ಕತ್ತಲೆಯೆಡೆಗೆ
ಸಕಲ ಬಲ್ಲವನೆಂಬವರ
ಅರಿವಿಲ್ಲದೆ ನುಡಿವವರ
ಎಲ್ಲರ ನಡಿಗೆ
ಕತ್ತಲೆಯೆಡೆಗೆ
ಭಾವಗಳ ಬೆಸೆಯದವ
ಕನಸುಗಳ ಬೆನ್ನತ್ತದವ
ಆಸೆಯ ಕುದುರೆಯನೇರಿ
ಮದ, ಮತ್ಸರಗಳ ತೋರಿ
ನೆರೆಹೊರೆಯ ಪರಿವಿರದೆ
ಜೊತೆಗಾಗಿ ಯಾರಿರದೆ
ಸಾಗುವ ನಡಿಗೆ
ಕತ್ತಲೆಯೆಡೆಗೆ
- Read more about ಕತ್ತಲೆಯೆಡೆಗೆ
- Log in or register to post comments