ಪುಟ್ಟನ ಪುಟ್ಟಿ Dell Vostro 1500 -> ಪುಟ್ಟನ ಪ್ಯಾಕೆಟ್ ನಲ್ಲಿ
ನನ್ನ ಗೆಳೆಯ ಇವತ್ತು ಹೊಸ ಲ್ಯಾಪ್ಟಾಪ್ ತಗೊಂಡನಂತೆ ಅವನಿಗೊಸ್ಕರ .
(ಅದೇ ಈ ಕವನದಲ್ಲಿರೊ ಪುಟ್ಟಿ ಅಪಾರ್ಥಮಾಡ್ಕೊಬೇಡಿ ಪ್ಲೀಸ್)
ಪುಟ್ಟನ ಪುಟ್ಟಿ Dell Vostro 1500 -> ಪುಟ್ಟನ ಪ್ಯಾಕೆಟ್ ನಲ್ಲಿ
ಬಂದೇ ಬಂದಳು ಪುಟ್ಟನ ಪುಟ್ಟಿ
ಕಪ್ಪು ಬಣ್ಣದ ಲೆದರ್ ಕೇಸನು ತೊಟ್ಟಿ
ಅಮೇರಿಕೆಯಾ ಸುಂದರಿ ಈಗ ನಮ್ಮ ಪುಟ್ಟನ ಕೂಸುಮರಿ
ಬಂದೇ ಬಂದಳು ಪುಟ್ಟನ ಪುಟ್ಟಿ
ಮೇಕಪ್ ಗೀಕಪ್ ಬೇಕಿಲ್ಲ
ಕರೆಂಟ್ ಇದ್ದರೆ ಸಾಕಲ್ಲ
ಇಲ್ಲದಿದ್ದರೂ ಪರವಾಗಿಲ್ಲ
ಬ್ಯಾಟರಿ ಇದೆಯಲ್ಲ
ಬ್ರಹ್ಮ್ಮಾಂಡ ನೊಡಲು ಇದು ಕಿಂಡಿ
ವಿಂಡೋಸ್ ಉಪಯೊಗಿಸ್ತಾನಂತೆ ಸೋಂಬೇರಿ
ಲೈನಕ್ಸ್ ಹಾಕಿಕೊ ಅಂದ್ರೆ
ಮಾಡ್ತಾನೆ ಸಿಡಿ ಮಿಡಿ
Rating