ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕವನಗಳು

ಕನಸುಗಳೆಲ್ಲ ಕರಗಿಹೋದವು ನಿನ್ನ ಹಿಂದೆಯೇ ನಲ್ಲೆ
ಉಳಿದೆಲ್ಲ ನೆನಪುಗಳು ಅಳುಕುತಿವೆ ಈಗ ಎದೆಯ ತುಂಬಿ

ಹಗಲಲ್ಲಿ ನಿನ್ನ ಕಾಣುವಾಸೆ
ಇರುಳಲ್ಲಿ ನಿನ್ನ ಮುದ್ದಿಸುವಾಸೆ
ನೀ ಎದುರಿಗಿದ್ದಾಗ ಆಸೆಯೆಲ್ಲಾ ನಿರಾಸೆ

ಎನ್ನ ಮನದ ನಲ್ಲೆ ನೀನು
ನೀನಿರೆ ನಾನು ಜೀವನದಲ್ಲಿ ಬೇಡೆನು ಏನನ್ನೂ

ಈ ಜನರಲ್ಲಿ ದಿನಕ್ಕೆ ಒಂದೊಂದು ತರಹದ ಮುಖವಾಡ
ಅದು ಮೇಕಪ್ ನ ಪವಾಡ

ನಾವೆಲ್ಲಾ ಆಫ್ರಿಕಾದಿಂದ ಬಂದವರೇ?

ಸುಧಾ , ಮೇ ೧ರ ಸಂಚಿಕೆಯಲ್ಲಿ "ಮಾನವ ಇತಿಹಾಸದ ’ಸಾಂಗ್ ಲೈನ್ಸ್’" ಎಂಬ ಮುಖಪುಟ ಲೇಖನ ಪ್ರಕಟವಾಗಿದೆ.
ಇದರಲ್ಲಿ ಲೇಖಕರು ( ಲಕ್ಷ್ಮೀಪತಿ ಕೋಲಾರ) ಆಫ್ರಿಕಾದ ಬುಡಕಟ್ಟುಗಳಿಗೂ ದಕ್ಚಿಣ ಭಾರತಕ್ಕೂ , ಆಸ್ಟ್ರೇಲಿಯಾದ ಆದಿವಾಸಿಗಳಿಗೂ ಇರಬಹುದಾದ ಪುರಾತನ ನಂಟಿನ ಬಗ್ಯೆ ಬರೆದಿದ್ದಾರೆ.

ಕನ್ನಡದವರಿಗಾದ ಅವಮಾನ

ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡುಗಾರಿಕೆಯ ಕಾರ್ಯಕ್ರಮ ಸಿಡ್ನಿಯಲ್ಲಿ ಇತ್ತೀಚೆಗೆ ನಡೆಯಿತು. ನಾನು ಹೋಗಲಿಲ್ಲ. ಹೋಗಬೇಕು ಅನಿಸಲಿಲ್ಲ.

ತುಂಬಾ ಇಂಪಾಗಿ ಹಾಡಬಲ್ಲ ಎಸ್.ಪಿಯ ಹಲವಾರು ವರ್ಷಗಳ "ಟ್ರೇನ್ಡ್" ದನಿಯಾಗಲಿ, ತೀಡಿತೀಡಿ ನುಣುಪಾದ "ಕಲ್ಚರ್ಡ್" ದನಿಯಾಗಲಿ ನನ್ನಲ್ಲಿ ಉತ್ಸಾಹ ಕೆರಳಿಸುತ್ತಿಲ್ಲ. ಒಂದು ರೀತಿಯಲ್ಲಿ ಹೇಳುವುದಾದರೆ ಇಂಡಿಯಾದ ಹಲವಾರು ಜನಪ್ರಿಯ ಹಾಡುಗಾರರ ತೊಂದರೆ ಇದು ಅನಿಸುತ್ತದೆ. ಇರಲಿ ಅದು ಮತ್ತಾವಾಗಲಾದರೂ ಬೇರೆಯಾಗಿಯೇ ಯೋಚಸಲು ಇಟ್ಟುಕೊಳ್ಳುತ್ತೇನೆ.

ಓದಿದ್ದು

ಯಾವಾಗಲೋ ಓದಿದ್ದು... ಇನ್ನೂ ತಲೆಯಲ್ಲಿದೆ.

"ಹತ್ತಿರವಿದ್ದೂ ದೂರನಿಲ್ಲುವೆವು
ನಮ್ಮ ಅಹಮ್ಮಿನ ಕೋಟೆಯಲಿ!!

ಹೊಂದಿಕೆಯೆಂಬುದು ಎಷ್ಟು ಕಷ್ಟವೊ
ನಾಲ್ಕು ದಿನದ ಈ ಬದುಕಿನಲಿ"

ನಿಮಗೇನನ್ನಿಸಿತು ಬರಿಯಿರಿ.

ನಿಮ್ಮಲ್ಲಿಯೊಬ್ಬ.

ಜುಂಪಾ ಲಾಹಿರಿಯವರ ಹೊಸ ಪುಸ್ತಕ

Unaccustomed Earth ಹೆಸರಿನ ನೀಳ್ಗಥೆಗಳ ಸಂಕಲನ ಹೊರಬಿದ್ದಿದೆ. ಮನುಷ್ಯ ಸಂಬಂಧಗಳು, ಅವನ ಭಾವನೆಗಳು ಕ್ರಮೇಣ ಅರ್ಥಕಳೆದುಕೊಳ್ಳುವುದನ್ನು, ಸಡಿಲಗೊಳ್ಳುವುದನ್ನು ಮೌನವಾದ ತಲ್ಲಣಗಳಲ್ಲಿ ಗುರುತಿಸುತ್ತಲೇ ಅವುಗಳಿಂದ ಆತ ಬಿಡುಗಡೆ ಪಡೆಯುವ ಹಂತದಲ್ಲಿ ಅಥವಾ ಬಿಡುಗಡೆ ಪಡೆದ ನಂತರ ಉಳಿಯುವ ಶಿಲ್ಕು ಏನಿದೆ ಅದರಲ್ಲಿ ಆ ಸಂಬಂಧಗಳ, ಭಾವನೆಗಳ ಪ್ರಾಮಾಣಿಕತೆಯನ್ನು ಅರಸುವ ಕತೆಗಳು, ಬೇರೆ ಹೊಸ ಸಂಬಂಧದ ಹುರುಪಿನ ಆಳದಲ್ಲಿ ಹಳೆಯ ಸಂಬಂಧದ ನೆರಳುಗಳನ್ನು ಕಾಣುವ ಕಥೆಗಳು, ನಡುವಯಸ್ಸಿನಲ್ಲಿ ಸಂಬಂಧಗಳು ಪಡೆದುಕೊಂಡ ಅನಿವಾರ್ಯ ಆಕಾರ ವಿಕಾರಗಳನ್ನು ಮೌನವಾಗಿ ಚಿತ್ರಿಸುತ್ತ ಅವರ ಅಥವಾ ಎಳೆಯರ ಹೊಸ ಸಂಬಂಧಗಳನ್ನು ನಿರೂಪಿಸುವ ಕಥೆಗಳು ಇಲ್ಲಿವೆ. ಹೆಚ್ಚಾಗಿ ಇಲ್ಲಿ ಗಂಡು ಹೆಣ್ಣು ಸಂಬಂಧಗಳೇ ಪ್ರಾಮುಖ್ಯ ಪಡೆದಂತಿದೆಯಾದರೂ ತಂದೆ ಮಗಳು, ತಾಯಿ ಮಗ, ಅಕ್ಕ ತಮ್ಮ, ಕೇವಲ ಇಬ್ಬರು ಬಾಡಿಗೆದಾರರ ನಡುವಿನ ಸಂಬಂಧದ ಎಳೆಗಳು ಕೂಡ ಸಮಾನಾಂತರ ಗತಿಯಲ್ಲಿ ಕತೆಯ ಇನ್ನೊಂದು ಪಾತಳಿಯಲ್ಲಿ ತನ್ನ ಹುಟ್ಟು, ಬೆಳವಣಿಗೆ, ಕುಸಿತ ಅಥವಾ ಮಿಡಿತ ದಾಖಲಿಸುತ್ತ ಹೋಗುತ್ತವೆ ಎಂಬುದನ್ನು ಗಮನಿಸಬಹುದು. ಈ ಎಲ್ಲ ಕತೆಗಳು ಅಮೆರಿಕೆಯಲ್ಲಿ ಅಥವಾ ವಿದೇಶದಲ್ಲಿ ನಡೆಯುತ್ತವೆ, ಭಾರತದ ಬಂಗಾಳಿ ನೆರಳು ಎಷ್ಟೇ ಗಾಢವಾಗಿ ಹರಡಿದ್ದರು ಕತೆಯ ನಡೆ ಭಾರತದ ನೆಲದಲ್ಲಿಲ್ಲ.

ಜುಂಪಾ ಲಾಹಿರಿಯವರ ಹೊಸ ಪುಸ್ತಕ

ಪುಸ್ತಕದ ಲೇಖಕ/ಕವಿಯ ಹೆಸರು
ಜುಂಪಾ ಲಾಹಿರಿ
ಪ್ರಕಾಶಕರು
ರಾಂಡಮ್ ಹೌಸ್
ಪುಸ್ತಕದ ಬೆಲೆ
೪೫೦ ರೂ.