’ಅರಮನೆ’ಲಿ ಓಡಾಡಿ ಬಂದ್ರಾ...?

’ಅರಮನೆ’ಲಿ ಓಡಾಡಿ ಬಂದ್ರಾ...?

ಬರಹ

ಗೆಳೇಯರೆ ಮೊನ್ನೆ ಬಿಡುಗಡೆ ಆಯ್ತಲ್ಲ ಗಣೇಶ್ ಅಭಿನಯದ ’ಅರಮನೆ’ ನೋಡಿದ್ರಾ...?
ಪತ್ರಿಕೆಗಳಲ್ಲಿ, ಅಂತರ್ಜಾಲದ ತಾಣಗಳಲ್ಲಿ, ಬ್ಲಾಗ್‍ಗಳಲ್ಲಿ ಓದಿ, ಬೋರಿಂಗ್ ಸಿನೆಮಾ, ವೇಷ್ಟು ಅಂತ ಸುಮ್ಮನಾಗಬೇಡಿ.
ನಟ ನಾಗ್‍ಶೇಖರ್ ದು ಮೊದಲ ಚಿತ್ರದಲ್ಲಿ ಉತ್ತಮ ಅಂಕಗಳಿಸಿದ್ದಾರೆ.. ಕಥೆ ಗಟ್ಟಿ ಅಲ್ಲದಿದ್ರೂ ಸಾಧ್ಯವಾದಷ್ಟು ಜೀವ ತುಂಬಿದ್ದಾರೆ.
ಅದ್ಬುತ ಅನ್ನೋ ಮಟ್ಟಕ್ಕಿಲ್ಲದಿದರೂ ಚೆಂದ ಇದೆ ಅನ್ನುವಷ್ಟು ಇದೆ..
ಗಣೇಶ್ ಮತ್ತೆ ಭಗ್ನ ಪ್ರೇಮಿಯಾಗಿ, ಅನಂತ್‍ರ ಗೆಳೆಯ ಕಮ್ ಮೊಮ್ಮಗನಾಗಿ ವಂಡರ್‍ಫುಲ್.. ಅನಂತ್ ಕೂಡ..
ಮತ್ತೆ ಉಳಿದವರು ಅವರವರ ಪಾತ್ರ ಚೆನ್ನಾಗಿ ನಿಭಾಯಿಸಿದ್ದಾರೆ.

ಚಿತ್ರದ ಓಟ ಕೊಂಚ ನಿಧಾನ ಅನ್ನಿಸಬಹುದು.. ನೀವೆ ಸ್ವಲ್ಪ ನಿಧಾನಕ್ಕೆ ನೋಡಿ.. ಏನ್ ಅವಸರ ಇರುತ್ತೆ.. :)

ಹಾಡುಗಳು ಮೂರು ನಾಲ್ಕು ಮುದವಾಗಿವೆ, ಮನ ಮುಟ್ಟುತ್ತವೆ.. ಪತ್ರ ಬರೆಯಲಾ, ನನಗೂ ನಿನಗೂ.. ನನ್ನ ಎದೆಯಲಿ.. ಸೂಪರ್..!

ಸಾಧ್ಯವಾದರೆ ಒಮ್ಮೆ ನೋಡಿ.. ಕನ್ನಡ ಚಿತ್ರ ಸ್ವಾಮಿ..!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet