ಬಂದಿದೆ ಚುನಾವಣೆ
ಮತ್ತೆ ಬಂದಿದೆ ಚುನಾವಣೆ. ಆದರೆ ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕ್ರಮದಿಂದ ಗಲಾಟೆ, ಗೌಜು, ಗದ್ದಲಗಳಿಲ್ಲ. ಪೇಟೆ ಯಾವತ್ತಿಗಿಂತಲೂ ಹೆಚ್ಚು ಶಾಂತ. ಹೀಗೆಯೇ ಇರಬೇಕು. ಯಾರೋ ಹೇಳಿದ ನೆನಪು. ಚುನಾವಣಾ ಅಯೋಗ ಇಷ್ಟು ಕಠಿಣವಾಗಬಾರದಿತ್ತು. ಪ್ರತಿ ವರ್ಷಕ್ಕೊಮ್ಮೆ ಚುನಾವಣೆ ಬರತೊಡಗುತ್ತಿರುವ ಸಂದರ್ಭದಲ್ಲಿ ರಾಜಕಾರಣಿಗಳೆಂಬೋ ಸಮಾಜ ಸೇವಕರನ್ನು ಹದ್ದು ಬಸ್ತಿನಲ್ಲಿಡಲು ಆಯೋಗ ಇಷ್ಟಾದರೂ ಮಾಡಲೇಬೇಕಾಗುತ್ತದೆ. ಶೀಶನ್ನರಂಥ ಗೋಪಾಲಸ್ವಾಮಿ ಮತ್ತು ಕರ್ನಾಟಕದ ಆಯೋಗ ಮುಖ್ಯಸ್ಥರಿಗೆ ನಮ್ಮ ಅಭಿನಂದನೆಗಳು ಸಲ್ಲಬೇಕು. ಆಸ್ಚರ್ಯವೆಂದರೆ ಆಯೋಗಕ್ಕೆ ರಾಜಕಾರಣಿಗಳು ತುಸುವಾದರೂ ಹೆದರುತ್ತಿರುವುದು!
೮೮ರಿಂದ ಚುನಾವಣಾ ಕೆಲಸಗಳಲ್ಲಿ ಭಾಗಿಯಾದ ನನಗೆ ನಿಧಾನವಾಗಿ ಚುನಾವಣಾಪ್ರಕ್ರಿಯೆ ಹೆಚ್ಚು ಹೆಚ್ಚು ಪರುಪೂರ್ಣತೆಯ ಕಡೆಗೆ ಹೊರಳುತ್ತಿರುವುದು ಖುಷಿ ಕೊಟ್ಟರೂ, ಮತ ಪಟ್ಟಿಯಿಂದ ಸಹ್ಸ್ರಾರು ಸಂಖ್ಯೆಯಲ್ಲಿ ಹೆಸರು ನಾಪತ್ತೆಯಾದ ಪ್ರಕರಣಗಳು, "ಶೇಷನ್ ಕಾರ್ಡ್" ಇನ್ನೂ ಎಲ್ಲೆಡೆ ಬಳಕೆಗೆ ಬರದೇ ಇರುವುದು - ಇನ್ನೂ ಆಯೋಗ ತನ್ನ ಕಾರ್ಯಕ್ಷಮೆತೆಯನ್ನು ಹೆಚ್ಚಿಸಿಕೊಳ್ಳಬೇಕಾದದ್ದು ಅಗತ್ಯವೆನ್ನುವುದನ್ನು ಸೂಚಿಸುತ್ತ.
ಮತಪತ್ರದಲ್ಲಿ ತನಗೆ ಯಾರಿಗೂ ಮತ ಹಾಕಲು ಮನಸ್ಸಿಲ್ಲ ಎನ್ನುವ ಮತ ಹಾಕುವಂತಿದ್ದರೆ ಎಷ್ಟು ಚೆನ್ನ. ಎಲ್ಲೋ ಒಂದು ಕಡೆ ಇಂಥ ಮತಗಳೇ ಅಭ್ಯರ್ಥಿ ಪಡೆದ ಮತಕ್ಕಿಂತ ಹೆಚ್ಚಾದರೂ ಆಸ್ಚರ್ಯವಿಲ್ಲ.
ಎ.ಪಿ.ರಾಧಾಕೃಷ್ಣ