ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನನ್ನ "ಅಪಾರ್ಥಗಳು"

ಶೌಟಾಲಯ(shoutಆಲಯ) : ವಿಧಾನಸಭೆ, ಲೋಕಸಭೆಗಳು, ಗಂಟಲ್‌ಮನ್‌ಗಳ ದರ್ಬಾರು ನೆಡೆಯುವ ಸ್ಥಳ

ಜಾಗಟೀಕರಣ : ಜಾಗತೀಕರಣದ ಬಗ್ಗೆ ವಿಶ್ವಕ್ಕೇ ಭಾಷಣ ಬಿಗಿಯುವುದು.

ಕ್ರೂಟ್ಸರ್ ಸೊನಾಟಾ: ಅಧ್ಯಾಯ ಹದಿನೈದು

“ಹೌದು. ಅಸೂಯೆ. ಮದುವೆಯಾದ ಎಲ್ಲರಿಗೂ ಗೊತ್ತಿರುವ, ಆದರೆ ಎಲ್ಲರೂ ಮುಚ್ಚಿಡುವ ರಹಸ್ಯ. ಮನುಷ್ಯತ್ವವನ್ನು ಭ್ರಷ್ಟಗೊಳಿಸುವ ಪರಸ್ಪರ ದ್ವೇಷವಲ್ಲದೆ ಬಲುದೊಡ್ಡ ವೈವಾಹಿಕ ಗಾಯವಾಗುವುದು ಅಸೂಯೆಯಿಂದ. ಮೌನ ಒಪ್ಪಿಗೆಯಿಂದೆಂಬಂತೆ ಎಲ್ಲರೂ ಅಸೂಯೆಯನ್ನು ಬಚ್ಚಿಟ್ಟುಕೊಳ್ಳಲು ನಿರ್ಧಾರಮಾಡಿರುತ್ತಾರೆ.

ಕ್ರೂಟ್ಸರ್ ಸೊನಾಟಾ: ಅಧ್ಯಾಯ ಹದಿನಾಲ್ಕು

“ಹೌದು. ಮನುಷ್ಯ ಮನುಷ್ಯನ ಹಾಗೆ ಬದುಕದೆ ಇದ್ದಾಗ ಅವನು ಪ್ರಾಣಿಗಿಂತ ಕೀಳು. ನಾನು ಹೀಗೆ, ಹಂದಿಯ ಹಾಗೆ ಇದ್ದೆ. ಬೇರೆಯ ಹೆಂಗಸರು ನನಗೆ ಪ್ರಲೋಭನೆ ಒಡ್ಡುವುದಕ್ಕೆ ಅವಕಾಶ ಕೊಟ್ಟಿಲ್ಲ. ಆದ್ದರಿಂದ ನಾನು ಪ್ರಾಮಾಣಿಕ, ನೀತಿವಂತ. ನಾವು ಆಗಾಗ ಜಗಳವಾಡಿದರೂ ಅದು ನನ್ನ ಹೆಂಡತಿಯ ತಪ್ಪೇ ಹೊರತು ನನ್ನದಲ್ಲ ಎಂದು ನಂಬಿಕೊಂಡಿದ್ದೆ, ಅದನ್ನು ನೆನೆದರೆ ಭಯವಾಗುತ್ತದೆ.

ಕ್ರೂಟ್ಸರ್ ಸೊನಾಟಾ: ಅಧ್ಯಾಯ ಹದಿಮೂರು

ಇಬ್ಬರು ಹೊಸಬರು ನಮ್ಮ ಬೋಗಿಗೆ ಹತ್ತಿದರು. ತೀರ ಆ ಕಡೆಯ ತುದಿಗೆ ಹೋಗಿ ಕುಳಿತರು. ಅವರು ಕೂರುವವರೆಗೆ ಅವನು ಸುಮ್ಮನೆ ಇದ್ದ. ಆಮೇಲೆ ಮತ್ತೆ ಶುರುಮಾಡಿದ. ಅವನ ಆಲೋಚನೆಯ ಎಳೆ ತುಂಡಾಗಿರಲಿಲ್ಲ.

ಕ್ರೂಟ್ಸರ್ ಸೊನಾಟಾ: ಅಧ್ಯಾಯ ಹನ್ನೆರಡು

“ಆದರೆ, ನಮ್ಮ ಸಮಾಜದಲ್ಲಿರುವ ಹಾಗೆ, ಮನುಷ್ಯ ಕೇವಲ ದೈಹಿಕ ಪ್ರೀತಿಯನ್ನು ಮಾತ್ರ ಬಯಸುತ್ತಿದ್ದರೆ, ಅದಕ್ಕೆ ಮದುವೆಯ ಎಂಥದೇ ಸುಳ್ಳುರೂಪಗಳ ಡ್ರೆಸ್ಸು ತೊಡಿಸಿದರೂ ಅದು ಕೇವಲ ಅನುಮತಿ ಪಡೆದುಕೊಂಡ ಲಂಪಟತನ ಅಷ್ಟೇ. ನಾನು ಅನೈತಿಕವಾಗಿ ಬದುಕಿದೆ, ಹೆಂಡತಿಯನ್ನೂ ಆ ಬದುಕಿಗೆ ಎಳೆದೆ, ಮತ್ತೆ ಇದನ್ನೇ ನಾವು ಪ್ರಾಮಾಣಿಕ ಕೌಟುಂಬಿಕ ಜೀವನ ಎಂದು ಕರೆಯುತ್ತೇವೆ.

ಕ್ರೂಟ್ಸರ್ ಸೊನಾಟಾ: ಅಧ್ಯಾಯ ಹನ್ನೊಂದು

“ಎಲ್ಲರೂ ಹೀಗೆಯೇ ಮದುವೆಯಾಗುತ್ತಾರೆ, ನಾನೂ ಹಾಗೆಯೇ ಮದುವೆಯಾದೆ. ಹನಿಮೂನಿಗೆ ಹೋದೆವು. ಹನಿಮೂನು ಅಂದರೆ ಯಾಕೆ ಜೊಲ್ಲು ಸುರಿಸುತ್ತಾರೋ! ಯಾವಾಗಲೂ ಭ್ರಮನಿರಸನವೇ! ಆ ಹೆಸರೇ ಅಸಹ್ಯ!” ಹಾವಿನಂತೆ ಬುಸುಗುಟ್ಟಿದ.

ನಾನಿಲ್ಲದೆ ನನ್ನ ಬದುಕು

ಒಂದೆರಡು ದಿನದ ಕೆಳಗೆ my life without me (2003) ಎಂಬ ಚಿತ್ರ ನೋಡಿದೆ. ಕೆನಡಾ ದೇಶದ್ದು. ನಿರ್ದೇಶಕಿ Isabel Coixet ಎಂಬ ಸ್ಪಾನಿಶ್ ಮಹಿಳೆ. (ಈ ಚಿತ್ರ ಸ್ಪಾನಿಶ್ ಮತ್ತು ಫ್ರೆಂಚ್‌ ಭಾಷೆಯಲ್ಲೂ ಒಟ್ಟಿಗೆ ಮಾಡಿದ್ದಾರೆ)

ಕೋರವಂಗಲದ ಭೂಚೇಶ್ವರ ಮತ್ತು ಕೊಂಡಜ್ಜಿಯ ವರದರಾಜ

ಹಾಸನ ಜಿಲ್ಲೆ ಹೊಯ್ಸಳರ ಹಲವಾರು ದೇವಾಲಯಗಳ ನೆಲೆಬೀಡು. ಬೇಲೂರು ಹಳೇಬೀಡಿನ ದೇವಾಲಯಗಳಂತೂ ವಿಶ್ವವಿಖ್ಯಾತವಾಗಿವೆ. ಆದರೆ ಇವುಗಳನ್ನು ಬಿಟ್ಟು ನುಗ್ಗೇಹಳ್ಳಿ, ಜಾವಗಲ್ಲು, ದೊಡ್ಡಗದ್ದವಳ್ಳಿ, ಹಾರನಹಳ್ಳಿ ಮೊದಲಾದೆಡೆ ಇರುವ ಸುಂದರ ದೇವಾಲಯಗಳು ಅಷ್ಟು ಜನರಿಗೆ ಪರಿಚಯವಾಗಿಲ್ಲ.

ಬೆಣ್ಣೆಹೂವು ಮತ್ತು ಅಶ್ವಮೇಧ

ಅಶೋಕ ಹೆಗಡೆಯವರು ನಮ್ಮ ತಲೆಮಾರಿನವರಾಗಿರುವುದೇ ಇದಕ್ಕೆ ಕಾರಣ ಅನಿಸುತ್ತಿಲ್ಲ. ಅಶೋಕ ಹೆಗಡೆಯವರು ೨೦೦೬ರಲ್ಲಿ ಬರೆಯುತ್ತಿರುವಾಗಲೂ ತಮ್ಮ ಕಥಾನಕದ ಕಾಲಕ್ಕೆ ಮತ್ತು ವಸ್ತುವಿಗೆ ನಿಷ್ಠರಾಗಿಯೇ ಸಮಕಾಲೀನತೆಯನ್ನು ಸಾಧಿಸಿದ್ದಾರೆ.

ಕುಮಾರರಾಮ ಮತ್ತು ಯದ್ವಾ-ತದ್ವಾ

ಕುಮಾರರಾಮನ ಬಗ್ಗೆ ನನಗೆ ಹೆಚ್ಚು ಗೊತ್ತಿರಲಿಲ್ಲ . ಮಲತಾಯಿಯ ಮೋಹಕ್ಕೆ ಗುರಿಯಾದವ ಒಬ್ಬ ಐತಿಹಾಸಿಕ ವ್ಯಕ್ತಿಯ ಕತೆ , ಇತ್ತೀಚೆಗೆ ಚಲನಚಿತ್ರವಾದದ್ದು ಇಷ್ಟೇ ಗೊತ್ತಿತ್ತು . ನನಗೆ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ನಾಗರಮರಿ ಹೆಸರಿನ ಪುಸ್ತಕ ಸಿಕ್ಕಿತು. ಅಲ್ಲಿ ಕುಮಾರರಾಮ ಮತ್ತು ಕನ್ನಡನಾಡಿನ ಬೇರೆ ಮೂವರು ವೀರರ ಕತೆ ಇದೆ.