ಸುಧೆಯಾದ ಹೃದಯ
ಮರೆಯೆ ನಾ ತೊರೆಯೆ ಈ ಧರೆಯ,
ಪರ್ಯಾಯವಿಲ್ಲದ ಕಾರಂಜಿಯ ಸುಧೆಯ.
ಅಂಬರದ ಬಿಳಿಯ ಮೋಡದ ಹೃದಯ,
ಸುರಿಸುವೆ ನಲ್ಮೆಯ ಜೇನಿನ ಮಳೆಯ,
ತುಂಬುವೆ ಪನ್ನೀರಿನ ಧಾರೆಯ,
ಕಾದಿರುವೆ ಹಾದಿಯ, ನೀ ಬಾರೆಯ ?
ಮರೆಯೆ ನಾ ತೊರೆಯೆ ಈ ಹೃದಯ,
ಸಾಟಿಯಿಲ್ಲದ ಕಾರುಣ್ಯದ ಸುಧೆಯ.
ತೂಗುವೆ ಜೀವನದ ತೂಗುಯ್ಯಾಲೆಯ,
ಜೀವವೆ ಕಾದಿದೆ ಬಂದಿಲ್ಲಿ ನೆಲೆಸೆಯ,
ಹಾಕುವೆ ಅಂಬರಕೆ ಚಿತ್ತಾರದ ರಂಗೋಲಿಯ,
ಸುಮವೆ ಕಣ್ತುಂಬಿ ನೀ ನೋಡೆಯ.
ಮರೆಯೆ ನಾ ತೊರೆಯೆ ಈ ಧರೆಯ,
ಸ್ನೇಹ-ಪ್ರೀತಿ ಜೀವನದ ಸುಧೆಯ.
ಹಿಮಹಿಮದಿಂದ ಕೂಡಿದೆ ಹಿಮಾಲಯ,
ಸ್ನೇಹ-ಪ್ರೀತಿಗಳಿಂದ ತುಂಬಿದೆ ದೇವಾಲಯ,
ಸೊಉಂದರ್ಯದ ದಯೆ-ಕರುಣೆಯೆ ಅಡಿಪಾಯ,
ನನ್ನೀ ಬಾಳಿಗೂ-ಸ್ವರ್ಗಕ್ಕೂ ಸಮನ್ವಯ !
ಮರೆಯೆ ನಾ ತೊರೆಯೆ ಈ ಹೃದಯ,
ಜೀವನದ ಹನಿಹನಿಯ ಸುಧೆಯ.
ಸಾಗರದಲ್ಲಿ ಭಾಸವಾಗಿರುವ ನಿಧಿಯ,
ಸ್ವರ್ಗಲೋಕದ ಅಮೃತದ ಹೊಳೆಯ,
ವೀರಫುರುಷನಲ್ಲಿರುವ ವಿಜಯ,
ನಿನ್ನೀ ಮೊಗದಲ್ಲಿ ಇರುವ ಕಳೆಯ.
ಮರೆಯೆ ನಾ ತೊರೆಯೆ ಈ ಧರೆಯ,
ಸರ್ವೋದಯವಾಗಿರುವ ಸುಧೆಯ.
ಅಂಬರದಲ್ಲಿ ತೇಲಿ ಕುಣಿಯುವ ಆಸೆಯ,
ಕಟ್ಟುವೆಯಲ್ಲಿ ನಮ್ಮಿ ಬಾಳ್ವೆಯ ಕೋಟೆಯ,
ಸದಾ ಮೃದುವಾಗಿದೆ ತನ್ಮಯ,
ಸುಧಾ ಮಯವಾಗಿದೆ ಈ ಹೃದಯ.
ಮರೆಯೆ ನಾ ತೊರೆಯೆ ಈ ಹೃದಯ,
ನನ್ನೀ ಜೀವನ-ಹೃದಯದ ಸುಧೆಯ.
ಸ್ನೇಹದಿಂದ
ಗಣೇಶ್ ಪುರುಷೋತ್ತಮ