ಬೆಂಗಳೂರಿನಲ್ಲಿ ಮೈಕೇಲ್ ಕಪ್ಲಾನ್

ಬೆಂಗಳೂರಿನಲ್ಲಿ ಮೈಕೇಲ್ ಕಪ್ಲಾನ್

[http://blogs.msdn.com/michkap/archive/2008/01/16/7101598.aspx|ಮೈಕೇಲ್ ಕಪ್ಲಾನ್] ಮೈಕ್ರೋಸಾಫ್ಟ್ ಕಂಪೆನಿಯಲ್ಲಿ ತಂತ್ರಾಂಶಗಳ ಜಾಗತೀಕರಣ ವಿಭಾಗದಲ್ಲಿ ಪ್ರಮುಖ ಹುದ್ದೆಯಲ್ಲಿರುವ ತಂತ್ರಜ್ಞರು. ತಂತ್ರಾಂಶ ಜಾಗತೀಕರಣ ವಿಷಯದಲ್ಲಿ ಕೆಲಸ ಮಾಡುತ್ತಿರುವವರು ಮಾತ್ರವಲ್ಲದೆ ಈ ವಿಷಯದಲ್ಲಿ ಆಸಕ್ತಿ ಹೊಂದಿರುವ ಎಲ್ಲರಿಗೂ ಇವರ ಹೆಸರು ಪರಿಚಯವಿದೆ. ಇವರು ಭಾರತಕ್ಕೆ ಬರುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿರುವ [http://research.microsoft.com/india|ಮೈಕ್ರೋಸಾಫ್ಟ್ ಸಂಶೋದನಾ ಕೇಂದ್ರ]ದ ಮೂಲಕ ತಿಳಿದು ಬಂತು. ಕೂಡಲೇ ನಾನು ಕಪ್ಲಾನರನ್ನು ಸಂಪರ್ಕಿಸಿ ನಮ್ಮ [http://bdotnet.in|ಬೆಂಗಳೂರಿನ ಡಾಟ್‌ನೆಟ್ ಬಳಕೆದಾರರ ಸಂಘದಲ್ಲಿ] ಒಂದು ಭಾಷಣ ನೀಡಲು ಸಾಧ್ಯವೇ ಎಂದು ಕೇಳಿಕೊಂಡೆ. ಕೂಡಲೇ ಅವರಿಂದ ಉತ್ತರ ಬಂತು "ಇದು ನನಗೆ ನೀಡುತ್ತಿರುವ ಗೌರವ ಎಂದು ಭಾವಿಸಿಕೊಂಡು ಒಪ್ಪಿಗೆ ನೀಡುತ್ತಿದ್ದೇನೆ".

ಮೈಕ್ರೋಸಾಫ್ಟ್ ತಂತ್ರಾಂಶಗಳಲ್ಲಿ ಕನ್ನಡ ಮತ್ತು ಇತರೆ ಭಾರತೀಯ ಭಾಷೆಗಳ ಅಳವಡಿಕೆ ಬಗ್ಗೆ ನಿಮಗೆ ಏನಾದರೂ ಸಂದೇಹಗಳನ್ನು ಪರಿಹರಿಸಿಕೊಳ್ಳಬೇಕಿದ್ದರೆ ಕಪ್ಲಾನರನ್ನು ನೇರವಾಗಿ ಸಂರ್ಕಿಸಲು ಇದೊಂದು ಸದವಕಾಶ. ಕಪ್ಲಾನರು ಮುಖ್ಯವಾಗಿ ಮಾಹಿತಿಯ ಸಂಗ್ರಹ ಮತ್ತು ವಿಂಗಡಣೆ (sorting issues) ಬಗ್ಗೆ ಮಾತನಾಡಲಿದ್ದಾರೆ. ಮೈಕ್ರೋಸಾಫ್ಟ್ ತಂತ್ರಾಂಶಗಳಲ್ಲಿ ಕನ್ನಡದ ಫಾಂಟ್ ಮತ್ತು ಕನ್ನಡದ ಹೊದಿಕೆ (Laguage Interface Pack -LIP) ಗಳಲ್ಲಿ ಇರುವ ತೊಂದರೆ ಬಗ್ಗೆ ಹೇಳಿಕೊಳ್ಳಲು ಇವರು ಸೂಕ್ತ ವ್ಯಕ್ತಿ ಅಲ್ಲ. ಆದರೂ ನೀವು ಬಂದು ಅವರೊಡನೆ ಈ ವಿಷಯಗಳನ್ನು ಚರ್ಚಿಸಬಹುದು. ನೀವು ನೀಡಿದ feedbackಗಳನ್ನು ಇವರು ನೇರವಾಗಿ ಮೈಕ್ರೋಸಾಫ್ಟ್ ಪ್ರಧಾನ ಕಚೇರಿಗೆ ಒಯ್ಯುವುದರಿಂದ ಸಮಸ್ಯೆಗಳ ಪರಿಹಾರವು ಸ್ವಲ್ಪ ಬೇಗನೆ ಆಗಬಹುದು. ಆದುದರಿಂದ ನೀವೆಲ್ಲ ಬನ್ನಿ. ವಿವರಗಳಿಗೆ ಬೆಂಗಳೂರು ಡಾಟ್‌ನೆಟ್ ಯೂಸರ್‍ ಗ್ರೂಪ್‌ನ ಅಂತರಜಾಲ ತಾಣವನ್ನು ವೀಕ್ಷಿಸಿ ([http://bdotnet.in|http://bdotnet.in]).

ಸಿಗೋಣ,
[http://www.vishvakannada.com|ಪವನಜ]

Rating
No votes yet