ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅಮ್ಮಂದಿರ ಸುದ್ದಿ

[ಇಂಗ್ಲೆಂಡಿನ ರಾಜಕುಮಾರಿ ಡಯಾನಾ ಸತ್ತ ಸಮಯದಲ್ಲೇ, ಮದರ್‌ ತೆರೇಸಾ ಸತ್ತ ಸಮಯದಲ್ಲೇ, ಅಲ್ಜೀರಿಯಾದಲ್ಲಿ ನಡೆದ ಹಳ್ಳಿಯ ತಾಯಂದಿರು, ಅವರೊಡನಿದ್ದ ಹಸುಗೂಸುಗಳ ಹತ್ಯಾಕಾಂಡ ಸುದ್ದಿಯಾಗದೇ ತೇಲಿಹೋದಾಗ]

ಅಮ್ಮಂದಿರಾ, ನಿಮ್ಮ ಸುದ್ದಿಯೆಂದರೆ,
ಕ್ಷುಲ್ಲಕ ಸಾವಿಗೀಡಾದ ಚೆಲುವೆ ಬಿಳೀ ರಾಜಕುಮಾರಿ
ಅಮ್ಮನ ಸುದ್ದಿಯಲ್ಲ.

ಹಳ್ಳವಾಗದ ಹನಿ

ಹನಿ ಹನಿಗೂಡಿದರೆ ಹಳ್ಳವಾಗುತ್ತದೆ ಎಂದು ಯಾರು ಹೇಳಿದ್ದು? ಹೇಗೆ ಹಳ್ಳವಾಗುತ್ತದೆ ಎಂದು ಕೇಳದೆ ಒಪ್ಪಿಬಿಟ್ಟೆನಲ್ಲ! ಹಳ್ಳವಾದರೂ ಅದು ಎಂಥ ಹಳ್ಳ; ನನಗೆ ಬೇಕಾದ ರೂಪ ಇದೆಯ; ಬೇಕಾದಷ್ಟು ದೊಡ್ಡದಿದೆಯ; ಅಂದಕೊಂಡಷ್ಟೇ ಚಿಕ್ಕದಾಗಿ ಉಳಿದಿದೆಯ; ಹಳ್ಳವಾಗಲು ಹತ್ತು ಹಲವು ಬೇರೆ ಬೇರೆ ಅನುಕೂಲಗಳು ಬೇಕು ಅನ್ನೋದು ಹೇಗೆ ನನಗೆ ತಿಳಿಯದೇ ಹೋಯಿತು ಅಂತ ಬೇಸರವಾಗತ್ತೆ.

ಒಂದೋ ಲೆಕ್ಕ ಬಿಡಿಸು, ಇಲ್ಲವೇ ಹಾಳೆ ಮಡಿಸು...

ವಿಚಿತ್ರಾನ್ನದಲ್ಲಿ ವಿಶಿಷ್ಟ ಸಮಸ್ಯೆಯೊಂದನ್ನು ಬಿಡಿಸಿದ ಬಗೆಯನ್ನು ವರ್ಣಿಸಿದ್ದಾರೆ ಶ್ರೀವತ್ಸ ಜೋಷಿ. ಟಾಯ್ಲೆಟ್ ಪೇಪರಿನ ಒಂದು ಉಪಯೋಗ ನಿಮಗೆ ಗೊತ್ತೇ ಇದೆ.ಇನ್ನೊಂದು ಉಪಯೋಗ ಈ ಸಮಸ್ಯೆ ಬಿಡಿಸಲು! ಹೇಗೆ? ಓದಿ:
http://thatskannada.oneindia.in/column/vichitranna/150507paper_fold1.html

ಸಂಪದದ ಗೂಗಲ್ ಹುಡುಕಾಟ

ನಮಸ್ಕಾರ ಸಂಪದಿಗರಿಗೆ,

ನಿನ್ನೆ ಹೀಗೆ ನಮ್ಮ ಮನೆಯವರಿಗೆ (ದಾವಣಗೆರೆ ಭಾಷೆಯಲ್ಲಿ, ಇದರ ಅರ್ಥ ಮಡದಿ/ಹೆಂಡತಿ ಎಂದು) ಕುತೂಹಲ ಕೆರಳಿಸಲೊ ಅಥವ ವಾದಿಸಲೊ ದೇವರ ಶ್ಲೊಕಗಳ ಬಗ್ಗೆ ಹೇಳಿದೆ, ಆಗ ಈ http://sampada.net/blog/mahesha/18/04/2007/3735 ಕೊಂಡಿಯ ಅಗತ್ಯ ನನಗೆ ಇತ್ತು. ಹುಡುಕಲೆಂದು ಸಂಪದದ ಗೂಗಲ್ ಹುಡುಕಾಟ ಬಳಸಿದೆ, ಆದರೆ ಯಾವುದೊಂದು ಕೊಂಡಿ/ಮಾಹಿತಿ ನನಗೆ ಸಿಗಲಿಲ್ಲ, ಕಂಡದ್ದು "your search - ವಿಜಯೀಭವ did not match any documents" ಪುಟ. ಕೊನೆಗೆ ಕಷ್ಟಪಟ್ಟು ಹೇಗೊ ಹುಡುಕಿದ ಮೇಲ್ಕಂಡ ಪುಟದಲ್ಲಿರುವ ಕೆಲವು ಪದಗಳನ್ನು copy ಮಾಡಿ ಪ್ರಯತ್ನಿಸಿದೆ. ಏನಂದರೂ ಯಾವ results ಸಿಗಲಿಲ್ಲ.

ಕಾರಣ ಏನಿರಬಹುದು?

ಪುಸ್ತಕನಿಧಿ-ಸಮವಾಯೋ ಏವ ಸಾಧು-ಹೊಂದಿಕೊಂಡು ಬದುಕುವದು- ಅದೇ ಒಳ್ಳೆಯದು

ಸಮವಾಯೋ ಏವ ಸಾಧು - (ಹೊಂದಿಕೊಂಡು ಬದುಕುವದು- ಅದೇ ಒಳ್ಳೆಯದು) ಇದು ಅಶೋಕನ ಶಿಲಾಶಾಸನದಲ್ಲಿನ ವಾಕ್ಯ . ಸ್ವಮತವನ್ನು ಪೂಜಿಸುವದಾಗಲೀ ಪರಮತವನ್ನು ನಿಂದಿಸುವದಾಗಲೀ ಆಗಬಾರದು . ಇದೇ ಮಾತನ್ನೇ ಭಗವಾನ್ ಬುದ್ಧನೂ ಹೇಳಿದ್ದಾನೆ . ''ಅನ್ಯರಿಗೆ ಅಸಹ್ಯಪದಬೇಡ ,ತನ್ನ ಬಣ್ಣಿಸಬೇಡ, ಇದಿರ ಹಳಿಯಲು' ಬೇಡ ' ಎಂದು ಬಸವಣ್ಣನವರೂ ಹೇಳಿದ್ದಾರೆ.

ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ

ಎಷ್ಟೋ ಸಿದ್ಧವಾದ ವಿಷಯಗಳನ್ನು ಕೂಡ ಮತ್ತೆ ಮತ್ತೆ ಹೇಳುತ್ತಲೇ ಇರಬೇಕಾಗುತ್ತದೆ .
ಉದಾಹರಣೆಗೆ , ಮರಾಠೀ ಮತ್ತು ಕನ್ನಡದ ಸಂಬಂಧ

೧. ಈಗಿನ ಮಹಾರಾಷ್ಟ್ರದಲ್ಲೆಲ್ಲ ಕನ್ನಡವೇ ಇತ್ತು .
೨. ೧೦-೧೨ ಶತಮಾನದ ಹೊತ್ತಿಗೆ ಮರಾಠಿ ಉದಯವಾಯಿತು .
೩. ಅದರ ಆಧಾರ ಕನ್ನಡವೇ .
೪. ಇದನ್ನು ಅನೇಕ ಮರಾಠೀ ಸಂಶೋಧಕರೂ ನೇರವಾಗಿ ಅಥವಾ ಸುತ್ತು ಬಳಸಿ ಒಪ್ಪಿದ್ದಾರೆ.

ಚೈತನ್ಯದಾಯಕ ಚಹಾಯ ನಮಃ

ಆಹಾ, ಚಹಾ...
ಬೆಳಗ್ಗೆ ೪ ಗಂಟೆಗೇ ಏಳಿ,ಇಲ್ಲಾ ೮ ಗಂಟೆಗೆ, ಮೊದಲಿಗೆ ನೆನಪು ಬರುವುದು ಚಹಾ,ಆಹಾ.
ಕೆಲವರು ಕಾಫಿ ಎನ್ನಬಹುದು. ಅವರು ಹೇಳಿಕೊಳ್ಳಲಿ ಬಿಡಿ. ಚಹಾದಲ್ಲಿ ಸಿಕ್ಕುವಷ್ಟು ಚೈತನ್ಯ ಬೇರಾವುದರಲ್ಲೂಇಲ್ಲ.ಚೈತನ್ಯವೂ(chaitanya) ಸಹ ಚಹಾಮಯ ನೋಡಿ-
CHA-Iತನ್ಯ,
ಚೈT(ಟೀ)a ನ್ಯ;
ಎಲ್ಲಾ ಹೆಂಗಸರ ಬೆಳಗ್ಗಿನ ಡ್ಯೂಟಿ ಸುರುವಾಗುವುದೇ ಚಹಾದಿಂದ.