ಬದುಕು-ಬವಣೆ
ಕೆಲವೊಮ್ಮೆ ’ಜ್ಞಾನಿ’ ಗಳಾಡುವ ಮಾತುಗಳು ಕುತೂಹಲವನ್ನೂ ಅದರ ಜೊತೆಗೆ ಹಲವು ಅನುಮಾನಗಳನ್ನೂ ಹುಟ್ಟು ಹಾಕುತ್ತವೆ.
’ಮತ್ತೆ ಪುಟ್ಟಿಸದಿರೋ ರಂಗಾ’ ಎಂದು ದಾಸರು ಹೇಳಿ ಮುಕ್ತಿಗಾಗಿ ಸಾಧನೆಗೈಯುತ್ತಾರೆ.
ಇನ್ನೊಂದು ಕಡೆ ಹುಟ್ಟಿಗೆ ಕಾರಣರಾದವರನ್ನೇ ’ಮಾತೃ ದೇವೋಭವ’ , ’ಪಿತೃ ದೇವೋಭವ’ ಎಂದು ಪೂಜಿಸಬೇಕಾಗುತ್ತದಲ್ಲವೇ? ಎಂತಹ ತದ್ವಿರುದ್ಧ ಚಿಂತನೆಗಳು ನೋಡಿ ! ಆಧ್ಯಾತ್ಮದ ಗುರಿಯೇ ಹುಟ್ಟು-ಸಾವು ಚಕ್ರಗಳಿಂದ ವಿಮುಕ್ತಿಗೊಳ್ಳುವುದಾದರೆ, ’ಮಾನವ ಜನ್ಮ ದೊಡ್ಡದು’ ಏಕೆ? ಮಾನವ ಜನ್ಮ ಎಂದರೆ ಅದೇನು ಕಡಿಮೆ ನರಕವೇ!. ಒಂದೊಮ್ಮೆ ಒಬ್ಬರುಗುರುಗಳು ಹೇಳುತ್ತಿದ್ದರು ಭೂಮಿ ಗಿಂತ ಭಯಂಕರ ನರಕ ಇನ್ನಿಲ್ಲವೆಂದು ಸಾಕ್ಷಾತ್ ಯಮರಾಜನೇ ಹೇಳುತ್ತಾನೇನೋ ಎಂದು.
ಹಾಗಾದರೆ ’ಜನ್ಮ’ ಎಂಬುದು ಪ್ರಕೃತಿಯ ನಿಯಮವೇ ಆದರೆ ’ವಿಮುಕ್ತಿ’ ಯೂ ನಿಯಮವೇ ಆಗಿರಬೇಕಲ್ಲವೇ? ಒಂದು ಐಚ್ಚಿಕ ಇನ್ನೊಂದು ಅನೈಚ್ಚಿಕ ಹೇಗಾಗುತ್ತದೆ?
Rating