ಯವಾಗದ ಮಕ್ಕಳ ಸಂಖ್ಯೆ ಭಾರತದಲ್ಲಿಯೇ ಹೆಚ್ಚು.
• ಈಗಿನ ತೊಂದರೆಗಿಂತ ಮುಂಚೆಯೇ ಅರ್ಧಕ್ಕರ್ಧ ಭಾರತದ ಮಕ್ಕಳಲ್ಲಿ ಕುಂಟಿತ ಬೆಳವಣಿಗೆ ಕಂಡುಬಂದಿದೆ.
• ಬಡತನದಲ್ಲಿರುವ ಮಂದಿ ಎಂದಿನಂತೆ ಹೆಚ್ಚು. ಬೆಲೆ ಮಾತ್ರ ಇಮ್ಮಡಿಯಾಗಿದೆ.
• ಐದು ವರ್ಷಕ್ಕಿಂತ ಕೆಳಗಿನವರಲ್ಲಿ ೪೮% ಮಕ್ಕಳಿಗೆ ಸರಿಯಾದ ಆಹಾರ ಲಭ್ಯವಾಗುತ್ತಿಲ್ಲ. (ಪಾಕಿಸ್ತಾನದಲ್ಲಿ ಇದು ೩೭%, ಬಾಂಗ್ಲಾದೇಶದಲ್ಲಿ ೪೩% - ಎರಡೂ ಭಾರತಕ್ಕಿಂತ ಕಡಿಮೆ!)
• ಸರಕಾರ ಹಾಗೂ ಸರಕಾರೇತರ ಸಂಸ್ಥೆಗಳು ಕೃಷಿ ಕ್ಷೇತ್ರದಲ್ಲಿ ಬಂಡವಾಳ ಹೂಡಬೇಕಿದೆ. (ಕೇವಲ ರಾಷ್ಟ್ರದ ಬಜೆಟ್ಟಿನ ೨.೨% ಅಂಶ ಮಾತ್ರ ಕೃಷಿಗೆ ಹೋಗುತ್ತಿದೆ)
• ಬಡತನದಿಂದ ಮಾತ್ರವಲ್ಲ ಸರಿಯಾದ ಕ್ವಾಲಿಟಿ ಆಹಾರ ಸಿಗದೆ ಕೂಡ ತೊಂದರೆ.

ಸವಾಲೊಂದು ನಿನ್ನ ಮ್ಯಾಲ...

ಯೂ ಟ್ಯೂಬಿನಲ್ಲಿ ಯಾವುದೋ ವೀಡಿಯೋ ಹುಡುಕುತ್ತಿರುವಾಗ ಇದು ಸಿಕ್ಕಿತು. ಶಿಶುನಾಳ ಶರೀಫರ ಚಿತ್ರಕ್ಕೆ ತಯಾರು ಮಾಡಿದ್ದ ಸುಮಾರು ಎಲ್ಲ ಹಾಡುಗಳನ್ನೂ ಕ್ಯಾಸೆಟ್ಟಿನಲ್ಲಿ ಕೇಳುತ್ತ ಬಂದಿದ್ದೆ. ಇತ್ತೀಚೆಗೆ ಸಿಡಿ ಸಿಕ್ಕಿದ್ದು. ಆದರೆ ವೀಡಿಯೋ ಸುಲಭದಲ್ಲಿ ಸಿಗಲಿಲ್ಲ, ಸಿಕ್ಕರೂ ಒಳ್ಳೆಯ ಕ್ವಾಲಿಟಿಯದ್ದಾಗಿರಲಿಲ್ಲ, ಕೆಳಗಿನ ವೀಡಿಯೋ ಅಂತಹದ್ದೇ ಸಿಡಿಯಿಂದ ಬಹುಶಃ ತೆಗೆದುಹಾಕಿದಂತಿದೆ. ವೆಬ್ ನಲ್ಲಿ ನೋಡೋಕೆ ಓಕೆ.

ಕಲಿತರೆ ಹೀಗೆ...

ಈ ಹುಡುಗನ ಕೆಲಸ ನವಿಲುಗರಿಯ ಬೀಸಣಿಕೆ ಮಾರುವುದು. ಆದರೆ ಉದರನಿಮಿತ್ತ ಬೀಸಣಿಕೆ ಮಾರಲು ಬೇಕಾದಷ್ಟನ್ನು ಹಲವಾರು ಭಾಷೆಗಳಲ್ಲಿ (ಸ್ವಲ್ಪ ಹೆಚ್ಚು ಕಡಿಮೆಯಿದ್ದರೂ) ಚೆನ್ನಾಗಿಯೇ ರೂಢಿಸಿಕೊಂಡಿದ್ದಾನೆ! ನೋಡಿ:

ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು

ಇತ್ತೀಚೆಗೆ ಹೆಚ್ಚು ಹೆಚ್ಚು ಮಂದಿ ನಿತ್ಯ ಬ್ಲಾಗ್ ಮಾಡುವವರ ಪಟ್ಟಿಗೆ ಸೇರುತ್ತಿದ್ದಾರೆ, ಈ ಪಟ್ಟಿಗೆ ಸಿನಿಮಾ ತಾರೆಗಳೂ, ದಿಗ್ಗಜರೂ ಸೇರುತ್ತಿರುವುದರಲ್ಲಿ ಏನೂ ಆಶ್ಚರ್ಯವಿಲ್ಲ.

ಈಗೀಗ ಬ್ಲಾಗ್ ಮಂಡಲಕ್ಕೆ ಪಾದಾರ್ಪಣೆ ಮಾಡಿರುವ ಕೆಲವು ಸಿನಿಮಾ ದಿಗ್ಗಜರು:

ಅಮಿತಾಭ್ ಬಚ್ಚನ್:
http://blogs.bigadda.com/ab/

ಆಮೀರ್ ಖಾನ್:
http://www.aamirkhan.com/blog.htm

ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!

ತಮಾಷೆ ಕೇಳಿ. ನೀವು ನಿಮ್ಮ ಕಂಪ್ಯೂಟರಿನಲ್ಲಿ ಆಗಲೇ ವಿಂಡೋಸ್ ಹಾಕಿಕೊಂಡು ಬಳಸುತ್ತಿದ್ದು ಲಿನಕ್ಸ್ ಹಾಕಿಕೊಳ್ಳೋದಕ್ಕೆ ಹೊರಟಾಗ ಅಂಜಿಕೆಯೋ, ಹಿಂಜರಿಕೆಯೋ ಆದರೆ ನೇರ ವಿಂಡೋಸ್ ಒಳಗೇ ಇದನ್ನು ಹಾಕಿಕೊಂಡುಬಿಡಬಹುದು (ಇದಕ್ಕೆ ಮತ್ತೆ ಸ್ವಲ್ಪ ಜಾಗ ಖಾಲಿ ಮಾಡಿಕೊಂಡು ಒಂದು ಪಾರ್ಟಿಶನ್ ಹಾಕಿಕೊಳ್ಳೋದು, ಫಾರ್ಮ್ಯಾಟ್ ಮಾಡೋದು ಇವೆಲ್ಲ ಬೇಕೇ ಆಗಿಲ್ಲ).

ಹೇಗೆ ಕೆಲಸ ಮಾಡುತ್ತೆ ಇದು? ವಿಂಡೋಸ್ ನಲ್ಲಿ "Add/Remove Programs" ಅಡಿ ಇದರ ಒಂದು entry ಸೇರಿಕೊಳ್ಳುತ್ತದೆ. ನಿಮಗೆ ಲಿನಕ್ಸ್ ಬೇಡ ಎನಿಸಿದಾಗ ಅಲ್ಲಿ ಹೋಗಿ ಪ್ರೋಗ್ರಾಮ್ ತೆಗೆದುಹಾಕಿದರಾಯಿತು! ಸುಲಭ ಅಲ್ವ? ಗ್ನು/ಲಿನಕ್ಸ್ ಬಳಸುವುದನ್ನು ಹೊಸತಾಗಿ ಪ್ರಾರಂಭಿಸಿದವರಿಗೆ ಇದು ಬಹಳ ಉಪಯುಕ್ತವಾಗಬಹುದು.

ಬಂದಿದೆ ಚುನಾವಣೆ

ಮತ್ತೆ ಬಂದಿದೆ ಚುನಾವಣೆ. ಆದರೆ ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕ್ರಮದಿಂದ ಗಲಾಟೆ, ಗೌಜು, ಗದ್ದಲಗಳಿಲ್ಲ. ಪೇಟೆ ಯಾವತ್ತಿಗಿಂತಲೂ ಹೆಚ್ಚು ಶಾಂತ. ಹೀಗೆಯೇ ಇರಬೇಕು. ಯಾರೋ ಹೇಳಿದ ನೆನಪು. ಚುನಾವಣಾ ಅಯೋಗ ಇಷ್ಟು ಕಠಿಣವಾಗಬಾರದಿತ್ತು.