ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅನುಕಂಪದ ಅಲೆ

ಒಂದು ರಾಜ್ಯದಲ್ಲಿ ಬೋಳೇ ಜನರ ಪಕ್ಷ(ಬೋಜಪ)ವೊಂದಿದೆ.ಅದು ಪ್ರತಿ ಚುನಾವಣೆಗೆ ಒಂದಲ್ಲಾ ಒಂದು 'ಅಲೆ' ನಂಬಿ ಹೋಗುವುದು.ಈ ಸಲ ಗೆಲುವು ನಮ್ಮದೇ ಅಂದು ಬೀಗುವುದು.ಸೋತ ಮೇಲೆ ಮುಂದಿನ ಹೊಸ ಅಲೆಗಾಗಿ ಕಾಯುವುದು ಅದರ ಕೆಲಸ.ಈಸಲ 'ಅನುಕಂಪದ ಅಲೆ' ನಂಬಿ ಓಟು ಕೇಳಲು ಹೊರಟಿದೆ.ವಿರೋಧಿ ಪಕ್ಷವಾದ ಜನತಾ ದಾಳ(ಷರತ್ತು)ದ ನಾಯಕರ ಫೋಟೋ,ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆಯುವುದ

ಮೌನ ಅಭಿಮಾನಿ

ಸಂಪದದಲ್ಲಿ ಅನೇಕ ಉತ್ತಮ ಲೇಖನಗಳು,ಕವಿತೆ,ಬ್ಲಾಗ್... ಬರುತ್ತಿವೆ.ಆದರೆ ಹೆಚ್ಚಿನವರು(ನನ್ನನ್ನೂ ಸೇರಿಸಿ) ಅದನ್ನು ಮೆಚ್ಚಿ ಒಂದು ವಾಕ್ಯವಾದರೂ ಪ್ರತಿಕ್ರಿಯೆ ಬರೆಯುವುದಿಲ್ಲ.


'ವಕ್ರನಾದ ಶುಕ್ರ'ಹಂಸಾನಂದಿಯವರ ಲೇಖನ ಚೆನ್ನಾಗಿತ್ತು.'ಮೋಹನ ರಾಗದ ಬಗ್ಗೆಯೂ ಲೇಖನಗಳು ಮೋಹಕವಾಗಿತ್ತು.(ನನ್ನ ಮಗ ಸಂಗೀತ ಜೂನಿಯರ್ ಪರೀಕ್ಷೆಗೆ ಕಟ್ಟಿದಾಗ ಸಂಗೀತಕ್ಕೆ ಸಂಬಂಧಿಸಿದ ಕೆಲ ಪುಸ್ತಕಗಳನ್ನು ತಂದಿದ್ದೆ.ಅವುಗಳಲ್ಲಿ ಇಂಗ್ಲೀಷ್ ಗ್ರಾಮರ್ ಕಲಿಸಿದಂತೆ ಸಂಗೀತ ಪಾಠಗಳಿತ್ತು.)ಆ ದಿನದಿಂದ ಬೇರೆ ರಾಗಗಳ ಬಗ್ಗೆ ಅವರ ಲೇಖನ ಬರುವುದನ್ನು ಕಾಯುತ್ತಿದ್ದೇನೆ ಅಷ್ಟೆ. ಪ್ರತಿಕ್ರಿಯೆ ಬರೆಯುವ ಗೋಜಿಗೆ ಹೋಗಲಿಲ್ಲ.


ಪತ್ರಿಕೆ,ವಾರಪತ್ರಿಕೆ,ಟಿ.ವಿ.,ರೇಡಿಯೋ,ಸಿನೆಮಾದಲ್ಲೂ ಹಲವು ವಿಷಯಗಳು ಮೆಚ್ಚಿಗೆಯಾಗುತ್ತದೆ.ನಾವು ಒಂದು ಲೇಖನ/ಕಾರ್ಯಕ್ರಮವನ್ನು ಮೆಚ್ಚಿ ಪತ್ರ ಬರೆದಿದ್ದು ಇದೆಯೋ? ಈಗ ಪತ್ರಿಕೆ,ವಾರಪತ್ರಿಕೆಗಳಲ್ಲಿ ಕೊನೇ ಪುಟಕ್ಕೆ ಮಾತ್ರ ಸೀಮಿತವಾಗಿದ್ದ ಸಿನೆಮಾ ವಿಷಯ ಪ್ರತಿ ಪುಟಗಳನ್ನು ಕಬಳಿಸುತ್ತಾ ಮೊದಲ ಪುಟಕ್ಕೂ ಆಗಮಿಸಿದೆ.


'ಚಂದನ' ಬಿಟ್ಟು ಉಳಿದ ಟಿ.ವಿ.ಯವರಿಗಂತೂ ಸಂಗೀತ,ಸಾಹಿತ್ಯ,ಹಾಸ್ಯವೆಲ್ಲಾ ಸಿನಿಮಾಕ್ಕೆ ಸಂಬಂಧಿಸಿದ್ದು ಮಾತ್ರ. ಕ್ರಿಕೆಟ್,ಸಿನೆಮಾ,ರಾಜಕೀಯದ ಅಭಿಮಾನಿಗಳು ಮಾತ್ರ ಕಾರ್ಯತಹ ಅಭಿಮಾನ ತೋರಿಸುವರು.ನಮ್ಮದೇನಿದ್ದರೂ ಕೇವಲ ಮೌನಾಭಿಮಾನ.


ಮೆಚ್ಚುಗೆ ನುಡಿ ನಮ್ಮ ಹೃದಯದಲ್ಲಿರುತ್ತದೆ.ನಾಲಗೆಗೆ ಬರುವುದಿಲ್ಲ. ತಮ್ಮ ತಮ್ಮ ಮನೆಯಲ್ಲಿ ಇನ್ನೂ ಅಧ್ವಾನ.ಹೃದಯದಲ್ಲಿ ಮೆಚ್ಚುಗೆ,ಬಾಯಲ್ಲಿ ಕಿಡಿನುಡಿ .......

ಮಂಗಳೂರಿನಲ್ಲಿ ತುಳು

ಹಾಯ್,

ಕಳೆದ ಕೆಲವು ತಿಂಗಳ ಹಿಂದೆ ಹೌದು ನಮ್ದ್ ಮಂಗಳೂರು ಕನ್ನಡ ಏನ್ನೀವಗ ಎಂಬ ನನ್ನ ಬರಹಕ್ಕೆ ಅಮೋಘ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೆಲವರು ಪರಿಹಾಸ್ಯ ಮಾಡಿದ್ರೆ ಇನ್ನು ಕೆಲವರು ಸಲಹೆ ನೀಡಿದ್ರಿ. ಕೆಲವರು ಸಂತಾಪನೂ ಸೂಚಿಸಿದ್ರಿ. ಉಳಿದವರು ಓದಿ ಸುಮ್ಮಗಾದ್ರಿ. ನಿಮಗೆಲ್ಲರಿಗೂ ಅನಂತ ವಂದನೆಗಳು.

ಲೀನಕ್ಸು , ಉಬುಂಟು , ಕನ್ನಡ ( ಕನ್ನಡ ಕಂಪ್ಯೂಟರ್ ಪಾಠ )

ಲಿನಕ್ಸ್ ಅನ್ನೋದು ವಿಂಡೋಸ್ ತರಹ - ಕಾರ್ಯಕಾರೀ ವ್ಯವಸ್ಥೆ . ಆಪರೇಟಿಂಗ್ ಸಿಸ್ಟಮ್ಮು .
ವಿಂಡೋಸ್ ಗೆ ಬದಲಿ ಆಗಿ ಬಳಸಬಹುದು . ಅಗ್ಗ ; ಅನೇಕಸಲ ಪುಕ್ಕಟೆ !
ಬಹಳ ಹಣ ಕೊಟ್ಟು ವಿಂಡೋಸ್ ಖರೀದಿ ಮಾಡುವ ಬದಲು ಅಥವಾ ಕಳ್ಳ ವಿಂಡೋಸ್ ಬಳಸುವ ಬದಲು ಇದನ್ನು ಬಳಸಬಹುದು .

ಯಾರು ಹಿತವರು?

ಯಾರು ಹಿತವರು
ನಮಗೆ ಈ ಮೂವರೊಳಗೆ
ಜೆ ಡಿ ಎಸ್ಸಾ, ಬಾ ಜ ಪಾ,
ಇಲ್ಲಾ ಕಾಂಗ್ರೆಸ್ಸಾ

ಒಬ್ಬರು ಸಂಸಾರಕ್ಕಾಗಿ
ಇನ್ನೊಬ್ಬರು ಧರ್ಮಕ್ಕಾಗಿ
ಮತ್ತೊಬ್ಬರು ಅಲ್ಪರಿಗಾಗಿ
ಯಾರಿಹರು ನಮಗಾಗಿ

ಇವರ ಸಿದ್ಧಾಂತ
ರಗಡ ರಾದ್ದಾಂತ
ಎಂದು ಆದೇವು ನಾವು
ಮುಕ್ತ ಮುಕ್ತ ಮುಕ್ತಾ

ಇವರ ನಂಬಿ ಕೆಡದವರಿಲ್ಲ
ಎಮಗೆ ಬೇರೆ ವಿಧಿ ಇಲ್ಲ
ಏನು ಮಾಡಲಿ ಎನ್ನ
ಶ್ರೀಚನ್ನಮಲ್ಲಿಕಾರ್ಜುನ

ನಗುತಿಹುದು ಆ ನಕ್ಷತ್ರ

ಹಿತ್ತಲ ಬಾನಿನಲ್ಲಿ ನಗುವ ಚಂದ್ರ,
ನಕ್ಷತ್ರ ಒಂದು ನನ್ನ ನೋಡಿ ನಗುವುದು,
ಆ ನೋಟ ನನ್ನ ನಲ್ಲನ ನೋಟದಂತಿಹುದು,
ನಾ ನೋಡಿದಾಗಲೆಲ್ಲ ಕಣ್ಣ ಮಿಟಿಕಿಸುವುದು,
ಆ ನಕ್ಷತ್ರ ನನ್ನ ನೋಡಿ ಮುಸು ಮುಸು ನಗುವುದು

ಮರೆಯಲಾರದ ಸಣ್ಣಕಥೆಗಳು -೨

ಹಲವಾರು ದಿನಗಳ ನಂತರ ಒಂದು ಮರೆಯಲಾರದ ಕಥೆಯ ಬಗ್ಗೆ ಬರೆಯಬೇಕೆನ್ನಿಸಿತು. ಕೆಲವು ದಿನಗಳ ಹಿಂದೆ ಅಶ್ವತ್ಥರ ನಾಸೀಂ ಬೇಗಂ ಅನ್ನುವ ಒಂದು ಸಣ್ಣಕತೆಯ ಬಗ್ಗೆ ಬರೆದಿದ್ದೆ. ಇವತ್ತೂ ಅವತ್ತಿನ ತರಹವೇ ಇನ್ನೊಂದು ಸರಳವಾದ ಕಥೆಯಮೇಲೆ ಬರೆಯುತ್ತೇನೆ.