ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ ಕಾರ್ಯಾಗಾರ

ದಯವಿಟ್ಟು ಈ ಪುಟ ಓದಿ -[http://vishvakannada.com/node/338|http://vishvakannada.com/node/338]. ಅದರ ಕೊನೆಯಲ್ಲಿ ಬರುವ ಒಂದು ಸಂಭಾಷಣೆಯ ಕಡೆಗೆ ಸ್ವಲ್ಪ ಜಾಸ್ತಿ ಗಮನ ಕೊಡಿ. ನಮ್ಮಲ್ಲಿ ಬಹಪಾಲು ಜನರ ಅವಸ್ಥೆ ಹೀಗೆಯೇ ಇದೆ. ಕೆಲವರಿಗೆ ಕನ್ನಡವನ್ನು ಗಣಕದಲ್ಲಿ ಬಳಸಲು ಗೊತ್ತಿದೆ. ಪ್ರೋಗ್ರಾಮ್ಮಿಂಗ್ ಮಾಡಲೂ ಗೊತ್ತಿದೆ. ಆದರೆ ಅಂತಹವರ ಸಂಖ್ಯೆ ಬಹು ಕಡಿಮೆ.

ಮಕರ ಸಂಕ್ರಾಂತಿಯನ್ನು ಜನವರಿ ೧೪ ರಂದು ಆಚರಿಸುವುದು ತಪ್ಪಲ್ಲವೆ?

ಮಕರ ಸಂಕ್ರಾಂತಿಯನ್ನು ಅನಾದಿ ಕಾಲದಿಂದ ಜನವರಿ ೧೪ ರಂದು ಆಚರಿಸುತ್ತೇವೆ. ಈ ದಿನದಂದು ಸೂರ್ಯನು ಧನುರ್ ರಾಶಿಯಿಂದ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಇದರ ಜೊತೆಗೆ ಸೂರ್ಯನು ತನ್ನ ಉತ್ತರ ದಿಕ್ಕಿನ ಪ್ರಯಾಣವನ್ನು ಆರಂಬಿಸುತ್ತಾನೆ. ಪ್ರಕೃತಿಯಲ್ಲಿ ಇರುಳಿನ ಅವಧಿ ಕಡಿಮೆಯಾಗುತ್ತದೆ. ಚಳಿಯತೀವ್ರತೆ ಕುಗ್ಗುತ್ತಾ ನಡೆಯುತ್ತದೆ. ಬೆಳಕು ಹೆಚ್ಚಾಗಿ, ಸೂರ್ಯನ ಶಾಖ ಹೆಚ್ಚಾಗಿ ಪಕೃತಿಯಲ್ಲಿ ನವಚೈತನ್ಯ ಮೂಡುತ್ತದೆ. ಹಾಗಾಗಿ ಮಕರ ಸಂಕ್ರಾಂತಿಯು ಪುಣ್ಯ ಕಾಲವೂ ಹೌದು! (ಇದು ದೇವತೆಗಳ ಹಗಲಿನ ಆರಂಭ! ಸ್ವರ್ಗದ ಬಾಗಿಲು ತೆರೆಯುವ ದಿನ. ಭೀಷ್ಮ ಈ ದಿನಕ್ಕಾಗಿಯೇ ಕಾದಿದ್ದ) ಹಾಗಾಗಿ ಇದು ಉತ್ತರಾಯಣದ ಪುಣ್ಯಕಾಲ!

ನಾವು ಒಂದು ಸಲ ಬಾನನ್ನು ನೋಡಿದರೆ, ಸೂರ್ಯನು ಧನುರ್ ರಾಶಿಯನ್ನು ಬಿಟ್ಟು ಮಕರ ರಾಶಿಯನ್ನು ಡಿಸೆಂಬರ್ ೨೧ ರಂದು ಪ್ರವೇಶಿಸುವುದು ಕಾಣುತ್ತದೆ. ಜನವರಿ ೧೪ ರಂದು ಅಲ್ಲ! ಆದರೆ ನಾವು ಮಕರ ಸಂಕ್ರಾಂತಿಯನ್ನು ಜನವರಿ ೧೪ ರಂದು ಆಚರಿಸುತ್ತಿದ್ದೇವೆ.

ಅಂಗಳದೊಳಗೆ ಬೆಳದಿಂಗಳು ತುಂಬಿತು

ಕೆಲವು ದಿನಗಳ ಹಿಂದೆ ಸಂಪದದ ಗೆಳೆಯರೊಬ್ಬರು ಜಾವಳಿ ಅಂದರೇನು ಅಂತ ಕೇಳಿದ್ದರು . ಮೊದಲೆ ಹೇಳಿಬಿಡುವೆ - ಜಾವಳಿಗೂ ಜವಳಿಗೂ ಅರ್ಥಾತ್ ಸಂಬಂಧ ಇಲ್ಲ ಅಂತ. ಜಾವಳಿ ಜವಳಿ ಏನೂ ಅವಳಿ-ಜವಳಿ ಪದಗಳಲ್ಲ. ಆದರೆ ಪದ ಜಾವಳಿ ಸುಮಾರು ಅವಳಿ ಜವಳಿ ಅಂದ್ರೂ ತಪ್ಪಿಲ್ಲ.

ಗಿರಿಧಾಮಗಳ ರಾಣಿ ಶಿಮ್ಲಾ

ಹಸಿರು ವನರಾಜಿ, ಬೆಟ್ಟಗಳ ಸಾಲು ಸಾಲು, ತಣ್ಣಗೆ ಮೈಕೊರೆವ ಚಳಿ, ಇಬ್ಬನಿಯ ಭಾರಕ್ಕೆ ಬಾಗಿದ ಹಸಿರೆಲೆಗಳು, ಬಣ್ಣಬಣ್ಣದ ಹೂಗಳು, ಶಾಂತವಾಗಿ ಇವನ್ನೆಲ್ಲ ವೀಕ್ಷಿಸುತ್ತಿರುವ ಹಕ್ಕಿಗಳು, ಬೆಟ್ಟಗಳ ಮೇಲಿನ ತಿರುವು ಹಾದಿಗಳು. ಇವಾವುದರ ಪರಿವೆ ಇಲ್ಲದೆ ಹಳಿಯ ಮೇಲೆ ತೆವಳುತ್ತಾ ಸುರಂಗಗಳಲ್ಲಿ ನುಸುಳುತ್ತಾ ಸಾಗುವ ಮಂದಗತಿಯ ರೈಲುಗಾಡಿ. ಇವೆಲ್ಲ ಶಿಮ್ಲಾ ಎಂಬ ದೃಶ್ಯಕಾವ್ಯದ ಮೊದಲ ಪುಟಗಳು. ಹಿಂದಿನ ಸಂಜೆ ಅಂಬಾಲಾದಿಂದ ಹೊರಟುಬಂದು ಕಾಲ್ಕಾ ರೈಲುನಿಲ್ದಾಣದಲ್ಲಿ ಚಳಿಗೆ ನಡುಗುತ್ತಾ ಮುದುಡಿ ಕುಳಿತಿದ್ದ ನಮ್ಮನ್ನು ಹೊತ್ತ ಈ ಪುಟಾಣಿ ನ್ಯಾರೋಗೇಜ್ ರೈಲು ಬೆಳಗಿನ ಜಾವ ನಾಲ್ಕು ಗಂಟೆಗೆ ಹೊರಟಾಗ ಇನ್ನೂ ಗಾಢಕತ್ತಲೆ ಆವರಿಸಿತ್ತು. ಬೆಳಕು ಹರಿಯುವ ಮುನ್ನ ಅದು ಹಲವಾರು ಸುರಂಗಗಳನ್ನು ಹಾದು ತಿರುವುಗಳನ್ನು ಬಳಸಿ ಬಂದದ್ದರ ಅರಿವು ನಮಗೆ ಹೇಗೆ ತಾನೇ ಆಗಬೇಕು ಹೇಳಿ?

ಆರು ಗಂಟೆ ವೇಳೆಗೆ ಒಂದು ಸುರಂಗದ ಬಾಯಿಂದ ನಾವು ಹೊರಬಂದಾಗ ಬೆಳಕು ಒಮ್ಮಿಂದೊಮ್ಮೆಲೇ ಪ್ರಕಾಶ ತೋರಿ ನಮ್ಮ ಕಣ್ಣುಗಳು ಕಿರಿದಾದದ್ದಂತೂ ದಿಟ. ಬಾರೋಗ್ ಎಂಬ ಆ ನಿಲ್ದಾಣದಲ್ಲಿ ರೈಲು ನಿಂತಿತು. ಅಲ್ಲಿದ್ದ ಒಂದು ಫಲಕ ನಾವು ಆಗತಾನೇ ೩೭೫೭ ಅಡಿಗಳ ಅತಿ ಉದ್ದನೆಯ ಸುರಂಗವನ್ನು ಹಾದು ಬಂದಿದ್ದೇವೆಂಬುದನ್ನು ಸಾರುತ್ತಿತ್ತು. ಕೆಳಗಿಳಿದು ಎರಡೂವರೆ ಅಡಿ ಅಂತರದ ಹಳಿಗಳ ಮೇಲೆ ವಿರಾಜಮಾನವಾಗಿದ್ದ ಆರು ಬೋಗಿಗಳ ಅಲ್ಲಲ್ಲ ಆರು ಪುಟ್ಟ ಪೆಟ್ಟಿಗೆಯಂಥ ಮನೆಗಳ ಬಂಡಿಯನ್ನು ಕಣ್ತುಂಬಿಕೊಂಡೆ. ಪುಟಾಣಿ ಮಗಳು ಸ್ನೇಹಾ ಕೆಳಗಿಳಿಯಲೊಪ್ಪದೆ ಶಾಲನ್ನು ಕವಚಿಕೊಂಡು ಕಿಟಕಿ ಗಾಜಿನಿಂದಲೇ ನೋಡುತ್ತಿದ್ದಳು. ಹೊರಗೆ ಬಾ ಎಂದು ನಾನು ಕರೆದಾಗ ನನ್ನ ಬಾಯಿಂದ ಉಸಿರು ಬಿಸಿ ಹಬೆಯಾಗಿ ಹೊರಬಂತು. ಅದನ್ನು ನೋಡಿ ಅವಳು ಕಿಲಕಿಲನೆ ನಕ್ಕಳು. ಆಜುಬಾಜಿನಲ್ಲೆಲ್ಲ ಹೆಸರಿಲ್ಲದ ವಾಸನೆಯಿಲ್ಲದ ಸುಂದರ ಆರ್ಕಿಡ್ ಪುಷ್ಪಗಳೂ ನಗುತ್ತಿದ್ದವು. ಹಸಿರು ಮೈಯ ಬೆಟ್ಟಗಳ ಮೇಲೆಲ್ಲ ಮೇಘರಾಜ ಆಳ್ವಿಕೆ ನಡೆಸಿದ್ದ. ಸೂಜಿಯೆಲೆಗಳಿಂದ ಇಬ್ಬನಿ ತೊಟ್ಟಿಕ್ಕುತ್ತಿತ್ತು.

ರೆದೆಫ್ಫ್ ನಲ್ಲಿ ತಾರತಮ್ಯ

ಈ ರಿಡಿಫ್ ಸೈಟ್ ನಲ್ಲಿ ಹೊಸ ಹೊಸ ತಮಿಳ್ ,ತೆಲುಗು ಫಿಲ್ಮ್ಸ ಬಗ್ಗೆ ನ್ಯೂಸ್ ಹಾಕ್ತಾರೆ.. ಅದ್ರೆ ಕನ್ನಡದ ಬಗ್ಗೆ ಮಾತ್ರ ಇಲ್ಲ..ಇದರ ಬಗ್ಗೆ ಯಾರದ್ರೂ ಒಂದು ಪ್ರತಿಭಟನೆ ಆಯೋಜಿಸಿ, ನಾವೆಲ್ಲರೂ ಅದಕ್ಕೆ ಬಾಗ್ಹವಹಿಸಿ, ಈ ತಾರತಮ್ಯವನ್ನು ನಿಲ್ಲಸಬೇಕು..

ಹಲ್ಲುಜ್ಜಿದಿರಿ ಸರಿ,ಫ್ಲಾಸಿಂಗ್ ಮಾಡಿದಿರಾ?

ನಿಯಮಿತವಾಗಿ ಫ್ಲಾಸಿಂಗ್ ಮಾಡುವವರು ಇದನ್ನು skip ಮಾಡಿ ಬೇರೆ ಬ್ಲಾಗ್ ಓದಿ.
ಉಳಿದವರಿಗೆ ಒಂದು test-

ಬದುಕು ------ ಬವಣೆ

ಏನೆಂದು ನಾನು ಹೇಳಲಿ ಏನೆಂದು ನಾನು ಬಣ್ಣಿಸಲಿ
ಮೊದಲಿಲ್ಲದ ಕೊನೆ ಕಾನದ ಬವಣೆಯ

ಸಾವಿರ ಭಾವನೆ ಬಿಚ್ಚಿದುವ ಬಯಕೆ ನನಗೆ
ಮನದಾಳದ ನೋವಿನ ಸ್ವಾಗತ ಮೊದಲಿಗೆ

ಆದರು ನಿಮ್ಮೆದುರಿಗೆ ತೆರೆದಿಡುವ ಧೈರ್ಯ ಮಾಡಿರುವೆ
ನನ್ನ ಮನಸಿನ ಸಕ್ಷಾತ್ಕಾರ ಮಾಡ ಬಯಸಿರುವೆ

ಪ್ರೀತಿಯಲ್ಲಿ ಅರಳಿದ ಮುಂಜಾವಿನ ದಿನಗಳನ್ನು ಹೇಳಲೇ
ಅಥವ ವಿಯೋಗದ ಮುಸ್ಸಂಜೆಯ ತೋರಿಸಲೇ

ಪ್ರೀತಿ ------ ತ್ಯಾಗ????????

ಇದು ನನ್ನ ಮೂದಲ ಬ್ಲಾಗ್. ತಪ್ಪಿದ್ದರೆ ಮನ್ನಿಸಿ.

ಬ್ಲಾಗ್ಮಾಡ್ಬೇಕಂತ ಅನ್ದ್ಕೊಂಡಾಗ ಯಾವ ವಿಷಯ ಬರೆಯೋದಪ್ಪ ಅಂತ ತುಂಬ ಯೋಚಿಸಿದೆ. ಹೊಳಿಲೇಯಿಲ್ಲ. ಅದಿಕ್ಕೆ ಒಂದು ಪ್ರೇಮಗಾಥೆಯನ್ನೇ ಹೇಳುವ ಅಂತ, ಯಾರದೋ ಕಥೆ, ಯವುದೋ ಕಾಲ್ಪನಿಕ ಪಾತ್ರ ಊಹಿಸಿ ಹೇಳೋದಿಕ್ಕಿಂತ ನನ್ನ ಅನುಭವವನ್ನೆ ಹೇಳುವುದು ವಾಸಿ.

ಸಂವಾದ : ದೊಗ್ನಾಳ್ ಮುನ್ಯಪ್ಪಾರ್ ತಾವ. ವಿಶೇಷವರದಿ.

ದೊಗ್ನಾಳ್ ಮುನ್ಯಪ್ಪಾರ್ ಪುಟ : ವಿಶೇಷವರದಿ :

ದೊಗ್ನಾಳ್ ಮುನ್ಯಪ್ಪಾರ್ ಜ್ವತೆ ಮಾತು-ಕತೆ :

ರಿಪೊರ್ಟ್ರು : ನಮಸ್ಕಾರ. ಇಂದಿನ್ ದಿನ್ಗಳಲ್ಲಿ, ನೀವು ಯಾಕೊ ಸುಮ್ನಾಗಿರೊ ಅಂಗೆದೆ. ಯಾಕೆ ಅಂತವ ಕೇಳ್ಬೊದ ಸರ್ ?

ದೊಗ್ನಾಳ್ ಮುನ್ಯಪ್ಪ :