ಅನಾಮಿಕನಿಗೆ
ಹೆಸರಿಲ್ಲದವನಿಗೆ
ನಾನು ನೆನ್ನೆ ನಿನ್ನ ನೋಡಿದೆ ೧೦ ವರ್ಷಗಳ ಈ ಸುಧೀರ್ಘ ಅವಧಿಯ ನಂತರ. ಸಮಯ ನನ್ನಲ್ಲೂ, ನನ್ನ್ ಜೀವನದಲ್ಲೂ ಏನೇನೋ ಬದಲಾವಣೆ ಮಾಡಿದೆ. ಹಾಗೆಯೆ ನಿನ್ನ ಮುಖದಲ್ಲೂ .
ಹಿಂದಿನ ಆ ದಿನಗಳನ್ನು ಮತ್ತೊಮ್ಮೆ ನೆನಪಿಸಿಕೊಂಡರೆ ಈಗಲೂ ಕಿರುನಗೆ ಬರುತ್ತದೆ.
ನನ್ನ ಜೀವನದಲ್ಲಿ ಆಗಷ್ಟೆ ವಸಂತ ಕಾಲ . ಸ್ಕೂಲಿಗೆ ಹೋಗುವುದು , ಹರಟೆ ಹೊಡೆಯುವುದು, ಜಗಳ ಮಾಡುವುದು ಇವಿಷ್ಟೆ ಪ್ರಪಂಚ ನಮಗೆಲ್ಲಾ.
ಆ ದಿನ ಬಸ್ ಕೆಟ್ಟು ನಿಂತು ಹೋಗಿತ್ತು ಅದೇ ಗೋವರ್ಧನ ಸ್ಟಾಪ್ ನಲ್ಲಿ .
ನಮಗೆಲ್ಲ ಮನೆಗೆ ಲೇಟ್ ಆಗಿ ಹೋಗಬಹುದಲ್ಲ ಎಂಬ ಖುಷಿ .
ಆಗಲೆ ಗೆಳತಿಯೊಬ್ಬಳು "ಏಯ್ ನೋಡೆ ಅಲ್ಲಿ ಯಾರೊ ಹ್ಯಾಗೆ ತಿನ್ನೋ ಹಾಗೆ ನೋಡ್ತಾ ಇದಾನೆ " ಅಂದಳು .
ಇನ್ನೊಬ್ಬಳು " ಅಯ್ಯೊ ಬಿಡ್ರೆ ಅವರಿರೋದೆ ನೋಡೋಕೆ " ಅಂತ ಹೇಳಿದಳು
ಆದರೂ ಕಳ್ಳ ಮನಸ್ಸು ನೋಡೆ ಬಿಡುವ ಎಂದು ತಿರುಗಿದೆ. ಅದನ್ನೆ ಕಾಯುತ್ತಿರುವ್ವನಂತೆ ನೀನು ಕಣ್ಣು ಮಿಟುಕಿಸಿದೆ (ಹೊಡೆದೆ). ಕೋಪದಿಂದ ರಾಸ್ಕಲ್ ಎಂದು ಅಂದಿದ್ದನ್ನು ನೀನು ಕೇಳಿಸಿಕೋಡೆಯೇನೂ . ಸೀದಾ ನನ್ನ ಬಳಿಯೇ ಬರುವುದೇ?
ನನ್ನ ಸ್ನೇಹಿತೆ" ಯಾಕೆ ಏನಾದ್ರೂ ಚಪ್ಪಲೀಲಿ ಬೇಕಿತ್ತಾ " ಅಂತ ಕೇಳಿದಾಗ ,
"ಓ ಅವರು ಕೊಟ್ಟರೆ ತಗೋಳಕ್ಕೆ ರೆಡಿ " ಆಂತ ಹೇಳಿದೆ ನನ್ನತ್ತ ಕೈ ತೋರಿ.
ನಾನ್ಯಾಕೆ ಅಲ್ಲಿ ನಿಂತಿರಬೇಕು? ಸ್ನೇಹಿತೆಯ ಕೈ ಹಿಡಿದು ಕೊಂಡು ಸಿಕ್ಕ ಬಸ್ ಹತ್ತಿದೆ.
ಅದರೆ ನೀನು ಮತ್ತೆ ಮತ್ತೆ ನನ್ನ ಹಿಂದೆ ಬಂದು ನಿಂತೆ ಹಿಂದೆ ತಿರುಗಿದಾಗಲೆಲ್ಲಾ ಒಂದು ಸ್ಮೈಲ್ ಕೊಡುತ್ತಿದ್ದ್ದೆ
ಅಷ್ಟೆ ಅಲ್ಲ ನಾನಿಳಿಯುವ ಸ್ಟಾಪ್ ನಲ್ಲೇ ಇಳಿದೆ .
ಬಸ್ ಸ್ಟಾಪ್ ನಿಂದ ನಮ್ಮ ಮನೆಯ ವರೆಗೂ ನನ್ನ ಹಿಂದೆ ಹಿಂದೆಯೆ ಬರುತ್ತಿದ್ದಾ ಗ ಹೆದರಿಕೆ ಜಾಸ್ತಿಯೇ ಆಗಿತ್ತು.
ಆದರೆ ನೀನು ನಮ್ಮ ಮನೆಯ ಮುಂದೆಯೇ ಹೋಗಿ ಇನ್ನೂ ಕೆಳಗಡೆ ಹೋದಾಗ ತಿಳಿಯಿತು ನಿಮ್ಮ ಮನೆಯೂ ಅಲ್ಲೇ ಎಂದು .
ಅಂದಿನಿಂದ ಶುರು ನಿನ್ನ ಕೀಟಲೆ ನಾನು ಸ್ಕೂಲಿಗೆ ಹೊರಡುವ ಸಮಯಕ್ಕೆ ನೀನೂ ಹಾಜಾರ್ ಮನೆಯ ಮುಂದೆ . ಕಲರ್ ಡ್ರೆಸ್ ಹಾಕಿದಾಗ ನಾನ್ಯಾವ ಬಟ್ಟೆ ಹಾಕುತ್ತಿದ್ದೇನೊ ನೀನೂ ಅದೇ ಕಲರ್ ಬಟ್ಟೆ ಹಾಕುತ್ತಿದ್ದೆ. ವಾಪಸ್ ಬರುವ ಸಮಯಕ್ಕೆ ನೀನು ಬರುತ್ತಿದೆ ಹಿಂದೆಯೇ. ಕಾಲೇಜ್ ಅಟೆಂಡ್ ಮಾಡುತ್ತಿದ್ದೆಯೋ ಇಲ್ಲವೋ. ನನ್ನ ಬರ್ತ್ ಡೆ ದಿನ ದೂರದಿಂದಲೆ ನನ್ನ ಉಡುಗೆಯ ಬಗ್ಗೆ ಬೊಂಬಾಟ್ ಎಂಬ ಸನ್ನೆ ಮಾಡಿದ್ದೆ.
ಗೆಳತಿಯರ ರೇಗಿಸುವಿಕೆಯಿಂದ ನಾನು ನಿನ್ನನ್ನು ಇಷ್ಟ ಪಡುತ್ತಿದ್ದ್ದೇನೆಂದು ಅಂದುಕೊಂಡೆ. ನಾವೆಲ್ಲಾ ನಿನಗೆ ಲಾಲ್ ಅಂತ ಹೆಸರಿಟ್ಟಿದ್ದೆವು (ಲಾಲ್ ಅಂದರೆ ಕೆಂಪು ಅಂತ. ನೀನು ಕೆಂಪು ಬಟ್ಟೆ ಹಾಕಿದ್ದೆ ಅಂದು ಮೊದಲ ದಿನ).
ಹೀಗೆ ಗೊತ್ತಿಲ್ಲದೆ ನೀನು ನನ್ನ ನಾನು ನಿನ್ನ ಕಾಯಲು ಶುರು ಮಾಡಲಾರಂಭಿಸಿದೆವು . ಒಮ್ಮೆಯೂ ನಿನ್ನೊಡನೆ ಮಾತಾಡಿರಲಿಲ್ಲ ನಾನು. ನೀನು ಮಾತಾಡಲು ಬಂದಾಗಲೆಲ್ಲಾ ಓಡಿ ಹೋಗುತ್ತಿದ್ದೆ ನಾನು. ಮನೆಯ ಪರಿಸ್ಥಿತಿ ನನ್ನನ್ನು ದುಡುಕದಂತೆ ತಡೆದಿತ್ತು.
ಕೆಲವು ದಿನಗಳ ನಂತರ ಅಂದು ದಿನಸಿ ಅಂಗಡಿಯಲ್ಲಿ ಏನೂ ತೆಗೆದುಕೊಳಲು ಬಂದೆ ನಾನು . ಅಲ್ಲೆ ನೀನು ಕಾಣಿಸಿದೆ . ಹೆದರಿಕೆಯಿಂದ ಹೃದಯ ಹೊಡೆದುಕೊಂಡಿತು. ನಿನ್ನ ಜೊತೆಯಲ್ಲಿ ನಿಮ್ಮ ತಂದೆ ನಿಂತಿದ್ದರು. ಅವರಿಗೆ ಏನೂ ಹೇಳಿ ಓಡಿ ಬಂದವನೇ ." ನಮ್ಮ ಅಪ್ಪಂಗೆ ಬಾಂಬೆಗೆ ಟ್ರಾನ್ಸ್ಫೆರ್ ಆಗಿದೆ . ಇದು ಅಲ್ಲಿನ ಆಡ್ಡ್ರೆಸ್ . ನಾನು ಮಾತಾಡೋಕೆ ಬಂದಾಗಲೆಲ್ಲ ತುಂಬ ಹೆದರ್ಕೋತಿದ್ದ್ರಿ ನೀವು . ನಂಗೆ ನೀವಂದ್ರೆ ತುಂಬ ಇಷ್ಟ . ಐ ಲೌ ಯು " ಅಂತ ಹೇಳಿ ಯಾವುದೋ ಮಾಯ್ದಲ್ಲಿ ಕೈಗೆ ಆ ಚೀಟಿ ತುರುಕಿ ಓಡಿ ಹೋಗಿದ್ದೆ .
ನಾನೋ ಹೆದರಿಕೆಇಂದ ಆ ಚೀಟಿಯನ್ನು ಅಲ್ಲೇ ಬೀಳಿಸಿ ಮನೆಗೆ ಓಡಿದ್ದೆ.
ಅದಾದ ಮೇಲೆನೀನು ಕಾಣಲಿಲ್ಲ
ನಾವೂ ಅಲ್ಲಿಂದ ಬೇರೆ ಊರಿಗೆ ಹೋದೆವು .
ಅದಾದ ಮೇಲೆ ನನಗೆ ನಿನ್ನ ನೆನಪು ಬರಲೇ ಇಲ್ಲ. ಬಂದರೂ ಸಹಾ ಅದು ಕೇವಲ ಆಕರ್ಷಣೆ ಮಾತ್ರ ಅಂದುಕೊಂಡು ನನ್ನ ಗುರಿ ಸಾಧಿಸುವತ್ತ ಹೆಜ್ಜೆ ಹಾಕಿದೆ .
ಈಗ ಮದುವೆಯೂ ಆಗಿದೆ ಮಗುವೂ ಇದೆ.
ಆದರೆ ನೆನ್ನೆ ನೀನು ಕಾಣಿಸಿದೆ . ಇವರಿಗೆ ನಿನ್ನ ವಿಷ್ಯ ಗೊತ್ತಿದೆ . ನಾನು ನಿನ್ನನ್ನು ತೋರಿಸಿದೆ.
ಅಷ್ಟರಲ್ಲಿ ನಿನ್ನ ಪಕ್ಕದಲ್ಲಿ ಮತ್ತೊಬ್ಬರು ಕಾಣಿಸಿಕೊಂಡಳು ಅವಳು ನಿನ್ನ ಹೆಂಡತಿ ಇರಬಹುದೆನಿಸಿತು.
ಅವಳ ಕಂಕುಳಲ್ಲೂ ಮಗು. ನಿನ್ನ ಮುಖದಲ್ಲಿ ನನ್ನನ್ನು ಕಂಡು ಗಲಿಬಿಲಿ. ಕೂಡಲೆ ಅಲ್ಲಿಂಡ ಓಟ ಕಿತ್ತೆ
ಜೀವನ ಎಷ್ಟು ವಿಚಿತ್ರ ಅಲ್ಲವೇ?
ಇತೀ ನಿನ್ನ
ಒಂದು ಕಾಲದ ಸಹ ಪ್ರಯಾಣಿಕಳು
(ಇದು ವಿಕದ ಸಿಂಪ್ಲಿಸಿಟಿ ಪೇಜಿನ ಈ ಗುಲಾಬಿಯು ನಿನಗಾಗಿ ಯಿಂದ ಪ್ರೇರಿತ, ಇದು ಯಾರ ಕತೆ ಎಂದುದಕ್ಕೆ ಉತ್ತರ " ಎಲ್ಲರ ಕತೆ" :) )
Comments
ಉ: ಅನಾಮಿಕನಿಗೆ
ಉ: ಅನಾಮಿಕನಿಗೆ
In reply to ಉ: ಅನಾಮಿಕನಿಗೆ by santhosh kumar
ಉ: ಅನಾಮಿಕನಿಗೆ