ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬೆಂಗಳೂರು ರಿಯಲ್ ಎಸ್ಟೇಟ್ - ಸುದ್ದಿ-ಗುದ್ದು

ಬೆಂಗಳೂರು ರಿಯಲ್ ಎಸ್ಟೇಟ್ - ಸುದ್ದಿ-ಗುದ್ದು

ಸುದ್ದಿ ೧ : ಬೆಂಗಳೂರು ಪ್ರಾಪರ್ಟಿ ವ್ಯಾಲ್ಯು(property value )
 ಹೆಚ್ಚಳ. ಸರ್ಕಾರಕ್ಕೆ ೮೦೦೦ ಕೋಟಿ ಆದಾಯ ನಿರೀಕ್ಷಿತ.

ಸುದ್ದಿ ೨ : ಮನೆ ಸಾಲಗಳ ಬಡ್ಡಿದರ ೧೨% ಗೆ ಹೆಚ್ಚಳ. 

ಈ ಸುದ್ದಿಗಳು ಕೇವಲ ಸುದ್ದಿಗಳಾದರೆ , ಇಲ್ಲ ಇದು ವಾಸ್ತವ. ಇದು ಸಾಮಾನ್ಯನಿಗೆ ಬಹಳ ತೊಂದರೆಗೆ ಸಿಗಿಸುತ್ತದೆ.

ಚಕೋರಂಗೆ ಚಂದ್ರಮನ ಬೆಳಕಿನ ಚಿಂತೆ

ಈಗ ಕೆಲವು ದಿನಗಳಿಂದ ಸುದ್ದಿಮಾಡಿರುವ ಬಸವಣ್ಣನವರ ಬಗ್ಗೆಯ ಜಯಪ್ರಕಾಶರ ಪುಸ್ತಕದ ಬಗ್ಗೆ ನಾವೆಲ್ಲಾ  ಸಂಪದದಲ್ಲಿ ಬಹಳಷ್ಟು ಓದಿದ್ದೇವೆ. ಆದರೆ, ಬಸವಣ್ಣ ನಮಗೆ ಬೇಕಾಗಿರುವುದು ನಮಗೆ ಅವರು ಏನು ಹೇಳಿದರು ಎನ್ನುವುದರಿಂದಲೇ ಹೊರತು, ಅವರ ಹಿನ್ನಲೆ ಏನು ಎನ್ನುವ ಕಾರಣಕ್ಕೆ ಅಲ್ಲ. ಇದನ್ನು ನಾವು ಮರೆಯದಿದ್ದರೆ, ಎಷ್ಟೋ ಗೊಂದಲಗಳಿಂದ, ಗದ್ದಲಗಳಿಂದ ದೂರಾಗಬಹುದು.

ನಮ್ಮಲ್ಲಿಲ್ಲದ ’ನಮ್ಮದು’

ನನ್ನ ತಾಯಿನುಡಿ ಕನ್ನಡಕ್ಕೂ, ತಮಿಳಿಗೂ ನಡುವಿನ ಒಂದು ಭಾಷೆ. ಮೂಲವಾಗಿ ತಮಿಳಿನಿಂದ ಬಂದರೂ, ಶತಮಾನಗಳಿಂದ ಕನ್ನಡನಾಡಿನಲ್ಲಿರುವುದರಿಂದ ನಮ್ಮ ಮಾತು ಕನ್ನಡಿಗರಿಗೆ ಸ್ವಲ್ಪ ತಮಿಳಿನಂತೆಯೂ, ತಮಿಳಿನವರಿಗಂತೂ ತೀರಾ ಕನ್ನಡದಂತೆಯೂ ತೋರುತ್ತೆ.

ನನಗೆ ತಿಳಿದಂತೆ ಕನ್ನಡದಲ್ಲಿಲ್ಲದ inclusive we ಮತ್ತು exclusive we ನನ್ನ ತಾಯ್ನುಡಿಯಲ್ಲಿದೆ.

"ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ?

೯೦೦ ರೂ ಕೊಟ್ಟು ಜನ Prestigeಗಾಗಿ HARRY POTTER ಕೊಳ್ಳುತ್ತಿರುವುದು ಎಷ್ಟು ಸರಿ?

ನಮ್ಮವೇ ಆದ ಚಂದಮಾಮದಂಥ ಐತಿಹಾಸಿಕ, ಸಾಮಾಜಿಕ ಪ್ರಜ್ನೆ ಬೆಳೆಸುವ, ವಿಚಾರಕ್ಕೆ ಹತ್ತಿಸುವ, ಎಲ್ಲಾ ಭಾಷೆಗಳಲ್ಲೂ ಸಿಗುವ ಪುಸ್ತಕಗಳೇಕೆ ಬೇಡ ನಮಗೆ?

ನಾವು-ನಮ್ಮದು ಎನ್ನುವ ಭಾವನೆ ಸ್ವಲ್ಪವೂ ಇರಬೇಡವೆ?

Harry Potter ಕೊಳ್ಳಲು ರಾತ್ರಿಯಿಡೀ ಜನ ಕ್ಯೂ ನಿಂತಿದ್ದ್ರಂತೆ.

"ಕಾವೇರಿ - ಒಂದು ಚಿಮ್ಮು ಒಂದು ಹೊರಳು" ಪುಸ್ತಕ ಬಿಡುಗಡೆ

ಭಾಗ್ಯಲಕ್ಷ್ಮೀ ಪ್ರಕಾಶನ ಪ್ರಕಟಿಸಿರುವ ಪ್ರಸಿದ್ಧ ಸಾಹಿತಿ ಶ್ರೀ ಶೇಷನಾರಾಯಣ ಅವರ

ನಿರಾಳ

ಕಾಡದಿರು ಗೆಳತಿ ಕಾಡಬೆಳಂದಿಗಳಲ್ಲಿ
ಸುಳಿಯದಿರು ಗೆಳತಿ ಒಲವ ತೋಟದಲ್ಲಿ
ನೂರಾರು ನೆನಪ ಬಿತ್ತಿ ಮನವ ಅರಳಿಸದಿರು
ನಿನ್ನೆಲ್ಲಾ ಬೆಸುಗೆ ಆಗಿದೆ ಸಂಕೋಲೆ
ಪ್ರೀತಿ ಹೆಸರಿನಲ್ಲಿ ತೊಡಿಸದಿರು ಮುಳ್ಳಿನ ಮಾಲೆ
ಹೇಗಿರಲಿ ನಾ ನಿನ್ನ ಜೊತೆ ಏಕಾಂತವ ಬಿಟ್ಟು
ಸರ್ವಸ್ವವ ನಿನ್ನ ಮಡಿಲಳಿಟ್ಟು
ತನ್ನ ತಾನಿರುವುದೇ ಏಳಿಗೆಯ ಗುಟ್ಟು

ಕಿರುಮನೆ, ನಡುಮನೆ....

ಇದು ಸುಮಾರು ೧೦ ಸುಗ್ಗಿಗಳ ಹಿಂದಿನ ಮಾತು. ನಾನು ಒಬ್ಬ ನಂಟ್ರ ಊರಿಗೆ ಹೋಗಿದ್ದೆ. ಆ ಊರಿಗೆ ಮೈಸೂರಿನ ಒಂದು ತಾಲ್ಲೂಕಾದ ನಂಜನಗೂಡು  ಪಟ್ಟಣವನ್ನು ದಾಟಿ ಹೋಗಬೇಕು. ಆಗ ಅಲ್ಲಿಗೆ ಇದ್ದುದು ಒಂದೇ ಬಸ್ಸು ಮತ್ತು ಆ ಬಸ್ಸಿಗೆ ಆ ಊರೇ ಕಡೆ ನಿಲುಗಡೆ( ಅದೇ ನಮ್ಮ ಕೆಂಪು ಬಸ್ಸು :) ). ಅದು ಒಂದು ಪುಟ್ಟ ಊರು. ಹೆಸರು ತರದಲೆ (ತರದೆಲೆ).

ಅಗಲಿಕೆಯ ನೋವು

ಅಗಲಿಕೆಯ ನೋವೇನು ಹೊಸದಾಗಿರಲಿಲ್ಲ ಶಾಂತಮ್ಮನಿಗೆ. ಆದರೂ, ದೂರದ ದಿಗಂತದತ್ತ ದ್ರಷ್ಟಿ ಹಾಯಿಸಿ ತನ್ನೆಲ್ಲ ವೇದನೆಯ ಮರೆಯುವ ವಿಪಲ ಪ್ರಯತ್ನ ಮಾಡುತ್ತಿದ್ದಳು. ಕಾರ್ಮೋಡ ಕರಗಿ ಮಳೆಯಾಗಿ, ಭೂಮಿ ತಾಯ ಮಡಿಲು ನೀರಾಗಿ ಹರಿದು, ಆಗಸ ತಿಳಿಯಾದರೂ ಶಾಂತಮ್ಮನ ಕಣ್ಣೀರು ಬತ್ತಿರಲಿಲ್ಲ. ಬುದ್ದಿ ಬಂದಾಗಿನಿಂದ ಆತ್ಮೀಯರೆನಿಸಿಕೊಂಡವರ ವಿಯೋಗದ ನೋವನುಂಡು ಬದುಕಿದ ಜೀವವದು. ಸದಾ ಕುಡಿದು ಮನೆಗೆ ಬರುತಿದ್ದ ಅಪ್ಪ, ಅಪ್ಪನ ಏಟು ತಿಂದೂ ಆತನ ಸೇವೆ ಮಾಡುತ್ತಾ ಒದ್ದೆ ಸೆರಗಿನ ಜೊತೆ ಬದುಕುತಿದ್ದ ಅಮ್ಮ. ಆಗೆಲ್ಲ ಅರ್ಥವಾಗದ ಬದುಕಿನ ಅರ್ಥ ಹುಡುಕುವ ಎಳೆ ಜೀವವಾಗಿತ್ತದು. ಅಜ್ಜಿಯ ಸಾಂಗತ್ಯ ಇಲ್ಲದಿರುತ್ತಿದ್ದರೆ ಮೊಗ್ಗಲ್ಲೇ ಮುರುಟಿ ಹೋದ ಹೂವಗಿರುತ್ತಿದ್ದಳೇನೊ!

ತೀರ ಬಡತನದ ಬದುಕಾಗಿರಲಿಲ್ಲ ಶಾಂತಮ್ಮನ ಬಾಲ್ಯ. ಹಾಕಲು ಮೈ ತುಂಬ ಬಟ್ಟೆ, ಊಟಕ್ಕೆ ಹೊಟ್ಟೆ ತುಂಬ ಅನ್ನ, ಮಲಗಲು ಕೈ ಕಾಲು ಚಾಚಿದರೂ ಮಿಕ್ಕುವಷ್ಟು ಜಾಗವಿರುವ ಮನೆಗೇನು ತೊಂದರೆ ಇರಲಿಲ್ಲ. ಬಡತನಕ್ಕೆ ಮನೆ ತುಂಬ ಮಕ್ಕಳು, ಮೈ ತುಂಬ ಸಾಲ ಎಂಬ ಸಮಸ್ಯೆಯೂ ಇರಲಿಲ್ಲ. ಶಾಂತಿಯ ಇಲ್ಲದಿರುವಿಕೆ ಬಿಟ್ಟರೆ ಬೇರೆ ಯಾವ ಬಡತನವಿರಲಿಲ್ಲ.

ಜೂನ್ ತಿಂಗಳ ದಿಡೀರ್ ಮಳೆಗೆ ಸಿಕ್ಕಿ ಚಳಿ ಜ್ವರಕ್ಕೆ ಸಿಕ್ಕ ಅಜ್ಜಿಯ ಆರೋಗ್ಯ ಆಕೆಯನ್ನು ತಿರುಗಿ ಬಾರದ ಲೋಕಕ್ಕೆ ಕೊಂಡೊಯ್ಯುವಲ್ಲಿಗೆ ಕೊನೆಗೊಂಡಿತು. ಅಜ್ಜಿಯ ಸಾವು ಶಾಂತಮ್ಮನ ಬಾಲ್ಯದ ಮೇಲೆ ಅನುಭವಿಸಲಾರದಷ್ಟು ಪರಿಣಾಮ ಬೀರಿತ್ತು. ಒಂದಷ್ಟು ದಿನ ಮರಿಗುಬ್ಬಿಯಂತೆ ಮೂಲೆ ಸೇರಿ ಕೂತ ಪುಟ್ಟ ಹುಡುಗಿಗೆ ಕಳೆದುಕೊಂಡ ಅಜ್ಜಿಯ ಮಮತೆಯ ಅವಶ್ಯಕತೆ ಇತ್ತು. ಮೊದ ಮೊದಲು ಅಳುವ ಹುಡುಗಿಯ ನಿರ್ಲಕ್ಷಿಸುತಿದ್ದ ಅಮ್ಮ, ಕರುಳ ಕುಡಿಯ ನೋವಿನ ಪರಿದಿಯೊಳಗೆ ಬರತೊಡಗಿದಳು. ಅಜ್ಜಿಯ ಮಮತೆಯ ಜೊತೆಗೆ ತಾಯ ಒಲವು, ಪ್ರೀತಿ ಶಾಂತಮ್ಮನಿಗೆ ತುಸು ವಿಳಂಬವಾದರು, ತನ್ನ ತಾಯಿಯಿಂದಲೇ ದೊರಕಿತು. ಅಪ್ಪ ಕುಡುಕನಾದರೂ, ತಾಯಿಗೆ ಕಷ್ಟ ಕೊಡುತ್ತಿದ್ದರೂ, ಶಾಂತಮ್ಮನಿಗೆ ಯಾವುದೇ ಕಷ್ಟ ಕೊಡುತ್ತಿರಲ್ಲ, ಹಾಗೆ ಪ್ರೀತಿಯೂ ಸಿಗುತ್ತಿರಲಿಲ್ಲ.

ನಾ ನೋಡಿದ ಮೀರಾ ಮಾಧವ ರಾಘವ

ಅಲ್ಲ ನಾನ್ ಅನ್ಕೊಂಡೆ "ಮೀರಾ ಮಾಧವ ರಾಘವ" ಕೂಡ ಒಂದು ತ್ರಿಕೊನ ಪ್ರೇಮ ಪ್ರಕರಣವಾಗಿರತ್ತದೆ ಎಂದು. "ಮಾಯಾ ಮ್ುಗ"ದ ಮಾಯೆಗೆ ನನ್ನ ಶಾಲಾದಿನಗಳಿಂದಲೇ ಸಿಕ್ಕಿಹಾಕಿಕೊಂಡಿದ್ದ ನನಗೆ ಶ್ರೀಯುತ ಟಿ.ಎನ್. ಸೀತಾರಾಮರು ಮಾಡುವ ಮೋಡಿಯನ್ನು ನೊಡುವ ಕಾತರ ಪಿವಿಆರ್ ಕಾಲಿಡುವವರಿಗೂ ಕಾಡುತ್ತಿತ್ತು.