ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಎಲ್ಲಿರುವೆ???

ಎಲ್ಲಿರುವೆ?

ಬಹು ದಿನಗಳ ಆಸೆ, ಬರೆಯಲು ಮತ್ತೊಂದು ಕವಿತೆ
ಎಷ್ಟು ಪ್ರಯತ್ನಿಸಿದರೂ ಆಗದು - ನನ್ನಲ್ಲಿ ಶಬ್ದಗಳಾ ಕೊರತೆ?

ಹಿಡಿದೆ ಪೆನ್ನು-ಪೇಪರನ್ನು ಬರೆದೇ ತೀರುತ್ತೇನೆಂದು
ತಿಣುಕಿದೆ ಸಾಲೊಂದ ಬರೆಯಲು - ಕವಿತೆ ಮುಗಿಯುವುದೆಂದು?

ಎಷ್ಟು ಹುಡುಕಿದರೂ ಸಿಗದು ಪದಗಳೊಂದು ನೆಟ್ಟಗೆ
ಎಲ್ಲಿ ಹೋಯಿತೆನ್ನ ಸ್ಫೂರ್ತಿ? ಮನವಾಗಿದೆ ಕೊಟ್ಟಿಗೆ

ಹೊಸ ಚಿಗುರು-ಹಳೆ ಬೇರು

ನಿರಂತರ ಬದಲಾವಣೆಗೆ ತುಡಿಯುವ ಮಾನವನ ಜಗತ್ತಿನಲ್ಲಿ ಪ್ರಕೃತಿಯೊ ಸೇರಿದಂತೆ ಕಾಲದ ಪ್ರವಹಿಸುವಿಕೆ ತನ್ನ ಪ್ರಭಾವ ಬೀರುತ್ತಲೇ ಇರುತ್ತದೆ.  ಹೊಸ ನೀರು ಹಳೆಯದರೊಂದಿಗೆ ಬೆರೆತು ಕೆಂಪು ಕೆಂಪಾಗಿ ಕಾಣುತ್ತ ಹಳ್ಳ ಕೊಳ್ಳಗಳಿಂದ ತಳಾತಳದಿಂದ ಕಸಕಡ್ಡಿ ಕೊಳೆಯನೆಲ್ಲ ಮೇಲೆತ್ತಿ ತೆಗೆದು ಕೊಂಡೇ ಹರಿಯತೊಡಗುತ್ತದೆ. ಈ ಅಬ್ಬರ-ಉಬ್ಬರ-ಇಳಿತ ಅಲ್ಪಕಾಲ ಮಾತ್ರ.  ಆದರೂ ಪ್ರಾಕೃತಿಕವಾಗಿ ಆಗಲೇಬೇಕಾದ ಪ್ರಕ್ರಿಯೆ. ಯಾವಾಗಲೂ ಜೀವನದಿಯ ಮೊಲ ಸೆಲೆ ಹಳೆಯದೇ.  ಅದೇ ಬತ್ತಿ ಹೋದರೆ? ಹೊಸ ಹೊಲಬಿಗೆ ಹರಿದು ಬರಬೇಕಾದ ನೀರು ನಿಂತ ನೀರಾದೀತು!  ಹೌದು, ವರ್ಷ ಋತುವಿನಲೊಂದಾದ ಮಳೆಗಾಲದಲಿ ನಮಗೆ ಹೊಸ ನೀರು ಬೇಕು.  ಹಾಗೆಯೆ, ವಸಂತ ಮಾಸದಲಿ ಹೊಸ ಚಿಗುರು ಬರಬೇಕು.

ದೂರ ಎಲ್ಲಿಯೋ ಬೆಂಗಳೂರು

ಹೀಗೆಲ್ಲಾ ನನ್ನ ಪ್ರೀತಿಯ ನಗರವನ್ನು ನೆನಪಿಸಿಕೊಳ್ಳುತ್ತೇನೆ-
"ನಿನ್ನ ಗಲ್ಲಿ ಬಯಲು ವನದಲ್ಲಿ ಪ್ರೀತಿಸಿದ್ದೆ
ನಿನ್ನ ಸಂಜೆ ಬೆಳಗು ನಡುಹಗಲ ಬಿಸಿಲಲ್ಲಿ ಪ್ರೀತಿಸಿದ್ದೆ
ನಿನ್ನ ಸೊಮಾರಿ ಹಾಗೂ ಗಡಿಬಿಡಿಯ ದಿನಗಳಲ್ಲಿ ಪ್ರೀತಿಸಿದ್ದೆ
ನಿನ್ನ ಜನ ನಿಬಿಡಗಳಲ್ಲಿ ಜನ ರಹಿತಗಳಲ್ಲಿ ಪ್ರೀತಿಸಿದ್ದೆ

ಟೀವಿ ..........ಏನೀ ಟೀವಿ .................ಈ ಟೀವಿ.

ಮೊದಲಿನ ಹಾಗೆ
ಅವಿಭಕ್ತ ಕುಟು೦ಬಗಳಿಲ್ಲ
ತೋಟ್ಟಿ ಮನೆಗಳಿಲ್ಲ
ಜಗಲಿಗಳಿಲ್ಲ,ಜಗಳಗಳಿಲ್ಲ
ಬೆಳದಿ೦ಗಳ ಊಟವಿಲ್ಲ
ಸುಗ್ಗಿಯ ಆಟವಿಲ್ಲಾ
ಏಲ್ಲ ನೀರವ ಏಕಾ೦ತ.
ಆಧುನಿಕ ಕುಟು೦ಬಗಳಲ್ಲಿ
ನಾನೇನಾದರೆ ನಿನಗೇನು
ನೀನು ನೀನೇ ನಾನು ನಾನೇ
ನಾ ನಿನಗೇನಾದರೆ ನೀ ನನಗೇನು
ಎ೦ಬ ಹು೦ಬತನ
ನಶಿಸಿ ಹೋಗಿದೆ ನಮ್ಮತನ.
ಮೊದಲೆಲ್ಲ ಪಾರ್ಕಿಗೊ೦ದು ಟೀವಿ
ನ೦ತರ
ವಟಾರಕ್ಕೊ೦ದು ಟೀವಿ

ಹಿತನುಡಿ

ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿಯೂ ಎರಡು ತುಂಬಾ ಮಹತ್ವದ ದಿನಗಳಿರುತ್ತವೆ. ಒಂದು ಅವನು ಹುಟ್ಟಿದ ದಿನ, ಮತ್ತೊಂದು ಅವನು ಯಾಕಾಗಿ ಹುಟ್ಟಿದ ಎಂಬುದನ್ನು ತಿಳಿದುಕೊಂಡ ದಿನ.

ಹಿತನುಡಿ

ಸ್ವರ್ಗದಲ್ಲಿಯೂ ಗುಲಾಮನಾಗಿರಲು ಬಯಸಬೇಡ. ಕೊನೇ ಪಕ್ಷ ನರಕದಲ್ಲಿಯಾದರೂ ರಾಜನಾಗಿರಲು ಪ್ರಯತ್ನಿಸು.

ಒಂದಿಷ್ಟು ಅಪ್ಪಟ ಕನ್ನಡ ಶಬ್ದಗಳು

ನಾವು ಕನ್ನಡದಲ್ಲಿ ಸಾಮಾನ್ಯವಾಗಿ ಬಳಸುವ ಕೆಲವು ಸಂಸ್ಕೃತ ಶಬ್ದಗಳ ಬದಲಾಗಿ ಕೆಲವು ಅಪ್ಪಟ ಕನ್ನಡದ ಶಬ್ದಗಳನ್ನು ಆಗಸ್ಟ್ ಕಸ್ತೂರಿಯ ಪುಸ್ತಕವಿಭಾಗದಲ್ಲಿ ಬಂದಿರುವ ಭಾರತಿಸುತ ಅವರ ಕಾದಂಬರಿ ಸಂಗ್ರಹದಿಂದ ಆಯ್ದುಕೊಂಡು ಇಲ್ಲಿ ಕೊಡುತ್ತಿರುವೆ .
ಒಂದು ಸಲ ಈ ಪಟ್ಟಿ ನೋಡಿ . ಅಚ್ಚ ಕನ್ನಡ ಶಬ್ದಗಳನ್ನು ಬಳಸಿ .

ಶಿರಸಾ ವಹಿಸಿ - ನೆತ್ತಿಯಲ್ಲಿ ಹೊತ್ತು